For Quick Alerts
  ALLOW NOTIFICATIONS  
  For Daily Alerts

  ಪವನ್ ಮೂರನೇ ಕಲ್ಯಾಣಕ್ಕೆ ಇಲ್ಲಿದೆ ನೋಡಿ ದಾಖಲೆ

  By ಅನಂತರಾಮು, ಹೈದರಾಬಾದ್
  |

  ತನ್ನ ಹೆಸರಿನಲ್ಲೇ ಕಲ್ಯಾಣ ಎಂದು ಸೇರಿಸಿಕೊಂಡಿರುವ ಟಾಲಿವುಡ್ ನಟ ಪವರ್ ಸ್ಟಾರ್ ಪವನ್ ಕಲ್ಯಾಣ್ ಇತ್ತೀಚೆಗೆ ಮೂರನೇ ಮದುವೆ ಮಾಡಿಕೊಂಡರು ಎಂಬುದು ಬಹಳ ಚರ್ಚನೀಯ ವಿಷಯವಾಗಿತ್ತು. ಈಗ ಆ ಮದುವೆಗೆ ಸಂಬಂಧಿಸಿದಂತೆ ಪುರಾವೆ ಲಭ್ಯವಾಗಿದೆ.

  ಆಸ್ಟ್ರೇಲಿಯಾದ ಯುವತಿ ಅನ್ನಾ ಲೆಜ್ ನಿವಾ ಅವರನ್ನು ಕೈಹಿಡಿಯುವ ಮೂಲಕ ಚಿರಂಜೀವಿ ಸಹೋದರ ಪವನ್ ಕಲ್ಯಾಣ್ ಮೂರನೇ ಮದುವೆಯಾದರು. ಆದರೆ ಇವರಿಬ್ಬರೂ ಮದುವೆಯಾಗಿದ್ದಾರೆ ಎಂಬ ಬಗ್ಗೆ ಫೋಟೋಗಳಾಗಲಿ, ವಿಡಿಯೋಗಳಾಗಲಿ ಸಿಕ್ಕಿರಲಿಲ್ಲ.

  ಮೌನಂ ಸಮ್ಮತಿ ಲಕ್ಷಣಂ ಎಂಬಂತೆ ಈ ಬಗ್ಗೆ ಪವನ್ ಕಲ್ಯಾಣ್ ಸಹ ಮೌನಕ್ಕೆ ಶರಣಾಗಿದ್ದರು. ಈಗ ಇದಕ್ಕೆ ಪುರಾವೆ ಸಿಕ್ಕಿದ್ದು, ಅದರ ಪ್ರಕಾರ ಹೈದರಾಬಾದಿನ ಎರ್ರಗಡ್ಡದ ಜಾಯಿಂಟ್ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಸೆಪ್ಟೆಂಬರ್ 30ರಂದು ಇಬ್ಬರೂ ಹಾರ ಬದಲಾಯಿಸಿಕೊಂಡಿದ್ದಾರೆ.

  ರಿಜಿಸ್ಟರ್ ಮ್ಯಾರೇಜ್ ಸರ್ಟಿಫಿಕೇಟ್

  ರಿಜಿಸ್ಟರ್ ಮ್ಯಾರೇಜ್ ಸರ್ಟಿಫಿಕೇಟ್

  ಈ ರಿಜಿಸ್ಟರ್ಡ್ ಮದುವೆಗಾಗಿ ಪವನ್ ಕಲ್ಯಾಣ್ ಹಾಗೂ ಅನ್ನಾ ಲೆಜ್ ನಿವಾ ಆಗಸ್ಟ್ 30ರಂದು ಅರ್ಜಿ ಸಲ್ಲಿಸಿದ್ದರು ಎಂದು ಸಬ್ ರಿಜಿಸ್ಟ್ರಾರ್ ಬಾಸಿತ್ ಸಿದ್ಧಿಖಿ ತಿಳಿಸಿದ್ದಾರೆ. ಒಂದು ತಿಂಗಳ ಹಿಂದೆ ಎಲ್ಲವೂ ಸರಿಯಾಗಿದೆ ಎಂದು ಭಾವಿಸಿ ರಿಜಿಸ್ಟರ್ ಮ್ಯಾರೇಜ್ ಗೆ ಅಂಗೀಕರಿಸಿದೆವು ಎಂದಿದ್ದಾರೆ.

  ಈ ವಿವಾಹಕ್ಕೆ ಮೂವರು ಸಾಕ್ಷಿಗಳು

  ಈ ವಿವಾಹಕ್ಕೆ ಮೂವರು ಸಾಕ್ಷಿಗಳು

  ಈ ವಿವಾಹಕ್ಕೆ ಮೂವರು ಸಾಕ್ಷಿಗಳು ಇದ್ದಾರೆ. ಆ ಸಾಕ್ಷಿಗಳು ಯಾರೆಂದರೆ ಆನಂದ ಸಾಯಿ (ಆರ್ಟ್ ಡೈರೆಕ್ಟರ್), ಎನ್ ಶ್ರೀನಿವಾಸ್ (ಗಬ್ಬರ್ ಸಿಂಗ್ ಚಿತ್ರದಲ್ಲಿ ಮುಸ್ಲಿಂ ಕಾನಿಸ್ಟೇಬರ್ ಪಾತ್ರ ಪೋಷಿಸಿದ್ದ) ಹಾಗೂ ಪವನ್ ಪರ್ಸನಲ್ ಸೆಕ್ರೆಟರಿ ಅಬ್ದುಲ್ ಹನೀಫ್.

  ಆಪ್ತರ ನೇತೃತ್ವದಲ್ಲಿ ಪವನ್ ಮದುವೆ

  ಆಪ್ತರ ನೇತೃತ್ವದಲ್ಲಿ ಪವನ್ ಮದುವೆ

  ಈ ಮದುವೆ ಪವನ್ ಕಲ್ಯಾಣ್ ಅತ್ಯಂತ ಆಪ್ತ ಹಾಗೂ ನಂಬಿಕೆಯ ಶರದ್ ಮರಾರ್ ನೇತೃತ್ವದಲ್ಲಿ ನಡೆದಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಸುದ್ದಿ ಇಲ್ಲ. ಕೇವಲ ಮಾಧ್ಯಮಗಳಲ್ಲಿ ಹಾಗೂ ಫಿಲಂ ಸರ್ಕಲ್ ನಲ್ಲಿ ಕೇಳಿಬರುತ್ತಿರುವ ಮಾತುಗಳು ಎಂಬುದು ನಿಮ್ಮ ಗಮನಕ್ಕಿರಲಿ.

  ಪವನ್ ನಿವಾಸದಲ್ಲೇ ಮದುವೆ ನೆರವೇರಿತ್ತು

  ಪವನ್ ನಿವಾಸದಲ್ಲೇ ಮದುವೆ ನೆರವೇರಿತ್ತು

  ವಿಶ್ವಸನೀಯ ಮೂಲಗಳ ಪ್ರಕಾರ...ಪವನ್ ಅಭಿನಯದ 'ಅತ್ತಾರಿಂಟಿಕಿ ದಾರೇದಿ' ಚಿತ್ರ ಬಿಡುಗಡೆಯಾದ ಎರಡು ದಿನಕ್ಕೆ ಬಂಜಾರಹಿಲ್ಸ್ ರೋಡ್ ನಂಬರ್ 12ರಲ್ಲಿರುವ ಪವನ್ ನಿವಾಸದಲ್ಲಿ ವಿವಾಹ ಕಾರ್ಯಕ್ರಮ ನಡೆದಿದೆ. ಪವನ್ ಗೆ ಅತ್ಯಂತ ಆಪ್ತರಾದ ಕೆಲವೇ ಕೆಲವರ ಸಮ್ಮುಖದಲ್ಲಿ ಈ ಮದುವೆ ನೆರವೇರಿದೆ.

  ಕೆಲ ಸಮಯದಿಂದ ಇಬ್ಬರೂ ಸಹಜೀವನ

  ಕೆಲ ಸಮಯದಿಂದ ಇಬ್ಬರೂ ಸಹಜೀವನ

  ಆಸ್ಟ್ರೇಲಿಯಾ ಪೌರತ್ವ ಪಡೆದಿರುವ ಅನ್ನಾ ಲೆಜ್ ನಿವಾ ಮಾಡೆಲ್, ನಟಿಯಾಗಿ ತನ್ನ ಕೆರಿಯರ್ ಪ್ರಾರಂಭಿಸಿದವರು. ಇವರಿಬ್ಬರೂ ಕೆಲ ಸಮಯದಿಂದ ಸಹಜೀವನ ನಡೆಸುತ್ತಿದ್ದಾರೆ. ಆ ವಿಷಯವನ್ನು ಮದುವೆಗಾಗಿ ಸಲ್ಲಿಸಿರುವ ಅಫಿಡಿವಿಟ್ ನಲ್ಲಿ ಪವನ್ ಸ್ಪಷ್ಟಪಡಿಸಿದ್ದಾರೆ. ಈಗಾಗಲೆ ಇವರಿಬ್ಬರಿಗೂ ಒಂದು ಮಗು ಸಹ ಇದೆ.

  ಸ್ಪೆಷಲ್ ಮ್ಯಾರೇಜ್ ಆಕ್ಟ್ ಪ್ರಕಾರ ಮದುವೆ

  ಸ್ಪೆಷಲ್ ಮ್ಯಾರೇಜ್ ಆಕ್ಟ್ ಪ್ರಕಾರ ಮದುವೆ

  ನೋಟೀಸ್ ನಂಬರ್ 50, ಮ್ಯಾರೇಜ್ ನಂಬರ್ 43ರ ಅಡಿ ಪವನ್ ಕಲ್ಯಾಣ್ ಮದುವೆ ದಾಖಲಾಗಿದೆ. ಅನ್ನಾ ಲೆಜ್ ನಿವಾ ವಿದೇಶಿ ಯುವತಿಯಾದ ಕಾರಣ ಸ್ಪೆಷಲ್ ಮ್ಯಾರೇಜ್ ಆಕ್ಟ್ ಸೆಕ್ಷನ್ 13ರ ಅಡಿ ಪ್ರತ್ಯೇಕ ಪ್ರಮಾಣ ಪತ್ರ ನೀಡಲಾಗಿದೆ.

  ನಂದಿನಿ ಜೊತೆ ಮೊದಲ ಮದುವೆ

  ನಂದಿನಿ ಜೊತೆ ಮೊದಲ ಮದುವೆ

  ಇನ್ನು ಪವನ್ ಕಲ್ಯಾಣ್ ಮೊದಲ ಮದುವೆ ವಿಶಾಖಪಟ್ಟಣಕ್ಕೆ ಸೇರಿದ ನಂದಿನಿ ಜೊತೆ ನಡೆದಿದೆ. ಆಕೆಗೆ ವಿಚ್ಛೇದನ ನೀಡಿದ ಬಳಿಕ ನಟಿ ರೇಣು ದೇಸಾಯ್ ಅವರೊಂದಿಗೆ ಎರಡನೇ ಮದುವೆ ನಡೆಯಿತು. ಈಕೆಯಿಂದಲೂ ಪವನ್ ದೂರವಾಗಿದ್ದು ಈಗ ಲೆಜ್ ನಿವಾ ಜೊತೆ ಮೂರನೇ ಮದುವೆಯಾಗಿದ್ದಾರೆ.

  English summary
  Now the focus is on who are the three eyewitnesses to Pawan Kalyan's most-talked about wedding? Going by sources, noted art director Anand Sai who share a great bond with Pawan Kalyan is one among the three eyewitnesses for Pawan's wedding. Anand has signed as a witness in Registrar office. 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X