prabhas: ಶಸ್ತ್ರ ಚಿಕಿತ್ಸೆಗಾಗಿ ವಿದೇಶಕ್ಕೆ ಹಾರಿದ ಪ್ರಭಾಸ್: ಶೂಟಿಂಗ್ ವೇಳೆ ಗಾಯ!
ನಟ ಪ್ರಭಾಸ್ ಅಭಿನಯದ 'ರಾಧೆಶ್ಯಾಮ್' ಸಿನಿಮಾ ಬಳಿಕ ಈಗ ಪ್ರಭಾಸ್ ನಾಪತ್ತೆ ಆಗಿದ್ದಾರೆ. ಸಿನಿಮಾಗೆ ಸಿಕ್ಕ ಪ್ರತಿಕ್ರಿಯೆ ಕಂಡು ನಟ ಪ್ರಭಾಸ್ ಬೇಸರವಾಗಿದ್ದಾರೆ. ಹಾಗಾಗಿ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ ಎನ್ನಲಾಗಿತ್ತು. ಆದರೆ ಕಾರಣ ಬೇರೆನೇ ಇದೆ. ನಟ ಪ್ರಭಾಸ್ ಅರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಸದ್ಯ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಪ್ರಭಾಸ್ ಆರೋಗ್ಯ ಸಮಸ್ಯೆಯಿಂದಾಗಿ ಚಿಕಿತ್ಸೆ ಪಡೆಯಲು ವಿದೇಶಕ್ಕೆ ಹಾರಿದ್ದಾರೆ. ಚಿಕಿತ್ಸೆಗಾಗಿ ಪ್ರಭಾಸ್ ಸ್ಪೇನ್‌ಗೆ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಕೆಲವು ದಿನಗಳ ಹಿಂದೆ ಪ್ರಭಾಸ್ 'ಸಲಾರ್' ಚಿತ್ರದ ಶೂಟಿಂಗ್ ವೇಳೆ ಗಾಯಗೊಂಡಿದ್ದರು. ಆಗ ಬಾರ್ಸಿಲೋನಾದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ಈಗ ಅದೇ ಸಮಸ್ಯೆಯಿಂದ ಪ್ರಭಾಸ್ ಶಸ್ತ್ರ ಚಿಕಿತ್ಸೆ ಪಡೆಯಬೇಕಾಗಿದೆ. ಹಾಗಾಗಿ ಸ್ಪೇನ್‌ಗೆ ಹಾರಿದ್ದಾರೆ. ಇದು ಅಷ್ಟೇನು ಗಂಭೀರವಾದ ಶಸ್ತ್ರಚಿಕಿತ್ಸೆ ಅಲ್ಲ. ಬದಲಿಗೆ ಚಿಕ್ಕದಾದ ಸರ್ಜರಿ ಅಂತೆ. ಆದರೂ ಕೂಡ ವೇಗವಾಗಿ ಗುಣಮುಖರಾಗಲು ಹೆಚ್ಚು ಕಾಲ ವಿಶ್ರಾಂತಿಯ ಅಗತ್ಯ ಇದೆಯಂತೆ. ಇನ್ನು ಸ್ಪೇನ್‌ಗೆ ಭೇಟಿ ನೀಡಿರುವ ಪ್ರಭಾಸ್‌ರನ್ನು ನೋಡಲು ಅಭಿಮಾನಿಗಳು ಮುತ್ತಿಕೊಂಡಿರುವುದಾಗಿ ವರದಿ ಆಗಿದೆ.

ನಟ ಪ್ರಭಾಸ್‌ಗೆ ಸರ್ಜರಿಯ ಬಳಿಕ ಹೆಚ್ಚಿನ ವಿಶ್ರಾಂತಿಯ ಅಗತ್ಯ ಇದೆಯಂತೆ. ಹಾಗಾಗಿ ಅವರು ಸದ್ಯಕ್ಕೆ ಸಲಾರ್ ಚಿತ್ರದ ಶೂಟಿಂಗ್‌ನಲ್ಲಿ ಭಾಗಿ ಆಗುವುದಿಲ್ಲ. ಹಾಗಾಗಿ ಸಿನಿಮಾದ ಶೂಟಿಂಗ್ ಮುಗಿಯುವುದು ಮತ್ತಷ್ಟು ತಡವಾಗಲಿದೆ ಎನ್ನಲಾಗುತ್ತಿದೆ. ಇದನ್ನು ಬಿಟ್ಟರೆ ನಟ ಪ್ರಭಾಸ್ 'ಪ್ರಾಜೆಕ್ಟ್ ಕೆ' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.
ನಟ ಪ್ರಭಾಸ್ ಕೈಯಲ್ಲಿ ಸಾಲು, ಸಾಲು ಸಿನಿಮಾಗಳು ಇವೆ. ಬಾಹುಬಲಿ ಚಿತ್ರದ ಬಳಿಕ ನಟನಿಗೆ ಎಲ್ಲಿಲ್ಲದ ಬೇಡಿಕೆ ಬಂದು ಬಿಟ್ಟಿದೆ. ಪ್ರಭಾಸ್ ಮುಂದಿನ ಎಲ್ಲಾ ಚಿತ್ರಗಳು ಪ್ಯಾನ್ ಇಂಡಿಯಾ ಚಿತ್ರಗಳಾಗಿವೆ. 'ಸಲಾರ್', 'ಆದಿಪುರುಷ್', 'ಪ್ರಾಜೆಕ್ಟ್ ಕೆ', 'ಸ್ಪಿರಿಟ್' ಮತ್ತು ನಿರ್ದೇಶಕ ಮಾರುತಿ ಸಿನಿಮಾಗಳು ಪ್ರಭಾಸ್ ಕೈಯಲ್ಲಿ ಇವೆ.


Click it and Unblock the Notifications











