ನಟ ದುನಿಯಾ ವಿಜಯ್ ತಮ್ಮ ಎರಡನೇ ಪತ್ನಿಯಿಂದ ದೂರವಾಗಿದ್ದಾರಾ...?: ಕೀರ್ತಿ ಪಟ್ಟಾಡಿ ಕೊಟ್ಟ ಉತ್ತರವೇನು?
ಸ್ಯಾಂಡಲ್‌ವುಡ್ ತಾರಾ ಜೋಡಿಗಳಲ್ಲಿ ನಟ ದುನಿಯಾ ವಿಜಯ್ ಮತ್ತು ಅವರ ಎರಡನೇ ಪತ್ನಿ ಕೀರ್ತಿ ಪಟ್ಟಾಡಿ ಹೆಸರು ಕೂಡ ಕೇಳಿ ಬರುತ್ತದೆ. ನಟ ವಿಜಯ್ ಸದ್ಯ 'ಭೀಮ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ ಅವರು ಮತ್ತು ಕೀರ್ತಿ ಪಟ್ಟಾಡಿ ನಡುವೆ ಎಲ್ಲವೂ ಸರಿಯಿಲ್ಲ ಎಂಬ ವದಂತಿ ಕೂಡ ಹಬ್ಬಿತ್ತು.
ನಟ ದುನಿಯಾ ವಿಜಯ್ ತಮ್ಮ ಕೌಟುಂಬಿಕ ವಿಚಾರಕ್ಕೆ ಹಲವು ಬಾರಿ ಸೋಶಿಯಲ್ ಮಿಡಿಯಾದಲ್ಲಿ ಚರ್ಚೆಗೆ ಒಳಗಾಗಿದ್ದಾರೆ. ಮೊದಲ ಪತ್ನಿ ನಾಗರತ್ನ ಜೊತೆಗೆ ಮೂರು ಮಕ್ಕಳು ಇರುವಾಗಲೇ ನಟ ವಿಜಯ್, ಕೀರ್ತಿ ಪಟ್ಟಾಡಿ ಅವರನ್ನು ಮದುವೆಯಾಗಿದ್ದರು. ಅದರೆ, ಇತ್ತೀಚೆಗೆ ವಿಜಯ್ ಮತ್ತು ಕೀರ್ತಿ ಪಟ್ಟಾಡಿ ದೂರವಾಗಿದ್ದಾರೆ ಎಂಬ ವದಂತಿ ಕೂಡ ಹರಡಿತ್ತು. ಅದಕ್ಕೆ ಹಲವು ಕಾರಣಗಳು ಇದ್ದವು.

ವಿಜಯ್ ಅವರಿಂದ ದೂರವಾದ್ರಾ ಕೀರ್ತಿ ಪಟ್ಟಾಡಿ..?
ಮಾಡೆಲ್, ನಟಿಯಾಗಿದ್ದ ಕೀರ್ತಿ ಪಟ್ಟಾಡಿ ಅವರು, ಮೊದ ಮೊದಲು ನಟ ವಿಜಯ್ ಅವರ ಎಲ್ಲಾ ಸಿನಿಮಾ ಕಾರ್ಯಕ್ರಮಗಳು, ಶೂಟಿಂಗ್ ಸ್ಪಾಟ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ವಿಜಯ್ ಕೂಡ ತಮ್ಮ ಎಲ್ಲಾ ಕೆಲಸಗಳಲ್ಲಿಯೂ ಅವರಿಗೆ ಜಾಗ ನೀಡಿದ್ದರು. ತಮಗೆ ಬ್ಯಾಕ್ ಬೋನ್ ಆಗಿ ಕೆಲಸ ಮಾಡುತ್ತಾರೆ ಎಂದೂ ಹೇಳಿಕೊಂಡಿದ್ದರು. ಆದರೆ, ಇತ್ತೀಚೆಗೆ ಅದೆಲ್ಲಾ ಕಾಣಿಸುತ್ತಿಲ್ಲ.
ಕೀರ್ತಿ ಪಟ್ಟಾಡಿ, ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹೆಸರು ಬದಲಾಯಿಸಿದ್ದಾರೆ. ಕೀರ್ತಿ ವಿಜಯ್ ಅಫೀಶಿಯಲ್ ಎಂದು ಇದ್ದ ಖಾತೆಗೆ ಬದಲಾಗಿ ಈಗ ಕೀರ್ತಿ ಪಟ್ಟಾಡಿ ಎಂಬ ಖಾತೆಯಲ್ಲಿ ಅಪ್‌ಡೇಟ್ ಹಂಚಿಕೊಳ್ಳುತ್ತಾರೆ. ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ದುನಿಯಾ ವಿಜಯ್ ಅವರೊಂದಿಗಿನ ಯಾವುದೇ ಒಂದೇ ಒಂದು ಫೋಟೋ ಕೂಡ ಇಲ್ಲದಂತೆ ನೋಡಿಕೊಂಡಿದ್ದಾರೆ. ಇದು ಹಲವು ವದಂತಿಗೆ ಕಾರಣವಾಗಿತ್ತು. ವಿಜಯ್ ಅವರ ಬಹುನಿರೀಕ್ಷಿತ 'ಭೀಮ' ಸಿನಿಮಾ ಪ್ರಚಾರದಲ್ಲಿಯೂ ಅವರು ಕಾಣಿಸಿಕೊಳ್ಳುತ್ತಿಲ್ಲ.
ದೂರವಾದ್ರಾ...ಪ್ರಶ್ನೆಗೆ ಕೀರ್ತಿ ಪಟ್ಟಾಡಿ ಉತ್ತರ!
ಕೀರ್ತಿ ಪಟ್ಟಾಡಿ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ಆಕ್ಟಿವ್ ಆಗಿರುತ್ತಾರೆ. ಆಗ್ಗಾಗೆ ಫೋಟೋ, ರೀಲ್ಸ್‌ಗಳನ್ನು ಶೇರ್ ಮಾಡುತ್ತಾರೆ. ಆದರೆ, ಅವರ ಫೋಟೋಗಳಿಗೆ ಬರುವ ಕಾಮೆಂಟ್‌ಗಳಲ್ಲಿ ಹೆಚ್ಚಿನವು ಅಣ್ಣನ ಜೊತೆಗೆ ಒಂದು ಫೋಟೋ ಶೇರ್ ಮಾಡಿ ಅತ್ತಿಗೆ ಎಂಬುದು. ಹೌದು...ವಿಜಯ್ ಅವರನ್ನು ಮದುವೆಯಾದ ಮೇಲೆ ಕೀರ್ತಿ ಪಟ್ಟಾಡಿ ಅವರ ಅಭಿಮಾನಿಗಳ ಪಾಲಿಗೆ ಅತ್ತಿಗೆಮ್ಮ ಆಗಿದ್ದಾರೆ. ಅದು ಕಾಮೆಂಟ್ ಬಾಕ್ಸ್‌ಗಳಲ್ಲಿಯೂ ಕಾಣಬಹುದು.

ಬಾಸ್ ಜೊತೆಗಿನ ಪೋಟೋ ಹಂಚಿಕೊಳ್ಳಿ ಎಂಬ ಎಲ್ಲಾ ಕಾಮೆಂಟ್‌ಗಳಿಗೂ. "ನಮ್ಮ ಮೇಲಿನ ಪ್ರೀತಿಗೆ ಧನ್ಯವಾದಗಳು.. ನಾನು ಬೇಗ ಫೋಟೋ ಅಪ್ಲೋಡ್ ಮಾಡುತ್ತೇನೆ.. ಸದ್ಯಕೆ ನಾನು ನನ್ನ ಬಗ್ಗೆ ಮತ್ತು ಸಂಗೀತದ ಪ್ರಯಾಣದ ಬಗ್ಗೆ ಅಪ್‌ಡೇಟ್ ಮಾಡಲು ಬಯಸುತ್ತೇನೆ" ಎಂದು ಹೇಳುತ್ತಾರೆ.
ಇನ್ನು, ಸೋನಿ ಸದಾಶಿವ ಎಂಬ ಅಭಿಮಾನಿಯೊಬ್ಬರು, "ನೀವು ದುನಿಯಾ ವಿಜಯ್ ಸರ್ ಜೊತೆಗಿದ್ದೀರಾ..? ಅವರ ಜೊತೆಗಿನ ನಿಮ್ಮ ಫೋಟೋ ನೋಡಿಲ್ಲ ಮೇಡಂ' ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ಕೀರ್ತಿ ಪಟ್ಟಾಡಿ, "Always and Forever (ಯಾವಾಗಲೂ ಮತ್ತು ಎಂದೆಂದಿಗೂ)" ಎಂದು ಪ್ರತಿಕ್ರಿಯೆ ನೀಡುವ ಮೂಲಕ ಎಲ್ಲಾ ವದಂತಿಗಳಿಗೆ ತೆರೆ ಎಳೆದಿದ್ದಾರೆ.
ಕೀರ್ತಿ ಪಟ್ಟಾಡಿ
ದುನಿಯಾ ವಿಜಯ್ ಎರಡನೇ ಪತ್ನಿ ಕೀರ್ತಿ ಪಟ್ಟಾಡಿ ಮಾಡೆಲ್ ಆಗಿ ಗುರುತಿಸಿಕೊಂಡವರು. ಐಟಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ಅವರು ಹಲವು ಜಾಹೀರಾತಿಗಳಲ್ಲಿ ಕಾಣಿಸಿಕೊಂಡು, ಸಿನಿಮಾ ಕ್ಷೇತ್ರಕ್ಕೂ ಕಾಲಿಟ್ಟಿದ್ದರು. ಕೆಲವು ಸಿನಿಮಾಗಳಲ್ಲಿ ನಟಿಸಿದ್ದರು. 2014ರಲ್ಲಿ ದುನಿಯಾ ವಿಜಯ್ ಅವರನ್ನು ಮದುವೆಯಾದ ನಂತರ ಸಿನಿಮಾಗಳಿಂದ ದೂರ ಉಳಿದಿದ್ದಾರೆ. ಸದ್ಯ ಕೀರ್ತಿ ಸಂಗೀತಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಿಯುತ್ತಿದ್ದಾರೆ.


Click it and Unblock the Notifications











