ಅಂಬರೀಶ್ ಮಗನ ಸಿನಿಮಾ ಲಾಂಚ್ ಗೆ ವೇದಿಕೆ ಸಿದ್ಧ
Recommended Video

ನಟ ಅಂಬರೀಶ್ ರಾಜಕೀಯ ವಿಚಾರಗಳಿಗೆ ಸದ್ಯ ಹೆಚ್ಚು ಸುದ್ದಿಯಲ್ಲಿ ಇದ್ದಾರೆ. ಆದರೆ ಅವರ ಮಗನ ಸಿನಿಮಾ ವಿಷಯ ಕೂಡ ಈಗ ಸುದ್ದಿ ಮಾಡುತ್ತಿದೆ. ಈಗಾಗಲೇ ಅಂಬರೀಶ್ ಮಗ ಅಭಿಷೇಕ್ ಚಿತ್ರರಂಗಕ್ಕೆ ಬರುತ್ತಾರೆ ಎನ್ನುವುದು ಎಲ್ಲರಿಗೆ ತಿಳಿದಿದೆ. ಆದರೆ ಈ ಸಿನಿಮಾದ ಮುಹೂರ್ತಕ್ಕೆ ಈಗ ವೇದಿಕೆ ಸಿದ್ಧವಾಗಿದೆ.
ಅಭಿಷೇಕ್ ಅವರ ಮೊದಲ ಸಿನಿಮಾದ ಲಾಂಚ್ ಕಾರ್ಯಕ್ರಮವನ್ನು ತಂದೆ ಅಂಬರೀಶ್ ಅವರ ಹುಟ್ಟುಹಬ್ಬದ ದಿನ ಮಾಡುವ ಪ್ಲಾನ್ ನಡೆಯುತ್ತಿದೆಯಂತೆ. ಮೇ 29ಕ್ಕೆ ಅಂಬರೀಶ್ ಅವರ ಹುಟ್ಟುಹಬ್ಬ ಇದ್ದು, ಅದೇ ದಿನ ಮಗನ ಸಿನಿಮಾ ಶುರು ಆಗಲಿದೆ ಎನ್ನುವ ಮಾತಿದೆ. ಈಗಾಗಲೇ ಇದಕ್ಕಾಗಿ ಸಿದ್ಧತೆಗಳು ಶುರುವಾಗಿದ್ದು, ಮೇ ಮೊದಲ ವಾರದಲ್ಲಿ ಒಂದು ಫೋಟೋ ಶೂಟ್ ನಡೆಯಲಿದೆಯಂತೆ. ಅದ್ದೂರಿ ಕಾರ್ಯಕ್ರಮ ಮಾಡಿ ಮಗನನ್ನು ಚಿತ್ರರಂಗಕ್ಕೆ ಪರಿಚಯ ಮಾಡುವ ಸಂತಸದಲ್ಲಿ ಅಂಬಿ ಇದ್ದಾರೆ. ಈ ಸಿನಿಮಾಗೆ 'ಅಮರ್' ಎನ್ನುವ ಹೆಸರು ಇಡುವ ಸಾಧ್ಯತೆ ಇದೆ.

ಅಂದಹಾಗೆ, ಅಭಿಷೇಕ್ ಅವರ ಈ ಸಿನಿಮಾವನ್ನು ನಾಗಶೇಖರ್ ನಿರ್ದೇಶನ ಮಾಡುತ್ತಿದ್ದಾರೆ. ಅಂಬಿ ಮಗನ ಸಿನಿಮಾಗೆ ಬೇರೆ ಬೇರೆ ನಿರ್ದೇಶಕರ ಹೆಸರು ಕೇಳಿ ಬಂದಿತ್ತಾದರು ಕೊನೆಗೆ ನಾಗಶೇಖರ್ ಫೈನಲ್ ಆಗಿದ್ದಾರೆ. ಇನ್ನು ಸಂದೇಶ್ ನಾಗರಾಜ್ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಚಿತ್ರದ ನಾಯಕಿಯ ಬಗ್ಗೆ ಕೆಲ ದಿನದಿಂದ ಗಾಸಿಪ್ ಹರಿದಾಡಿದೆ. ಬಾಲಿವುಡ್ ನಲ್ಲಿ ಅಭಿನಯಿಸಿದ ಕನ್ನಡದ ಹುಡುಗಿ ಸಾಹೆರ್ ಅಫ್ಸಾ ನಟಿಸುತ್ತಾರೆ ಎನ್ನುವ ಸುದ್ದಿ ಇದೆ ಆದರೆ ಇದು ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ.


Click it and Unblock the Notifications











