For Quick Alerts
  ALLOW NOTIFICATIONS  
  For Daily Alerts

  ಶೀಘ್ರದಲ್ಲೇ ಜಂಟಿಯಾಗಲಿದೆ ಸಲ್ಲು ಒಂಟಿ ಬಾಳು

  By Rajendra
  |

  ಇನ್ನೂ ಎಷ್ಟು ದಿನ ಎಂದು ಬಾಲಿವುಡ್ ನಟ ಸಲ್ಮಾನ್ ಖಾನ್ ಒಂಟಿ ಬಾಳು ಬಾಳುವುದು. ಈಗ ಜಂಟಿಯಾಗುವ ಕಾಲ ಸಮೀಪಿಸಿದೆ. ಬಾಳ ದಾರಿಯಲ್ಲಿ ಅರ್ಧ ಸೆಂಚುರಿ ಬಾರಿಸಿರುವ ನಟ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಬಾಲಿವುಡ್ ನಲ್ಲಿ ಬಾಂಬ್ ತರಹ ಸ್ಫೋಟಿಸಿದೆ.

  ತಾರೆ ಐಶ್ವರ್ಯ ರೈ ಅವರನ್ನು ಮನಸಾರೆ ಪ್ರೀತಿಸಿದ್ದ ಸಲ್ಲುನನ್ನು ಐಶೂ ಇವನೊಬ್ಬ ಹುಚ್ಚ ಎಂದು ತಿರಸ್ಕರಿಸಿದ್ದರು. ಅಲ್ಲಿಂದ ಸಲ್ಲು ಭಾಯ್ ತೀರಾ ಅಪ್ ಸೆಟ್ ಆಗಿದ್ದ. ಐಶ್ವರ್ಯ ರೈಗಳ ಮಾತು ನೇರವಾಗಿ ಈತನ ಹೃದಯಕ್ಕೆ ತಾಕಿತ್ತು. ಚೇತರಿಸಿಕೊಳ್ಳಲು ಸುದೀರ್ಘ ಸಮಯವನ್ನೇ ತೆಗೆದುಕೊಂಡಿದ್ದ.

  ಬಳಿಕ ಸ್ವಲ್ಪ ಕಾಲ ಕತ್ರಿನಾ ಕೈಫ್ ಜೊತೆ ಜೂಟಾಟ ಆಡಿ ಸುಧಾರಿಸಿಕೊಂಡಿದ್ದ. ಹಲವು ತಾರೆಗಳ ಜೊತೆ ಸಲ್ಲೂ ಭಾಯ್ ಕಣ್ಣಾಮುಚ್ಚಾಲೆ ನಡೆದೇ ಇದೆ ಎಂಬ ಮಾತುಗಳು ಬಾಲಿವುಡ್ ನಲ್ಲಿ ಗುಟ್ಟಾಗಿಯೇನು ಉಳಿದಿಲ್ಲ. ಆದರೂ ಸಲ್ಲು ಜೊತೆ ಯಾವ ಹುಡುಗಿನೂ ಜಾಸ್ತಿ ದಿನ ಬೆರೀತಾ ಇಲ್ಲ ಯಾಕೆ? ಸಲ್ಮಾನ್ ಅವರ ಒರಟು ಸ್ವಭಾವವೇ ಇದಕ್ಕೆ ಕಾರಣ ಎನ್ನಲಾಗಿದೆ.

  ಹುಡುಗಿಯ ಸಹವಾಸವೇ ಬೇಡ ಎಂದು ಸಲ್ಲು ಮಿಯಾ ಕೊಂಚ ಕಾಲ ಟೂ ಬಿಟ್ಟಿದ್ದ. ತನ್ನ ಗಮನವನ್ನೆಲ್ಲಾ ಚಿತ್ರಗಳ ಕಡೆ ನೆಟ್ಟಿದ. ಪಾತಾಳ ಕಚ್ಚಿದ್ದ ಸಲ್ಲು ಕೆರಿಯರ್ ಗ್ರಾಫ್ ಮೇಲ್ಮುಖವಾಗಿ ಏರಿತು. ಒಟ್ನಲ್ಲಿ ನಂಬರ್ ಒನ್ ಪಟ್ಟಕ್ಕೆ ತಲುಪಿದರು.

  ಇಲ್ಲಿಯವರೆಗೂ ಮದುವೆ ಬಗ್ಗೆ ಸೊಲ್ಲೆತ್ತದ ಸಲ್ಲು ಈಗ ಮದುವೆ ಮೂಡ್ ನಲ್ಲಿದ್ದಾರೆ. ಇದೀಗ ಸಲ್ಲು ಮನೆಯವರು ಹುಡುಗಿ ಹುಡುಕಾಟದಲ್ಲಿದ್ದಾರೆ. ಸಿನಿಮಾ ಕುಟುಂಬಕ್ಕೆ ಸೇರದ ಹುಡುಗಿ ಹುಡುಕಾಟದಲ್ಲಿದ್ದಾರೆ. ಒಟ್ಟಾರೆಯಾಗಿ ಮರ್ಯಾದಸ್ತ ಕುಟುಂಬದ ಹುಡುಗಿ ಬೇಕಂತೆ ಸಲ್ಲುಗೆ.

  ಇತ್ತೀಚೀಗೆ ಸಂದರ್ಶನವೊಂದರಲ್ಲಿ ಸಲ್ಲು ಮಾತನಾಡುತ್ತಾ, ಜೀವನಪೂರ್ತಿ ಬ್ರಹ್ಮಚಾರಿಯಾಗಿ ಇರಬೇಕು ಎಂಬ ಮಹದಾಸೆಯೇನು ತಮಗಿಲ್ಲ. ನನ್ನನ್ನು ಪ್ರೀತಿಸುವ ಹುಡುಗಿಯರು ಬಹಳಷ್ಟು ಮಂದಿ ಇದ್ದಾರೆ ಎಂದೂ ತಿಳಿಸಿದ್ದಾರೆ. (ಏಜೆನ್ಸೀಸ್)

  English summary
  During an exclusive interview with HT, Salman Khan was quizzed about his bachelorhood status, the actor replied that he doesn't intend to remain a bachelor all his life. He also said that there is love all around him. Well Sallu, so does that mean that the good news of your much-awaited and debated marriage will soon come our way? If so, who will be the lucky girl to be your life partner?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X