For Quick Alerts
  ALLOW NOTIFICATIONS  
  For Daily Alerts

  ಯುವನಟಿಯ ನಟನೆಯನ್ನು ಹೊಗಳಿದ ನಟ ಪ್ರಭಾಸ್

  |

  ನಟ ಪ್ರಭಾಸ್ ಮಾತನಾಡುವುದು ಬಹಳ ಕಡಿಮೆ. ಸಂದರ್ಶನಗಳಲ್ಲಿ ಭಾಗವಹಿಸುವುದು ಸಹ ಕಡಿಮೆಯೇ, ಸಂದರ್ಶನಗಳಲ್ಲಿಯೂ ಸಿನಿಮಾದ ಬಗ್ಗೆ ಬಿಟ್ಟರೆ ಬೇರೆ ವಿಷಯಗಳ ಬಗ್ಗೆ ಮಾತನಾಡುವುದಿಲ್ಲ.

  ಸಂಕೋಚ ಸ್ವಭಾವದ ಪ್ರಭಾಸ್ ಸಹ ನಟರನ್ನು ಹೊಗಳುವ ವಿಷಯದಲ್ಲಿ ತುಸು ಧಾರಾಳಿ. ಇತ್ತೀಚೆಗಷ್ಟೆ ಸಹ ನಟಿ ಪೂಜಾ ಹೆಗ್ಡೆಯ ನಟನಾ ಪ್ರತಿಭೆಯನ್ನು ಕೊಂಡಾಡಿದ್ದಾರೆ ಪ್ರಭಾಸ್.

  ಪ್ರಭಾಸ್ ಹಾಗೂ ಪೂಜಾ ಹೆಗ್ಡೆ 'ರಾಧೆ-ಶ್ಯಾಮ್' ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದಾರೆ. ಸಿನಿಮಾ ಇನ್ನೂ ಬಿಡುಗಡೆ ಆಗಿಲ್ಲ. ಆದರೆ ಅದಕ್ಕೆ ಮುಂಚೆಯೇ ಕೆಲವು ಮುಖ್ಯ ವ್ಯಕ್ತಿಗಳೊಟ್ಟಿಗೆ ಕುಳಿತು 'ರಾಧೆ-ಶ್ಯಾಮ್' ಸಿನಿಮಾವನ್ನು ನೋಡಿದ್ದಾರೆ ಪ್ರಭಾಸ್.

  ಸಿನಿಮಾದಲ್ಲಿ ಪೂಜಾ ಹೆಗ್ಡೆ ಪಾತ್ರ ಪ್ರಭಾಸ್‌ಗೆ ಫೇವರಿಟ್ ಆಗಿದೆಯಂತೆ. ಪಾತ್ರದಲ್ಲಿ ಪೂಜಾ ಹೆಗ್ಡೆ ನಟಿಸುವ ರೀತಿಯನ್ನು ಸಹ ಬಹುವಾಗಿ ಮೆಚ್ಚಿಕೊಂಡಿದ್ದಾರೆ ಪ್ರಭಾಸ್. ಪೂಜಾಗೆ ಕರೆ ಮಾಡಿ ಅಭಿನಂದನೆಗಳನ್ನು ಸಹ ತಿಳಿಸಿದ್ದಾರಂತೆ.

  ಅಪ್ಪಟ ಪ್ರೇಮಕತೆ 'ರಾಧೆ-ಶ್ಯಾಮ್'

  ಅಪ್ಪಟ ಪ್ರೇಮಕತೆ 'ರಾಧೆ-ಶ್ಯಾಮ್'

  'ರಾಧೆ-ಶ್ಯಾಮ್' ಸಿನಿಮಾ ಅಪ್ಪಟ ಪ್ರೇಮಕತೆಯಾಗಿದ್ದು ಸಿನಿಮಾವನ್ನು ಯೂರೋಪ್ ದೇಶಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಸಿನಿಮಾದಲ್ಲಿ 60 ರ ದಶಕದ ಪ್ಯಾರಿಸ್, ಇಟಲಿಗಳನ್ನು ತೋರಿಸಲಾಗಿದ್ದು, ಆಗಿನ ಕಾಲದ ಐಶಾರಾಮಿ ಹಡುಗು, ರೈಲುಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಇವು ಸಿನಿಮಾದ ಹೈಲೆಟ್ ಅಂತೆ.

  ಒಂದು ಹಾಡಿನ ಚಿತ್ರೀಕರಣ ಬಾಕಿ ಇದೆ

  ಒಂದು ಹಾಡಿನ ಚಿತ್ರೀಕರಣ ಬಾಕಿ ಇದೆ

  'ರಾಧೆ-ಶ್ಯಾಮ್' ಸಿನಿಮಾದ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಸಹ ಬಹುತೇಕ ಮುಗಿದಿದೆ. ಆದರೆ ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಇದೆ. ಈ ಹಾಡನ್ನು ಹೈದರಾಬಾದ್‌ನಲ್ಲಿಯೇ ಸೆಟ್‌ ಹಾಕಿ ಚಿತ್ರೀಕರಣ ಮಾಡಲು ಯೋಚಿಸಲಾಗಿತ್ತು. ಆದರೆ ಆ ವೇಳೆಗಾಗಲೆ ಲಾಕ್‌ಡೌನ್ ಆದ ಕಾರಣ ಚಿತ್ರೀಕರಣ ನಡೆದಿಲ್ಲ.

  ಸಲಾರ್, ಆದಿಪುರುಷ್‌ನಲ್ಲಿ ನಟನೆ

  ಸಲಾರ್, ಆದಿಪುರುಷ್‌ನಲ್ಲಿ ನಟನೆ

  ಪ್ರಭಾಸ್, ಪ್ರಸ್ತುತ ಕನ್ನಡಿಗ ಪ್ರಶಾಂತ್ ನೀಲ್ ನಿರ್ದೇಶಿಸುತ್ತಿರುವ 'ಸಲಾರ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಭಾರತದ ಅತಿ ದೊಡ್ಡ ಬಜೆಟ್‌ ಸಿನಿಮಾ 'ಆದಿಪುರುಷ್‌'ನಲ್ಲಿ ನಟಿಸುತ್ತಿದ್ದಾರೆ. ಇದನ್ನು ಓಂ ರಾವತ್ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾಗಳ ಬಳಿಕ ನಾಗ್ ಅಶ್ವಿನ್ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದಾರೆ. ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ನಾಯಕಿ.

  ಸಲ್ಮಾನ್ ಖಾನ್‌ ಜೊತೆ ನಟಿಸಲಿರುವ ಪೂಜಾ

  ಸಲ್ಮಾನ್ ಖಾನ್‌ ಜೊತೆ ನಟಿಸಲಿರುವ ಪೂಜಾ

  ಇನ್ನು ನಟಿ ಪೂಜಾ ಹೆಗ್ಡೆ ತೆಲುಗಿನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಸತತ ಹಿಟ್‌ ಸಿನಿಮಾಗಳನ್ನು ನೀಡುತ್ತಿರುವ ಪೂಜಾ ಹೆಗ್ಡೆಯ ಮೂಲ ಕರ್ನಾಟಕ. ಹಿಂದಿ, ತೆಲುಗು ಎರಡೂ ಭಾಷೆಗಳಲ್ಲಿ ಬ್ಯುಸಿಯಾಗಿರುವ ಪೂಜಾ ಕೈಲಿ ಈಗ ಐದು ಬಿಗ್‌ ಬಜೆಟ್ ಸಿನಿಮಾಗಳಿವೆ. ಹಿಂದಿಯಲ್ಲಿ ಸಲ್ಮಾನ್ ಖಾನ್‌ ಜೊತೆಗೂ ನಟಿಸುತ್ತಿದ್ದಾರೆ ಪೂಜಾ.

  English summary
  Actor Prabhas praised his co star Pooja Hegde's acting in Radhe Shyam movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X