'ಶಂಶೇರ'ಗೆ ರಣ್ಬೀರ್, ವಾಣಿ ಕಪೂರ್, ಸಂಜಯ್ ದತ್ ಪಡೆದ ಸಂಭಾವನೆ ಎಷ್ಟು?

ಇತ್ತೀಚೆಗಷ್ಟೇ ನಟ ರಣ್ಬೀರ್ ಕಪೂರ್ ಅಭಿನಯದ ಹೊಸ ಸಿನಿಮಾ 'ಶಂಶೇರಾ' ಸಿನಿಮಾದ ಫಸ್ಟ್ ಲುಕ್ ರಿವೀಲ್ ಆಗಿತ್ತು. ಗಡ್ಡ, ಕೂದಲು ಬಿಟ್ಟು ರಣ್ಬೀರ್ ಕಪೂರ್ ಸಖತ್ ಆಗಿ ಕಾಣಿಸಿಕೊಂಡಿದ್ದರು. ಈ ಲುಕ್ ಕಂಡು ಸಿನಿಮಾ ಪ್ರಿಯರು ಮೆಚ್ಚಿ ಕೊಂಡಾಡಿದ್ದರು.

ಸದ್ಯ ಈ ಚಿತ್ರದ ಟೀಸರ್ ಕೂಡ ಬಿಡುಗಡೆ ಆಗಿದೆ. ಸಂಜಯ್ ದತ್, ವಾಣಿ ಕಪೂರ್ ಕೂಡ ಸಿನಿಮಾದ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಅಭಿನಯದ ಮುಂಬರುವ ಚಿತ್ರ 'ಶಂಶೇರಾ' ಟೀಸರ್ ಬುಧವಾರ ಬಿಡುಗಡೆಯಾಗಿದೆ. ಚಿತ್ರದ ಟೀಸರ್ ಕೂಡ ಭಾರಿ ಮೆಚ್ಚಿಕೊಂಡಿದೆ.

ಈ ಚಿತ್ರದಲ್ಲಿ ಸಾಕಷ್ಟು ಹೆಸರಾಂತ ಕಲಾವಿದರು ಅಭಿನಯಿಸಿದ್ದಾರೆ. ನಟ ರಣ್ಬೀರ್ ಕಪೂರ್ ಸೇರಿದಂತೆ ಹಲವು ಕಲಾವಿದರ ಸಂಭಾವನೆ ಎಷ್ಟು ಎನ್ನುವ ಲೆಕ್ಕಾಚಾರ ಹೊರಬಿದ್ದಿದೆ. ಅದರ ವಿವರ ಮುಂದೆ ಓದಿ.

ರಣ್ಬೀರ್ ಕಪೂರ್ ಸಂಭಾವನೆ 20 ಕೋಟಿ!

ರಣ್ಬೀರ್ ಕಪೂರ್ ಸಂಭಾವನೆ 20 ಕೋಟಿ!

'ಶಂಶೇರಾ' ಚಿತ್ರದಲ್ಲಿ ರಣ್ವೀರ್ ಕಪೂರ್ ಪಾತ್ರ ವಿಭಿನ್ನನಾಗಿದೆ. ರಣ್ಬೀರ್ ಈ ಚಿತ್ರದಲ್ಲಿ ಡಕಾಯಿತ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅವರ ಪಾತ್ರದ ಹೆಸರೇ 'ಶಂಶೇರಾ'. ಟೀಸರ್‌ನಲ್ಲಿ ರಣ್ಬೀರ್ ಪಾತ್ರ ತುಂಬಾ ಸ್ಟ್ರಾಂಗ್ ಎನಿಸುತ್ತದೆ. ಇನ್ನು ಈ ಚಿತ್ರಕ್ಕಾಗಿ ರಣ್ಬೀರ್ ಕಪೂರ್ ಸುಮಾರು 20 ಕೋಟಿ ರೂ. ಸಂಭಾವನೆ ಪಡೆದಿದ್ದಾರಂತೆ. ಸದ್ಯ ರಣ್ಬೀರ್ ಸಂಭಾವನೆ ಬಗ್ಗೆ ಎಲ್ಲೆಡೆ ಚರ್ಚೆ ಆಗುತ್ತಿದೆ.

ಸಂಜಯ್‌ ದತ್‌ಗೆ ಸಿಕ್ಕ ಸಂಭಾವನೆ ಎಷ್ಟು?

ಸಂಜಯ್‌ ದತ್‌ಗೆ ಸಿಕ್ಕ ಸಂಭಾವನೆ ಎಷ್ಟು?

ಇನ್ನು ರಣ್ಬೀರ್ ಕಪೂರ್ ಬಿಟ್ಟರೆ ಈ ಚಿತ್ರದಲ್ಲಿ ಎರಡನೇ ಪ್ರಮುಖ ಪಾತ್ರವೆಂದರೆ ಸಂಜಯ್ ದತ್ ಪಾತ್ರ. ದರೋಗಾ ಶುದ್ಧ್ ಸಿಂಗ್ ಎನ್ನುವ ಪಾತ್ರವನ್ನು ಸಂಜಯ್ ದತ್ ನಿರ್ವಹಿಸಿದ್ದಾರೆ. ಟೀಸರ್‌ನಲ್ಲಿ ಖಾಕಿ ಡ್ರೆಸ್ ಹಾಕಿಕೊಂಡು ಜನ ಸಾಮಾನ್ಯರ ಮೇಲೆ ಹರಿಹಾಯ್ದಿದ್ದಾರೆ. ಈ ಪಾತ್ರಕ್ಕಾಗಿ ಸಂಜಯ್ ದತ್ ಸುಮಾರು 8 ಕೋಟಿ ರೂ. ಚಾರ್ಜ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ವಾಣಿ ಕಪೂರ್ ಪಡೆದ ಸಂಭಾವನೆ!

ವಾಣಿ ಕಪೂರ್ ಪಡೆದ ಸಂಭಾವನೆ!

ಚಿತ್ರದಲ್ಲಿ ರೋನಿತ್ ರಾಯ್ ಪ್ರಮುಖ ಪಾತ್ರ ಮಾಡಿದ್ದಾರೆ. ಆದರೆ, ಅವರ ಪಾತ್ರ ಇನ್ನೂ ಬಹಿರಂಗವಾಗಿಲ್ಲ. ಆದರೆ ಈ ಚಿತ್ರಕ್ಕಾಗಿ ಅವರು ಸುಮಾರು 4 ಕೋಟಿ ರೂ. ಸಂಭಾವನೆ ಪಡೆದಿದ್ದಾರಂತೆ. ಇವರ ಜೊತೆ ಚಿತ್ರದಲ್ಲಿ ವಾಣಿ ಕಪೂರ್ 'ಶಂಶೇರಾ' ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಆದರೆ, ವಾಣಿ ಕಪೂರ್ ಸಂಭಾವನೆ ಬಹಿರಂಗ ಆಗಿಲ್ಲ. ಇನ್ನುಳಿದಂತೆ ಅಶುತೋಷ್ ರಾಣಾ, ಸೌರಭ್ ಶುಕ್ಲಾ, ತ್ರಿಧಾ ಚೌಧರಿ ಅವರಿಗೂ ಪ್ರಮುಖ ಪಾತ್ರಗಳನ್ನು ಹೇಳಲಾಗುತ್ತಿದೆ. ಆದರೆ ಇಲ್ಲಿಯವರೆಗೆ ಅವರ ಪಾತ್ರಗಳು ಮತ್ತು ಶುಲ್ಕದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಲಾಗಿಲ್ಲ.

ಜುಲೈ 22ಕ್ಕೆ 'ಶಂಶೇರಾ' ರಿಲೀಸ್!

ಜುಲೈ 22ಕ್ಕೆ 'ಶಂಶೇರಾ' ರಿಲೀಸ್!

ಯಶ್ ರಾಜ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ 'ಶಂಶೇರಾ' ಚಿತ್ರವನ್ನು ಕರಣ್ ಮಲ್ಹೋತ್ರಾ ನಿರ್ದೇಶಿಸಿದ್ದಾರೆ. ಈ ಚಿತ್ರದ ಟ್ಯಾಗ್‌ಲೈನ್ 'ಕರಮ್ ಸೇ ಡಕಾಯಿತ್, ಧರಮ್ ಸೇ ಆಜಾದ್'. ಚಿತ್ರ ಜುಲೈ 22 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇನ್ನು ಚಿತ್ರದ ಟ್ರೈಲರ್ ಜೂನ್ 24ಕ್ಕೆ ರಿಲೀಸ್ ಆಗಲಿದೆ ಎಂದು ಚಿತ್ರತಂಡ ಟೀಸರ್‌ನಲ್ಲಿ ಪ್ರಕಟ ಮಾಡಿದೆ.

More from Filmibeat

English summary
Actor Ranbir Kapoor, Sanjay Dutt, Vaani Kapoor High Remuneration For Shamshera, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X