ತಮಿಳು ನಟ ವಿಶಾಲ್ ಮದುವೆ ಮುರಿದು ಬಿತ್ತಾ? ಏನಾಯ್ತು ಈ ಜೋಡಿಗೆ?

Recommended Video

ತಮಿಳು ನಟ ವಿಶಾಲ್ ಮದುವೆ ಮುರಿದು ಬಿತ್ತಾ.! | FILMIBEAT KANNADA

ತಮಿಳು ನಟ ವಿಶಾಲ್ ಕಳೆದ ಮಾರ್ಚ್ ತಿಂಗಳಲ್ಲಿ ಎಂಗೇಜ್ ಅಗಿದ್ದರು. ನಟಿ ಅನಿಶಾ ಅಲ್ಲ ರೆಡ್ಡಿ ಜೊತೆ ವೈವಾಹಿಕ ಬದುಕು ಆರಂಭಿಸುವುದಾಗಿ ವಿಶಾಲ್ ಅಧಿಕೃತವಾಗಿ ಘೋಷಿಸಿದ್ದರು. 2019 ಮಾರ್ಚ್ ನಲ್ಲಿ ವಿಶಾಲ್ ಮತ್ತು ಅನಿಶಾ ಅವರ ನಿಶ್ಚಿತಾರ್ಥವೂ ಆಗಿತ್ತು.

ಎಲ್ಲ ಅಂದುಕೊಂಡಂತೆ ಆದರೆ ಅಕ್ಟೋಬರ್ ತಿಂಗಳಲ್ಲಿ ಇವರಿಬ್ಬರ ಮದುವೆ ಅದ್ಧೂರಿಯಾಗಿ ನಡೆಯಲಿದೆ. ಈ ಮಧ್ಯೆ ವಿಶಾಲ್ ಮತ್ತು ಅನಿಶಾ ಮದುವೆ ಬಗ್ಗೆ ಸುದ್ದಿಯೊಂದು ಸಿಡಿಲಿನಂತೆ ಬಂದೆರಗಿದೆ.

ವಿಶಾಲ್ ಮತ್ತು ಅನಿಶಾ ಮದುವೆ ರದ್ದಾಗಿದೆ ಎಂಬ ಗುಲ್ಲು ಇಂಡಸ್ಟ್ರಿಯಲ್ಲಿ ಸದ್ದು ಮಾಡ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಘಟನೆಯೊಂದು ಕೂಡ ನಡೆದಿದೆ. ಅಷ್ಟಕ್ಕೂ, ಆ ಘಟನೆ ಏನು? ಮುಂದೆ ಓದಿ.....

ವಿಶಾಲ್-ಅನಿಶಾ ನಡುವೆ ಎಲ್ಲವೂ ಸರಿಯಿಲ್ಲ

ವಿಶಾಲ್-ಅನಿಶಾ ನಡುವೆ ಎಲ್ಲವೂ ಸರಿಯಿಲ್ಲ

ತಮಿಳು ನಟ ವಿಶಾಲ್ ಮತ್ತು ಅನಿಶಾ ಇಬ್ಬರು ಪರಸ್ಪರ ಪ್ರೀತಿಸಿ, ಮನೆಯವರನ್ನ ಒಪ್ಪಿಸಿ ಮದುವೆವರೆಗೂ ಬಂದಿದ್ದಾರೆ. ಇಬ್ಬರು ಎಂಗೇಜ್ ಮೆಂಟ್ ಉಂಗುರ ಕೂಡ ಬದಲಿಸಿಕೊಂಡಿದ್ದಾರೆ. ಈ ಮಧ್ಯೆ ಇಬ್ಬರ ಮಧ್ಯೆ ಮನಸ್ತಾಪ ಮೂಡಿದ್ದು, ಇದರ ಪರಿಣಾಮ ಮದುವೆ ನಿಲ್ಲಿಸಲು ಮುಂದಾಗಿದ್ದಾರೆ ಎಂದು ತೆಲುಗಿನ ಕೆಲವು ವೆಬ್ ಸೈಟ್ ಗಳು ವರದಿ ಮಾಡಿದೆ.

ಫೋಟೋ ತೆಗೆದು ಹಾಕಿದ ಅನಿಶಾ

ಫೋಟೋ ತೆಗೆದು ಹಾಕಿದ ಅನಿಶಾ

ವಿಶಾಲ್ ಜೊತೆ ಲವ್ವಲ್ಲಿ ಇರುವುದಾಗಿ ನಟಿ ಅನಿಶಾ ಮೊದಲು ಬಹಿರಂಗಪಡಿಸಿದ್ದರು. ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಇಬ್ಬರು ಒಟ್ಟಿಗಿರುವ ಫೋಟೋ ಹಂಚಿಕೊಂಡು ಮದುವೆ ವಿಷ್ಯ ಬಿಚ್ಚಿಟ್ಟಿದ್ದರು. ಈಗ, ಅನಿಶಾ ಅವರೇ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಆ ಫೋಟೋಗಳನ್ನ ತೆಗೆದುಹಾಕಿದ್ದಾರೆ ಎನ್ನಲಾಗಿದೆ. ಇದನ್ನ ಗಮನಿಸಿದ ನೆಟ್ಟಿಗರು ಬಹುಶಃ ಮದುವೆ ಮುರಿದು ಬಿದ್ದಿರಬೇಕು ಎನ್ನುತ್ತಿದ್ದಾರೆ.

ಎಲ್ಲವೂ ಚೆನ್ನಾಗಿ ಹೋಗುವಷ್ಟರಲ್ಲಿ ಹೀಗೊಂದು ವದಂತಿ

ಎಲ್ಲವೂ ಚೆನ್ನಾಗಿ ಹೋಗುವಷ್ಟರಲ್ಲಿ ಹೀಗೊಂದು ವದಂತಿ

ವಿಶಾಲ್ ಮತ್ತು ಅನಿಶಾ ಅವರ ಮದುವೆ ಯಾವುದೇ ವಿಘ್ನಗಳಿಲ್ಲದೇ, ಅಡೆತಡೆಗಳಿಲ್ಲದೇ ನಡೆಯುತ್ತೆ ಎಂಬ ನಿರೀಕ್ಷೆ ಇದೆ. ಬಟ್, ಈ ವದಂತಿ ಈಗ ಎಲ್ಲರಿಗೂ ಅಚ್ಚರಿ ತಂದಿದೆ. ನಿಜಕ್ಕೂ ವಿಶಾಲ್ ಮದುವೆ ಮುರಿದು ಬಿತ್ತಾ ಅಥವಾ ಗಾಳಿ ಸುದ್ದಿನಾ ಎಂಬ ಗೊಂದಲದಲ್ಲಿದ್ದಾರೆ ಅಭಿಮಾನಿಗಳು.

ವಿಶಾಲ್ ಅಥವಾ ಅನಿಶಾ ಸ್ಪಷನೆ ಅಗತ್ಯ

ವಿಶಾಲ್ ಅಥವಾ ಅನಿಶಾ ಸ್ಪಷನೆ ಅಗತ್ಯ

ಸಿನಿಮಾ ವಿಚಾರದಲ್ಲಿ ಇಂತಹ ವದಂತಿಗಳು ಹಬ್ಬಿದಾಗ ಅದನ್ನ ನಿರ್ಲಕ್ಷ್ಯ ಮಾಡಬಹುದು. ಆದ್ರೆ, ಖಾಸಗಿ ಜೀವನದ ಬಗ್ಗೆ ಇಂತಹ ಸುದ್ದಿಗಳು ಚರ್ಚೆಯಾದಾಗ, ಸೆಲೆಬ್ರಿಟಿಗಳು ಅಧಿಕೃತವಾಗಿ ಸ್ಪಷ್ಟನೆ ನೀಡುವುದು ಉತ್ತಮ. ಇಲ್ಲಿಯವರೆಗೂ ವಿಶಾಲ್ ಆಗಲಿ ಅಥವಾ ಅನಿಶಾ ಆಗಲಿ ಈ ಬಗ್ಗೆ ಮಾತನಾಡಿಲ್ಲ. ಹಾಗಾಗಿ, ಆ ವದಂತಿಗಳು ಇನ್ನು ಜೀವಂತವಾಗಿದೆ.

More from Filmibeat

English summary
Tamil actor vishal engaged with actress anish alla reddy on march 2019. but, now rumors around this couple's engagement called off.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X