ಅಂಬಿ ಪುತ್ರ ಅಭಿಷೇಕ್ 3ನೇ ಚಿತ್ರಕ್ಕೆ ತಯಾರಿ: ಡೈರೆಕ್ಟರ್ ಕೂಡ ಫಿಕ್ಸ್!

ಅಂಬರೀಶ್ ಪುತ್ರ ನಟ ಅಭಿಷೇಕ್ ಅಂಬರೀಶ್ ಸಿನಿಮಾ ರಂಗದಲ್ಲಿ ನಾಯಕ ನಟನಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದು ಆಗಿದೆ. ಈಗಾಗಲೇ ‌ಮೊದಲ ಸಿನಿಮಾದ ಮೂಲಕ ಬೆಳ್ಳಿ ಪರದೆ ಮೇಲೆ ರಾರಾಜಿಸಿದ್ದಾರೆ. 'ಅಮರ್' ಸಿನಿಮಾದೊಂದಿಗೆ ಅಭಿಷೇಕ್ ಒಂದು ಮಟ್ಟಿಗೆ ಅಭಿನಯದ ಮೂಲಕ ಜನ ಮನ ಗೆದ್ದಿದ್ದಾರೆ.

Recommended Video

ಶುರುವಾಯ್ತು ಅಂಬಿ, ಅಪ್ಪು ಅಭಿಮಾನಿಗಳ ನಡುವೆ ಮನಸ್ತಾಪ

'ಅಮರ್' ಸಿನಿಮಾ ಅಂದುಕೊಂಡ ಮಟ್ಟಿಗೆ ಸೂಪರ್ ಡೂಪರ್ ಹಿಟ್ ಎನಿಸಿಕೊಂಡಿಲ್ಲ. ಆದರೆ ಅಭಿಷೇಕ್ ಅಂಬರೀಶ್ ಅವರು ಹೀರೋ ಆಗಿ ಲಾಂಚ್ ಆಗಿದ್ದಾರೆ‌. ಇವರ ಮುಂದಿನ ಸಿನಿಮಾ ಹೇಗೆ ಇರಲಿದೆ ಎಂದು ಅವರ ಅಭಿಮಾನಿಗಳು ಕಾಯುತ್ತಿದ್ದಾರೆ. ಅಭಿ ಅವರ ಎರಡನೇ ಸಿನಿಮಾದ ಟೈಟಲ್ 'ಬ್ಯಾಡ್ ಮ್ಯಾನರ್ಸ್'.

ಸದ್ಯ ಅಭಿಷೇಕ್ ಅವರ ಎರಡನೇ ಸಿನಿಮಾ 'ಬ್ಯಾಡ್ ಮ್ಯಾನರ್ಸ್' ಚಿತ್ರದ ಕೆಲಸಗಳು ಭರದಿಂದ ಸಾಗಿವೆ. ಒಂದು ಕಡೆ ಚಿತ್ರೀಕರಣ ಮತ್ತೊಂದೆಡೆ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಇದೇ ಬೆನ್ನಲ್ಲಿ ಈಗ ಮೂರನೇ ಚಿತ್ರಕ್ಕೂ ಅಭಿಷೇಕ್ ಅವರು ಅಣಿಯಾಗುತ್ತಿದ್ದಾರೆ.

3ನೇ ಚಿತ್ರದ ಕಥೆ ಕೇಳಿ ಓಕೆ ಮಾಡಿರುವ ಅಭಿಷೇಕ್ ಅಂಬರೀಶ್!

3ನೇ ಚಿತ್ರದ ಕಥೆ ಕೇಳಿ ಓಕೆ ಮಾಡಿರುವ ಅಭಿಷೇಕ್ ಅಂಬರೀಶ್!

ಎರಡನೇ ಸಿನಿಮಾ ಇನ್ನು ರಿಲೀಸ್ ಆಗಿಲ್ಲ. ಆದರೆ ಅದಾಗಲೇ ಮೂರನೇ ಸಿನಿಮಾದ ತಯಾರಿಯಲ್ಲಿದ್ದಾರೆ ಅಭಿಷೇಕ್. ಈಗಾಗಲೇ ತಮ್ಮ 3ನೇ ಸಿನಿಮಾದ ಕಥೆ ಕೇಳಿ ಓಕೆ ಮಾಡಿದ್ದಾರಂತೆ. 'ಬ್ಯಾಡ್ ಮ್ಯಾನರ್ಸ್' ಸಿನಿಮಾ ಮುಗಿಯುತ್ತಲೇ, ಅಭಿಷೇಕ್ ಮೂರನೇ ಸಿನಿಮಾ ಸೆಟ್ಟೇರಲಿದೆ. ಈ ಬಗ್ಗೆ ಸದ್ಯದಲ್ಲೇ ಅಧಿಕೃತ ಮಾಹಿತಿ ಹೊರ ಬೀಳಲಿದೆ.

ಅಭಿಷೇಕ್‌ಗೆ ನಿರ್ದೇಶನ 3ನೇ ಚಿತ್ರಕ್ಕೆ ಯಾರ ನಿರ್ದೇಶನ?

ಅಭಿಷೇಕ್‌ಗೆ ನಿರ್ದೇಶನ 3ನೇ ಚಿತ್ರಕ್ಕೆ ಯಾರ ನಿರ್ದೇಶನ?

ಅಭಿ ಅವರ ಮುಂದಿನ ಸಿನಿಮಾಕ್ಕೆ ಅದಾಗಲೇ ನಿರ್ದೇಶಕ ಸಿಕ್ಕಿದ್ದು ಆಗಿದೆ. ಆದರೆ ಅದನ್ನು ಚಿತ್ರತಂಡ ಅಧಿಕೃತ ಪಡಿಸಬೇಕು ಅಷ್ಟೆ. ಈ ಮೊದಲು ಎರಡು ಹಿಟ್ ಸಿನಿಮಾಗಳನ್ನು ಕೊಟ್ಟ ನಿರ್ದೇಶಕ ಅಭಿ ಅವರ ಮೂರನೆ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಮೊದಲ ಸಿನಿಮಾ ನಿರ್ದೇಶನದ ಮೂಲಕ ಅತ್ಯುತ್ತಮ ನಿರ್ದೇಶಕ ಎನಿಸಿಕೊಂಡಿದ್ದಾರೆ. ಈತ ನಿರ್ದೇಶಕ ಭಟ್ಟರ ಬಳಗದಲ್ಲಿ ಕೆಲಸ ಮಾಡಿ ಅನುಭವ ಇದೆ. ಜೊತೆಗೆ ಸ್ಟಾರ್ ನಟನಿಗೆ ಸಿನಿಮಾ ಕೂಡ ಮಾಡಿದ್ದಾರೆ. ಇದು ಮಲ್ಟಿ ಸ್ಟಾರರ್ ಸಿನಿಮಾ ಆಗಲಿದ್ದು, ಸದ್ಯದಲ್ಲೇ ನಿರ್ದೇಶಕ ಮತ್ತು ಕಲಾವಿದರ ಬಗ್ಗೆ ಅಧಿಕೃತ ಮಾಹಿತಿ ಹೊರ ಬೀಳಲಿದೆ.

'ಬ್ಯಾಡ್ ಮ್ಯಾನರ್ಸ್' ಲುಕ್‌ನಲ್ಲಿ ಕಿಕ್ ಕೊಟ್ಟಿದ್ದ ಅಭಿ!

ಅಭಿಷೇಕ್ ಅಂಬರೀಶ್ ಅವರ ಹುಟ್ಟುಹಬ್ಬದ ಪ್ರಯುಕ್ತ 'ಬ್ಯಾಡ್ ಮ್ಯಾನರ್ಸ್' ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿತ್ತು. ಫಸ್ಟ್ ಲುಕ್‌ನಲ್ಲಿ ಅಭಿಷೇಕ್ ಸಿಕ್ಕಾ ಪಟ್ಟೆ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಮೊದಲ ಚಿತ್ರದಲ್ಲಿ ಲವ್ವರ್ ಬಾಯ್ ಆಗಿ ಕಾಣಿಸಿಕೊಂಡಿದ್ದ ಅಭಿ, ಎರಡನೇ ಚಿತ್ರದಲ್ಲಿ ಸಂಪೂರ್ಣ ಬದಲಾಗಿದ್ದಾರೆ. ಈ‌ ಚಿತ್ರದ ಮೇಲೆ ಮತ್ತಷ್ಟು ನಿರೀಕ್ಷೆ ಹೆಚ್ಚಾಗಲು ಕಾರಣ ನಿರ್ದೇಶಕ ಸೂರಿ. ಸೂರಿ ನಿರ್ದೇಶನದಲ್ಲಿ ಸಿನಿಮಾ ಚೆನ್ನಾಗಿ ಮೂಡಿಬರಲಿದೆ ಎನ್ನುವ ನಿರೀಕ್ಷೆಗಳು ಮನೆ ಮಾಡಿವೆ.

ದೊಡ್ಡ ಬಜೆಟ್‌ನಲ್ಲಿ ಅಭಿ ಮೂರನೇ ಸಿನಿಮಾ!

ದೊಡ್ಡ ಬಜೆಟ್‌ನಲ್ಲಿ ಅಭಿ ಮೂರನೇ ಸಿನಿಮಾ!

ಇನ್ನು ಅಭಿಷೇಕ್ ಅಂಬರೀಶ್ ಅವರ ಮೂರನೇ ಸಿನಿಮಾ ದೊಡ್ಡ ಬಜೆಟ್ ನಲ್ಲಿ ತಯಾತಾಗಲಿದೆಯಂತೆ. ಚಿತ್ರದ ಮೇಕಿಂಗ್‌ಗೆ ಹೆಚ್ಚಿನ ಬಂಡವಾಳ ಬೇಕಾಗಲಿದೆಯಂತೆ. ಆದರೆ ಚಿತ್ರದ ನಿರ್ಮಾಪಕ ಯಾರು ಎನ್ನುವುದು ಇನ್ನು ಬಯಲಾಗಿಲ್ಲ. ಇನ್ನು ಅಭಿಷೇಕ್ ಅಂಬರೀಶ್ ಕಾಂಬಿನೇಷನ್ ನಲ್ಲಿ ಮತ್ತೆ ಯಾವ ಸ್ಟಾರ್ ನಟ ಸಿನಿಮಾದಲ್ಲಿ ಇರಲಿದ್ದಾರೆ ಎನ್ನುವ ಸುದ್ದಿ ಕೂಡ ಹೊರ ಬಂದಿಲ್ಲ. ಅಭಿಷೇಕ್ ಅವರ ಎರಡನೇ ಸಿನಿಮಾ ಇನ್ನೂ ರಿಲೀಸ್ ಆಗದ ಕಾರಣ, ಈ ಹೊಸ ಸಿನಿಮಾದ ಸುದ್ದಿಯನ್ನು ಚಿತ್ರತಂಡ ಇನ್ನು ಅಧಿಕೃತಗೊಳಿಸಿಲ್ಲ.

More from Filmibeat

English summary
Abhishek Ambareesh Upcommimg Movie With Madhagaja Director Mahesh Kumar
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X