ಪ್ರಭಾಸ್ ಹಿಂದಿಕ್ಕಿದ ಅಲ್ಲು ಅರ್ಜುನ್; ಮುಂದಿನ ಚಿತ್ರಕ್ಕೆ ಸಂಭಾವನೆ ಎಷ್ಟು ಗೊತ್ತಾ?
ತೆಲುಗು ನಟ ಅಲ್ಲು ಅರ್ಜುನ್ 'ಪುಷ್ಪ'-2 ಸಿನಿಮಾ ಮಾಡಿ ಸೂಪರ್ ಸಕ್ಸಸ್ ಕಂಡಿದ್ದಾರೆ. ಈಗಾಗಲೇ ತಮಿಳು ನಿರ್ದೇಶಕ ಅಟ್ಲಿ ಜೊತೆ ಹೊಸ ಸಿನಿಮಾ ಆರಂಭಿಸಿದ್ದಾರೆ. ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಈ ಸಿನಿಮಾ ತೆರೆಗೆ ಬರಲಿದೆ. ಈ ಚಿತ್ರಕ್ಕೆ ಸ್ಟೈಲಿಶ್ ಸ್ಟಾರ್ ಸಂಭಾವನೆ ವಿಚಾರ ಈಗ ಹಾಟ್ ಟಾಪಿಕ್ ಆಗಿದೆ.
ರಜನಿಕಾಂತ್, ಶಾರುಖ್ ಖಾನ್, ಸಲ್ಮಾನ್ ಖಾನ್, ದಳಪತಿ ವಿಜಯ್ ಭಾರತೀಯ ಚಿತ್ರರಂಗದಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ನಟರು ಎನಿಸಿಕೊಂಡಿದ್ದಾರೆ. ಪ್ರಭಾಸ್ ಚಿತ್ರವೊಂದಕ್ಕೆ 150 ಕೋಟಿ ರೂ. ಚಾರ್ಜ್ ಮಾಡುತ್ತಾರೆ ಎನ್ನುವ ಮಾತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಮಾತ್ರ ಸಿಗುವುದಿಲ್ಲ. ಕೆಲವೊಮ್ಮೆ ನಿರ್ಮಾಪಕರು ಬಹಿರಂಗವಾಗಿ ಹೇಳಿಕೊಂಡಿರುವುದು ಇದೆ.

ಸದ್ಯ ಅಟ್ಲಿ ಚಿತ್ರಕ್ಕೆ ಅಲ್ಲು ಅರ್ಜುನ್ ಸಂಭಾವನೆ ಕೇಳಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಈ ಚಿತ್ರಕ್ಕೆ ಬರೋಬ್ಬರಿ 175 ಕೋಟಿ ರೂ. ಸಂಭಾವನೆ ಅಲ್ಲು ಅರ್ಜುನ್ ಜೇಬಿಗಿಳಿಸುತ್ತಾರೆ ಎನ್ನಲಾಗ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಇದು ಹಾಟ್ ಟಾಪಿಕ್ ಆಗಿದೆ. ಪ್ರಭಾಸ್ ಚಿತ್ರವೊಂದಕ್ಕೆ 150 ಕೋಟಿ ಸಂಭಾವನೆ ಪಡೆಯುತ್ತಾರೆ ಎನ್ನುವ ಮಾತುಗಳು ಕೇಳಿಬರುತ್ತದೆ. ಅದನ್ನು ಮೀರಿ ಈಗ ಅಲ್ಲು ಅರ್ಜುನ್ ಸಂಭಾವನೆ ಪಡೆಯುವ ವಿಚಾರ ಚರ್ಚೆ ಆಗ್ತಿದೆ.
ಇತ್ತೀಚೆಗೆ ಸ್ಟಾರ್ ನಟರು ಒಂದಷ್ಟು ಮೊತ್ತವನ್ನು ಸಂಭಾವನೆಯಾಗಿ ಪಡೆದು ಬಳಿಕ ಲಾಭದಲ್ಲಿ ಪಾಲು ಕೇಳುವುದು ಇದೆ. AA22xA6 ಚಿತ್ರವನ್ನು ಸನ್ ಪಿಕ್ಚರ್ಸ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಹಾಲಿವುಡ್ ಸಂಸ್ಥೆಗಳು ಚಿತ್ರಕ್ಕಾಗಿ ಕೆಲಸ ಮಾಡುತ್ತಿದೆ. ದೀಪಿಕಾ ಪಡುಕೋಣೆ ಚಿತ್ರದ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಅದಕ್ಕಾಗಿ ಆಕೆ ಭಾರೀ ಸಂಭಾವನೆ ಪಡೆದಿರುವ ಸಾಧ್ಯತೆಯಿದೆ.
ಅಟ್ಲಿ ನಿರ್ದೇಶನದ ಎಲ್ಲಾ ಚಿತ್ರಗಳು ಸಕ್ಸಸ್ ಕಂಡಿದೆ. ಹಾಗಾಗಿ ಅವರ 6ನೇ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿದೆ. 'ಪುಷ್ಪ' 2 ಬಳಿಕ ಅಟ್ಲಿ ಜೊತೆ ಅಲ್ಲು ಅರ್ಜುನ್ ಕೈ ಜೋಡಿಸಿರುವುದು ಸಹಜವಾಗಿಯೇ ಕುತೂಹಲ ಮೂಡಿಸಿದೆ. ಸಕ್ಸಸ್‌ಫುಲ್ ನಿರ್ದೇಶಕ, ನಟ ಸೇರಿ ಮುಂದೆ ಯಾವ ರೀತಿ ಜಾದೂ ಮಾಡ್ತಾರೆ ಎಂದು ನೋಡಲು ಸಿನಿರಸಿಕರು ಸಜ್ಜಾಗಿದ್ದಾರೆ. ಅಂದಾಜು 800 ಕೋಟಿ ರೂ. ಬಜೆಟ್‌ನಲ್ಲಿ AA22xA6 ಸಿನಿಮಾ ನಿರ್ಮಾಣವಾಗಲಿದೆ.
ಆಧುನಿಕ ತಂತ್ರಜ್ಞಾನ ಬಳಸಿ ಬಹಳ ಅದ್ಧೂರಿಯಾಗಿ ಸಿನಿಮಾ ತಯಾರಾಗಲಿದೆ. ಈಗಾಗಲೇ ಪ್ರೀ ವಿಷ್ಯುವಲೈಸ್ ಮಾಡುವ ಕೆಲಸ ನಡೀತಿದೆ. ಹಾಲಿವುಡ್ ತಂತ್ರಜ್ಞರು ಕೂಡ ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ದೇಶ ವಿದೇಶದ ಭಾಷೆಗಳಿಗೆ ಸಿನಿಮಾ ಡಬ್ ಆಗಲಿದೆ.
'ಗಂಗೋತ್ರಿ' ಸಿನಿಮಾ ಮೂಲಕ ಅಲ್ಲು ಅರ್ಜುನ್ ಚಿತ್ರರಂಗ ಪ್ರವೇಶಿಸಿದ್ದರು. ಆರಂಭದಲ್ಲಿ ತಮ್ಮ ಲುಕ್ಸ್ ಕಾರಣಕ್ಕೆ ಟ್ರೋಲ್ ಆಗಿದ್ದು ಇದೆ. ಬಳಿಕ ಹಂತ ಹಂತವಾಗಿ ಬೆಳೆದು ಬಂದರು. ಸ್ಟೈಲಿಶ್ ಸ್ಟಾರ್ ಎನಿಸಿಕೊಂಡರು. ಬ್ಲಾಕ್‌ಬಸ್ಟರ್ ಸಿನಿಮಾಗಳಲ್ಲಿ ನಟಿಸಿ ಸಕ್ಸಸ್ ಕಂಡರು. 'ಪುಷ್ಪ' ಸರಣಿ ಸಿನಿಮಾಗಳ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟಕ್ಕೇರಿದ್ದಾರೆ. ಇದೀಗ ಅದಕ್ಕಿಂತಲೂ ದೊಡ್ಡ ಸಾಹಸಕ್ಕೆ ಕೈ ಹಾಕಿದ್ಧಾರೆ. ಅದಕ್ಕೆ ತಕ್ಕಂತೆ ಸಂಭಾವನೆ ಪಡೆಯುತ್ತಿದ್ದಾರೆ.
'ಪುಷ್ಪ' ಚಿತ್ರಕ್ಕಾಗಿ ಐದಾರು ವರ್ಷ ಅಲ್ಲು ಅರ್ಜುನ್ ವ್ಯಯಿಸಿದ್ದರು. ಈ ಗ್ಯಾಪ್‌ನಲ್ಲಿ ಬೇರೆ ಸಿನಿಮಾ ಒಪ್ಪಿಕೊಂಡಿರಲಿಲ್ಲ. ಅವರ ಲೆಕ್ಕಾಚಾರ ಸರಿಯಾಗಿದೆ. ಅದೇ ಸಿನಿಮಾ ದೊಡ್ಡದಾಗಿ ನೇಮು ಫೇಮು ತಂದುಕೊಟ್ಟಿದೆ.


Click it and Unblock the Notifications











