»   » ನಿಜ ಕಣ್ರೀ... ಇನ್ನೂ ಆರು ವರ್ಷ ಧ್ರುವ ಸರ್ಜಾ ಫ್ರೀ ಇಲ್ಲ.!

ನಿಜ ಕಣ್ರೀ... ಇನ್ನೂ ಆರು ವರ್ಷ ಧ್ರುವ ಸರ್ಜಾ ಫ್ರೀ ಇಲ್ಲ.!

Posted By:
Subscribe to Filmibeat Kannada
ನಿಜಾ ಕಣ್ರೀ ದ್ರುವ ಅವ್ರು ಇನ್ ೬ ವರ್ಷ ಫುಲ್ ಬ್ಯುಸಿ

ಧ್ರುವ ಸರ್ಜಾ ಸದ್ಯ ಸ್ಯಾಂಡಲ್ ವುಡ್ ನಲ್ಲಿ ಓಡುವ ಕುದುರೆ ಅಂದ್ರೆ ತಪ್ಪಿಲ್ಲ. 'ಅದ್ದೂರಿ', 'ಬಹದ್ದೂರ್', 'ಭರ್ಜರಿ'... ಹೀಗೆ ಮೂರು 'ಹ್ಯಾಟ್ರಿಕ್ ಹಿಟ್' ನೀಡಿರುವ ಧ್ರುವ ಸರ್ಜಾ ಸದ್ಯ ಸಖತ್ ಬ್ಯುಸಿ ಆಗಿರುವ ನಾಯಕ ನಟ. ಈಗಿನ ಯಂಗ್ ಜನರೇಷನ್ ಗಳಿಗೆ ಬೇಕಾಗುವಂತೆ ಧ್ರುವ ಸರ್ಜಾ ಪರ್ಫಾಮೆನ್ಸ್ ನೀಡುತ್ತಿರುವುದರಿಂದ ಅನೇಕ ಯುವಕರು ಧ್ರುವ ಸರ್ಜಾ ಫ್ಯಾನ್ ಆಗಿದ್ದಾರೆ.

ಮೂರಿ ಸಿನಿಮಾಗಳ ಯಶಸ್ಸು ಮಾತ್ರವಲ್ಲದೆ ಬಾಕ್ಸ್ ಆಫೀಸ್ ನಲ್ಲಿ ಸಖತ್ ಸೌಂಡ್ ಮಾಡಿದೆ. ಹಾಕಿರುವ ಹಣಕ್ಕಿಂತ ದುಪ್ಪಟ್ಟು ಹಣವನ್ನ ಮೂರು ಚಿತ್ರಗಳು ಗಳಿಸಿರೋದ್ರಿಂದ ಕನ್ನಡ ಸಿನಿಮಾರಂಗದ ದೊಡ್ಡ ದೊಡ್ಡ ನಿರ್ಮಾಪಕರು ಧ್ರುವ ಸರ್ಜಾ ಡೇಟ್ಸ್ ಗಾಗಿ ಕಾದಿದ್ದಾರೆ. ಎಲ್ಲರಿಗೂ ಧ್ರುವ ಸರ್ಜಾ ಗ್ರೀನ್ ಸಿಗ್ನಲ್ ಕೊಟ್ಟರೆ, ಇನ್ನೂ ಆರು ವರ್ಷ ಧ್ರುವ ಸಖತ್ ಬಿಜಿ. ಹಾಗಾದ್ರೆ, ಧ್ರುವ ಸರ್ಜಾ ಲಿಸ್ಟ್ ನಲ್ಲಿರುವ ಆ ನಿರ್ಮಾಪಕರು ಯಾರು.? ಮುಂದೆ ಓದಿ....

ನಂದಕಿಶೋರ್ ನಿರ್ದೇಶನದಲ್ಲಿ 'ಪೊಗರು'

'ಭರ್ಜರಿ' ಸಿನಿಮಾದ ನಂತ್ರ ಧ್ರುವ ಸರ್ಜಾ ಮೊದಲು ಆಕ್ಟ್ ಮಾಡ್ತಿರೋದು 'ಪೊಗರು' ಸಿನಿಮಾದಲ್ಲಿ, 'ಭರ್ಜರಿ' ರಿಲೀಸ್ ಗೂ ಮುನ್ನವೇ ಕಮಿಟ್ ಆಗಿರೋ ಸಿನಿಮಾ ಇದಾಗಿದ್ದು, ಈಗಾಗಲೇ ಚಿತ್ರ ಪ್ರೀ-ಪ್ರೊಡಕ್ಷನ್ಸ್ ಕೆಲಸಗಳು ಶುರುವಾಗಿದೆ. 'ಬಿ ಕೆ ಗಂಗಾಧರ್' ಸಿನಿಮಾವನ್ನ ನಿರ್ಮಾಣ ಮಾಡುತ್ತಿದ್ದು ಇನ್ನು ಕೆಲವೇ ದಿನಗಳಲ್ಲಿ ಚಿತ್ರೀಕರಣ ಶುರುವಾಗಲಿದೆ.

ನಿರ್ದೇಶಕರ ಹುಡುಕಾಟದಲ್ಲಿ ಉದಯ್ ಕೆ ಮೆಹ್ತಾ

'ಬಚ್ಚನ್' ಸಿನಿಮಾ ನಿರ್ಮಾಣ ಮಾಡಿ ಕನ್ನಡ ಸಿನಿಮಾರಂಗದಲ್ಲಿ ಒಳ್ಳೆ ನಿರ್ಮಾಪಕ ಎನ್ನಿಸಿಕೊಂಡಿರುವ ನಿರ್ಮಾಪಕ ಉದಯ್.ಕೆ.ಮೆಹ್ತಾರ ಬಳಿ ಇದೆ ಧ್ರುವ ಸರ್ಜಾ ಡೇಟ್ಸ್. ಕತೆ ಮತ್ತು ನಿರ್ದೇಶಕರ ಹುಡುಕಾಟ ಪ್ರಾರಂಭವಾಗಿದ್ದು ನಂದಕಿಶೋರ್ ಸಿನಿಮಾ ನಂತರ ಧ್ರುವ ಸರ್ಜಾ ಮೆಹ್ತಾ ಬ್ಯಾನರ್ ನಲ್ಲಿ ನಟಿಸಲಿದ್ದಾರೆ.

ಜಯಣ್ಣನಿಗೆ ಸಿಕ್ಕಿದ್ಯಾ ಧ್ರುವ ಸರ್ಜಾ ಡೇಟ್ಸ್

ಕನ್ನಡ ಸಿನಿಮಾರಂಗದಲ್ಲಿ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆಗಳಲ್ಲಿ ಜಯಣ್ಣ ಕಂಬೈನ್ಸ್ ಕೂಡ ಒಂದು. ಜಯಣ್ಣ ಕೂಡ ಧ್ರುವ ಸರ್ಜಾ ಜೊತೆ ಸಿನಿಮಾ ಮಾಡಲು ಮಾತುಕತೆ ನಡೆಸಿದ್ದಾರೆ. ಆದ್ರೆ ಧ್ರುವ ಸರ್ಜಾ ಡೇಟ್ಸ್ ಇನ್ನೂ ಸಿಕ್ಕಿಲ್ಲ ಅಂತಿದ್ದಾರೆ ಗಾಂಧಿನಗರದ ಮಂದಿ.

'ಹೊಂಬಾಳೆ' ಪ್ರೊಡಕ್ಷನ್ಸ್ ನಲ್ಲಿ ಚಿತ್ರ

ಸ್ಯಾಂಡಲ್ ವುಡ್ ನಲ್ಲಿ 'ನಿನ್ನಿಂದಲೇ' , 'ಮಾಸ್ಟರ್ ಪೀಸ್' ನಂತಹ ಚಿತ್ರಗಳನ್ನ ನೀಡಿರುವ ನಿರ್ಮಾಪಕ 'ವಿಜಯ ಕಿರಗಂದೂರು' ಅವರ 'ಹೊಂಬಾಳೆ ಪ್ರೊಡಕ್ಷನ್' ನಲ್ಲಿ ಧ್ರುವ ಸರ್ಜಾ ನಟಿಸುವ ಚಾನ್ಸ್ ಇದೆ. ಕೆ.ಜಿ.ಎಫ್ ಸಿನಿಮಾ ನಂತ್ರ ಹೊಂಬಾಳೆ ಸಂಸ್ಥೆ ಹಾಗೂ ಧ್ರುವ ಸರ್ಜಾ ಒಟ್ಟಿಗೆ ಕೆಲಸ ಮಾಡಲು ಮಾತು ಕತೆ ನಡೆದಿದ್ಯಂತೆ.

'ಜಗ್ಗುದಾದಾ' ನಿರ್ದೇಶಕ - ಆಕ್ಷನ್ ಪ್ರಿನ್ಸ್ ಜೊತೆ ಚಿತ್ರ

ಶಿವರಾಜ್ ಕುಮಾರ್ ಹಾಗೂ ಸುದೀಪ್ ಅಭಿನಯದ 'ದಿ ವಿಲನ್' ಸಿನಿಮಾವನ್ನ ನಿರ್ಮಾಣ ಮಾಡುತ್ತಿರೋ ಸಿ ಆರ್ ಮನೋಹರ್ ಕೂಡ ಧ್ರುವ ಸರ್ಜಾ ಡೇಟ್ಸ್ ಗಾಗಿ ಕಾದಿದ್ದಾರೆ. ಇವರ ಜೊತೆಯಲ್ಲಿ 'ಜಗ್ಗುದಾದಾ' ಸಿನಿಮಾ ನಿರ್ಮಾಣ ಮಾಡಿದ್ದ ರಾಘವೇಂದ್ರ ಕೂಡ ಧ್ರುವ ಸರ್ಜಾ ಗೆ ಆಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ.

ಅಳಿಯನಿಗೆ ಮಾವ ಮಾಡ್ತಾರಂತೆ ಚಿತ್ರ

ಇಷ್ಟು ನಿರ್ಮಾಪಕರಲ್ಲದೆ ಖುದ್ದು ಅರ್ಜುನ್ ಸರ್ಜಾ ಅವ್ರೇ ತಮ್ಮ ಹೋಂ ಬ್ಯಾನರ್ ನಲ್ಲಿ ಧ್ರುವ ಸರ್ಜಾ ಗೆ ಸಿನಿಮಾ ನಿರ್ಮಾಣ ಮಾಡಿ ತಾವೇ ನಿರ್ದೇಶನವನ್ನೂ ಮಾಡೋದಕ್ಕೆ ಸಜ್ಜಾಗ್ತಿದ್ದಾರೆ ಅನ್ನೋ ಮಾತುಗಳು ಕೇಳಿ ಬರ್ತಿವೆ. ಸದ್ಯ ಇದು ಗಾಂಧಿನಗರದಲ್ಲಿ ಧ್ರುವ ಸರ್ಜಾ ಡಿಮ್ಯಾಂಡ್ ಬಗ್ಗೆ ಕೇಳಿ ಬರುತ್ತಿರೋ ಸುದ್ದಿ. ಆದ್ರೆ ಧ್ರುವ ಸರ್ಜಾ ಯಾವ ನಿರ್ಮಾಪಕರಿಗೆ ಗ್ರೀನ್ ಸಿಗ್ನಲ್ ಕೊಡ್ತಾರೆ ಅನ್ನೋದು ಮಾತ್ರ ಕಾದು ನೋಡ್ಬೇಕು.

English summary
Kannada Actor Dhruva Sarja's upcoming movie list.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada