For Quick Alerts
  ALLOW NOTIFICATIONS  
  For Daily Alerts

  ಯುವರಾಜ್ ಕುಮಾರ್‌ಗೆ ಡಾಲಿ ಧನಂಜಯ್ ವಿಲನ್?

  |

  ಸ್ಯಾಂಡಲ್‌ವುಡ್‌ನ ದೊಡ್ಮನೆ, ಡಾ.ರಾಜ್‌ಕುಮಾರ್ ಕುಟುಂಬದಿಂದ ಸಿನಿಮಾರಂಗಕ್ಕೆ ಬರುತ್ತಿರುವ ಮತ್ತೊಂದು ಕುಡಿ ಎಂದರೆ ಅದು ಯುವರಾಜ್ ಕುಮಾರ್. ಹೌದು ಯುವರಾಜ್ ಕುಮಾರ್ ತಮ್ಮ ಚೊಚ್ಚಲ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಜಾದು ಮಾಡಲು ಮುಂದಾಗಿದ್ದಾರೆ. ಈಗಾಗಲೇ ಸಿನಿಮಾ ಅಧಿಕೃತವಾಗಿ ಪ್ರಕಟವಾಗಿದೆ.

  ಯುವರಾಜ್ ಕುಮಾರ್ ಸಿನಿಮಾ ಎನ್ನುವ ಕಾರಣಕ್ಕೆ ಮೊದಲಿನಿಂದಲು ಸಾಕಷ್ಟು ಕುತೂಹಲವನ್ನು ಹುಟ್ಟು ಹಾಕಿದೆ. ಸಿನಿಮಾದ ಒಂದೊಂದೆ ಅಪ್ಡೇಟ್‌ಗಳು ಹೊರ ಬರುತ್ತಿವೆ. ಈ ಚಿತ್ರಕ್ಕೆ ನಿರ್ದೇಶಕ ಸಂತೋಷ್‌ ಆನಂದ್‌ರಾಮ್ ನಿರ್ದೇಶನವಿದೆ. ಹೊಂಬಾಳೆ ಸಂಸ್ಥೆ ನಿರ್ಮಾಣದಲ್ಲಿ ಇವರ ಕಾಂಬಿನೇಷನ್ ಸಿನಿಮಾ ಬರುತ್ತಿದೆ ಎನ್ನುವ ಸುದ್ದಿ ಮಾತ್ರ ರಿವೀಲ್ ಆಗಿತ್ತು. ಆದರೆ ಈಗ ಮತ್ತೊಂದು ಸುದ್ದಿ ಬಂದಿದೆ.

  ಟ್ರೆಂಡಿಂಗ್‌ನಲ್ಲಿ ಯುವ ರಾಜ್‌ಕುಮಾರ್, ಅಪ್ಪು ಅಭಿಮಾನಿಗಳ ಸಂಭ್ರಮ!ಟ್ರೆಂಡಿಂಗ್‌ನಲ್ಲಿ ಯುವ ರಾಜ್‌ಕುಮಾರ್, ಅಪ್ಪು ಅಭಿಮಾನಿಗಳ ಸಂಭ್ರಮ!

  ಯುವರಾಜ್‌ಕುಮಾರ್ ಮೊದಲ ಸಿನಿಮಾದಲ್ಲಿ ನಟ ಡಾಲಿ ಧನಂಜಯ್ ಅಭಿನಯಿಸಲಿದ್ದಾರೆ. ಎನ್ನುವ ಹೊಸ ಸಮಾಚಾರ ಹರಿದಾಡುತ್ತಿದೆ. ಹೌದು, ಯುವ ಮತ್ತು ಧನಂಜಯ್ ಇಬ್ಬರು ಒಟ್ಟಿಗೆ ತೆರೆಹಂಚಿಕೊಳ್ಳಲಿದ್ದಾರೆ ಎನ್ನುವ ಸುದ್ದಿಗೆ ಪುಷ್ಟಿ ಕೊಟ್ಟಿದೆ ಈ ಹೊಸ ಫೋಟೊ.

  ಒಂದೇ ಫ್ರೇಮ್‌ನಲ್ಲಿ ಯುವ, ಡಾಲಿ, ಸಂತೋಷ್‌!

  ಒಂದೇ ಫ್ರೇಮ್‌ನಲ್ಲಿ ಯುವ, ಡಾಲಿ, ಸಂತೋಷ್‌!

  ಇತ್ತೀಚೆಗೆ ನಿರ್ದೇಶಕ ಸಂತೋಷ್ ಆನಂದ್ ರಾಮ್, ಯುವರಾಜ್ ಕುಮಾರ್, ಡಾಲಿ ಧನಂಜಯ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈ ಮೂವರು ಇರುವ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಫೋಟೊ ಹಂಚಿಕೊಂಡ ನಿರ್ದೇಶಕ "ನನ್ನ ಆತ್ಮೀಯರೊಂದಿಗೆ ಕಾಫಿ ಕುಡಿದ ಕ್ಷಣ" ಎಂದು ಬರೆದುಕೊಂಡು ಟ್ವೀಟ್ ಮಾಡಿದ್ದಾರೆ. ಇದೆ ಪೋಟೊದಿಂದ ಯುವ ರಾಜ್‌ಕುಮಾರ್ ಸಿನಿಮಾದಲ್ಲಿ ಧನಂಜಯ್ ನಟನೆ ಮಾಡುತ್ತಾರೆ ಎನ್ನುವ ಕುತೂಹಲ ಹುಟ್ಟಿಕೊಂಡಿದೆ. ಈ ಟ್ವೀಟ್ ಯುವರಾಜ್ ಕುಮಾರ್ ರೀ-ಟ್ವೀಟ್ ಮಾಡಿದ್ದಾರೆ.

  'ಪುನೀತ್‌ ರಾಜ್‌ಕುಮಾರ್‌' ಕಥೆಗೆ 'ಯುವರಾಜ್ ‌ಕುಮಾರ್' ಹೀರೊ!'ಪುನೀತ್‌ ರಾಜ್‌ಕುಮಾರ್‌' ಕಥೆಗೆ 'ಯುವರಾಜ್ ‌ಕುಮಾರ್' ಹೀರೊ!

  ಯುವರಾಜ್ ಕುಮಾರ್‌ಗೆ ಡಾಲಿ ವಿಲನ್!

  ಯುವರಾಜ್ ಕುಮಾರ್‌ಗೆ ಡಾಲಿ ವಿಲನ್!

  ಈ ಚಿತ್ರದಲ್ಲಿ ಧನಂಜಯ್ ವಿಲನ್ ಪಾತ್ರ ಮಾಡುತ್ತಿದ್ದಾರೆ ಎನ್ನಲಾಗಿದೆ. ಧನಂಜಯ್ ಹೀರೊಗಿಂತ, ವಿಲನ್ ಆಗಿಯೇ ಜನರಿಗೆ ತುಂಬಾ ಇಷ್ಟ. ಹಾಗಾಗಿ ಇತ್ತೀಚೆಗೆ ಬಹುತೇಕ ಸಿನಿಮಾಗಳಲ್ಲಿ ಧನಂಜಯ್ ಖಳನಾಯಕನ ಪಾತ್ರವನ್ನೇ ಮಾಡುತ್ತಾರೆ. ಹಾಗೆ ನೋಡಿದರೆ ಕನ್ನಡದಲ್ಲಿ ಇರುವ ಪವರ್‌ಫುಲ್ ವಿಲನ್ ಎಂದೇ ಹೇಳಬಹುದು. ಜೊತೆಗೆ ಯುವ ಹೀರೊ ಆದರೆ ಅವರಿಗೆ ಸರಿಸಮನಾಗಿ ಎದುರು ನಿಲ್ಲುವ ಪಾತ್ರಕ್ಕೆ ಧನಂಜಯ್ ಸೂಕ್ತ ಎನಿಸುತ್ತದೆ. ಸದ್ಯಕ್ಕಂತೂ ಯುವ ರಾಜ್‌ಕುಮಾರ್‌ಗೆ ಧನಂಜಯ್ ವಿಲನ್ ಎನ್ನುವ ಸುದ್ದಿ ಹರಿದಾಡುತ್ತಿದೆ.

  ಅಪ್ಪುಗಾಗಿ ಬರೆದ ಕಥೆಗೆ ಯುವರಾಜ್ ನಾಯಕ!

  ಅಪ್ಪುಗಾಗಿ ಬರೆದ ಕಥೆಗೆ ಯುವರಾಜ್ ನಾಯಕ!

  ನಿರ್ದೇಶಕ ಸಂತೋಷ್ ಆನಂದ್ ರಾಮ್ ಪುನೀತ್ ರಾಜ್‌ಕುಮಾರ್‌ಗಾಗಿ ಕಥೆ ಒಂದನ್ನು ಮಾಡಿದ್ದರು. 'ಜೇಮ್ಸ್' ಚಿತ್ರದ ಬಳಿಕ ಸಂತೋಷ್ ಆನಂದ್‌ರಾಮ್ ಬರೆದ ಈ ಕಥೆಯಲ್ಲಿ ಪುನೀತ್ ರಾಜ್‌ಕುಮಾರ್ ಅಭಿನಯಿಸಬೇಕಿತ್ತು. ಈಗ ಇದೇ ಕಥೆಯಲ್ಲಿ ಯುವರಾಜ್ ಕುಮಾರ್ ನಟನೆ ಮಾಡುತ್ತಿದ್ದಾರೆ. ಆದರೆ ಸಿನಿಮಾ ಯುವರಾಜ್‌ಕುಮಾರ್ ಮ್ಯಾನರಿಸಂಗೆ ತಕ್ಕಹಾಗೆ ಕೊಂಚ ಬದಲಾವಣೆಯನ್ನು ಮಾಡಿಕೊಳ್ಳಲಾಗಿದೆಯಂತೆ.

  Yuva RajKumar: ಯುವರಾಜ್ ಕುಮಾರ್ ಮೊದಲ ಚಿತ್ರದ ಫೋಟೊಶೂಟ್ ಶುರು: ಇಲ್ಲಿದೆ ಡಿಟೈಲ್ಸ್Yuva RajKumar: ಯುವರಾಜ್ ಕುಮಾರ್ ಮೊದಲ ಚಿತ್ರದ ಫೋಟೊಶೂಟ್ ಶುರು: ಇಲ್ಲಿದೆ ಡಿಟೈಲ್ಸ್

  ಯುವರಾಜ್ ಚಿತ್ರದ ಶೂಟಂಗ್‌ಗೆ ತಯಾರಿ!

  ಯುವರಾಜ್ ಚಿತ್ರದ ಶೂಟಂಗ್‌ಗೆ ತಯಾರಿ!

  ಸದ್ಯ ಈ ಚಿತ್ರದ ಪ್ರೀ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಿವೆ. ಶೂಟಿಂಗ್‌ಗಾಗಿ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ. ಫಸ್ಟ್ ಲುಕ್ ಮೂಲಕ ಯುವ ರಾಜ್ ಈಗಾಗಲೇ ಮೆಚ್ಚುಗೆ ಗಳಿಸಿದ್ದಾರೆ. ಆದರೆ ಸಿನಿಮಾದಲ್ಲಿ ಹೇಗೆ ಅಬ್ಬರಿಸಲಿದ್ದಾರೆ ಎನ್ನುವುದನ್ನು ನೋಡಬೇಕಿದೆ.

  English summary
  Actor Dhananjay Is The Villain For Puneeth Nephew Yuva Rajkumar First Movie

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X