'ಪುಷ್ಪ' ಬಳಿಕ ಊದಿದ ಅಲ್ಲು ಅರ್ಜುನ್: ವಡಾ ಪಾವ್ ಎಂದ ನೆಟ್ಟಿಗರು!

ನಟ ಅಲ್ಲು ಅರ್ಜುನ್ ಪುಷ್ಪರಾಜ್ ಆಗಿಯೇ ಹೆಚ್ಚು ಜನರಿಗೆ ಇಷ್ಟ ಆಗಿದ್ದಾರೆ. ಇನ್ನು 'ಪುಷ್ಪ 2' ಸಿನಿಮಾ ಕೂಡ ಬರುತ್ತಿರುವ ಕಾರಣ ಅಲ್ಲು ಅರ್ಜುನ್ ನಟನೆಯ ಪುಷ್ಪರಾಜ್ ಮೇಲಿನ ಕ್ರೇಜ್ ಕಡಿಮೆ ಆಗಿಲ್ಲ. ಇದರೊಂದಿಗೆ 'ಪುಷ್ಪ 2' ಚಿತ್ರದ ಭರ್ಜರಿ ತಯಾರಿ ಕೂಡ ನಡೆಯುತ್ತಿದೆ.

ಈ ನಡುವೆ ಅಲ್ಲು ಅರ್ಜುನ್ 'ಪುಷ್ಪ 2' ಸಿನಿಮಾದಲ್ಲಿ ಹೇಗೆ ಕಾಣಿಸಿಕೊಳ್ಳಬಹುದು ಎನ್ನುವ ಕುತೂಹಲ ಕೂಡ ಮನೆ ಮಾಡಿತ್ತು. ಆದರೆ ಚಿತ್ರದ ಬಹುತೇಕ ಭಾಗ 'ಪುಷ್ಪ' ಮೊದಲ ಭಾಗದಲ್ಲೇ ಮಾಡಿರುವ ಕಾರಣ, ಪುಷ್ಪ 2 ಚಿತ್ರದ ಕೆಲವು ಭಾಗಗಳಲ್ಲಿ ಮಾತ್ರ ಅಲ್ಲು ಅರ್ಜುನ್ ಬೇರೆ ಲುಕ್‌ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಸದ್ಯ ಅಲ್ಲು ಅರ್ಜುನ್ ಹಲವು ದಿನಗಳ ಬಳಿಕ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ. ಆದರೆ ಅಲ್ಲು ಅರ್ಜುನ್ ಲುಕ್ ಬಗ್ಗೆ ಚರ್ಚೆ ಆಗುವ ಬದಲು, ಅಲ್ಲು ಲುಕ್ ಟ್ರೋಲ್ ಆಗುತ್ತಿದೆ. ಇದಕ್ಕೆ ಅಲ್ಲು ಅರ್ಜುನ್ ತಮ್ಮ ತೂಕವನ್ನು ಹೆಚ್ಚಿಸಿಕೊಂಡಿರುವುದೇ ಕಾರಣ.

ತೂಕ ಹೆಚ್ಚಿಕೊಂಡ ಅಲ್ಲು ಅರ್ಜುನ್!

ತೂಕ ಹೆಚ್ಚಿಕೊಂಡ ಅಲ್ಲು ಅರ್ಜುನ್!

ನಟ ಅಲ್ಲು ಅರ್ಜುನ್ ಇತ್ತೀಚೆಗೆ ಸಾರ್ವಜನಿಕವಾಗಿ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ. ನೀಲಿ ಬಣ್ಣದ ಟೀ ಶರ್ಟ್ ತೊಟ್ಟು ಸಿಕ್ಕಾಪಟ್ಟೆ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಆದರೆ ಜೊತೆಗೆ ದಪ್ಪವಾಗಿ ಕೂಡ ಕಾಣಿಸಿಕೊಂಡಿದ್ದಾರೆ. ಸ್ಟೈಲಿಶ್ ಸ್ಟಾರ್ ಎಂದು ಕರೆಸಿಕೊಳ್ಳುವ ಅಲ್ಲು ಅರ್ಜುನ್ ಸದ್ಯ ತೂಕ ಹೆಚ್ಚಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ದಪ್ಪಾ ಆಗುವುದರ ಜೊತೆಗೆ ಗಡ್ಡ ಕೂಡ ಬಿಟ್ಟಿರುವುದರಿಂದ ಅಲ್ಲು ಅರ್ಜುನ್ ಟ್ರೋಲ್ ಆಗಿದ್ದಾರೆ.

ಅಲ್ಲು ಅರ್ಜುನ್- ವಡಾ ಪಾವ್!

ಅಲ್ಲು ಅರ್ಜುನ್- ವಡಾ ಪಾವ್!

ನಟ ಅಲ್ಲು ಅರ್ಜುನ್ ಹೀಗೆ ದಪ್ಪ ಆಗಿರುವುದರಿಂದ ಟ್ರೋಲ್ ಆಗುತ್ತಿದ್ದಾರೆ. ಅಲ್ಲು ಅರ್ಜುನ್ ಲುಕ್‌ಗೆ ನಾನಾ ಬಗೆಯ ಕಮೆಂಟ್‌ಗಳು ಬರ್ತಿವೆ. ಹಾಗಾಗಿ ಅಲ್ಲು ಅರ್ಜುನ್ ಈ ಲುಕ್ ಕಂಡವರು ಅವರನ್ನು ವಡಾ-ಪಾವ್ ಎನ್ನುತ್ತಿದ್ದಾರೆ. ಈ ಹಿಂದೆ ನಟ ಪ್ರಭಾಸ್ ದಪ್ಪನೆಯ ಲುಕ್ ನೋಡಿ, ಹೀಗೆ ವಡಾ ಪಾವ್ ಎಂದು ಟ್ರೋಲ್ ಮಾಡಿದ್ದರು. ಈಗ ಅಲ್ಲು ಅರ್ಜುನ್ ಸರದಿ.

ಹೊಸ ಲುಕ್ ಸೀಕ್ರೆಟ್!

ಹೊಸ ಲುಕ್ ಸೀಕ್ರೆಟ್!

ಅಷ್ಟಕ್ಕೂ ಅಲ್ಲು ಅರ್ಜುನ್ ಸಿನಿಮಾಗಾಗಿ ಮಾತ್ರ ಸ್ಟೈಲಿಶ್ ಆಗಿ ಕಾಣಿಸುವುದಿಲ್ಲ. ಬದಲಿಗೆ ಅಲ್ಲು ಅರ್ಜುನ್ ಸದಾ ಸ್ಟೈಲಿಶ್ ಆಗಿ ಫಿಟ್ ಅಂಡ್ ಫೈನ್ ಆಗಿ ಕಾಣಿಸುತ್ತಾರೆ. ಆದರೆ ಈ ರೀತಿ ದಪ್ಪ ಆಗಿದ್ದಾರೆ ಎಂದರೆ ಬಹುಶಃ ಈ ಲುಕ್ 'ಪುಷ್ಪ 2' ಚಿತ್ರಕ್ಕಾಗಿಯೇ ಇರಬಹುದು ಎಂದು ಹೇಳಲಾಗುತ್ತಿದೆ. ಯಾಕೆಂದರೆ ಪುಷ್ಪರಾಜ್ ರೀತಿ ಹಾಗೇ ಗಡ್ಡ ಬಿಟ್ಟಿದ್ದಾರೆ. ಆದರೆ ತೂಕ ಮಾತ್ರ ಹೆಚ್ಚಿಸಿಕೊಂಡಿದ್ದಾರೆ ಅಲ್ಲು ಅರ್ಜುನ್.

'ಪುಷ್ಪ' ಡಿಸೆಂಬರ್‌ನಲ್ಲಿ ರಿಲೀಸ್?

'ಪುಷ್ಪ' ಡಿಸೆಂಬರ್‌ನಲ್ಲಿ ರಿಲೀಸ್?

ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ 'ಪುಷ್ಪ 2'. ಈ ಚಿತ್ರದ ರಿಲೀಸ್ ಯಾವಾಗ ಎಂದು ಅಲ್ಲು ಅಭಿಮಾನಿಗಳು ಕಾಯುತ್ತಿದ್ದಾರೆ. ಸದ್ಯ ಚಿತ್ರತಂಡ 'ಪುಷ್ಪ 2' ಚಿತ್ರದ ಕೆಲಸಗಳಲ್ಲಿ ತುಂಬಾನೆ ಬ್ಯುಸಿಯಾಗಿದೆ. ಆದರೆ ಎಲ್ಲವೂ ಅಂದುಕೊಂಡಂತೆ ಆದರೆ 'ಪುಷ್ಪ 2' ಸಿನಿಮಾ ಇದೇ ವರ್ಷ ಡಿಸೆಂಬರ್‌ನಲ್ಲಿ ತೆರೆಕಾಣಲಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಪುಷ್ಪ ಮೊದಲ ಭಾಗ ತೆರೆಗೆ ಬಂದಿತ್ತು.

More from Filmibeat

English summary
Actor Allu Arjun Troll For Weight Gain And Lookig Fat, Netizens Called Him Vada Pav.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X