ಹಾಲಿವುಡ್‌ಗೆ ಹಾರಲಿದ್ದಾರೆ ಪ್ರಭಾಸ್: 'ಮಿಶನ್ ಇಂಪಾಸಿಬಲ್' ಅಥವಾ 'ಅವೆಂಜರ್ಸ್'?

ಪ್ರಸ್ತುತ ಭಾರತ ಸಿನಿಮಾ ರಂಗದ ಅತಿ ದೊಡ್ಡ ಸ್ಟಾರ್‌ಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ ಪ್ರಭಾಸ್. 'ಬಾಹುಬಲಿ' ನಟನಿಗೆ ಭಾರತದಲ್ಲಿ ಮಾತ್ರವೇ ಅಲ್ಲ ವಿದೇಶದಲ್ಲಿ ಅತಿ ದೊಡ್ಡ ಅಭಿಮಾನಿ ಬಳಗವಿದೆ. ವಿದೇಶದಲ್ಲಿಯೂ ಪ್ರಭಾಸ್ ಮಾರುಕಟ್ಟೆ ಬಹಳ ದೊಡ್ಡದು.

ಕತೆಗಿಂತಲೂ ಮೊದಲು ಮಾರುಕಟ್ಟೆ ವಿಶ್ಲೇಷಣೆ ನಡೆಸಿ ಸಿನಿಮಾ ಮಾಡುವ ಕಾಲಘಟ್ಟದಲ್ಲಿ ವಿಶ್ವ ಸಿನಿಮಾ ರಂಗ ಇಂದು ಇದೆ. ಹಲವು ದೇಶಗಳಿಂದ ಆಯಾ ದೇಶದ ಒಬ್ಬೊಬ್ಬ ಸ್ಟಾರ್‌ಗಳನ್ನು ಆರಿಸಿ ಅವರನ್ನೆಲ್ಲ ಸೇರಿಸಿ ಒಂದು ಸಿನಿಮಾ ಮಾಡಿ ದೊಡ್ಡ ಮಾರುಕಟ್ಟೆಗೆ ಸಿನಿಮಾ ಬಿಡುಗಡೆ ಮಾಡಿ ದೊಡ್ಡ ಲಾಭ ದೋಚುವುದು ಈಗಿನ ಹೊಸ ಮಾರುಕಟ್ಟೆ ಟ್ರೆಂಡ್.

ಫಾಸ್ಟ್ ಆಂಡ್ ಫ್ಯೂರಿಯಸ್, ಮಿಷನ್ ಇಂಪಾಸಿಬಲ್, ಜೇಮ್ಸ್ ಬಾಂಡ್ ಸಿನಿಮಾಗಳಲ್ಲಿ ಈ ತಂತ್ರ ಸಾಮಾನ್ಯ. ಡಿಸಿ, ಫಾಕ್ಸ್‌ ಸ್ಟುಡಿಯೋಸ್ ಅಂಥಹಾ ದೊಡ್ಡ ನಿರ್ಮಾಣ ಸಂಸ್ಥೆಗಳು ಈಗಾಗಲೇ ಈ ರೀತಿಯ ಕೆಲವು ಪ್ರಯತ್ನಗಳನ್ನು ಮಾಡಿವೆ. ಭಾರತದ ಕೆಲವು ನಟ-ನಟಿಯರು ಇದೇ ಕಾರಣಕ್ಕೆ ವಿದೇಶದ ದೊಡ್ಡ ಸಿನಿಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಪ್ರಭಾಸ್‌ಗಿರುವ ದೊಡ್ಡ ಮಾರುಕಟ್ಟೆಯನ್ನು ಗುರುತಿಸಿರುವ ವಿದೇಶಿ ಸಿನಿಮಾ ಸಂಸ್ಥೆಗಳು ಪ್ರಭಾಸ್ ಅನ್ನು ತಮ್ಮ ಸಿನಿಮಾಕ್ಕೆ ಸೆಳೆದುಕೊಳ್ಳುವ ಪ್ರಯತ್ನದಲ್ಲಿದ್ದಾವೆ.

'ಮಿಷನ್ ಇಂಪಾಸಿಬಲ್ 7' ನಲ್ಲಿ ಪ್ರಭಾಸ್?

'ಮಿಷನ್ ಇಂಪಾಸಿಬಲ್ 7' ನಲ್ಲಿ ಪ್ರಭಾಸ್?

ಇದೀಗ ಬಂದಿರುವ ಹೊಸ ಸುದ್ದಿಯೆಂದರೆ ಜಗದ್ವಿಖ್ಯಾತ 'ಮಿಷನ್ ಇಂಪಾಸಿಬಲ್' ಸಿನಿಮಾ ಸರಣಿಯ ಚಿತ್ರತಂಡವು ಪ್ರಸ್ತುತ ಚಿತ್ರೀಕರಣ ಆಗುತ್ತಿರುವ 'ಮಿಷನ್ ಇಂಪಾಸಿಬಲ್ 7' ಸಿನಿಮಾದ ಒಂದು ಪ್ರಮುಖ ಪಾತ್ರಕ್ಕಾಗಿ ಪ್ರಭಾಸ್ ಅನ್ನು ಸಂಪರ್ಕಿಸಿದೆ ಎನ್ನಲಾಗುತ್ತಿದೆ. ಈ ಕುರಿತ ಪೋಸ್ಟ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮಿಷನ್ ಇಂಪಾಸಿಬಲ್ ಬೇರೆ-ಬೇರೆ ದೇಶಗಳ ನಟರನ್ನು ಸಿನಿಮಾದಲ್ಲಿ ಹಾಕಿಕೊಳ್ಳುವುದು ಸಾಮಾನ್ಯ. ಇದೇ ಸಿನಿಮಾ ಸರಣಿಯಲ್ಲಿ ಅನಿಲ್ ಕಪೂರ್ ಒಮ್ಮೆ ನಟಿಸಿದ್ದರು.

ಹೆಚ್ಚು ಆಸಕ್ತಿ ತೋರುತ್ತಿಲ್ಲ ಪ್ರಭಾಸ್

ಹೆಚ್ಚು ಆಸಕ್ತಿ ತೋರುತ್ತಿಲ್ಲ ಪ್ರಭಾಸ್

'ಮಿಷನ್ ಇಂಪಾಸಿಬಲ್' ಮಾತ್ರವಲ್ಲದೆ ಪ್ರಭಾಸ್ ಅನ್ನು ಇನ್ನೂ ಕೆಲವು ವಿದೇಶಿ ಸಿನಿಮಾ ನಿರ್ಮಾಣ ಸಂಸ್ಥೆಗಳು ಸಂಪರ್ಕ ಮಾಡಿವೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ. ಆದರೆ ಪ್ರಭಾಸ್, ಈ ಅವಕಾಶಗಳ ಬಗ್ಗೆ ಹೆಚ್ಚು ಆಸಕ್ತಿವಹಿಸುತ್ತಿಲ್ಲ. ಪ್ರಸ್ತುತ ಭಾರತದಲ್ಲಿ ಅತ್ಯಂತ ಟಾಪ್ ಹೀರೋ ಆಗಿರುವ ಪ್ರಭಾಸ್ ಭಾರತೀಯ ಸಿನಿಮಾರಂಗಕ್ಕಷ್ಟೆ ತಮ್ಮನ್ನು ಸೀಮಿತಗೊಳಿಸಿಕೊಳ್ಳುವ ಉಮೇದಿನಲ್ಲಿರುವಂತಿದೆ.

ಅವೆಂಜರ್ಸ್‌ನಲ್ಲಿ ಪ್ರಭಾಸ್

ಅವೆಂಜರ್ಸ್‌ನಲ್ಲಿ ಪ್ರಭಾಸ್

'ಬಾಹುಬಲಿ' ಅಂಥಹಾ ಸೂಪರ್ ಹೀರೋ ಮಾದರಿಯ ಫಿಕ್ಷನಲ್ ಕ್ಯಾರೆಕ್ಟರ್‌ ಮಾಡಿರುವ ಪ್ರಭಾಸ್ ಅನ್ನು ಅತಿ ಮಾನುಷ ಶಕ್ತಿಯುಳ್ಳ ಪಾತ್ರಗಳುಳ್ಳ 'ಅವೆಂಜರ್ಸ್' ತಂಡಕ್ಕೆ ಸೇರಿಸಿಕೊಳ್ಳಿ ಎಂದು ಸಹ ಪ್ರಭಾಸ್ ಅಭಿಮಾನಿಗಳು ಒತ್ತಾಯಿಸಿದ್ದಾರೆ. 'ಅವೆಂಜರ್ಸ್' ಚಿತ್ರದ ಜೊತೆಗೆ ಪ್ರಭಾಸ್‌ರ 'ಬಾಹುಬಲಿ' ಚಿತ್ರವನ್ನು ಸೇರಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.

'ದಿ ಗ್ರೇ ಮ್ಯಾನ್' ಸಿನಿಮಾದಲ್ಲಿ ಧನುಷ್ ನಟನೆ

'ದಿ ಗ್ರೇ ಮ್ಯಾನ್' ಸಿನಿಮಾದಲ್ಲಿ ಧನುಷ್ ನಟನೆ

ಇನ್ನು ತಮಿಳಿನ ನಟ ಧನುಷ್ ಈಗಾಗಲೇ ಹಾಲಿವುಡ್‌ಗೆ ಹಾರಿದ್ದಾರೆ. ಅಮೇಂಜರ್ಸ್‌ನ ಎರಡು ಸಿನಿಮಾ, 'ಕ್ಯಾಪ್ಟನ್ ಅಮೆರಿಕ' ಸರಣಿಯ ಎರಡು ಸಿನಿಮಾ ನಿರ್ದೇಶಿಸಿರುವ ರುಸ್ಸೊ ಸಹೋದರರ ಮುಂದಿನ ಸಿನಿಮಾ 'ದಿ ಗ್ರೇ ಮ್ಯಾನ್'ನಲ್ಲಿ ಧನುಷ್ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ 'ಕ್ಯಾಪ್ಟನ್ ಅಮೆರಿಕ' ಖ್ಯಾತಿಯ ಕ್ರಿಸ್ ರಾಜರ್ಸ್ ಹಾಗೂ 'ದಿ ನೋಟ್‌ಬುಕ್' ಖ್ಯಾತಿಯ ರ್ಯಾನ್ ಗೋಸ್ಲಿಂಗ್, ಬಾಂಡ್ ಸಿನಿಮಾದಲ್ಲಿ ನಟಿಸಿರುವ ನಟಿ ಅನ್ನಾ ಡೆ ಅರ್ಮಾಸ್, 'ಸ್ಟಾರ್ ವಾರ್ಸ್', 'ದಿ ಮ್ಯಾಟ್ರಿಕ್ಸ್‌'ನಲ್ಲಿ ನಟಿಸಿರುವ ಜೆಸ್ಸಿಕಾ ಹೆನ್‌ವಿಕ್ ನಟಿಸಿದ್ದಾರೆ. ಧನುಷ್ ಮಾತ್ರವಲ್ಲದೆ ಹಲವು ಭಾರತೀಯ ನಟ-ನಟಿಯರು ವಿದೇಶಿ ಸಿನಿಮಾಗಳಲ್ಲಿ ಇತ್ತೀಚೆಗೆ ನಟಿಸಿದ್ದಾರೆ ಮತ್ತು ನಟಿಸುತ್ತಿದ್ದಾರೆ.

More from Filmibeat

English summary
Actor Prabhas getting movie offers from Hollywood. News spreading that Mission Impossible team contacted him.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X