ಆಸ್ತಿ ಹಂಚಿಕೆ ಮಾಡಿ ಮಕ್ಕಳ ಗಲಾಟೆಗೆ ಮೋಹನ್ ಬಾಬು ಬ್ರೇಕ್? ಯಾರಿಗೆ ಏನು ಸಿಕ್ತು?

ಹುಟ್ಟುತ್ತ ಅಣ್ಣ ತಮ್ಮಂದಿರು ಬೆಳೆಯುತ್ತಾ ದಾಯಾದಿಗಳು ಅನ್ನೋ ಮಾತಿದೆ. ಆಸ್ತಿಗಾಗಿ ಒಡಹುಟ್ಟಿದವರ ನಡುವೆ ಸಾಕಷ್ಟು ಕದನಗಳು ನಡೆದು ಹೋಗಿದೆ. ತೆಲುಗು ನಟ ಮೋಹನ್ ಬಾಬು ಮಕ್ಕಳು ಕೂಡ ಆಸ್ತಿ ವಿಚಾರದಲ್ಲಿ ಕಿತ್ತಾಡಿಕೊಂಡಿದ್ದಾರೆ ಎನ್ನಲಾಗ್ತಿದೆ. ಕಳೆದ ಕೆಲ ದಿನಗಳಿಂದ ಮಂಚು ಫ್ಯಾಮಿಲಿಯಲ್ಲಿ ಕಿರಿಕ್‌ಗಳು ನಡೀತಿದೆ. ಅದಕ್ಕೆಲ್ಲಾ ಈಗ ಮೋಹನ್ ಬಾಬು ಫುಲ್‌ಸ್ಟಾಪ್ ಹಾಕ್ತಾರೆ ಎನ್ನಲಾಗ್ತಿದೆ.

ಇತ್ತೀಚೆಗೆ ಮೋಹನ್ ಬಾಬು ಕಿರಿಯ ಮಗ ನಟ ಮನೋಜ್ 2ನೇ ಮದುವೆ ಆಗಿದ್ದರು. ಈ ವೇಳೆ ಕುಟುಂಬದಲ್ಲಿರುವ ಮನಸ್ತಾಪಗಳು ರಟ್ಟಾಗಿತ್ತು. ಕೊನೆ ಕ್ಷಣದಲ್ಲಿ ಮೋಹನ್ ಬಾಬು ಮದುವೆಗೆ ಹಾಜರಾಗಿದ್ದರು. ಇನ್ನು ಮದುವೆಯಾದ ಕೆಲವೇ ದಿನಗಳಲ್ಲಿ ಮನೋಜ್ ಒಂದು ವಿಡಿಯೋ ಶೇರ್ ಮಾಡಿದ್ದರು. ಸಹೋದರ ವಿಷ್ಣು ನಮ್ಮವರ ಮೇಲೆ ದಾಳಿ ಮಾಡಿದ್ದಾನೆ ಎಂದು ಆರೋಪಿಸಿದ್ದರು. ವಿಡಿಯೋ ವೈರಲ್ ಆಗಿತ್ತು. ಬಳಿಕ ಡಿಲೀಟ್ ಮಾಡಿದ್ದರು. ಆದರೆ ಇದೆಲ್ಲ ಸುಳ್ಳು ಎಂದು ವಿಷ್ಣು ಸಮಜಾಯಿಷಿ ಕೊಡುವ ಪ್ರಯತ್ನ ಮಾಡಿದ್ದರು.

Actor Mohan Babu has divided his property among his children Vishnu and Manoj?

ಮತ್ತೊಂದು ಕಡೆ ಮೋಹನ್ ಬಾಬು ಮುದ್ದಿನ ಮಗಳು ಮಂಚು ಲಕ್ಷ್ಮಿ ಕೂಡ ಸಹೋದರ ವಿಷ್ಣು ಇಂದ ಅಂತರ ಕಾಯ್ದುಕೊಂಡಿದ್ದಾರೆ. ಇದಕ್ಕೆಲ್ಲ ಕಾರಣ ಆಸ್ತಿ ವಿಚಾರ ಎನ್ನಲಾಗ್ತಿದೆ. ಆಸ್ತಿಗಾಗಿ ಅಣ್ಣ- ತಮ್ಮಂದಿರು ಹೀಗೆಲ್ಲಾ ಕಿತ್ತಾಡಿಕೊಳ್ಳುತ್ತಿದ್ದಾರೆ ಎನ್ನುವ ಗುಸುಗುಸು ಕೇಳಿಬರ್ತಿದೆ. ಈಗಾಗಲೇ ಒಂದಷ್ಟು ಆಸ್ತಿಯನ್ನು ಮೋಹನ್ ಬಾಬು ಮೂವರಿಗೂ ಹಂಚಿದ್ದಾರೆ. ಎಲ್ಲರೂ ಬೇರೆ ಬೇರೆ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಇನ್ನು ವಿದ್ಯಾನಿಕೇತನ್ ಶಾಲೆ ಕುಟುಂಬಕ್ಕೆ ದೊಡ್ಡ ಆದಾಯದ ಮೂಲವಾಗಿದೆ. ಅದನ್ನು ವಿಷ್ಣುಗೆ ನೀಡಿದ್ದಾರೆ.

ಹೈದರಾಬಾದ್‌ನಲ್ಲಿರುವ ಒಂದಷ್ಟು ಆಸ್ತಿಯನ್ನು ಚಿಕ್ಕ ಮಗಲ ಮನೋಜ್‌ಗೆ ಮೋಹನ್ ಬಾಬು ನೀಡಿದ್ದಾರಂತೆ. ಫಿಲ್ಮ್ ನಗರ್‌ನಲ್ಲಿರುವ ಮನೆ ಮಗಳಿಗೆ ಕೊಟ್ಟಿದ್ದಾರೆ. ಇರುವ ಇನ್ನು ಒಂದಷ್ಟು ಆಸ್ತಿಯನ್ನು ಇತ್ತೀಚೆಗೆ ಮಕ್ಕಳ ಹೆಸರಿಗೆ ಟಾಲಿವುಡ್ ಕಲೆಕ್ಷನ್ ಕಿಂಗ್ ಬರೆದಿದ್ದಾರೆ ಎನ್ನಲಾಗ್ತಿದೆ. ಮೋಹನ್ ಬಾಬು ನಿನ್ನೆ (ಜುಲೈ 13) ಷಾದ್ ನಗರ್‌ ರಿಜಿಸ್ಟರ್ ಆಫೀಸ್‌ಗೆ ಹೋಗಿದ್ದರು. ಈ ವೇಳೆ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದ್ದಾರೆ. ಮಾಧ್ಯಮ ಪ್ರತಿನಿಧಿಗಳ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Actor Mohan Babu has divided his property among his children Vishnu and Manoj?

ಷಾದ್‌ ನಗರ್ ಭಾಗದಲ್ಲಿ ಮೋಹನ್‌ ಬಾಬುಗೆ ಒಂದಷ್ಟು ಆಸ್ತಿ ಇದ್ದು ಅದನ್ನು ಮಕ್ಕಳ ಹೆಸರಿಗೆ ಬರೆಯಲು ರಿಜಿಸ್ಟರ್ ಆಫೀಸ್‌ಗೆ ಹೋಗಿದ್ದರು ಎನ್ನುವ ಮಾತುಗಳು ಕೇಳಿಬರ್ತಿದೆ. ಮಕ್ಕಳ ಮಧ್ಯೆ ಆಸ್ತಿ ವಿಚಾರಕ್ಕಾಗಿ ಶೀತಲ ಸಮರ ನಡೀತಿದ್ದು ಅದನ್ನು ಸರಿಯಾಗಿ ಹಂಚಿಕೆ ಮಾಡಿ ಈ ಗೊಂದಲಕ್ಕೆ ತೆರೆ ಎಳೆಯಲು ಮೋಹನ್ ಬಾಬು ಮನಸ್ಸು ಮಾಡಿದ್ದಾರೆ ಎನ್ನಲಾಗ್ತಿದೆ. ಇದೇ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡ್ತಿದೆ.

ಟಾಲಿವುಡ್‌ ಖ್ಯಾತ ನಟ ಮೋಹನ್ ಬಾಬು ಇತ್ತೀಚೆಗೆ ಹೆಚ್ಚು ಸಿನಿಮಾಗಳಲ್ಲಿ ನಟಿಸ್ತಿಲ್ಲ. ಸಣ್ಣ ಪುಟ್ಟ ಪಾತ್ರಗಳ ಮೂಲಕ ತೆಲುಗು ಚಿತ್ರರಂಗ ಪ್ರವೇಶಿಸಿದ ಮೋಹನ್ ಬಾಬು ನಂತರ ವಿಲನ್ ಆಗಿ ಅಬ್ಬರಿಸಿದರು. ಕೊನೆಗೆ ಹೀರೊ ಆಗಿ ಸಕ್ಸಸ್ ಕಂಡು ಅಭಿಮಾನಿಗಳಿಂದ ಕಲೆಕ್ಷನ್ ಕಿಂಗ್ ಎನ್ನುವ ಬಿರುದು ಪಡೆದರು. ತಂದೆ ಹಾದಿಯಲ್ಲಿ ಮೂವರು ಮಕ್ಕಳಾದ ವಿಷ್ಣು, ಮನೋಜ್, ಲಕ್ಷ್ಮಿ ಚಿತ್ರರಂಗಕ್ಕೆ ಬಂದರೂ ದೊಡ್ಡದಾಗಿ ಸಕ್ಸಸ್ ಕಾಣಲಿಲ್ಲ.

2015ರಲ್ಲಿ ಪ್ರಣತಿ ರೆಡ್ಡಿ ಎಂಬುವವರ ಕೈ ಹಿಡಿದಿದ್ದ ಮನೋಜ್ 4 ವರ್ಷಗಳ ಬಳಿಕ ಡಿವೋರ್ಸ್ ಪಡೆದಿದ್ದರು. ಬಳಿಕ ಭೂಮಾ ಮೌನಿಕ ರೆಡ್ಡಿ ಎಂಬುವವರನ್ನು ಪ್ರೀತಿಸಿದ್ದರು. ಈ ವರ್ಷ ಮಾರ್ಚ್ 3ರಂದು ಮಂಜು ಲಕ್ಷ್ಮಿ ಮನೆಯಲ್ಲಿ ಮನೋಜ್- ಮೌನಿಕಾ ಮದುವೆ ನಡೆದಿತ್ತು. ಇನ್ನು ಮೌನಿಕಾ ರೆಡ್ಡಿಗೂ ಕೂಡ ಇದು 2ನೇ ಮದುವೆ. ಆಕೆ 2016ರಲ್ಲಿ ಬೆಂಗಳೂರು ಮೂಲಕ ಗಣೇಶ್ ರೆಡ್ಡಿ ಎಂಬುವವರನ್ನು ಮದುವೆ ಆಗಿ ನಂತರ ವಿಚ್ಛೇದನ ಪಡೆದಿದ್ದರು.

More from Filmibeat

English summary
Mohan Babu has divided his property among his children Vishnu and Manoj?. Vishnu and Manoj's fight was in big news recently. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X