For Quick Alerts
  ALLOW NOTIFICATIONS  
  For Daily Alerts

  ನಟ ಪ್ರಭಾಸ್ ಮುಂದಿನ ಸಿನಿಮಾಗೆ ಪ್ರಶಾಂತ್ ನೀಲ್ ನಿರ್ದೇಶನ.!

  By ಫಿಲ್ಮ್ ಡೆಸ್ಕ್
  |

  'ಕೆಜಿಎಫ್' ಸಿನಿಮಾ ಮೂಲಕ ಭಾರತೀಯ ಚಿತ್ರರಂಗದ ಗಮನ ಸೆಳೆಯುತ್ತಿರುವ ನಿರ್ದೇಶಕ ಪ್ರಶಾಂತ್ ನೀಲ್ ಮತ್ತೆ ಸುದ್ದಿಯಲ್ಲಿದ್ದಾರೆ. ಸದ್ಯ ಕೆಜಿಎಫ್-2 ಸಿನಿಮಾದಲ್ಲಿ ಬ್ಯುಸಿಯಾಗಿರುವ ಪ್ರಶಾಂತ್ ನೀಲ್ ಮುಂದಿನ ಸಿನಿಮಾದ ಬಗ್ಗೆ ಚರ್ಚೆ ಜೋರಾಗಿ ನಡೆಯುತ್ತಿದೆ. ಅಂದ್ಹಾಗೆ ಪ್ರಶಾಂತ್ ನೀಲ್ ಕೆಜಿಎಫ್ ಸಿನಿಮಾ ಬಳಿಕ ತೆಲುಗು ಸ್ಟಾರ್ ಜೂ.ಎನ್ ಟಿ ಆರ್ ಜೊತೆ ಸಿನಿಮಾ ಮಾಡುವುದು ಬಹುತೇಕ ಖಚಿತವಾಗಿದೆ.

  Upendra as college student I love you behind the scenes | Filmibeat Kannada

  ಆದರೆ ಈ ನಡುವೆ ಪ್ರಶಾಂತ್ ತೆಲುಗಿನ ಮತ್ತೋರ್ವ ಸ್ಟಾರ್ ನಟನಿಗೆ ಆಕ್ಷನ್ ಕಟ್ ಹೇಳಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಹೌದು, ಬಾಹುಬಲಿ ನಟ ಪ್ರಭಾಸ್ ಜೊತೆ ಪ್ರಶಾಂತ್ ನೀಲ್ ಸಿನಿಮಾ ಮಾಡುತ್ತಿದ್ದಾರಂತೆ. ಈಗಾಗಲೆ ಸಿನಿಮಾದ ಬಗ್ಗೆ ಇಬ್ಬರ ನಡುವೆ ಮಾತುಕತೆ ಕೂಡ ನಡೆದಿದೆ ಎನ್ನುವ ಇಂಟರೆಸ್ಟಿಂಗ್ ಮಾಹಿತಿ ಹೊರಬಿದ್ದಿದೆ. ಮುಂದೆ ಓದಿ..

  ಸುಶಾಂತ್ ಆತ್ಮಹತ್ಯೆ ಪರಿಣಾಮ ಪ್ರಭಾಸ್‌ಗೆ ಆಯ್ತು ದೊಡ್ಡ ನಷ್ಟ!

  ಪ್ರಭಾಸ್ ಗೆ ಪ್ರಶಾಂತ್ ನೀಲ್ ನಿರ್ದೇಶನ

  ಪ್ರಭಾಸ್ ಗೆ ಪ್ರಶಾಂತ್ ನೀಲ್ ನಿರ್ದೇಶನ

  ಪ್ರಶಾಂತ್ ನೀಲ್ ನಿರ್ದೇಶನದ ಚೊಚ್ಚಲ ಸಿನಿಮಾ ಉಗ್ರಂ ಬಳಿಕ ಪ್ರಭಾಸ್ ಜೊತೆ ಸಿನಿಮಾ ಮಾಡುವ ಪ್ಲಾನ್ ಇತ್ತಂತೆ. ಅಲ್ಲದೆ ಪ್ರಭಾಸ್ ಜೊತೆ ಮಾತುಕತೆ ಕೂಡ ನಡೆಸಿದ್ದರಂತೆ. ಆದರೆ ಕಾರ್ಯರೂಪಕ್ಕೆ ಬಂದಿರಲಿಲ್ಲ. ಈಗ ಇಬ್ಬರ ಕಾಂಬಿನೇಷನ್ ನಲ್ಲಿ ಸಿನಿಮಾ ಮೂಡಿ ಬರುತ್ತಿರುವುದು ಬಹುತೇಕ ಖಚಿತ ಎನ್ನುತ್ತಿವೆ ಮೂಲಗಳು.

  ಭೂಗತ ಲೋಕದ ಮಾಫಿಯಾದ ಕಥೆ

  ಭೂಗತ ಲೋಕದ ಮಾಫಿಯಾದ ಕಥೆ

  ಪ್ರಭಾಸ್ 22ನೇ ಸಿನಿಮಾ ಇದಾಗಲಿದ್ದು, ಆಕ್ಷನ್ ಥ್ರಿಲ್ಲರ್ ಸಿನಿಮಾವಾಗಿದೆಯಂತೆ. ಭೂಗತ ಲೋಕದ ಮಾಫಿಯಾದ ಸುತ್ತ ಸುತ್ತುವ ಕಥೆ ಇದಾಗಿದ್ದು, ಪ್ರಭಾಸ್ ಸಿನಿಮಾದಲ್ಲಿ ಸಾಮಾನ್ಯ ಜನರ ಹಕ್ಕುಗಳಿಗಾಗಿ ಹೋರಾಡುವ ನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ.

  ಕೆಜಿಎಫ್ ಚಾಪ್ಟರ್ 2 ಚಿತ್ರದ ಕ್ಲೈಮ್ಯಾಕ್ಸ್ ಲೀಕ್?: ದುರಂತ ಅಂತ್ಯ ಕಾಣಲಿದ್ದಾನಾ ರಾಕಿ ಭಾಯ್?

  2022ಕ್ಕೆ ಸಿನಿಮಾ ಸೆಟ್ಟೇರುವ ಸಾಧ್ಯತೆ

  2022ಕ್ಕೆ ಸಿನಿಮಾ ಸೆಟ್ಟೇರುವ ಸಾಧ್ಯತೆ

  ಪ್ರಭಾಸ್ ಸದ್ಯ ರಾಧೆ ಶ್ಯಾಮ್ ಮತ್ತು ಇನ್ನೂ ಹೆಸರಿಡದ ನಾಗ್ ಅಶ್ವಿನ್ ಸಿನಿಮಾದಲ್ಲಿ ಸಿನಿಮಾದಲ್ಲಿ ಬ್ಯುಸಿಯಾಗಲಿದ್ದಾರೆ. ಈ ಬಳಿಕ ಪ್ರಶಾಂತ್ ನೀಲ್ ಮತ್ತು ಪ್ರಭಾಸ್ ಸಿನಿಮಾ ಸೆಟ್ಟೇರಲಿದೆ. ಅಂದ್ಹಾಗೆ ವರದಿಗಳ ಪ್ರಕಾರ ಇಬ್ಬರ ಬಹುನಿರೀಕ್ಷೆಯ ಸಿನಿಮಾ 2022ಕ್ಕೆ ಸೆಟ್ಟೇರುವ ಸಾಧ್ಯತೆ ಇದೆಯಂತೆ.

  ಜೂ.ಎನ್ ಟಿ ಆರ್ ಜೊತೆ ಪ್ರಶಾಂತ್ ನೀಲ್ ಸಿನಿಮಾ

  ಜೂ.ಎನ್ ಟಿ ಆರ್ ಜೊತೆ ಪ್ರಶಾಂತ್ ನೀಲ್ ಸಿನಿಮಾ

  ಪ್ರಶಾಂತ್ ನೀಲ್ ಕೆಜಿಎಫ್-2 ಸಿನಿಮಾ ಬಳಿಕ ಜೂ.ಎನ್ ಟಿ ಆರ್ ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೆ ಪ್ರಶಾಂತ್ ಮತ್ತು ಜೂ ಎನ್ ಟಿ ಆರ್, ಸಿನಿಮಾದ ಬಗ್ಗೆ ನಿರೀಕ್ಷೆ ದುಪ್ಪಟ್ಟಾಗಿದೆ. ಈ ಸಿನಿಮಾ ಮುಗಿದ ಬಳಿಕ ಪ್ರಶಾಂತ್ ಪ್ರಭಾಸ್ ಗೆ ನಿರ್ದೇಶನ ಮಾಡಲು ಸಜ್ಜಾಗಲಿದ್ದಾರೆ. ಆದರೆ ಈ ಬಗ್ಗೆ ಪ್ರಭಾಸ್ ಆಗಲಿ ಅಥವಾ ಪ್ರಶಾಂತ್ ನೀಲ್ ಆಗಲಿ ಯಾವುದೆ ಮಾಹಿತಿ ರಿವೀಲ್ ಮಾಡಿಲ್ಲ.

  English summary
  Tollywood Actor Prabhas in KGF Director Prashant Neel's next for Acttion Thriller.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X