ಅಂಬರೀಶ್ ಮಗನ ಸಿನಿಮಾ ಬಗ್ಗೆ ಹೀಗೊಂದು ಸುದ್ದಿ
Recommended Video

ರೆಬೆಲ್ ಸ್ಟಾರ್ ಅಂಬರೀಶ್ ಮಗನ ಮೊದಲ ಸಿನಿಮಾ ಯಾವಾಗ ಮತ್ತು ಯಾವುದು ಎಂಬ ಸುದ್ದಿ ಗಾಂಧಿನಗರದಲ್ಲಿ ಆಗಾಗ ಸೌಂಡ್ ಮಾಡುತ್ತಿದೆ. ಈಗ ಅಂಬಿ ಮಗ ಅಭಿಷೇಕ್ ಅವರ ಚೊಚ್ಚಲ ಚಿತ್ರದ ಬಗ್ಗೆ ಹೊಸದೊಂದು ಸುದ್ದಿ ಹೊರಬಿದ್ದಿದೆ.
ಬಹುದಿನಗಳಿಂದ ಕಾಯುತ್ತಿದ್ದ ಕುತೂಹಲಕ್ಕೆ ಈಗ ಉತ್ತರ ಸಿಕ್ಕಿದೆ. ಅಂಬಿ ಮಗನ ಮೊದಲ ಸಿನಿಮಾವನ್ನ ನಿರ್ದೇಶನ ಮಾಡಲಿರುವುದು ಯಾರು? ಈ ಚಿತ್ರಕ್ಕೆ ಬಂಡವಾಳ ಯಾರು ಹಾಕುತ್ತಿದ್ದಾರೆ ಎಂಬ ಮಾಹಿತಿ ಈಗ ಬಹಿರಂಗವಾಗಿದೆ.
ಕನ್ನಡದ ಇಬ್ಬರು ಯುವ ನಿರ್ದೇಶಕರ ಹೆಸರು ಚಾಲ್ತಿಯಲ್ಲಿದ್ದು, ದೊಡ್ಡ ನಿರ್ಮಾಣ ಸಂಸ್ಥೆ ರೆಬೆಲ್ ಸ್ಟಾರ್ ಪುತ್ರನ ಚಿತ್ರಕ್ಕೆ ದುಡ್ಡು ಹಾಕಲು ಮುಂದಾಗಿದೆ. ಹಾಗಿದ್ರೆ ಯಾರದು? ಮುಂದೆ ಓದಿ....

ಸಂದೇಶ್ ನಾಗರಾಜ್ ಬ್ಯಾನರ್
ರೆಬೆಲ್ ಸ್ಟಾರ್ ಅಂಬರೀಶ್ ಮಗನನ್ನ ಯಾವ ನಿರ್ಮಾಪಕ ಪರಿಚಯ ಮಾಡ್ತಾರೆ ಎಂಬ ಕುತೂಹಲಕ್ಕೆ ಬ್ರೇಕ್ ಬಿದ್ದಿದ್ದು ಸಂದೇಶ್ ನಾಗರಾಜ್ ಅವರು ರೆಬೆಲ್ ಪುತ್ರನಿಗೆ ನಿರ್ಮಾಣ ಮಾಡಲಿದ್ದಾರಂತೆ.

ಯಾರು ನಿರ್ದೇಶಕರು
ಕನ್ನಡದ ಯುವ ನಿರ್ದೇಶಕರಾದ ಪವನ್ ಒಡೆಯರ್ ಅಥವಾ ಚೇತನ್ ಕುಮಾರ್ ಇಬ್ಬರಲ್ಲಿ ಒಬ್ಬರು ಅಭಿಷೇಕ್ ಅವರ ಚೊಚ್ಚಲ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರಂತೆ.

2018ರಲ್ಲಿ ಆರಂಭ
ಸದ್ಯ, ವಿದೇಶದಲ್ಲಿ ಟ್ರೈನಿಂಗ್ ಪಡೆಯುತ್ತಿರುವ ಅಭಿಷೇಕ್, ನಟನ ಕೌಶಲ್ಯವನ್ನ ಕಲಿತು ಭಾರತಕ್ಕೆ ವಾಪಸ್ ಆಗಲಿದ್ದಾರೆ. ಸದ್ಯದ ಮಾಹಿತಿ ಪ್ರಕಾರ 2018ರಲ್ಲಿ ಈ ಸಿನಿಮಾ ಆರಂಭವಾಗಲಿದೆ.

ಕಥೆ ಏನು, ನಾಯಕಿ ಯಾರು?
ಇನ್ನುಳಿದಂತೆ ಈ ಸಿನಿಮಾದ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಸ್ಕ್ರಿಪ್ಟ್ ಕೆಲಸ ನಡೆಯುತ್ತಿದ್ದು, ಯಾವ ಕಥೆ ಆಯ್ಕೆಯಾಗುತ್ತೋ, ಆ ಸ್ಕ್ರಿಪ್ಟ್ ಆಧಾರದ ಮೇಲೆ ಕಲಾವಿದರು ಮತ್ತು ನಿರ್ದೇಶಕನ ಆಯ್ಕೆ ಕೂಡ ಆಗಲಿದೆ.


Click it and Unblock the Notifications











