»   » ಜನಾರ್ಧನ್ ರವರಿಗೆ ಮೇಘನಾ ರಾಜ್ ಎಷ್ಟನೇ ಹೆಂಡತಿ?

ಜನಾರ್ಧನ್ ರವರಿಗೆ ಮೇಘನಾ ರಾಜ್ ಎಷ್ಟನೇ ಹೆಂಡತಿ?

By: ಹರಾ
Subscribe to Filmibeat Kannada

ಸೋಡು - ''ಲವ್ವಿನಲ್ಲಿ ಬಿದ್ರೆ...ಈಜೋ ಈಜು...ಈಜೋ ಈಜು...''

ಬೋಡು - ಲೇ..ಸೋಡು ಮುಂಡೇದೆ...ಬೆಳಗ್ಬೆಳಗ್ಗೆ ಎಂತದ್ಲಾ ಅದು ಲವ್ವು..ಈಜು ಅಂತಿದ್ಯಾ? ಏನ್ ಕಥೆ?

ಸೋಡು - ಕಥೆ ನಂದಲ್ಲಾ. ಈ ಹಾಡ್ನಲ್ಲಿರೋ ಹೀರೋಯಿನ್ದು. ಅದೇ ನಿನ್ ಫೇವರಿಟ್ ಮೇಘನಾ ರಾಜ್ದು.

A sattire on fictitious marriage of Actress Meghana Raj

ಬೋಡು - ಯಾಕೆ..ಆಕೆಗೇನಾಯ್ತು? [ಮದುವೆ-ಗಂಡ ಬಗ್ಗೆ ನಟಿ ಮೇಘನಾ ರಾಜ್ ಏನಂದಿದ್ದರು ಗೊತ್ತೇ?]

ಸೋಡು - ಆಕೆಗೆ ಆಗ್ಲೇ ಮದುವೆ ಆಗೈತಂತೆ ಕಣ್ಲಾ ಬೋಡ.

ಬೋಡು - ಹೌದಾ...ಅದ್ಯಾವಾಗ? ನಂಗೆ ಹೇಳಲೇ ಇಲ್ಲ ಅವಳು!!!!!

ಸೋಡು - ಲೇ ಹೆಗ್ಗಣ...ನಿಂಗೆ ಬೇರೆ ಪೆಸಲ್ಲಾಗಿ ಹೇಳೋಕೆ ಬರ್ತಾಳೆ ಕಾಯ್ತಿರು. ಈಗಲೇ ಪಾಪಾ, ಪೊಲೀಸ್ ಸ್ಟೇಷನ್ ಗೆ ತಿರುಗ್ಬೇಕು ಆಕೆ.

ಬೋಡು - ಪೊಲೀಸ್ ಸ್ಟೇಷನ್ನಾ...ಯಾಕೆ?

ಸೋಡು - ಯಾರೋ ಜನಾರ್ಧನ್ ಅಂತೆ ಕಣ್ಲಾ. ಅದೇ ನಿಮ್ಮ ಮುತ್ತಜ್ಜನ ಊರು ಧರ್ಮಗಿರಿಯವನಂತೆ. ಅವನ ಜೊತೆ ಹೋದ ವರ್ಷ ಮದುವೆ ಆಗ್ಬುಟ್ಟು, ಸರ್ಟಿಫಿಕೇಟ್ ಕದ್ಬುಟ್ಟವ್ಳೆ ಅಂತ ಪೊಲೀಸ್ ಕಂಪ್ಲೇಂಟ್ ಕೊಟ್ಟವ್ನೆ ಕಣ್ಲಾ. [ಇದೆಲ್ಲಾ ಮೇಘನಾ ರಾಜ್ ಹೆಸರಿಗೆ ಮಸಿ ಬಳಿಯುವ ಕೆಲಸ?]

ಬೋಡು - ಬಡ್ಡೀ ಮಗಾ. ಹೌದೇನ್ಲಾ...

ಸೋಡು - ಹ್ಹೂಂ ಕಣ್ಲಾ...ಬೇಕಾದರೆ ಅವನು ಕಳ್ಸಿರೋ ಈ ಕಂಪ್ಲೇಂಟ್ ಕಾಪಿ ನೋಡ್ಲಾ...ಬೋಡಾ...

A sattire on fictitious marriage of Actress Meghana Raj

ಬೋಡು - ಇದೇನ್ಲಾ ಸೋಡಾ...ಭಾಷೆ ಇಂಗದೆ? ಇದು ಇಂಗ್ಲೀಷೇನ್ಲಾ? ಮ್ಯಾರೇಜ್ ಸ್ಪೆಲ್ಲಿಂಗ್ ಏನ್ಲಾ ಅದು? ನೆಟ್ಟಗೆ ಇಂಗ್ಲೀಷ್ ಬರ್ಯಾಕೆ ಬರಕ್ಕಿಲ್ಲ, ಇವ್ನಿಗೆ ಮೇಘನಾ ರಾಜ್ ಬೇಕೇನ್ಲಾ?

ಸೋಡು - ಉಗೀ ಮುಖ್ಕೆ. ಅವನು ಬರ್ದಿರೋ ಮೊದಲನೇ ಲೈನ್ ಓದ್ಲಾ?

ಬೋಡು - my one of the wife...ಅಂದ್ರೆ ಇವ್ನಿಗೆ ಎಷ್ಟು ಜನಕಲಾ ಹೆಂಡ್ತೀರು?

ಸೋಡು - ಅವನ ಮುಖಕ್ಕೆ ಸೀಮೆಎಣ್ಣೆ ಉಜ್ಜಾ. ಅವನು ಯಾರು ಅನ್ನೋದೇ ಗೊತ್ತಿಲ್ಲಕಲಾ...my one of the wife ಅಂತ ಬೇರೆ ಹೇಳ್ತಾವ್ನೆ. ಮದುವೆ ಸರ್ಟಿಫಿಕೇಟ್ ಕೊಟ್ಟಿಲ್ಲ ಅಂತ ಪೊಲೀಸ್ರಿಗೆ ಈ-ಮೇಲ್ ಮಾಡೋವ್ನಂತೆ ಕಲಾ. [ನಟಿ ಮೇಘನಾ ರಾಜ್ ಬಗ್ಗೆ ಕೇಳಿಬಂದಿರುವ ವಂಚನೆ ಆರೋಪ ನಿಜವೇ?]

ಬೋಡು - ಅಲೆಲೇ...ಈ-ಮೇಲ್ ಐಡಿ ನೋಡ್ಲಾ...telepathy35@yahoo.com ಅಂತೆ. ಹಂಗಾರ ಇದು 26995200 ಕೇಸ್ ಬಿಡ್ಲಾ..

ಸೋಡು - ಅದ್ಯಾವ ನಂಬರ್ಲಾ? [ನಟಿ ಮೇಘನಾ ರಾಜ್ ವಿರುದ್ಧದ ಕೇಸ್ ಕ್ಲೋಸ್ ಆಗಿದ್ದೇಕೆ?]

ಬೋಡು - ನೆಟ್ನಾಗ ಹುಡುಕು ಸಿಗ್ತದೆ. ಇನ್ಮೇಲೆ ಇಂತಹ ಬೋಗಸ್ ಕೇಸೆಲ್ಲಾ ಇಟ್ಕೊಂಡು ಯಾವ್ಯಾವ್ದೋ ಹಾಡು ಹೇಳ್ಕೊಂಡು ನನ್ ತಲೆ ತಿಂದ್ರೆ...ಅದೇ ನಂಬರ್ ಗೆ ಫೋನ್ ಹಚ್ಚಿ ನಿನ್ ಹೆಸರ್ನಲ್ಲೂ ಒಂದು ಬೆಡ್ ಬುಕ್ ಮಾಡ್ಬುಡ್ತೀನಿ. ಮೂದೇವಿನ್ತಂದು.!!

English summary
Cheating complaint is lodged against Kannada Actress Meghana Raj by Janardhan from Tamil Nadu. Janardhan alleged that Meghana Raj married him in 2015 but denied to give marriage certificate. Here is a satire on this issue. Read the article.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada