'ಪುಷ್ಪ 2' ಸಿನಿಮಾಕ್ಕೆ ಮತ್ತೊಬ್ಬ ವಿಲನ್ ಎಂಟ್ರಿ!

'ಪುಷ್ಪ', 'ಕೆಜಿಎಫ್ 2', 'RRR' ಸಿನಿಮಾದ ಬಳಿಕ ಇನ್ಯಾವ ಪ್ಯಾನ್ ಇಂಡಿಯಾ ಸಿನಿಮಾಗಳೂ ಸಹ ದೊಡ್ಡ ಮಟ್ಟದಲ್ಲಿ ಸದ್ದು ಮಾಡಲು ವಿಫಲವಾಗಿದೆ. ದಕ್ಷಿಣದವರ ಧಮ್ ಮೂರೇ ಸಿನಿಮಾಕ್ಕೆ ಮುಗಿಯಿತು ಎಂದು ಸಹ ಕೆಲವು ಬಾಲಿವುಡ್ಡಿಗರು ಕುಹುಕವಾಡಿದ್ದಿದೆ.

ಈ ಹಿನ್ನೆಲೆಯಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿರುವ ಕೆಲವು ದಕ್ಷಿಣ ಭಾರತದ ಸಿನಿಮಾಗಳು ಇನ್ನೂ ನಿರ್ಮಾಣ ಹಂತದಲ್ಲಿವೆ. ಅದರಲ್ಲಿ ಅಲ್ಲು ಅರ್ಜುನ್ ನಟನೆಯ 'ಪುಷ್ಪ 2' ಸಿನಿಮಾ ಸಹ ಒಂದು.

'ಪುಷ್ಪ' ಸಿನಿಮಾ ಭಾರಿ ಹಿಟ್ ಆದ ಬೆನ್ನಲ್ಲೆ 'ಪುಷ್ಪ 2' ಮೇಲೆ ದೊಡ್ಡ ಮಟ್ಟದ ನಿರೀಕ್ಷೆಯ ಭಾರವಿದೆ. ಅದೇ ಕಾರಣಕ್ಕೆ 'ಪುಷ್ಪ 2' ಸಿನಿಮಾದ ಚಿತ್ರಕತೆಯನ್ನು ಜಾಗರೂಕತೆಯಿಂದ ಹೆಣೆದಿದ್ದಾರೆ ನಿರ್ದೇಶಕ ಸುಕುಮಾರ್. ಈಗಾಗಲೇ ಇದ್ದ ಪವರ್‌ಫುಲ್ ವಿಲನ್‌ಗಳ ಜೊತೆಗೆ ಇನ್ನೊಬ್ಬರು ಪವರ್‌ಫುಲ್ ವಿಲನ್ ಪಾತ್ರವನ್ನು ಸುಕುಮಾರ್ ಎಳೆದು ತಂದಿದ್ದು, ಆ ಹೊಸ ವಿಲನ್‌ ಪಾತ್ರಕ್ಕೆ ಖ್ಯಾತ ನಟರನ್ನು ಒಪ್ಪಿಸಿದ್ದಾರೆ.

ವಿಲನ್‌ಗಳ ಸಾಲು ಉದ್ದವಿದೆ

ವಿಲನ್‌ಗಳ ಸಾಲು ಉದ್ದವಿದೆ

'ಪುಷ್ಪ' ಸಿನಿಮಾದ ಅಂತ್ಯದಲ್ಲಿ ಪುಷ್ಪರಾಜ್ ಹಾಗೂ ಪೊಲೀಸ್ ಅಧಿಕಾರಿ ಬನ್ವರ್ ಸಿಂಗ್ ಶೆಖಾವತ್ ನಡುವೆ ವೈರತ್ವ ಶುರುವಾಗುವ ದೃಶ್ಯವಿತ್ತು. ಅಲ್ಲಿಗೆ 'ಪುಷ್ಪ 2' ಸಿನಿಮಾದಲ್ಲಿ ಬನ್ವರ್ ಸಿಂಗ್ ಶೆಖಾವತ್ ಪ್ರಮುಖ ವಿಲನ್ ಎಂಬುದು ಪ್ರೇಕ್ಷಕರಿಗೆ ಖಾತ್ರಿಯಾಗಿತ್ತು. ಜೊತೆಗೆ 'ಪುಷ್ಪ' ಸಿನಿಮಾದ ಮೊದಲ ಭಾಗದಲ್ಲಿ ಸಾಯದೇ ಉಳಿದ ಡಾಲಿ ಧನಂಜಯ್ ಪಾತ್ರ, ಸುನಿಲ್ ಹಾಗೂ ಅನುಸೂಯ ಪಾತ್ರಗಳು ಸಹ ಪುಷ್ಪರಾಜ್ ಮೇಲೆ ಸೇಡು ತೀರಿಸಿಕೊಳ್ಳಲು ಕಾಯುತ್ತಿವೆ.

'ಪುಷ್ಪ 2'ಗೆ ಹೊಸ ವಿಲನ್ ಎಂಟ್ರಿ

'ಪುಷ್ಪ 2'ಗೆ ಹೊಸ ವಿಲನ್ ಎಂಟ್ರಿ

ಇವುಗಳ ನಡುವೆ 'ಪುಷ್ಪ 2' ನಲ್ಲಿ ಹೊಸ ವಿಲನ್ ಎಂಟ್ರಿಯಾಗಿದೆ. ಆ ಹೊಸ ವಿಲನ್ ಪಾತ್ರಕ್ಕೆ ತೆಲುಗು-ತಮಿಳಿನ ಜನಪ್ರಿಯ ನಟ ಆದಿ ಪಿನಿಶೆಟ್ಟಿಯನ್ನು ನಿರ್ದೇಶಕ ಸುಕುಮಾರ್ ಗೊತ್ತು ಮಾಡಿದ್ದಾರೆ. ಆದಿ ಪಿನಿಶೆಟ್ಟಿ ಈಗಾಗಲೇ 'ಸರೈನೋಡು' ಸಿನಿಮಾದಲ್ಲಿ ಅಲ್ಲು ಅರ್ಜುನ್ ಎದುರು ನಟಿಸಿದ್ದಾರೆ. ಸುಕುಮಾರ್ ನಿರ್ದೇಶನದ ಸೂಪರ್ ಹಿಟ್ ಸಿನಿಮಾ 'ರಂಗಸ್ಥಲಂ'ನಲ್ಲಿಯೂ ಆದಿ ಪಿನಿಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಇದೀಗ 'ಪುಷ್ಪ 2' ಸಿನಿಮಾದಲ್ಲಿಯೂ ಮುಖ್ಯ ಪಾತ್ರದಲ್ಲಿ ಆದಿ ಕಾಣಿಸಿಕೊಳ್ಳಲಿದ್ದಾರೆ.

ತೆಲುಗು-ತಮಿಳು ಸಿನಿಮಾಗಳಲ್ಲಿ ನಟನೆ

ತೆಲುಗು-ತಮಿಳು ಸಿನಿಮಾಗಳಲ್ಲಿ ನಟನೆ

ಆದಿ ಪಿನಿಶೆಟ್ಟಿ ನಾಯಕ ನಟ, ಪೋಷಕ ನಟ, ವಿಲನ್ ಮೂರೂ ಪಾತ್ರಗಳಲ್ಲಿ ನಟಿಸುತ್ತಾ ಬಂದಿದ್ದಾರೆ. ಆಗಾಗ್ಗೆ ಹಾಸ್ಯ ಪಾತ್ರಗಳಲ್ಲಿಯೂ ಕಾಣಿಸಿಕೊಳ್ಳುತ್ತಾರೆ. ಉತ್ತಮ ನಟನಾಗಿ ತೆಲುಗು, ತಮಿಳು ಎರಡೂ ಚಿತ್ರರಂಗದಲ್ಲಿ ಆದಿ ಪಿನಿಶೆಟ್ಟಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. 2006 ರಿಂದಲೂ ಚಿತ್ರರಂಗದಲ್ಲಿರುವ ಇವರು ಹಲವು ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ.

'ಪುಷ್ಪ 2' ಸಿನಿಮಾದ ಚಿತ್ರೀಕರಣ ಆರಂಭ

'ಪುಷ್ಪ 2' ಸಿನಿಮಾದ ಚಿತ್ರೀಕರಣ ಆರಂಭ

'ಪುಷ್ಪ 2' ಸಿನಿಮಾದ ಚಿತ್ರೀಕರಣ ಆರಂಭವಾಗಿದ್ದು, ಅಲ್ಲು ಅರ್ಜುನ್ ಭಾಗದ ಚಿತ್ರೀಕರಣ ಈ ತಿಂಗಳ ಅಂತ್ಯದಿಂದ ಪ್ರಾರಂಭವಾಗಲಿದೆ ಎನ್ನಲಾಗುತ್ತಿದೆ. ಈ ಸಿನಿಮಾದಲ್ಲಿ ಹಲವು ವಿಶೇಷತೆಗಳು ಇರಲಿದ್ದು, ಅತಿಥಿ ಪಾತ್ರವೊಂದು ಸಹ ಇರಲಿದೆಯಂತೆ, ಆ ಅತಿಥಿ ಪಾತ್ರವನ್ನು ದೊಡ್ಡ ಸ್ಟಾರ್ ನಟ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾದಲ್ಲಿ ಡಾಲಿ ಧನಂಜಯ್ ಪಾತ್ರಕ್ಕೆ ಹೆಚ್ಚಿನ ಸ್ಕೋಪ್ ಇರಲಿದೆ ಈ ಬಗ್ಗೆ ಈ ಹಿಂದೆಯೇ ಸುಕುಮಾರ್ ಸಂದರ್ಶನವೊಂದರಲ್ಲಿ ಹೇಳಿದ್ದರು.

More from Filmibeat

English summary
Telugu-Tamil actor Adi Pinishetty entered Pushpa 2 team as new villain. He already acted along with Allu Arjun in Sarainodu.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X