ಕಿಚ್ಚನ 'ಪೈಲ್ವಾನ್'ಗಾಗಿ ಮುಂಬೈನಿಂದ ಬಂದ ಚೆಲುವೆ.!
'ಹೆಬ್ಬುಲಿ' ಕೃಷ್ಣ ನಿರ್ದೇಶನ ಹಾಗೂ ಕಿಚ್ಚ ಸುದೀಪ್ ನಟನೆಯಲ್ಲಿ ಸೆಟ್ಟೇರಲಿರುವ 'ಪೈಲ್ವಾನ್' ಚಿತ್ರದ ಶೂಟಿಂಗ್ ಇದೇ ತಿಂಗಳಿನಿಂದ ಆರಂಭವಾಗಲಿದೆ.
ಈಗಾಗಲೇ ಕಿಚ್ಚನ ಎದುರು ಖಳನಾಯಕನಾಗಿ ಮಿಂಚಲು ಕಬೀರ್ ದುಹಾನ್ ಸಿಂಗ್ ಅವರನ್ನ ಆಯ್ಕೆ ಮಾಡಿಕೊಂಡಿರುವ 'ಪೈಲ್ವಾನ್' ತಂಡ ಈಗ ನಾಯಕಿಯನ್ನ ಕೂಡ ಅಂತಿಮ ಮಾಡಿದೆಯಂತೆ. ಈ ವಿಷ್ಯವನ್ನ ಖುದ್ದು ನಿರ್ದೇಶಕ ಕೃಷ್ಣ ಮತ್ತು ನಾಯಕಿಯೇ ಸ್ಪಷ್ಟಪಡಿಸಿದ್ದಾರೆ.
ಇಷ್ಟು ದಿನ 'ಪೈಲ್ವಾನ್' ಚಿತ್ರದಲ್ಲಿ ಸುದೀಪ್ ಗೆ ಯಾರು ಜೋಡಿಯಾಗ್ತಾರೆ ಎಂಬ ಕುತೂಹಲ ಅಭಿಮಾನಿಗಳನ್ನ ಕಾಡುತ್ತಿತ್ತು. ಆದ್ರೀಗ, ಎಲ್ಲ ಲೆಕ್ಕಚಾರಗಳನ್ನ ಮುಗಿಸಿರುವ ನಿರ್ದೇಶಕರು ಮುಂಬೈನಿಂದ ಹೊಸ ಬ್ಯೂಟಿಯನ್ನ ಸ್ಯಾಂಡಲ್ ವುಡ್ ಗೆ ಪರಿಚಯಿಸುತ್ತಿದ್ದಾರೆ. ಅಷ್ಟಕ್ಕೂ, ಪೈಲ್ವಾನ್ ಜೋಡಿ ಯಾರು.? ಇದಕ್ಕೂ ಮುಂಚೆ ಯಾವ ಚಿತ್ರಗಳಲ್ಲಿ ನಟಿಸಿದ್ದರು.? ಮುಂದೆ ಓದಿ....

ಸುದೀಪ್ ಗೆ ನಾಯಕಿಯಾದ ಮುಂಬೈನ ನಟಿ.!
'ಹೆಬ್ಬುಲಿ' ಚಿತ್ರದ ನಂತರ ಸುದೀಪ್ ಮತ್ತು ಕೃಷ್ಣ ಕಾಂಬಿನೇಷನ್ ನಲ್ಲಿ ತಯಾರಾಗುತ್ತಿರುವ ಈ ಚಿತ್ರಕ್ಕೆ ಕೊನೆಗೂ ನಾಯಕಿ ಎಂಟ್ರಿ ಕೊಟ್ಟಾಯಿತು. 'ಪೈಲ್ವಾನ್' ಚಿತ್ರದಲ್ಲಿ ಸುದೀಪ್ ಗೆ ನಾಯಕಿಯಾಗಿ ಮುಂಬೈ ಮೂಲದ ನಟಿ ಆಕಾಂಕ್ಷ ಸಿಂಗ್ ನಟಿಸಲಿದ್ದಾರೆ.

ಕಿರುತೆರೆಯಲ್ಲಿ ಖ್ಯಾತಿ
ಮೂಲತಃ ಮುಂಬೈನವರಾದ ಆಕಾಂಕ್ಷ ಸಿಂಗ್ ಹಿಂದಿ ಕಿರುತೆರೆಯಲ್ಲಿ ಹೆಚ್ಚು ಗುರುತಿಸಿಕೊಂಡಿದ್ದಾರೆ. 'ನಾ ಬೋಲೇ ತುಮ್ ನ ಮೈನೇ ಕುಚ್ ಕಹಾ'' ಟಿವಿ ಸರಣಿಯ ಎರಡು ಭಾಗದಲ್ಲಿ ನಟಿಸಿದ್ದಾರೆ. ಅದಲ್ಲದೇ, ಬಾಲಿವುಡ್ ನ 'ಬದ್ರಿನಾಥ್ ಕಿ ದುಲ್ಹಾನಿಯಾ' ಚಿತ್ರದಲ್ಲೂ ಅಭಿನಯಿಸಿದ್ದಾರೆ.

ತೆಲುಗಿನಲ್ಲೂ ಗುರುತಿಸಿಕೊಂಡಿರುವ ಆಕಾಂಕ್ಷೆ
ಹಿಂದಿ ಸಿನಿಮಾ ಹಾಗೂ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದ ಆಕಾಂಕ್ಷ ಸಿಂಗ್ ತೆಲುಗಿನ 'ಮಳ್ಳಿ ರಾವ' ಚಿತ್ರದಲ್ಲಿ ನಾಯಕಿಯಾಗಿದ್ದರು. ಇದೀಗ, ನಾಗಾರ್ಜುನ ಮತ್ತು ನಾನಿ ಅಭಿನಯಿಸುತ್ತಿರುವ ಮಲ್ಟಿಸ್ಟಾರ್ ಚಿತ್ರದಲ್ಲೂ ಆಕಾಂಕ್ಷ ನಟಿಸುತ್ತಿದ್ದಾರೆ. ವಿಶೇಷ ಅಂದ್ರೆ, ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಕೂಡ ಅಭಿನಯಿಸುತ್ತಿದ್ದಾರೆ.

ಕನ್ನಡದಲ್ಲಿ ಮೊದಲ ಸಿನಿಮಾ
ಸದ್ಯ, ಹಿಂದಿ ಮತ್ತು ತೆಲುಗು ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಆಕಾಂಕ್ಷ ಸಿಂಗ್ ಗೆ 'ಪೈಲ್ವಾನ್' ಕನ್ನಡದಲ್ಲಿ ಮೊದಲ ಸಿನಿಮಾ. ಮೇ 17 ರಿಂದ ಪೈಲ್ವಾನ್ ಶೂಟಿಂಗ್ ಆರಂಭವಾಗಲಿದ್ದು, ಇದೇ ವಾರದಲ್ಲಿ ಆಕಾಂಕ್ಷ ಸಿಂಗ್ ಬೆಂಗಳೂರಿಗೆ ಬರಲಿದ್ದಾರೆ ಎಂಬ ಮಾಹಿತಿ ಇದೆ.

ಚಿತ್ರದಲ್ಲಿ ಸುದೀಪ್ ಕುಸ್ತಿಪಟು
'ಪೈಲ್ವಾನ್' ಚಿತ್ರದಲ್ಲಿ ಸುದೀಪ್ ಕುಸ್ತಿಪಟು ಆಗಿ ಕಾಣಿಸಿಕೊಳ್ಳುತ್ತಿದ್ದು, ನಾಯಕಿಯದ್ದು ಚಿತ್ರದಲ್ಲಿ ಎರಡು ವಿಭಿನ್ನ ಶೇಡ್ ಇದೆಯಂತೆ. ಇನ್ನುಳಿದಂತೆ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ.


Click it and Unblock the Notifications











