»   » ನಿರ್ಮಾಪಕರ ಪಾಲಿಗೆ ನಿಲುಕದ ನಕ್ಷತ್ರವಾದ ಧ್ರುವ ಸರ್ಜಾ

ನಿರ್ಮಾಪಕರ ಪಾಲಿಗೆ ನಿಲುಕದ ನಕ್ಷತ್ರವಾದ ಧ್ರುವ ಸರ್ಜಾ

By: ಜೀವನರಸಿಕ
Subscribe to Filmibeat Kannada

ಧ್ರುವ ಸರ್ಜಾ ಅಂದ್ರೆ ಕನ್ನಡ ಸಿನಿಪ್ರೇಮಿಗಳಿಗೆ ಅಚ್ಚುಮೆಚ್ಚು. ಧ್ರುವ ಸರ್ಜಾ ಮಾಡಿರೋದು ಎರಡೇ ಸಿನಿಮಾಗಳಾದ್ರೂ ಎರಡು ಕೋಟಿಯ ಹೀರೋ ಅನ್ನೋ ಮಾತನ್ನ ನೀವು ಈ ಹಿಂದೇನೇ ಓದಿರ್ತೀರಿ. 'ಅದ್ದೂರಿ' ನಂತರ 'ಬಹಾದ್ದೂರ್' ಎರಡೆರೆಡು ಸೂಪರ್ ಹಿಟ್ ಸಿನಿಮಾ ಕೊಟ್ಟ ಹೀರೋ ಧ್ರುವ.

ಒಂದು ಸಿನಿಮಾ ಮಾಡಿದ ಧ್ರುವ ಸರ್ಜಾ ಅದಾಗಿ 6 ತಿಂಗಳು ಬೇರ್ಯಾವ ಸಿನಿಮಾ ಮೂಲಕಾನೂ ಸುದ್ದಿ ಮಾಡಲ್ಲ. ಸಿನಿಮಾ ವಿಷಯಕ್ಕೆ ಬಂದ್ರೆ ಮಾಮ ಹೇಳಿದ್ದನ್ನ ಮಾಡ್ತೀನಿ ಅನ್ನೋ ಧ್ರುವ ಸರ್ಜಾ ಮಾಮ (ಅರ್ಜುನ್ ಸರ್ಜಾ) ಹೇಳಿದ್ದನ್ನಷ್ಟೇ ಮಾಡುವ ಮುಗ್ಧನಾ ಅಂತಿದೆ ಗಾಂಧಿನಗರ.

ಧ್ರುವ ಸರ್ಜಾ ಯಾವ ಸಿನಿಮಾ ಒಪ್ಪಿಕೊಂಡ್ರು ಅದಕ್ಕೆ ಅರ್ಜುನ್ ಸರ್ಜಾ ಅಂಕಿತ ಬೀಳಲೇಬೇಕು. ಹೀಗೆ ಹೇಳ್ತಾರೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ಆದ್ರೆ ಅದೆಲ್ಲಾ ಸುಳ್ಳು, ಧ್ರುವ ಸರ್ಜಾ ನಾವಂದುಕೊಂಡಂಗಿಲ್ಲ. ಪಾಪ ಅದು ಅರ್ಜುನ್ ಸರ್ಜಾಗೂ ಗೊತ್ತಿಲ್ಲ ಅಂತಿದ್ದಾರೆ ಹಲವರು, ಅದಕ್ಕೆ ಕಾರಣಗಳೂ ಇದೆ.

ಧ್ರುವ ಡೇಟ್ಸ್ ಗೆ ಕಾದು ಕಂಗಾಲು

ಧ್ರುವ ಸರ್ಜಾ ಪಕ್ಕಾ ಕಮರ್ಷಿಯಲ್ ಆಗಿದ್ದಾರಂತೆ. ಕಾಸು ಜಾಸ್ತಿ ಕೊಡೋರಿಗೆ ಸಿನಿಮಾ ಮಾಡೋಕೆ ರೆಡಿಯಾಗ್ತಾರಂತೆ. ಧ್ರುವ ಸರ್ಜಾ ಡೇಟ್ಸ್ ಗೆ ಕಾದು ಖ್ಯಾತ ನಿರ್ಮಾಪಕ ಶಿವಣ್ಣ ಆಪ್ತ ಕೆ ಪಿ ಶ್ರೀಕಾಂತ್ ಕಂಗಾಲಾಗಿದ್ದಾರೆ ಅಂದ್ರೆ ನೀವೇ ಯೋಚಿಸಿ ಅಂತಿದೆ ಸಿನಿ ಪಂಡಿತರ ಪಡಸಾಲೆ.

ಚಿಪ್ಸು ತಿನ್ನಿಸಿ ಚಿಪ್ಪು ಕೊಡ್ತಾರೆ

ಅದ್ದೂರಿ ಹಾಡಿನಂತೆ ಸಿನಿಮಾ ರಿಲೀಸಾಗೋವರೆಗೂ ನಾನ್ ಡೇಟ್ಸ್ ಕೊಡ್ತೀನ್ ಸುಬ್ಬುಲಕ್ಷ್ಮಿ ಅಂತ ನಿರ್ಮಾಪಕ ಶ್ರೀಕಾಂತ್ರಿಗೆ ಚಿಪ್ಸು ತಿನ್ನಿಸಿದ್ದ ಧ್ರುವ ಈಗ ನಿರ್ಮಾಪಕ ಗಂಗಾಧರ್ ಗೆ ಮೂರನೇ ಸಿನಿಮಾ ಡೇಟ್ಸ್ ಕೊಟ್ಟು, ನಿಮ್ಗೆ ಐದನೇ ಸಿನಿಮಾ ಅಂತ ಕಾಗೆ ಹಾರಿಸಿದ್ರಂತೆ.

ಬಹಾದ್ದೂರ್ ನಲ್ಲಿ ಭಾಯೀ ಭಾಯಿ..

ಬಹಾದ್ದೂರ್ ಸಿನಿಮಾವನ್ನ ನೂರು ದಿನ ಥಿಯೇಟರ್ ನಲ್ಲಿ ಉಳಿಸೋಕೆ ಶ್ರೀಕಾಂತ್ ಪಟ್ಟ ಕಷ್ಟ ಅಷ್ಟಿಷ್ಟಲ್ಲವಂತೆ. ಚಿತ್ರಮಂದಿರದ ಬಾಡಿಗೆ ಕಟ್ಟಿ ಕಟ್ಟಿ ಶತಕದ ಸಂಭ್ರಮ ಆಚರಿಸಿದ್ರು. 50, 100ನೇ ದಿನದ ಸೆಲಬ್ರೇಷನ್ ಗಳಲ್ಲಿ ಮುಂದಿನ ಸಿನಿಮಾ ಕೆ ಪಿ ಶ್ರೀಕಾಂತ್ ಜೊತೆಗೆ ಅಂತ ಪೋಸ್ ಕೊಟ್ಟಿದ್ರು ಧ್ರುವ.

ದುಡ್ಡು ಮಾಡೋಕೆ ಮಾತು ತಪ್ತಾರೆ

ಕೊಟ್ಟ ಮಾತು ಉಳಿಸಿಕೊಂಡವರೇ ಗಾಂಧಿನಗರದಲ್ಲಿ ಉಳಿಯೋದು ಕಷ್ಟ. ಆದ್ರೆ ಒಬ್ಬರಿಗೆ ಮಾತು ಕೊಟ್ಟು ದುಡ್ಡು ಜಾಸ್ತಿ ಕೊಡ್ತಾರೆ ಅಂದ ಮಾತ್ರಕ್ಕೆ ಮತ್ತೊಬ್ಬರಿಗೆ ಡೇಟ್ಸ್ ಬದಲಾಯಿಸೋ ಧ್ರುವ ಬಗ್ಗೆ ಹಲವು ನಿರ್ದೇಶಕರು ನಿರ್ಮಾಪಕರು ಶಾಪ ಹಾಕ್ತಿದ್ದಾರೆ.

ಪರ್ತಕರ್ತರೂ ಅಷ್ಟಕ್ಕಷ್ಟೇ

ಈ ಹಿಂದೆ ಎಲ್ಲರ ಪೋನ್ ರಿಸೀವ್ ಮಾಡ್ಬೇಕು ಅಂತ ತನ್ನ ಬರ್ತಡೇಯಲ್ಲಿ ರೆಸಲ್ಯೂಷನ್ ತೆಗೆದುಕೊಂಡಿದ್ದ ಧ್ರುವ ಇವತ್ತಿಗೂ ಅದನ್ನ ಉಳಿಸಿಕೊಂಡಿಲ್ಲ ಅಂತಾರೆ ಸಿನಿಮಾ ಪರ್ತಕರ್ತರು. ಫೋನ್ ರಿಸೀವ್ ಮಾಡಿದ್ರೂ ನಂಬರ್ ಸೇವ್ ಮಾಡಿಕೊಳ್ಳದೇ ಸೀನಿಯರ್ ಪರ್ತಕರ್ತರನ್ನೂ ಕಡೆಗಣಿಸೋ ಧ್ರುವ ಸರ್ಜಾ ಯಾಕೆ ಹೀಗಾದ್ರು.

ಸ್ಟಾರ್ ನಿರ್ದೇಶಕರಿಗೆ ಡೇಟ್ಸ್

ಇತ್ತೀಚೆಗ್ಯಾಕೋ ಸ್ಟಾರ್ ನಿರ್ದೇಶಕರಿಗೇ ಡೇಟ್ಸ್ ಕೊಡೋ ನಿರ್ಧಾರ ಮಾಡಿರೋ ಧ್ರುವ ಸರ್ಜಾ, ಒಳ್ಳೆ ಕಥೆ ಒಳ್ಳೆಯ ಚಿತ್ರಕಥೆ ತಂದ ಹೊಸ ನಿರ್ದೇಶಕರನ್ನ ಲೆಕ್ಕಕ್ಕೇ ತೆಗೆದುಕೊಳ್ತಿಲ್ಲವಂತೆ. ನಟ ಸ್ಟಾರ್ ಆಗೋದು ನಿರ್ದೇಶಕನಿಂದ ಅಂಥ ಹೊಸಬರಿಗೆ ಅವಕಾಶ ಕೊಡ್ತಿರೋ ಯಶ್ ನೋಡಿ ಧ್ರುವ ಸರ್ಜಾ ಕಲಿಯಬೇಕಿದೆ ಅಂತಿದ್ದಾರೆ ಬಲ್ಲವರು.

ಧ್ರುವ ನಕ್ಷತ್ರ ಆಗ್ತಾರಾ

ಧ್ರುವ ಅಂದ್ರೇನೇ ಸ್ಟಾರ್. ಎಂದೂ ಮರೆಯಾಗದ ನಕ್ಷತ್ರ ಅಂತ. ಆದ್ರೆ ಸ್ಟಾರ್ ಆಗೋ ಮೊದಲೇ ಸೂಪರ್ ಸ್ಟಾರ್ ತರಹ ಬಿಲ್ಡಪ್ ಕೊಡೋ ಧ್ರುವ ಸರ್ಜಾ ಇನ್ನಾದ್ರೂ ಬದಲಾದ್ರೆ ಅವರಿಗೇ ಒಳ್ಳೆಯದು ಅಂತಿದೆ ಗಾಂಧಿನಗರ.

English summary
After two out and out successful movies (Adduri and Bahaddur) Dhruva Sarja becoming most wanted actor in Sandalwood. But the actor is not reachable for few producers, who had bring him to lime light.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada