»   » 'ಕಟ್ಟೆ' ಖ್ಯಾತಿಯ ಚಂದನ್ ಶೆಟ್ಟಿ ಹಂಗಂದ್ರಂತೆ ಹೌದಾ?

'ಕಟ್ಟೆ' ಖ್ಯಾತಿಯ ಚಂದನ್ ಶೆಟ್ಟಿ ಹಂಗಂದ್ರಂತೆ ಹೌದಾ?

Posted By: ಜೀವನರಸಿಕ
Subscribe to Filmibeat Kannada

ಕಲರ್ಸ್ ಕನ್ನಡ (ಈಟಿವಿ ಕನ್ನಡ) ವಾಹಿನಿಯ 'ಲಕ್ಷ್ಮಿ ಬಾರಮ್ಮ' ಸೀರಿಯಲ್ ಹೈದ ಚಂದನ್ ಶೆಟ್ಟಿ ನೆನಪಿದೆಯಾ? ನೆನಪಿದೆಯಾ ಅಂತ ಯಾಕ್ ಕೇಳ್ತೀರಾ, ಇತ್ತೀಚೆಗೆ 'ಕಟ್ಟೆ' ಸಿನಿಮಾದಲ್ಲಿ ಹೀರೋ ಆಗಿ ಮಿಂಚಿದ್ದಾರೆ. ಇನ್ನು ರವಿಮಾಮನ 'ಲವ್ ಯೂ ಆಲಿಯಾ' ರಿಲೀಸ್ ಗೆ ರೆಡಿ ಇದೆ.

ಕಿರಾತಕ ಪ್ರದೀಪ್ರಾಜ್ ನಿರ್ದೇಶನದ 'ಬೆಂಗಳೂರು 560023' ಸಿನಿಮಾ ಕೂಡ ರಿಲೀಸ್ ಆಗೋಕೆ ತಯಾರಿದೆ. ಆದ್ರೆ ಸೀರಿಯಲ್ ನಿಂದ ಸಿನಿಮಾಗೆ ಹಾರಿದ ಚಂದನ್ ಶೆಟ್ಟಿ ಶೂಟಿಂಗ್ ಸೆಟ್ ನಲ್ಲಿ ಸ್ಟಾರ್ ನಟನನಂತೆ ಧಿಮಾಕು ತೋರಿಸ್ತಾರಂತೆ ಅಂತಿದೆ ಗಾಂಧಿನಗರದ ಲೈಟ್ ಬಾಯ್ಸ್ ಏರಿಯಾ.

Actor Chandan Sheety why behaves like this?

ಡೈರೆಕ್ಟರ್ ಶಾಟ್ ಗೆ ಕರೆದ್ರೂ ಚಂದನ್ ಶಾಟ್ ಗೆ ರೆಡಿಯಾಗಿ ಬರೋಕೆ ತುಂಬಾ ಸಮಯ ತೆಗೆದುಕೊಳ್ತಾರಂತೆ. ಇನ್ನು ಅಸಿಸ್ಟೆಂಟ್, ಅಸೋಸಿಯೇಟ್ ಡೈರೆಕ್ಟರ್ ಗಳಿಗೆ ಮರ್ಯಾದೆ ಅಷ್ಟಕ್ಕಷ್ಟೇ ಅಂತಿದ್ದಾರೆ ಚಂದನ್ ಶೆಟ್ಟಿ ಜೊತೆ ಕೆಲಸ ಮಾಡಿದವ್ರು.

ಹ್ಯಾಂಡಸಮ್ ಹೀರೋ ಬೇಕು ಅಂತ ಹುಡುಕ್ತಿದ್ದ ಹೊಸ ನಿರ್ಮಾಪಕರೊಬ್ಬರಿಗೆ ಚಂದನ್ ಶೆಟ್ಟಿ ಆಗ್ಬಹುದು ಅಂತ ನಾವ್ ಹೇಳಿದ್ರೆ ಅವ್ರು ಈ ಕಥೇನಾ ಹೇಳಿದ್ರಂತೆ. ಕಿರುತೆರೆಯಿಂದ ಸಾಕಷ್ಟು ಮಂದಿ ಹಿರಿತೆರೆಗೆ ಬಂದಿದ್ದಾರೆ. ಆದರೆ ಅವರ್ಯಾರಿಗೂ ಇಷ್ಟೆಲ್ಲಾ ಧಿಮಾಕು ಇರಲಿಲ್ಲ ಅಂತಿದೆ ಗಾಂಧಿನಗರ.

English summary
The Sandalwood grapevine is that, actor Chandan Shetty poses like super star in Gandhinagar. The small screen actor became a hero after his debut movie 'Katte'. Now he is busy in 'Love u Alia'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada