'ಚಕ್ರವರ್ತಿ' ಚಿತ್ರತಂಡ ಸೇರಿಕೊಂಡ ಹೊಸ ಅತಿಥಿ ಯಾರು ?
ನವ ನಿರ್ದೇಶಕ ಚಿಂತನ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ 'ಚಕ್ರವರ್ತಿ', ದಿನದಿಂದ ದಿನಕ್ಕೆ ಹೊಸ ರೀತಿಯಲ್ಲಿ ಸುದ್ದಿ ಮಾಡುತ್ತಿದೆ.
ಮೊನ್ನೆ ಮೊನ್ನೆ ನಟ ಆದಿತ್ಯ ಅವರು ಸೆಟ್ ಗೆ ಸೇರಿಕೊಂಡಿದ್ದಾರೆ. ಅಲ್ಲದೇ 'ಡೆಡ್ಲಿ' ಆದಿತ್ಯ ಅವರು ಈ ಚಿತ್ರದಲ್ಲಿ ಖಡಕ್ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.[ಕಾವೇರಿ ಹೋರಾಟಕ್ಕೆ ಬೆಂಬಲ ನೀಡಿದ ನಟ ದರ್ಶನ್]
ಭೂಗತ ಲೋಕದ ಕಥೆಯಾಧರಿತ 'ಚಕ್ರವರ್ತಿ' ಚಿತ್ರದಲ್ಲಿ ನಟ ದರ್ಶನ್, ಸೃಜನ್ ಲೋಕೇಶ್ ರೆಟ್ರೋ ಲುಕ್ ನಲ್ಲಿ ಮಿಂಚಿದ್ದಾರೆ. 'ಸಾರಥಿ' ಚಿತ್ರದ ನಂತರ ನಟಿ ದೀಪಾ ಸನ್ನಿಧಿ ಮತ್ತು ದರ್ಶನ್ ಅವರು ಮತ್ತೆ ಈ ಚಿತ್ರದಲ್ಲಿ ಒಂದಾಗಿದ್ದು, ದರ್ಶನ್ ಪತ್ನಿಯ ಪಾತ್ರದಲ್ಲಿ ದೀಪಾ ಸನ್ನಿಧಿ ಕಾಣಿಸಿಕೊಂಡಿದ್ದಾರೆ.
ಹಲವಾರು ವಿಶೇಷತೆಗಳನ್ನು ಒಳಗೊಂಡಿರುವ ಈ ಚಿತ್ರಕ್ಕೆ ಇನ್ನೊಬ್ಬ ನಟ ಎಂಟ್ರಿಯಾಗಿದ್ದಾರೆ ಎನ್ನಲಾಗುತ್ತಿದೆ. ಯಾರು 'ಆ' ನಟ ಎಂಬುದನ್ನು ತಿಳಿಯಲು ಮುಂದೆ ಓದಿ....

ಮತ್ತೊಬ್ಬ ವಿಲನ್ ಎಂಟ್ರಿ
'ಚಕ್ರವರ್ತಿ' ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಸವಾಲ್ ಹಾಕಲು ಅವರ ಸಹೋದರ ದಿನಕರ್ ತೂಗುದೀಪ ಅವರು ಸಜ್ಜಾಗಿದ್ದಾರೆ, ಅನ್ನೋದು ಹಳೇ ವಿಷಯ. ಇದೀಗ ದರ್ಶನ್ ಅವರಿಗೆ ಟಕ್ಕರ್ ಕೊಡಲು ಇನ್ನೊಬ್ಬ ಹೊಸ ವಿಲನ್ ಎಂಟ್ರಿ ಕೊಟ್ಟಿದ್ದಾರಂತೆ. 'ಚಕ್ರವರ್ತಿ' ದರ್ಶನ್ ಅಡ್ಡಾಗೆ ಎಂಟ್ರಿ ಕೊಟ್ಟ ಹೊಸ ಅತಿಥಿ ಯಾರು ನೋಡಿ ಮುಂದಿನ ಸ್ಲೈಡಿನಲ್ಲಿ...['ಚಕ್ರವರ್ತಿ'ಯಿಂದ ನಾಯಕಿ ಅಂಜಲಿ ಕಿಕ್ ಔಟ್.! ಅಸಲಿ ಕಾರಣ ಬಹಿರಂಗ.!]

ಕುಮಾರ್ ಬಂಗಾರಪ್ಪ
ನಟ ಕಮ್ ರಾಜಕೀಯ ವ್ಯಕ್ತಿ ಕುಮಾರ್ ಬಂಗಾರಪ್ಪ ಅವರು ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು 'ಚಕ್ರವರ್ತಿ' ಚಿತ್ರದ ಮೂಲಗಳು ಮಾಹಿತಿ ನೀಡಿವೆ.[ಕನ್ನಡ ಚಿತ್ರರಂಗದ ಅಪೂರ್ವ ಸಹೋದರರು]

ವಿಲನ್ ಆದ ಕುಮಾರ್ ಬಂಗಾರಪ್ಪ
ಕುಮಾರ್ ಬಂಗಾರಪ್ಪ ಅವರು ಕೂಡ ಈ ಚಿತ್ರದಲ್ಲಿ ಖಳನಾಯಕನ ಪಾತ್ರ ವಹಿಸಲಿದ್ದಾರಂತೆ. ಅವರ ಪಾತ್ರದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬಿಟ್ಟುಕೊಡದಿದ್ದರೂ, ಅವರು ಕೂಡ ಈ ಚಿತ್ರದ ಪ್ರಮುಖ ಭಾಗವಂತೆ.['ಚಕ್ರವರ್ತಿ' ದರ್ಶನ್ ಜೊತೆ 'ಗುರಾಯಿಸುವ ಗುಮ್ಮ'ನಾದ ಸೃಜನ್.!]

ವಿದೇಶದಲ್ಲಿ ಚಿತ್ರೀಕರಣ
ಕುಮಾರ್ ಬಂಗಾರಪ್ಪ ಅವರ ಭಾಗದ ಸಂಪೂರ್ಣ ಚಿತ್ರೀಕರಣವನ್ನು ಮಲೇಷಿಯಾದಲ್ಲಿ ಮಾಡಲಾಗುತ್ತಂತೆ. ಸೆಪ್ಟೆಂಬರ್ ಮಧ್ಯದಲ್ಲಿ ಇವರ ಭಾಗದ ಚಿತ್ರೀಕರಣ ಆರಂಭವಾಗಲಿದೆ.

'ಕೆಳದಿ ಶಿವಪ್ಪ ನಾಯಕ'
ನಟ ಕಮ್ ರಾಜಕೀಯ ವ್ಯಕ್ತಿ ಕುಮಾರ್ ಬಂಗಾರಪ್ಪ ಅವರು ಕೊನೆಯದಾಗಿ ನಟಿಸಿದ್ದು, 2012ರ 'ಕೆಳದಿ ಶಿವಪ್ಪ ನಾಯಕ' ಚಿತ್ರದಲ್ಲಿ. ತದನಂತರ ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿಲ್ಲ. ಇದೀಗ ಲಾಂಗ್ ಗ್ಯಾಪ್ ತೆಗೆದುಕೊಂಡ ನಂತರ 'ಚಕ್ರವರ್ತಿ' ಚಿತ್ರದಲ್ಲಿ ಖಳನಾಯಕನಾಗಿ ಮಿಂಚುತ್ತಿದ್ದಾರೆ.

'ಚಕ್ರವರ್ತಿ' ಶೂಟಿಂಗ್ ಬಂದ್
'ಕಾವೇರಿ ನೀರು ವಿವಾದ' ಹಿನ್ನಲೆಯಲ್ಲಿ ಮಂಡ್ಯ, ಮೈಸೂರು, ಮಡಿಕೇರಿಯಲ್ಲಿ ತೀವ್ರ ಪ್ರತಿಭಟನೆ ಆಗುತ್ತಿರುವ ಹಿನ್ನಲೆಯಲ್ಲಿ ದರ್ಶನ್ ಅವರು 'ಚಕ್ರವರ್ತಿ' ಶೂಟಿಂಗ್ ಗೂ ಬ್ರೇಕ್ ಹಾಕಿದ್ದಾರೆ. ಈ ಮೂಲಕ ರೈತರಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.


Click it and Unblock the Notifications











