Don't Miss!
- News
ಕೊನೆಗೂ ಮದುವೆಯಾಗುತ್ತೇನೆ ಎಂದ ರಾಹುಲ್ ಗಾಂಧಿ, ಹುಡುಗಿ ಬಗ್ಗೆ ಹೀಗಂದ್ರು !
- Technology
ವಾಟ್ಸಾಪ್ನಲ್ಲಿ ಈ ಫೀಚರ್ ನಿಮಗೆ ತುಂಬಾ ನೆರವಾಗುತ್ತೆ!..ಪಕ್ಕಾ ವ್ಹಾವ್ ಅಂತೀರಾ!
- Finance
ತೆರಿಗೆ ಉಳಿಸುವ ಎಫ್ಡಿ: ಈ ಬ್ಯಾಂಕುಗಳು ನೀಡಲಿವೆ ಶೇ 7.6ರ ವರೆಗೆ ಬಡ್ಡಿ- ಹಿರಿಯರಿಗೆ ಇನ್ನೂ ಅಧಿಕ
- Automobiles
ಬ್ರಿಟನ್ ಪ್ರಧಾನಿಗೆ ಟ್ರಾಫಿಕ್ ಪೊಲೀಸರ ದಂಡ: ಅವರ ವಿಡಿಯೋ ಅವರಿಗೆ ಕುತ್ತಾಯಿತು...
- Sports
ಉಜ್ಜೈನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಟೀಂ ಇಂಡಿಯಾ ಆಟಗಾರರು: ಪಂತ್ ಗುಣಮುಖವಾಗುವಂತೆ ಪ್ರಾರ್ಥನೆ
- Lifestyle
ಕುಂಭ ರಾಶಿಯಲ್ಲಿರುವ ಶನಿ: ಲಾಲ್ ಕಿತಾಬ್ ಪ್ರಕಾರ ದ್ವಾದಶ ರಾಶಿಗಳು ಈ ಪರಿಹಾರ ಮಾಡಿದರೆ ಕಷ್ಟ ದೂರಾಗಿ ಅದೃಷ್ಟ ಒಲಿಯಲಿದೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಡಿಸೆಂಬರ್ 11ಕ್ಕೆ ಅಭಿಷೇಕ್ ಅಂಬರೀಶ್ ನಿಶ್ಚಿತಾರ್ಥ
ಕೆಲ ದಿನಗಳ ಹಿಂದಷ್ಟೆ ಸ್ಯಾಂಡಲ್‌ವುಡ್‌ನ ತಾರಾ ಜೋಡಿ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಅದರ ಬೆನ್ನಲ್ಲೆ ಇದೀಗ ಸ್ಯಾಂಡಲ್‌ವುಡ್‌ನ ಮತ್ತೊಬ್ಬ ಸ್ಟಾರ್ ಯುವ ನಟ ನಿಶ್ಚಿತಾರ್ಥ ಮಾಡಿಕೊಳ್ಳಲು ಮುಂದಾಗಿದ್ದಾರೆ.
ಕನ್ನಡ ಚಿತ್ರರಂಗದ ಲಿಜೆಂಡರಿ ನಟ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಅವರ ನಿಶ್ಚಿತಾರ್ಥ ನಾಳೆ ಅಂದರೆ ಡಿಸೆಂಬರ್ 11 ರಂದು ನಡೆಯಲಿದೆ ಎನ್ನಲಾಗಿದೆ.
ಅಭಿಷೇಕ್ ಅಂಬರೀಶ್ ನಿಶ್ಚಿತಾರ್ಥದ ಸುದ್ದಿ ಕೆಲವು ದಿನಗಳಿಂದಲೂ ಮಾಧ್ಯಮಗಳಲ್ಲಿ ಹರಿದಾಡುತ್ತಿತ್ತು. ಆದರೆ ಈ ವಿಷಯವನ್ನು ಸುಮಲತಾ ಅಂಬರೀಶ್ ಅವರು ಮಾಧ್ಯಮಗಳಿಂದ ಮುಚ್ಚಿಟ್ಟಿದ್ದರು. ಆದರೆ ನಿಶ್ಚಿತಾರ್ಥ ನಡೆಯುವುದು ಖಾತ್ರಿಯಾಗಿದ್ದು ಡಿಸೆಂಬರ್ 08 ರಂದೇ ಉಂಗುರ ಪೂಜೆ ಸಹ ಮಾಡಲಾಗಿದೆ. ಅಂದಹಾಗೆ ಡಿಸೆಂಬರ್ 08 ರಂದು ಸುಮಲತಾ ಹಾಗೂ ಅಂಬರೀಶ್ ಅವರ ವಿವಾಹ ವಾರ್ಷಿಕೋತ್ಸವವೂ ಆಗಿತ್ತು.
ಅಭಿಷೇಕ್ ಅಂಬರೀಶ್ ಅವರು ತಮ್ಮ ಬಹುಸಮಯದ ಗೆಳತಿ ಅವಿವಾ ಬಿದ್ದಪ್ಪ ಅವರೊಟ್ಟಿಗೆ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ. ಖ್ಯಾತ ಉಡುಪು ವಿನ್ಯಾಸದ ಪ್ರಸಾದ್ ಬಿದ್ದಪ್ಪ ಅವರ ಪುತ್ರಿ ಈ ಅವಿವಾ ಬಿದ್ದಪ್ಪ.
ಅಭಿಷೆಕ್ ಅಂಬರೀಶ್ ಹಾಗೂ ಅವಿವಾ ಅವರ ನಿಶ್ಚಿತಾರ್ಥವು ಡಿಸೆಂಬರ್ 11 ರಂದು ಬೆಂಗಳೂರಿನಲ್ಲಿಯೇ ಖಾಸಗಿ ಹೋಟೆಲ್ ಒಂದರಲ್ಲಿ ನಡೆಯಲಿದೆ ಎನ್ನಲಾಗಿದ್ದು, ಸ್ಯಾಂಡಲ್‌ವುಡ್‌ನ ಕೆಲವು ಸೆಲೆಬ್ರಿಟಿಗಳು ಭಾಗಿಯಾಗಲಿದ್ದಾರೆ.
ಹೆಚ್ಚು ಮಂದಿಗೆ ನಿಶ್ಚಿತಾರ್ಥ ಸಮಾರಂಭಕ್ಕೆ ಆಹ್ವಾನವಿಲ್ಲ. ಕೆಲವೇ ಆಪ್ತೇಷ್ಟರಷ್ಟೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಅದರಲ್ಲಿ ದರ್ಶನ್ ಹಾಗೂ ಯಶ್ ಸಹ ಇರಲಿದ್ದಾರೆ ಎನ್ನಲಾಗುತ್ತಿದೆ. ಮದುವೆ ದಿನಾಂಕ ಇನ್ನೂ ನಿಗದಿಯಾಗಿಲ್ಲ ಆದರೆ ಸಂಕ್ರಾಂತಿ ಹಬ್ಬದ ಬಳಿಕ ಮದುವೆ ದಿನಾಂಕ ಖಾತ್ರಿಪಡಿಸಲಾಗುತ್ತದೆ ಎನ್ನಲಾಗಿದೆ.