ಆರ್.ಚಂದ್ರು ಸಾರಥ್ಯದ 'ಲಕ್ಷ್ಮಣ' ತೆರೆಗೆ ಯಾವಾಗ ಬರ್ತಾನೆ.?

By Suneetha

'ಚಾರ್ ಮಿನಾರ್' ಖ್ಯಾತಿಯ ನಿರ್ದೇಶಕ ಆರ್.ಚಂದ್ರು ನಿರ್ದೇಶನ ಮಾಡಿರುವ ನಟ ಅನೂಪ್ ರೇವಣ್ಣ ಅವರ ಚೊಚ್ಚಲ ಸಿನಿಮಾ 'ಲಕ್ಷ್ಮಣ' ತೆರೆಗೆ ಬರಲು ಸಜ್ಜಾಗಿದ್ದು, ಸಿನಿಮಾ ಯಾವಾಗ ಬಿಡುಗಡೆ ಆಗುತ್ತೆ ಅನ್ನೋ ಪ್ರಶ್ನೆಯೊಂದು ಎಲ್ಲರಲ್ಲಿ ಮನೆ ಮಾಡಿತ್ತು.

ಅಂದಹಾಗೆ ಇದೀಗ ಸದ್ಯಕ್ಕೆ ಗಾಂಧಿನಗರದಲ್ಲಿ ಹರಿದಾಡುತ್ತಿರುವ ಸುದ್ದಿ ಪ್ರಕಾರ ಜೂನ್ 24 ರಂದು ಈ ಸಿನಿಮಾ ಗ್ರ್ಯಾಂಡ್ ಆಗಿ ತೆರೆಗೆ ಬರುವ ಸಾಧ್ಯತೆ ಇದೆ.['ಲಕ್ಷ್ಮಣ', ಆರ್.ಚಂದ್ರು, ಮೇಘನಾ ರಾಜ್ ಸುತ್ತ ಏನಿದು ಗಾಸಿಪ್ಪು.?]

Actor Anoop Revanna starrer 'Lakshmana' release on June 24th

ತೆಲುಗಿನ 'ಅಥನೊಕ್ಕಡೆ' ಚಿತ್ರದ ಸ್ಫೂರ್ತಿ ಪಡೆದುಕೊಂಡು ಮಾಡಿರುವ ಚಿತ್ರ ಎಂದು ಹೇಳಿಕೊಳ್ಳುತ್ತಿರುವ 'ಲಕ್ಷ್ಮಣ' ಚಿತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಪ್ರಮುಖ ಪಾತ್ರ ವಹಿಸುತ್ತಿದ್ದು, ನಟಿ ಮೇಘನಾ ರಾಜ್ ಅವರು ಅನೂಪ್ ಅವರ ಜೊತೆ ನಾಯಕಿ ನಟಿಯಾಗಿ ಮಿಂಚುತ್ತಿದ್ದಾರೆ.

ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ಮ್ಯೂಸಿಕ್ ಕಂಪೋಸ್ ಮಾಡಿರುವ ಚಿತ್ರದ ಹಾಡುಗಳು ಈಗಾಗಲೇ ಬಿಡುಗಡೆ ಆಗಿದ್ದು ಹಿಟ್ ಆಗಿವೆ. ಚಿತ್ರಕ್ಕೆ ಅನೂಪ್ ರೇವಣ್ಣ ಅವರ ತಾಯಿ ವತ್ಸಲಾ ರೇವಣ್ಣ ಅವರು ಬಂಡವಾಳ ಹೂಡಿದ್ದಾರೆ.['ಲಕ್ಷ್ಮಣ'ನ ಟ್ರೈಲರ್ ಬಿಡುಗಡೆಗೆ, ರಾಜಮೌಳಿ ಬರಬಹುದಾ?]

Actor Anoop Revanna starrer 'Lakshmana' release on June 24th

ಅನೂಪ್ ರೇವಣ್ಣ ಅವರು ಇದೇ ಮೊದಲ ಬಾರಿಗೆ ಬೆಳ್ಳಿತೆರೆಯ ಮೇಲೆ ಕಾಲಿಟ್ಟಿರುವುದರಿಂದ ತಮ್ಮ ಚೊಚ್ಚಲ ಚಿತ್ರದ ಬಿಡುಗಡೆಗೆ ಕಾತರದಿಂದ ಕಾಯುತ್ತಿದ್ದಾರೆ. ಸದ್ಯಕ್ಕೆ ಎಸ್ ನಾರಾಯಣ್ ಅವರ 'ಪಂಟ' ಎಂಬ ಸಿನಿಮಾಗೆ ಬುಕ್ಕ್ ಆಗಿರುವ ಅನೂಪ್ ಅವರು ಎರಡನೇ ಚಿತ್ರದ ಚಿತ್ರೀಕರಣದಲ್ಲಿ ಸದ್ಯದಲ್ಲೇ ತೊಡಗಿಸಿಕೊಳ್ಳಲಿದ್ದಾರೆ.[ಬೆಂಕಿ ಜೊತೆ ಸರಸವಾಡಿದ 'ಲಕ್ಷ್ಮಣ' ಹೀರೋ ಅನೂಪ್]

ಅದೇನೇ ಇರಲಿ ಸದ್ಯಕ್ಕೆ 'ಲಕ್ಷ್ಮಣ' ಚಿತ್ರತಂಡದಿಂದ ಹೊರಬಿದ್ದಿರುವ ಖಾಸ್ ಖಬರ್ ಇಷ್ಟು. ಚಿತ್ರದ ಹೆಚ್ಚಿನ ಮಾಹಿತಿಗಾಗಿ ಫಿಲ್ಮಿಬೀಟ್ ಕನ್ನಡ ಓದುತ್ತಿರಿ.

More from Filmibeat

English summary
According to the Grapevine Kannada Actor Anoop Revanna and Actress Meghana Raj starrer 'Lakshmana' is all set to release on June 24th. The movie is directed by R Chandru.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X