For Quick Alerts
  ALLOW NOTIFICATIONS  
  For Daily Alerts

  'ಗಾಡ್‌ ಫಾದರ್‌' ಮೇಲೆ ಸಲ್ಲು ಆಕ್ರೋಶ? ಸಿನಿಮಾ ಹಿಂದಿಗೆ ಡಬ್ ಆಗಲ್ವಾ?

  |

  ದಸರಾ ಸಂಭ್ರಮದಲ್ಲಿ ತೆಲುಗಿನ 'ಗಾಡ್‌ ಫಾದರ್' ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ತಮಿಳಿನ ಮೋಹನ್ ರಾಜಾ ನಿರ್ದೇಶನದ ಈ ಚಿತ್ರದಲ್ಲಿ ಮೆಗಾಸ್ಟಾರ್ ಚಿರಂಜೀವಿ ಜೊತೆಗೆ ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ಕೂಡ ನಟಿಸಿದ್ದಾರೆ. ಸದ್ಯ ಚಿತ್ರತಂಡದ ಮೇಲೆ ಸಲ್ಲುಮಿಯಾ ಮುನಿಸಿಕೊಂಡಿದ್ದಾರೆ ಅನ್ನುವ ಗುಸುಗುಸು ಶುರುವಾಗಿದೆ. ಅದಕ್ಕೆ ಕಾರಣ ಏನು ಎಂದು ಕೆಲವರು ತಲೆಕೆಡಿಸಿಕೊಂಡಿದ್ದಾರೆ. ರಿಲೀಸ್ ಡೇಟ್ ಹತ್ತಿರ ಬಂದ ಸಮಯದಲ್ಲಿ ಏನಿದು ಗೊಂದಲ ಎನ್ನುವ ಪ್ರಶ್ನೆ ಮೆಗಾ ಫ್ಯಾನ್ಸ್‌ನ ಕಾಡ್ತಿದೆ.

  ಮಲಯಾಳಂನಲ್ಲಿ ಸೂಪರ್ ಹಿಟ್ ಆದ 'ಲೂಸಿಫರ್' ಸಿನಿಮಾ ರೀಮೆಕ್ 'ಗಾಡ್‌ ಫಾದರ್'. ಸಲ್ಮಾನ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವುದರಿಂದ ಹಿಂದಿಗೂ ಡಬ್ ಮಾಡಿ ರಿಲೀಸ ಮಾಡುವ ಲೆಕ್ಕಾಚಾರ ನಡೀತಿತ್ತು. ಆದರೆ ಸದ್ಯದ ಮಾಹಿತಿ ಪ್ರಕಾರ ಇದರಿಂದ ಚಿತ್ರತಂಡ ಹಿಂದೆ ಸರಿದಿದೆ ಎನ್ನಲಾಗ್ತಿದೆ. ಸಲ್ಮಾನ್ ಖಾನ್ ಸಿನಿಮಾ ಔಟ್‌ಫುಟ್ ನೋಡಿ ಬೇಸರ ವ್ಯಕ್ತಪಡಿಸಿದ್ದಾರಂತೆ. ತಮ್ಮ ಲುಕ್ ಬಿಟ್ಟರೆ ಸಿನಿಮಾಚಲದಲಿರುವ ದೃಶ್ಯಗಳು ಸರಿಯಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರಂತೆ. ಈ ಚಿತ್ರವನ್ನು ಹಿಂದಿಗೆ ಡಬ್ ಮಾಡುವುದು ಬೇಡವೇ ಬೇಡ ಎಂದು ಹೇಳಿದ್ದಾರಂತೆ.

  ತಗ್ಗೋದೆ ಇಲ್ಲ: 'ಗಾಡ್‌ಫಾದರ್' Vs 'ದಿ ಘೋಷ್ಟ್' ಫೈಟ್ ಕನ್ಫರ್ಮ್!ತಗ್ಗೋದೆ ಇಲ್ಲ: 'ಗಾಡ್‌ಫಾದರ್' Vs 'ದಿ ಘೋಷ್ಟ್' ಫೈಟ್ ಕನ್ಫರ್ಮ್!

  ನನ್ನ ಪಾತ್ರವನ್ನು ಯಾಕೆ ಈ ರೀತಿ ಮಾಡಿದ್ದೀರಾ ಎಂದು ಚಿತ್ರತಂಡವನ್ನು ಸಲ್ಮಾನ್ ಖಾನ್ ಕೇಳಿದ್ದಾರಂತೆ. ಈ ಸಿನಿಮಾದಲ್ಲಿ ನಟಿಸಿದ ತಪ್ಪಿಗೆ ನನ್ನ ಮಾನ ಹರಾಜಾಯ್ತು ಅಂತೆಲ್ಲಾ ಆಪ್ತರ ಬಳಿ ಅಲವತ್ತುಕೊಂಡಿದ್ದಾರೆ ಎನ್ನಲಾಗ್ತಿದೆ. ಅಷ್ಟೇ ಅಲ್ಲ, ಅಪ್ಪಿತಪ್ಪಿಯೂ ಈ ಚಿತ್ರವನ್ನು ಬಾಲಿವುಡ್‌ನಲ್ಲಿ ರಿಲೀಸ್ ಮಾಡಬೇಡಿ ಎಂದು ಸಲಹೆ ನೀಡಿದ್ದಾರೆ ಎನ್ನುವ ಮಾತುಗಳು ಟಾಲಿವುಡ್‌ನಲ್ಲಿ ಹರಿದಾಡ್ತಿದೆ. ಚಿತ್ರದಲ್ಲಿ ಮೆಗಾಸ್ಟಾರ್ ಚಿರಂಜೀವಿ-ಸಲ್ಮಾನ್ ಖಾನ್ ಕಾಂಬಿನೇಷನ್ ದೃಶ್ಯಗಳಿಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

  ಸಲ್ಮಾನ್ ಖಾನ್ ನಟಿಸಿವುದರಿಂದ 'ಗಾಡ್ ಫಾದರ್' ಹಿಂದಿಗೂ ಡಬ್ ಮಾಡಿ ರಿಲೀಸ್ ಮಾಡಿದ್ರೆ, ಒಳ್ಳೆ ಕಲೆಕ್ಷನ್ ಆಗುತ್ತೆ ಅನ್ನುವವರು ಇದ್ದಾರೆ. ಆದರೆ ಸಲ್ಮಾನ್ ಖಾನ್ ಸಿನಿಮಾ ಬಗ್ಗೆ ಮಾಡಿರುವ ಕಾಮೆಂಟ್ ಕೇಳಿದವರಿಗೆ ಶಾಕ್ ಆಗಿದೆ. ಇತ್ತೀಚೆಗಷ್ಟೇ ಸಲ್ಮಾನ್ ಖಾನ್ ಅನಂತಪುರದಲ್ಲಿ ನಡೆಯಲಿರುವ 'ಗಾಡ್ ಫಾದರ್' ಸಿನಿಮಾದ ಫ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ಹೇಳಿದ್ದರು. ಆದರೆ ಇತ್ತೀಚಿನ ಬೆಳವಣಿಗೆ ನೋಡುತ್ತಿದ್ದರೆ ಸಲ್ಲು ಬರೋದು ಅನುಮಾನ ಎನ್ನಲಾಗ್ತಿದೆ.

  ಒಟ್ಟಿಗೆ ಕಾಣಿಸಿಕೊಂಡು ಸ್ಟೆಪ್ಸ್ ಹಾಕಿದ ಚಿರು, ಸಲ್ಮಾನ್ ಖಾನ್; ಗಾಡ್‌ಫಾದರ್ ಸಾಂಗ್ ಟೀಸರ್ ರಿಲೀಸ್ಒಟ್ಟಿಗೆ ಕಾಣಿಸಿಕೊಂಡು ಸ್ಟೆಪ್ಸ್ ಹಾಕಿದ ಚಿರು, ಸಲ್ಮಾನ್ ಖಾನ್; ಗಾಡ್‌ಫಾದರ್ ಸಾಂಗ್ ಟೀಸರ್ ರಿಲೀಸ್

  ಸಲ್ಮಾನ್ ಖಾನ್ ಮಾತ್ರವಲ್ಲ ಮೆಗಾಸ್ಟಾರ್ ಅಭಿಮಾನಿಗಳು ಕೂಡ ಈ ಚಿತ್ರತಂಡದ ಮೇಲೆ ಗರಂ ಆಗಿದ್ದಾರೆ. ರಿಲೀಸ್ ಡೇಟ್ ಹತ್ತಿರವಾಗುತ್ತಿದ್ದರೂ ಇನ್ನೂ ಪ್ರಮೋಷನ್ ಶುರು ಮಾಡದಿರುವುದು ಅವರ ಕೋಪಕ್ಕೆ ಕಾರಣವಾಗಿದೆ. ಟೀಸರ್ ರಿಲೀಸ್ ಮಾಡಿದ್ದು ಬಿಟ್ಟರೆ ಯಾವುದೇ ತರಹದ ಪ್ರಮೋಷನ್ ಶುರು ಮಾಡಿಲ್ಲ. ಇತ್ತಿಚೆಗೆ ಒಂದು ಲಿರಿಕಲ್ ಸಾಂಗ್ ರಿಲೀಸ್ ಮಾಡೋದಾಗಿ ಘೋಷಿಸಿ ಚಿತ್ರತಂಡ ಅಭಿಮಾನಿಗಳೆ ಬೇಸರ ತಂದಿತ್ತು. ರಾಮ್‌ಚರಣ್, ಆರ್‌. ಬಿ ಚೌಧರಿ, ಎನ್‌.ವಿ ಪ್ರಸಾದ್ ನಿರ್ಮಾಣದ 'ಗಾಡ್ ಫಾದರ್' ಚಿತ್ರ ಅಕ್ಟೋಬರ್ 5ಕ್ಕೆ ತೆರೆಗೆ ಬರಲಿದೆ.

  Actor Salman Khan Fire On Chiranjeevi Starrer Godfather Movie Team

  ಅಕ್ಟೋಬರ್ 5ಕ್ಕೆ ಟಾಲಿವುಡ್ ಕಿಂಗ್ ನಾಗಾರ್ಜುನ ನಟನೆಯ 'ಘೋಸ್ಟ್' ಸಿನಿಮಾ ಕೂಡ ಬಿಡುಗಡೆಯಾಗ್ತಿದೆ. 'ಗಾಡ್ ಫಾದರ್' ಚಿತ್ರದಲ್ಲಿ ನಯನತಾರಾ, ಪುರಿ ಜಗನ್ನಾಥ್, ಸಮುದ್ರ ಖನಿ, ಸತ್ಯದೇವ್ ಸೇರಿದಂತೆ ಘಟಾನುಘಟಿ ಕಲಾವಿದರು ಬಣ್ಣ ಹಚ್ಚಿದ್ದಾರೆ.

  English summary
  Actor Salman Khan Fire On Chiranjeevi Starrer Godfather Movie Team.
  Monday, September 19, 2022, 17:01
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X