ಉಪ್ಪಿಗೆ ಮತ್ತೆ ಹುಟ್ಟಿ ಬಾ ಅಂತ ಪತ್ರ ಬರೆದಿದ್ದು ಪ್ರೇಮಾ ಅವರಾ?
ಏನೇ ಮಾಡಿದ್ರೂ ಕೊಂಚ ಡಿಫರೆಂಟ್ ಆಗಿ ಮಾಡುವ ರಿಯಲ್ ಸ್ಟಾರ್ ಉಪೇಂದ್ರ ಅವರ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಇದೀಗ ಅದೇ ಉಪೇಂದ್ರ ಅವರು 'ಉಪೇಂದ್ರ ಮತ್ತೆ ಹುಟ್ಟಿ ಬಾ. ಇಂತಿ ಪ್ರೇಮ' ಅನ್ನೋ ಸಿನಿಮಾ ಮಾಡುತ್ತಿದ್ದಾರೆ ಎಂದು ನಾವು ನಿಮಗೆ ಇಲ್ಲೇ ಹೇಳಿದ್ವಿ.
ಇದೀಗ ಈ ಚಿತ್ರದ ಟೈಟಲ್ ಗೂ ನಮ್ಮ ಚೆಂದುಳ್ಳಿ ಚೆಲುವೆ ಕೊಡಗಿನ ಬೆಡಗಿ ಪ್ರೇಮ ಅವರಿಗೂ ಏನಾದರೂ ಸಂಬಂಧ ಇದೆಯಾ ಅಂತ ಅನುಮಾನ ಕಾಡುತ್ತದೆ.
ಅಷ್ಟಕ್ಕೂ ಈ ಅನುಮಾನ ಕಾಡಲು ಮುಖ್ಯ ಕಾರಣ ಏನಪ್ಪಾ ಅಂದ್ರೆ ನಟಿ ಪ್ರೇಮಾ ಅವರು ವರ್ಷಗಳ ಬಳಿಕ ಬಣ್ಣ ಹಚ್ಚುತ್ತಿದ್ದು, ಉಪೇಂದ್ರ ಅವರ 'ಉಪೇಂದ್ರ ಮತ್ತೆ ಹುಟ್ಟಿ ಬಾ. ಇಂತಿ ಪ್ರೇಮ' ಚಿತ್ರದಲ್ಲಿ ಉಪೇಂದ್ರ ಅವರಿಗೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಅಲ್ಲಲ್ಲಿ ಕೇಳಿಬರುತ್ತಿದೆ.['ಉಪೇಂದ್ರ' ಮತ್ತೆ ಹುಟ್ಟಿ ಬರ್ಬೇಕಂತೆ.! ಇದು 'ಪ್ರೇಮ' ಬಯಕೆ.!]

ನಟಿ ಪ್ರೇಮಾ ಅವರು ಉಪೇಂದ್ರ ಅವರ ನಿರ್ದೇಶನದ 'ಓಂ' ಚಿತ್ರದಲ್ಲಿ ಶಿವರಾಜ್ ಕುಮಾರ್ ಅವರ ಜೊತೆ ನಟಿಸಿದ್ದರು. ತದನಂತರ 'ಉಪೇಂದ್ರ' ಚಿತ್ರದಲ್ಲಿ ಉಪ್ಪಿ ಅವರ ಜೊತೆ ತೆರೆ ಹಂಚಿಕೊಂಡರು. ಇದೀಗ ಬರೋಬ್ಬರಿ 17 ವರ್ಷಗಳ ಬಳಿಕ ಉಪೇಂದ್ರ ಅವರ ಜೊತೆ 'ಉಪೇಂದ್ರ ಮತ್ತೆ ಹುಟ್ಟಿ ಬಾ. ಇಂತಿ ಪ್ರೇಮ' ಅನ್ನೋ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನೂ ಒಂದು ವಿಶೇಷ ಏನಪ್ಪಾ ಅಂದ್ರೆ ರಿಯಲ್ ಸ್ಟಾರ್ ಉಪೇಂದ್ರ ಅವರು ಈ ಚಿತ್ರದಲ್ಲಿ ದ್ವಿಪಾತ್ರದಲ್ಲಿ ಮಿಂಚುತ್ತಿದ್ದಾರೆ. ಉಪೇಂದ್ರ ಅವರ 'H20' ಚಿತ್ರವನ್ನು ನಿರ್ದೇಶನ ಮಾಡಿದ್ದ ನಿರ್ದೇಶಕ ಎನ್.ಲೋಕನಾಥ್ ಅವರು ಚಿತ್ರಕ್ಕೆ ಆಕ್ಷನ್-ಕಟ್ ಹೇಳುತ್ತಿದ್ದಾರೆ.[ಉಪೇಂದ್ರಗೆ 'H2O' ಕುಡಿಸಿದವರು ಮತ್ತೆ ಡೈರೆಕ್ಟರ್ ಕ್ಯಾಪ್ ತೊಟ್ಟರೆ.?]
ಅಂದಹಾಗೆ ಈ ಚಿತ್ರಕ್ಕೆ ತೆಲುಗಿನ ನಾಗಾರ್ಜುನ್ ಅಭಿನಯದ 'ಸೊಗ್ಗಾಡೆ ಚಿನ್ನಿ ನಾಯನ' ಚಿತ್ರ ಸ್ಫೂರ್ತಿ ಕೊಟ್ಟಿದೆಯಂತೆ. ಕನ್ನಡಕ್ಕೆ ರಿಯಲ್ ಸ್ಟಾರ್ ಉಪೇಂದ್ರ ಅವರೇ ಕಥೆ ಬರೆದಿದ್ದು, ಉಪೇಂದ್ರ ಅವರ ಆಪ್ತರಾದಂತಹ ಶ್ರೀರಾಮ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಎಲ್ಲವೂ ಅಂದುಕೊಂಡಂತೆ ನಡೆದರೆ ಜೂನ್ ತಿಂಗಳ ಎರಡನೇ ವಾರದಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಸದ್ಯಕ್ಕೆ ಉಪೇಂದ್ರ ಅವರು 'ಮುಕುಂದ ಮುರಾರಿ' ಮತ್ತು 'ಕಲ್ಪನಾ 2' ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.
ಅಂತೂ ಅಭಿಮಾನಿಗಳು ಪ್ರೇಮ ಮತ್ತು ಉಪೇಂದ್ರ ಅವರನ್ನು ಮತ್ತೆ ತೆರೆಯ ಮೇಲೆ ನೋಡುವಂತಾದರೆ ಅದಕ್ಕಿಂತ ಖುಷಿಯ ವಿಚಾರ ಬೇರೆ ಏನಿದೆ ಅಲ್ವಾ?.


Click it and Unblock the Notifications











