For Quick Alerts
  ALLOW NOTIFICATIONS  
  For Daily Alerts

  'ಯುವ ರಾಜ್‌ಕುಮಾರ್' ಲಾಂಚಿಂಗ್ ಚಿತ್ರ ಬದಾವಣೆ: ಸಂತೋಷ್ ಆನಂದ್‌ರಾಮ್ ಎಂಟ್ರಿ!

  |

  ಕನ್ನಡ ಚಿತ್ರ ರಂಗದಲ್ಲಿ ಮತ್ತೊಬ್ಬ ಸ್ಟಾರ್‌ ಎಂಟ್ರಿಗೆ ವೇದಿಕೆ ಸಜ್ಜಾಗಿದೆ. ರಾಜ್‌ಕುಮಾರ್‌ ಮೊಮ್ಮಗ, ರಾಘವೇಂದ್ರ ರಾಜ್‌ಕುಮಾರ್ ಕಿರಿಯ ಪುತ್ರ ಯುವ ರಾಜ್‌ಕುಮಾರ್ ಸಿನಿಮಾ ರಂಗಕ್ಕೆ ಭರ್ಜರಿ ಎಂಟ್ರಿ ಕೊಡಲು ತಯಾರಿ ನಡೆಸುತ್ತಿದ್ದಾರೆ. ಈಗಾಗಲೇ ಅವರ ಮೊದಲ ಚಿತ್ರ ಯುವ ಚಿತ್ರದ, ಪೋಸ್ಟರ್ ಲುಕ್ ಲಾಂಚ್‌ ಆಗಿದೆ.

  ಆದರೆ ಈಗ ಗಾಂಧಿನಗರದಲ್ಲಿ ಹೊಸ ಸುದ್ದಿ ಹಬ್ಬಿದೆ. ಯುವ ರಾಜ್‌ಕುಮಾರ್‌ ಅವರ ಮೊದಲ ಚಿತ್ರ 'ಯುವ ರಣಧೀರ ಕಂಠೀರವ' ಚಿತ್ರ ಅಲ್ಲವಂತೆ. ಈ ಚಿತ್ರಕ್ಕೂ ಮೊದಲು ಮತ್ತೊಂದು ಚಿತ್ರ ಬರಲಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಅಷ್ಟೇ ಅಲ್ಲ ಯುವರಾಜನನ್ನು ಲಾಂಚ್ ಮಾಡುವುದು 'ಯುವ' ಚಿತ್ರ ಮೂಲಕ ಅಲ್ಲ ಎನ್ನಲಾಗುತ್ತಿದೆ.

  ಈ ವಿಚಾರದಲ್ಲಿ ನಿರ್ದೇಶಕ ಸಂತೋಷ್ ಆನಂದ್‌ ರಾಮ್ ಹೆಸರು ಕೇಳಿ ಬರುತ್ತಿದೆ. ಯುವ ರಾಜ್‌ಕುಮಾರ್‌ ಅವರ ಮೊದಲ ಚಿತ್ರವನ್ನು ಸಂತೋಷ್‌ ಆನಂದ್‌ ರಾಮ್‌ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗುತ್ತಿದೆ.

  ದೊಡ್ಮನೆ ಮೊಮ್ಮಗನ ಲಾಂಚಿಂಗ್ ಚಿತ್ರ ಬದಲಾವಣೆ!

  ದೊಡ್ಮನೆ ಮೊಮ್ಮಗನ ಲಾಂಚಿಂಗ್ ಚಿತ್ರ ಬದಲಾವಣೆ!

  ಹೀಗೊಂದು ಸುದ್ದಿ ಗಾಂಧಿ ನಗರದಲ್ಲಿ ಓಡಾಡುತ್ತಿದೆ. ಯುವ ರಾಜ್‌ಕುಮಾರ್ ಮೊದಲ ಚಿತ್ರವನ್ನು ನಿರ್ದೇಶಕ ಸಂತೋಷ್‌ ಆನಂದ್ ರಾಮ್‌ ಮಾಡಲಿದ್ದಾರಂತೆ. ಸಂತೋಷ್‌ ಆನಂದ್‌ರಾಮ್‌ ನಿರ್ದೇಶನದಲ್ಲೇ ಯುವ ರಾಜ್‌ಕುಮಾರ್ ಲಾಂಚ್ ಆಗಲಿದ್ದಾರಂತೆ. ಈಗಾಗಲೇ ಈ ಬಗ್ಗೆ ಮಾತು ಕತೆ ಕೂಡ ಆಗಿದೆಯಂತೆ. ಈ ಬಗ್ಗೆ ಅಧಿಕೃತವಾಗಿ ಚಿತ್ರ ತಂಡ ಹೇಳದೇ ಹೋದರೂ ಗಾಂಧಿ ನಗರದಲ್ಲಿ ಗುಸು, ಗುಸು ಹಬ್ಬಿದೆ.

  ಪುನೀತ್ ರಾಜ್‌ಕುಮಾರ್ ಹುಟ್ಟು ಹಬ್ಬಕ್ಕೆ ಚಿತ್ರ ಪ್ರಕಟ!

  ಪುನೀತ್ ರಾಜ್‌ಕುಮಾರ್ ಹುಟ್ಟು ಹಬ್ಬಕ್ಕೆ ಚಿತ್ರ ಪ್ರಕಟ!

  ಈ ಚಿತ್ರದ ಬಗ್ಗೆ ಪುನೀತ್‌ ರಾಜ್‌ಕುಮಾರ್‌ ಅವರ ಹುಟ್ಟು ಹಬ್ಬದಂದು, ಅಧಿಕೃತವಾಗಿ ಹೇಳಲು ಚಿತ್ರತಂಡ ಯೋಚನೆ ಮಾಡಿದೆ ಅಂತೆ. ಮಾರ್ಚ್ 17ರಂದು ಪುನೀತ್‌ ರಾಜ್‌ಕುಮಾರ್ ಹುಟ್ಟುಹಬ್ಬ. ಅಂದೇ ಯುವ ರಾಜ್‌ಕುಮಾರ್ ಲಾಂಚಿಂಗ್ ಚಿತ್ರದ ಬಗ್ಗೆ ಅಧಿಕೃತ ಮಾಹಿತಿ ನೀಡಲಿದೆಯಂತೆ ಚಿತ್ರ ತಂಡ. ಅಪ್ಪು ನಂತರ ಯುವ ರಾಜ್‌ಕುಮಾರ್ ಮೇಲಿನ ಜವಾಬ್ದಾರಿ ಹೆಚ್ಚಿದೆ. ಅಪ್ಪು ಅಭಿಮಾನಿಗಳು ನೀನೆ ನಮ್ಮ ಯುವ ರಾಜ ಎನ್ನುತ್ತಿದ್ದಾರೆ.

  'ಯುವ' ಚಿತ್ರ ತಡವಾಗಲು ಇದೇ ಕಾರಣ!

  'ಯುವ' ಚಿತ್ರ ತಡವಾಗಲು ಇದೇ ಕಾರಣ!

  ಇನ್ನು ಯುವ ಚಿತ್ರ ಈಗ ಮತ್ತಷ್ಟು ತಡವಾಗುತ್ತಿದೆ. ಇದಕ್ಕೆ ಕಾರಣ ಚಿತ್ರದ ಬದಲಾವಣೆ ಎನ್ನಲಾಗುತ್ತಿದೆ. ಯುವ ಚಿತ್ರದ ಬದಲಿಗೆ ಮೊದಲು ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಯುವ ರಾಜ್‌ಕುಮಾರ್‌ ಲಾಂಚ್ ಆಗಲಿದ್ದಾರೆ. ಆ ಚಿತ್ರಕ್ಕಾಗಿ ಯುವರಾಜ್‌ ತಯಾರಿ ನಡೆಸಿದ್ದಾರೆ ಎನ್ನಲಾಗುತ್ತಿದೆ. ಇನ್ನು 'ಯುವ' ಅವರ ಎರಡನೇ ಚಿತ್ರ ಆಗಲಿದೆಯಂತೆ. ಅಪ್ಪುಗಾಗಿ ಮಾಡಿದ್ದ ಕಥೆಯಲ್ಲಿ ಬದಲಾವಣೆ ಮಾಡಿ ಆ ಕಥೆಯನ್ನು ಸಂತೋಷ್‌ ಅವರು ಯುವ ರಾಜ್‌ಗೆ ಸಿನಿಮಾ ಮಾಡಲಿದ್ದಾರೆ. ಈ ಚಿತ್ರಕ್ಕೆ ಹೊಂಬಾಳೆ ಅಥವಾ ಪಿಆರ್‌ಕೆ ಬಂಡವಾಳ ಹೂಡಲಿದೆಯಂತೆ. ಈ ವಿಚಾರದ ಬಗ್ಗೆ ಅಪ್ಪು ಹುಟ್ಟುಬ್ಬದಂದು ಸ್ಪಷ್ಟ ಚಿತ್ರಣ ಸಿಗಿದೆ.

  ಹೆಚ್ಚಿನ ನಿರೀಕ್ಷೆ ಹುಟ್ಟಿಸಿರುವ ಯುವ ರಾಜನ ಲಾಂಚ್!

  ಹೆಚ್ಚಿನ ನಿರೀಕ್ಷೆ ಹುಟ್ಟಿಸಿರುವ ಯುವ ರಾಜನ ಲಾಂಚ್!

  ಪುನೀತ್‌ ರಾಜ್‌ಕುಮಾರ್‌ ಅವರನ್ನು ಅದೆಷ್ಟೋ ಜನ ಯುವರಾಜನಲ್ಲಿ ಕಾಣುತ್ತಿದ್ದಾರೆ. ಯುವ ಅವರ ಮೊದಲ ಚಿತ್ರಕ್ಕೆ ಅಪ್ಪು ಬೆನ್ನೆಲುಬಾಗಿ ನಿಂತಿದ್ದರು. ಆದರೆ ಅಪ್ಪು ನಂತರ ಬಹುತೇಕ ಮಂದಿ ಅಪ್ಪು ಅವರನ್ನು ಯುವರಾಜ್ ಅವರಲ್ಲಿ ಕಾಣುತ್ತಿದ್ದಾರೆ. ಹಾಗಾಗಿ ಯುವರಾಜ್‌ ಅವರು ಚಿತ್ರರಂಗಕ್ಕೆ ಪದಾರ್ಪಣೆ ಮಾಡುವ ಮೊದಲ ಚಿತ್ರ ಬಹು ಪ್ರಾಮುಖ್ಯತೆ ಪಡೆದುಕೊಂಡಿದೆ, ಸಾಕಷ್ಟು ನಿರೀಕ್ಷೆ ಹೊಂದಿದೆ. ಹಾಗಾಗಿ ಅವರ ಮೊದಲ ಚಿತ್ರವನ್ನು ಸಂತೋಷ್ ಆನಂದ್ ರಾಮ್ ಮಾಡಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

  English summary
  Actor Puneeth Nephew Yuva Rajkumar Will Be Launch In Santhosh Ananddram Direction,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X