For Quick Alerts
  ALLOW NOTIFICATIONS  
  For Daily Alerts

  ಒಟ್ಟಿಗೆ ಮೂರು ಟಿವಿ ಚಾನೆಲ್ ಖರೀದಿಸುತ್ತಿರುವ ರಾಮ್ ಚರಣ್ ತೇಜ: ಕಾರಣವೇನು?

  By ಫಿಲ್ಮಿಬೀಟ್ ಡೆಸ್ಕ್
  |

  ನಟ ರಾಮ್ ಚರಣ್ ತೇಜ ತೆಲುಗಿನ ಸೂಪರ್ ಸ್ಟಾರ್ ನಟ. ರಾಮ್ ಚರಣ್ ಒಳ್ಳೆಯ ನಟರಾಗಿರುವ ಜೊತೆಗೆ ಒಳ್ಳೆಯ ಉದ್ಯಮಿ ಸಹ. ಹಾಗಾಗಿಯೇ ಹಲವು ಉದ್ಯಮಗಳಲ್ಲಿಯೂ ರಾಮ್ ಚರಣ್ ತೇಜ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

  ಕೆಲವು ದಿನಗಳ ಹಿಂದಷ್ಟೆ 'ಆರ್‌ಆರ್‌ಆರ್' ಸಿನಿಮಾದ ಚಿತ್ರೀಕರಣ ಮುಗಿಸಿರುವ ರಾಮ್ ಚರಣ್ ತೇಜ ಇದೀಗ ತಮಿಳಿನ ಶಂಕರ್ ನಿರ್ದೇಶನದ ಹೊಸ ಸಿನಿಮಾದಲ್ಲಿ ನಟಿಸಲು ಆರಂಭಿಸಿದ್ದಾರೆ. ಈಗಾಲಗೇ ಹಲವು ಲಾಭದಾಯಕ ಉದ್ಯಮಗಳನ್ನು ಹೊಂದಿರುವ ರಾಮ್ ಚರಣ್ ತೇಜ ಇದೀಗ ಹೊಸ ಉದ್ಯಮಕ್ಕೆ ಕೈ ಹಾಕುತ್ತಿದ್ದಾರೆ.

  ರಾಮ್ ಚರಣ್ ತೇಜ ಒಟ್ಟಿಗೆ ಮೂರು ಟಿವಿ ಚಾನೆಲ್‌ಗಳ ಖರೀದಿಗೆ ಮಾತುಕತೆ ನಡೆಸಿದ್ದಾರೆ. ಇದರಲ್ಲಿ ಸುದ್ದಿ ಸಂಸ್ಥೆ ಹಾಗೂ ಮನರಂಜನಾ ಚಾನೆಲ್ ಎರಡೂ ಸೇರಿವೆ. ರಾಮ್ ಚರಣ್ ತೇಜ ಹಠಾತ್ತನೆ ಈ ನಿರ್ಣಯ ತೆಗೆದುಕೊಳ್ಳಲು ಕಾರಣವೂ ಇದೆ.

  ಮೂರು ಚಾನೆಲ್‌ಗಳನ್ನು ಖರೀದಿಸುತ್ತಿದ್ದಾರೆ ರಾಮ್ ಚರಣ್

  ಮೂರು ಚಾನೆಲ್‌ಗಳನ್ನು ಖರೀದಿಸುತ್ತಿದ್ದಾರೆ ರಾಮ್ ಚರಣ್

  ರಾಮ್ ಚರಣ್ ತೇಜ ಮಹಾ ನ್ಯೂಸ್ ಸೇರಿದಂತೆ ಒಟ್ಟು ಮೂರು ಚಾನೆಲ್‌ಗಳನ್ನು ಖರೀದಿ ಮಾಡಲು ಮಾತುಕತೆ ನಡೆಸುತ್ತಿದ್ದಾರೆ. ಹೆಚ್ಚೇನು ಲಾಭದಾಯಕ ಅಲ್ಲದ ಸ್ಥಿತಿಯಲ್ಲಿರುವ ಈ ಮೂರು ಚಾನೆಲ್‌ಗಳು ಕಡಿಮೆ ದರಕ್ಕೆ ರಾಮ್ ಚರಣ್ ತೇಜಗೆ ಮಾರಾಟವಾಗುತ್ತಿವೆ ಎನ್ನಲಾಗುತ್ತಿದೆ. ಖರೀದಿಸಿದ ನಂತರ ಚಾನೆಲ್‌ಗೆ ಹೊಸ ರೂಪು-ರೇಷೆಯನ್ನು ಕೊಡುವುದು ರಾಮ್ ಚರಣ್ ತೇಜ ಉದ್ದೇಶ.

  ಪವನ್ ಕಲ್ಯಾಣ್ ಸಹಾಯಕ್ಕಾಗಿ ಟಿವಿ ಚಾನೆಲ್ ಖರೀದಿ

  ಪವನ್ ಕಲ್ಯಾಣ್ ಸಹಾಯಕ್ಕಾಗಿ ಟಿವಿ ಚಾನೆಲ್ ಖರೀದಿ

  ರಾಮ್ ಚರಣ್ ಈ ಚಾನೆಲ್‌ಗಳನ್ನು ಖರೀದಿಸಲು ಉದ್ದೇಶಿರುವುದು ತಮ್ಮ ಚಿಕ್ಕಪ್ಪ ಪವನ್ ಕಲ್ಯಾಣ್‌ಗಾಗಿ ಎನ್ನಲಾಗುತ್ತಿದೆ. ರಾಜಕೀಯದಲ್ಲಿ ಸಕ್ರಿಯರಾಗಿರುವ ಪವನ್‌ ಕಲ್ಯಾಣ್‌ಗೆ ಮುಂದಿನ ಚುನಾವಣೆಗಳಲ್ಲಿ ನೆರವಾಗಲೆಂದು ರಾಮ್ ಚಾರಣ್ ಮೂರು ಚಾನೆಲ್‌ಗಳನ್ನು ಕೊಂಡುಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ. ರಾಮ್‌ ಚರಣ್‌ರ ಯೋಜನೆ ಯಶಸ್ವಿಯಾಗಲಿದೆಯೇ ನೋಡಬೇಕಿದೆ.

  ಪವನ್‌ ಕಲ್ಯಾಣ್‌ ಬೆಂಬಲಕ್ಕೆ ಚಾನೆಲ್‌ಗಳಿಲ್ಲ

  ಪವನ್‌ ಕಲ್ಯಾಣ್‌ ಬೆಂಬಲಕ್ಕೆ ಚಾನೆಲ್‌ಗಳಿಲ್ಲ

  ಆಂಧ್ರ-ತೆಲಂಗಾಣ ರಾಜಕೀಯದಲ್ಲಿ ಪ್ರಮುಖ ಪಕ್ಷಗಳು ತಮ್ಮದೇ ಆದ ಟಿವಿ ಚಾನೆಲ್‌ಗಳನ್ನು ಹೊಂದಿವೆ. ಈ ಚಾನೆಲ್‌ಗಳ ಮೂಲಕ ತಮ್ಮ ಪರವಾಗಿ ಪ್ರಚಾರ ಮಾಡಿಕೊಳ್ಳುತ್ತಾರೆ. ವಿರೋಧಿಗಳನ್ನು ಹಣಿಯಲು ಸುದ್ದಿ ಮಾಧ್ಯಮಗಳನ್ನು ಬಳಸಿಕೊಳ್ಳುವುದು ಮಾಮೂಲು. ಪ್ರಖ್ಯಾತ ಸಾಕ್ಷಿ ಆಂಧ್ರ ಸಿಎಂ ಜಗನ್‌ ಒಡೆತನಕ್ಕೆ ಸೇರಿದ್ದಾಗಿದೆ. ಪವನ್‌ ಕಲ್ಯಾಣ್‌ಗಾಗಿ 99 ಹೆಸರಿನ ಚಾನೆಲ್‌ ಒಂದು ಕೆಲಸ ಮಾಡುತ್ತಿದೆ. ರಾಮ್ ಚರಣ್ ಮೂರು ಚಾನೆಲ್‌ಗಳನ್ನು ಖರೀದಿಸಿದರೆ ಅವುಗಳು ಸಹ ಪವನ್‌ ಪರ ಪ್ರೊಪಗಾಂಡಾ ಹರಡಲಿವೆ.

  ಹಲವು ಉದ್ಯಮಗಳು ಈಗಾಗಲೇ ಹೋಂದಿದ್ದಾರೆ ರಾಮ್ ಚರಣ್

  ಹಲವು ಉದ್ಯಮಗಳು ಈಗಾಗಲೇ ಹೋಂದಿದ್ದಾರೆ ರಾಮ್ ಚರಣ್

  ಬುದ್ಧಿವಂತ ಉದ್ಯಮಿ ಎನಿಸಿಕೊಂಡಿರುವ ರಾಮ್ ಚರಣ್ ತೇಜ, ಸ್ವಂತದ ಪ್ರೊಡಕ್ಷನ್ ಹೌಸ್ ಹೊಂದಿದ್ದಾರೆ. ತಂದೆಯ ಸಿನಿಮಾಗಳ ಮೇಲೆ ಬಂಡವಾಳ ಹೂಡಿ ದೊಡ್ಡ ಮಟ್ಟದ ಲಾಭ ಗಳಿಸುತ್ತಿದ್ದಾರೆ. ಇದರ ಜೊತೆಗೆ ಟ್ರುಜೆಟ್ ಹೆಸರಿನ ಏರ್‌ಲೈನ್ಸ್ ಸಂಸ್ಥೆಯನ್ನು ನಡೆಸುತ್ತಾರೆ. ಜೊತೆಗೆ ಹೈದರಾಬಾದ್ ಪೋಲೊ ಆಂಡ್ ರೈಡಿಂಗ್‌ ಕ್ಲಬ್‌ನ ಮಾಲೀಕರು ಸಹ ಹೌದು. ಇದರಿಂದ ಪ್ರತಿ ತಿಂಗಳ ಲಕ್ಷಾಂತರ ಹಣ ಗಳಿಸುತ್ತಾರೆ ರಾಮ್ ಚರಣ್. ಇವರ ಪತ್ನಿ ಉಪಾಸನಾ ಕೋನಿಡೇಲ ಅಪೊಲೊ ಗ್ರೂಪ್‌ ಆಫ್ ಹಾಸ್ಪಿಟಲ್‌ ಮಾಲೀಕರ ಮಗಳು.

  ನಿರೀಕ್ಷೆ ಹುಟ್ಟಿಸಿರುವ ಶಂಕರ್-ರಾಮ್ ಚರಣ್ ಸಿನಿಮಾ

  ನಿರೀಕ್ಷೆ ಹುಟ್ಟಿಸಿರುವ ಶಂಕರ್-ರಾಮ್ ಚರಣ್ ಸಿನಿಮಾ

  ನಟ ರಾಮ್ ಚರಣ್ ತೇಜ 'ಆರ್‌ಆರ್‌ಆರ್' ಸಿನಿಮಾದ ಚಿತ್ರೀಕರಣ ಕೆಲವು ದಿನಗಳ ಹಿಂದಷ್ಟೆ ಮುಗಿಸಿದ್ದಾರೆ. ಇದೀಗ ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ನಿರ್ದೇಶಿಸಲಿರುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಕಿಯಾರಾ ಅಡ್ವಾಣಿ, ಸುನಿಲ್ ಸೇರಿ ಇನ್ನೂ ಹಲವು ಸ್ಟಾರ್ ನಟರು ನಟಿಸುತ್ತಿದ್ದಾರೆ. ಶಂಕರ್-ರಾಮ್ ಚರಣ್ ಸಿನಿಮಾದ ಮುಹೂರ್ತ ಕೆಲವು ದಿನಗಳ ಹಿಂದಷ್ಟೆ ಅದ್ಧೂರಿಯಾಗಿ ನಡೆದಿದ್ದು, ಬಾಲಿವುಡ್‌ನ ರಣ್ವೀರ್ ಸಿಂಗ್, ರಾಜಮೌಳಿ ಇನ್ನೂ ಕೆಲವು ಗಣ್ಯರು ಮುಹೂರ್ತದಲ್ಲಿ ಭಾಗವಹಿಸಿದ್ದರು.

  English summary
  Telugu actor Ram Charan Teja in talks to purchase three news channel. He is doing this to support his uncle Pawan Kalyan in next elections.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X