For Quick Alerts
  ALLOW NOTIFICATIONS  
  For Daily Alerts

  'ಬಿಗ್ ಬಾಸ್' ಮೂಲಕ ಮಹೇಶ್ ಬಾಬು ಕಿರುತೆರೆಗೆ ಎಂಟ್ರಿ ಕೊಡುತ್ತಾರಾ?

  |

  ಕಿರುತೆರೆ ಲೋಕದ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಬಿಗ್ ಬಾಸ್ ಕೂಡ ಒಂದು. ಹಿಂದಿ ವಾಹಿನಿ ಮೂಲಕ ಭಾರತಕ್ಕೆ ಪರಿಚಯವಾದ ಬಿಗ್ ಬಾಸ್ ನಂತರ ಭಾರತದ ಬಹುತೇಕ ಭಾಷೆಗಳಲ್ಲಿ ಪ್ರಸಾರವಾಗುತ್ತಿದೆ. ಹಿಂದಿ ಬಿಗ್ ಬಾಸ್ ಹಾಗೆಯೇ ಬೇರೆ ಬೇರೆ ಭಾಷೆಯಲ್ಲಿಯೂ ಬಿಗ್ ಬಾಸ್ ಖ್ಯಾತಿ ಗಳಿಸಿದೆ.

  75ರೂ ಸಂಬಳಕ್ಕೆ ಕೆಲಸ ಮಾಡಿದ್ರು ಕೋಟಿಗೊಬ್ಬ 3 ನಿರ್ಮಾಪಕ | Kotigobba 3 Babu | Sudeep | Soorappa

  ಕನ್ನಡದಲ್ಲಿ ಬಿಗ್ ಬಾಸ್ ಈಗಾಗಲೆ 7 ಆವೃತ್ತಿಯನ್ನು ಯಶಸ್ವಿಯಾಗಿ ಮುಗಿಸಿದೆ. ಕನ್ನಡದಲ್ಲಿ ಕಿಚ್ಚ ಸುದೀಪ್ ನಡೆಸಿಕೊಡುತ್ತಿದ್ದರು. ತಮಿಳಿನಲ್ಲಿ ಕಮಲ್ ಹಾಸನ್ ನಡೆಸಿಕೊಡುತ್ತಿದ್ದಾರೆ. ಇನ್ನು ತೆಲುಗಿನಲ್ಲಿ ಈಗಾಗಲೆ ಮೂರು ಆವೃತ್ತಿ ಪೂರ್ಣಗೊಂಡಿದೆ. ಈ ಮೂರು ಆವೃತ್ತಿಗೂ ಮೂವರು ಸ್ಟಾರ್ಸ್ ನಟರು ನಡೆಸಿಕೊಟ್ಟಿದ್ದಾರೆ. ಈ ಬಾರಿ ಕೂಡ ಯಾರು ನಡೆಸಿಕೊಡಲಿದ್ದಾರೆ ಎನ್ನುವ ಚರ್ಚೆ ಜೋರಾಗಿ ನಡೆಯುತ್ತಿದೆ. ಸದ್ಯ ಕೇಳಿ ಬರುತ್ತಿರುವ ಮಾಹಿತಿ ಪ್ರಕಾರ ಮಹೇಶ್ ಬಾಬು ನಡೆಸಿಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಮುಂದೆ ಓದಿ..

  ದಕ್ಷಿಣ ಭಾರತದಲ್ಲಿ ಹೊಸ ದಾಖಲೆ ನಿರ್ಮಿಸಿದ ಸೂಪರ್ ಸ್ಟಾರ್ ಮಹೇಶ್ ಬಾಬುದಕ್ಷಿಣ ಭಾರತದಲ್ಲಿ ಹೊಸ ದಾಖಲೆ ನಿರ್ಮಿಸಿದ ಸೂಪರ್ ಸ್ಟಾರ್ ಮಹೇಶ್ ಬಾಬು

  3 ಆವೃತ್ತಿ ಮುಗಿಸಿರುವ ತೆಲುಗು ಬಿಗ್ ಬಾಸ್

  3 ಆವೃತ್ತಿ ಮುಗಿಸಿರುವ ತೆಲುಗು ಬಿಗ್ ಬಾಸ್

  ತೆಲುಗಿನಲ್ಲಿ ಈಗಾಗಲೆ ಮೂರು ಆವೃತ್ತಿ ಮುಗಿದಿದೆ. ಈ ಮೂರು ಆವೃತ್ತಿಯಲ್ಲಿಯೂ ಬೇರೆ ಬೇರೆ ಸ್ಟಾರ್ಸ್ ನಡೆಸಿಕೊಟ್ಟಿದ್ದಾರೆ. ಮೊದಲ ಮೊದಲ ಆವೃತ್ತಿ ನಟ ಜೂ.ಎನ್ ಟಿ ಆರ್ ನಡೆಸಿಕೊಟ್ಟರೆ, ಎರಡನೇ ಆವೃತ್ತಿ ನಡೆಸಿಕೊಡುವ ಜವಾಬ್ದಾರಿ ನಾನಿ ಹೆಗಲಿಗೆ ಬಿದ್ದಿತ್ತು. ಮೂರನೆ ಆವೃತ್ತಿಯನ್ನು ಅಕ್ಕಿನೇನಿ ನಾಗಾರ್ಜುನ್ ನಡೆಸಿಕೊಟ್ಟಿದ್ದರು.

  4ನೇ ಆವೃತ್ತಿ ಬಗ್ಗೆ ನಡೆಯುತ್ತಿದೆ ಚರ್ಚೆ

  4ನೇ ಆವೃತ್ತಿ ಬಗ್ಗೆ ನಡೆಯುತ್ತಿದೆ ಚರ್ಚೆ

  ತೆಲುಗು ಬಿಗ್ ಬಾಸ್ ನಾಲ್ಕನೆ ಆವೃತ್ತಿ ಯಾರು ನಡೆಸಿಕೊಡಲಿದ್ದಾರೆ ಎನ್ನುವ ಚರ್ಚೆ ಈಗಾಗಲೆ ನಡೆಯುತ್ತಿದ್ದಾರೆ. 4ನೇ ಆವೃತ್ತಿಯ ಜವಾಬ್ದಾರಿ ಯಾರ ವಹಿಸಿಕೊಳ್ಳಲಿದ್ದಾರೆ ಎಂದು ಸಾಕಷ್ಟು ಸ್ಟಾರ್ ನಟ ಹೆಸರು ಕೇಳಿ ಬರುತ್ತಿದೆ. ಪ್ರತೀ ಬಾರಿ ತೆಲುಗು ಬಿಗ್ ಬಾಸ್ ಹೋಸ್ಟ್ ಬಗ್ಗೆ ಒಂದಿಷ್ಟು ಗೊಂದಲ ಸೃಷ್ಟಿಯಾಗಿರುತ್ತೆ. ಈ ಬಾರಿ ಕೂಡ ಯಾರು ನಡೆಸಿಕೊಡಲಾದಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.

  ಹಿಟ್ ನೀಡಿದ ನಿರ್ದೇಶಕನ ಚಿತ್ರದಿಂದ ಮಹೇಶ್ ಬಾಬು ಔಟ್ಹಿಟ್ ನೀಡಿದ ನಿರ್ದೇಶಕನ ಚಿತ್ರದಿಂದ ಮಹೇಶ್ ಬಾಬು ಔಟ್

  ಮಹೇಶ್ ಬಾಬು ನಡೆಸಿ ಕೋಡುತ್ತಾರಾ ಬಿಗ್ ಬಾಗ್-4

  ಮಹೇಶ್ ಬಾಬು ನಡೆಸಿ ಕೋಡುತ್ತಾರಾ ಬಿಗ್ ಬಾಗ್-4

  ತೆಲುಗು ಬಾಗಿ ಬಾಸ್-4ಅನ್ನು ಟಾಲಿವುಡ್ ಸ್ಟಾರ್ ನಟ ಮಹೇಶ್ ಬಾಬು ನಡೆಸಿಕೊಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈಗಾಗಲೆ ಕೇಳಿ ಬರುತ್ತಿರುವ ಸುದ್ದಿಯ ಪ್ರಕಾರ ಮಹೇಶ್ ಬಾಬು ನಡೆಸಿಕೊಡುವುದು ಪಕ್ಕಾ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಮಹೇಶ್ ಬಾಬು ನಡೆಸಿ ಕೊಟ್ಟರೆ ಮೊದಲ ಬಾರಿಗೆ ಕಿರುತೆರೆಗೆ ಎಂಟ್ರಿ ಕೊಟ್ಟ ಹಾಗೆ ಆಗುತ್ತೆ. ಆದರೆ ಈ ಬಗ್ಗೆ ಮಹೇಶ್ ಬಾಬು ಆಗಲಿ ಅಥವಾ ಬಿಗ್ ಬಾಸ್ ಟೀ ಕಡೆಯಿಂದ ಯಾವುದೆ ಮಾಹಿತಿ ಹೊರಬಿದ್ದಿಲ್ಲ. ಹಾಗಾಗಿ ಮಹೇಶ್ ಬಾಬು ಬಿಗ್ ಬಾಸ್ ನಡೆಸಿಕೊಡುತ್ತಾರೆ ಎನ್ನುವುದನ್ನು ಕಾದು ನೋಡಬೇಕು.

  ಬಾಲಿವುಡ್ ನಲ್ಲಿ ಮಲ್ಟಿಸ್ಟಾರ್ ಸಿನಿಮಾ: ರಣ್ವೀರ್ ಸಿಂಗ್ ಜೊತೆ ಮಹೇಶ್ ಬಾಬುಬಾಲಿವುಡ್ ನಲ್ಲಿ ಮಲ್ಟಿಸ್ಟಾರ್ ಸಿನಿಮಾ: ರಣ್ವೀರ್ ಸಿಂಗ್ ಜೊತೆ ಮಹೇಶ್ ಬಾಬು

  ವಂಶಿ ಪೈಡಿಪಲ್ಲಿ ಸಿನಿಮಾದಿಂದ ಹೊರ ಬಂದಿರುವ ಮಹೇಶ್

  ವಂಶಿ ಪೈಡಿಪಲ್ಲಿ ಸಿನಿಮಾದಿಂದ ಹೊರ ಬಂದಿರುವ ಮಹೇಶ್

  ಮಹೇಶ್ ಸರಿಲೇರು ನೀಕೆವ್ವರು ಸಿನಿಮಾ ನಂತರ ಯಾವ ಸಿನಿಮಾವನ್ನು ಒಪ್ಪಿಕೊಂಡಿಲ್ಲ. ಆದರೆ 'ಮಹರ್ಶಿ' ಚಿತ್ರದ ನಿರ್ದೇಶಕ ವಂಶಿ ಪೈಡಿಪಲ್ಲಿ ಜೊತೆ ಹೊಸ ಚಿತ್ರ ಮಾಡಲು ಸಿದ್ಧವಾಗಿದ್ದರು ಎಂದು ಹೇಳಲಾಗಿತ್ತು. ಆದರೆ ಹಠಾತ್ತನೆ ಚಿತ್ರದಿಂದ ಮಹೇಶ್ ಹೊರಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಕಥೆಯಲ್ಲಿ ಬದಲಾವಣೆಯಾದ ಕಾರಣ ಚಿತ್ರದಿಂದ ಹೊರಬಂದಿದ್ದಾರೆ ಎಂದು ಹೇಳಲಾಗುತ್ತಿದೆ.

  English summary
  Tollywood Actor Mahesh Babu may host Telugu Bigg Boss season 4. Bigg Boss season 3 host by Actor Nagarjuna.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X