For Quick Alerts
  ALLOW NOTIFICATIONS  
  For Daily Alerts

  ಸುಧೀರ್ ಅತ್ತಾವರ್‌ಗೆ ಈ 'ಪರಿ' ಮುಖಭಂಗ ಬೇಕಿತ್ತಾ?

  By Rajendra
  |

  'ಪರಿ' ನಿರ್ದೇಶಕ ಸುಧೀರ್ ಅತ್ತಾವರ್ ಮತ್ತೊಮ್ಮೆ ಮುಖಭಂಗ ಮಾಡಿಕೊಂಡಿದ್ದಾರೆ. ಸಿನಿಮಾ ಮೇಲೆ ಹಿಡಿತವೇ ಇಲ್ಲದೆ ತನ್ನ ಪರಿಯ ಅಂದವನ್ನ ಕೆಡಿಸಿದ್ದ ಅತ್ತಾವರ್, ಆ ಸೋಲನ್ನ ಪತ್ರಕರ್ತರ ವಿಮರ್ಶೆಗಳ ಮೇಲೆ ಆರೋಪಿಸಿ ಅವರ ಮೇಲೆ ಹರಿಹಾಯ್ದಿದ್ದರು. ಪತ್ರಿಕಾ ವಿಮರ್ಶಗಳನ್ನೇ ಕೆಣಕುವಂತೆ ಜಾಹಿರಾತು ನೀಡಿ ಹಾಗೂ ಚಿತ್ರ ನಿಲ್ಲಿಸಿಕೊಳ್ಳಲು ಪ್ರಯತ್ನಿಸಿದರಾದರೂ, ಪ್ರೇಕ್ಷಕನೂ 'ಪರಿ' ವಿಷಯದಲ್ಲಿ ನಿರ್ದಯಿಯಾದ.

  ತನ್ನ ಉದ್ಧಟತನದಿಂದಾಗಿ ಸಿನಿಮಾ ಪತ್ರಕರ್ತರ ಆಕ್ರೋಶಕ್ಕೆ ಕಾರಣನಾಗಿದ್ದೇನೆ ಎಂಬುದು ಗೊತ್ತಾಗುತ್ತಿದ್ದಂತೆ, ಅದನ್ನ ತೇಪೆ ಹಾಕಲು ಇತ್ತೀಚೆಗೆ ಒಂದು ಪತ್ರಿಕಾಗೋಷ್ಠಿ ಕರೆಯಿಸಿದ್ದರು ಅತ್ತಾವರ್. ಆದರೆ ಈ ಪತ್ರಿಕಾಗೋಷ್ಠಿಗೆ ಚಿತ್ರದ ನಿರ್ಮಾಪಕರೂ ಬರುತ್ತಾರೆ ಎಂಬುದು ಗೊತ್ತಾಗುತ್ತಿದ್ದಂತೆ ಸುಧೀರ್ ಪತ್ರಿಕಾಗೋಷ್ಠಿ ಕಡೆ ಮುಖವೇ ಹಾಕದೆ ನಾಪತ್ತೆಯಾದರು.

  ಎಂಬತ್ತು ಲಕ್ಷದೊಳಕ್ಕೆ ಸಿನಿಮಾ ಮುಗಿಸುವ ಭರವಸೆ ಕೊಟ್ಟು ಮೂರೂವರೆ ಕೋಟಿ ಖರ್ಚು ಮಾಡಿಸಿದರು ಎಂಬ ಆರೋಪವೊಂದು ಅವರ ಮೇಲಿದೆ. ಎಲ್ಲಿ ಅದನ್ನ ನಿರ್ಮಾಪಕರು ಕಾರಿಕೊಂಡು ಬಿಡುತ್ತಾರೋ ಎಂದು ಬೆದರಿಯೇ ಸುಧೀರ್ ನಾಪತ್ತೆಯಾದರು ಎನ್ನುತ್ತದೆ ಮೂಲ. ಆದರೆ ಸುಧೀರ್ ಉದ್ಧಟತನಕ್ಕೆ ಸರಿಯಾದ ಪಾಠ ಕಲಿಸಬೇಕು ಅಂತಲೇ ಕಾಯುತ್ತಿದ್ದ ಪತ್ರಕರ್ತರು ಕೊನೆಗೆ ಸುಧೀರ್ ನಾಪತ್ತೆಯಾದದ್ದರಿಂದಾಗಿ ಆ ಪತ್ರಿಕಾಗೋಷ್ಠಿಗೇ ಬಾಯ್ಕಾಟ್ ಹೇಳಿ ಎದ್ದುಹೋದರು. (ಒನ್‌ಇಂಡಿಯಾ ಕನ್ನಡ)

  English summary
  Sources claims that film maker Sudhir Attavar's latest flick Parie not doing well at box office. Parie' is made by some Karnataka-based top software engineers working in the US. But their effort seems wasted mainly because of the director, who has been barely involved in writing the script or narrating the story on screen.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X