For Quick Alerts
  ALLOW NOTIFICATIONS  
  For Daily Alerts

  ಅತಿ ಹೆಚ್ಚು ಸಂಭಾವನೆ: ದಾಖಲೆ ಬರೆದ ವಿಜಯ್!

  By ಫಿಲ್ಮಿಬೀಟ್ ಡೆಸ್ಕ್
  |

  ನಟ ವಿಜಯ್ ಸಿನಿಮಾಕ್ಕೆ ಹಣ ಹಾಕಿದರೆ ಹತ್ತು ಆ ಹಣ ಕನಿಷ್ಠ ಐದು ಪಟ್ಟಾಗಿ ವಾಪಸ್ಸಾಗುತ್ತದೆ ಎಂಬ ನಂಬಿಕೆ ನಿರ್ಮಾಪಕರದ್ದು, ವಿಜಯ್‌ರ ಇತ್ತೀಚಿನ ಸಿನಿಮಾಗಳ ಕಲೆಕ್ಷನ್ ನೋಡಿದರೆ ಇದು ಸುಳ್ಳಲ್ಲ ಎನಿಸುತ್ತದೆ.

  ವಿಜಯ್ ನಟಿಸಿದ್ದ 'ಮಾಸ್ಟರ್' ಸಿನಿಮಾ ಕೆಲವೇ ದಿನಗಳಲ್ಲಿ ನೂರು ಕೋಟಿ ಹಣ ಚಿತ್ರಮಂದಿರಗಳಲ್ಲಿ ಗಳಿಸಿತ್ತು. ಅದೂ ಚಿತ್ರಮಂದಿರಗಳ ಮೇಲೆ ನಿರ್ಬಂಧ ವಿಧಿಸಿದ್ದಾಗಲೂ. ಚಿತ್ರಮಂದಿರ ಹೊರತುಪಡಿಸಿ, ಸ್ಯಾಟಲೈಟ್ ಹಕ್ಕು, ಆಡಿಯೋ ಹಕ್ಕು, ಡಿಜಿಟಲ್ ಹಕ್ಕು, ರೀಮೇಕ್ ಹಕ್ಕು ಇತರೆಗಳನ್ನು ಲೆಕ್ಕಾಚಾರ ಹಾಕಿದರೆ ಲಾಭ ಸುಲಭಕ್ಕೆ 200 ಕೋಟಿ ದಾಟುತ್ತದೆ. 'ಮಾಸ್ಟರ್' ಸಿನಿಮಾದ ಒಟ್ಟು ಕಲೆಕ್ಷನ್ 263 ರಿಂದ 300 ಕೋಟಿ ಎನ್ನುತ್ತದೆ ವಿಕಿಪೀಡಿಯಾ.

  ನಿರ್ಮಾಪಕನಿಗೆ 300 ಕೋಟಿ ಲಾಭ ತಂದುಕೊಡಬಲ್ಲ ಚರಿಷ್ಮಾ ಇರುವ ನಾಯಕ ವಿಜಯ್ ಸಹಜವಾಗಿಯೇ ದೊಡ್ಡ ಮಟ್ಟದ ಸಂಭಾವನೆ ಪಡೆಯುತ್ತಾರೆ. 'ಮಾಸ್ಟರ್' ನಂತರವಂತೂ ವಿಜಯ್ ಸಂಭಾವನೆ ಭಾರಿ ದೊಡ್ಡ ಮಟ್ಟದಲ್ಲಿ ಏರಿಕೆಯಾಗಿದೆ. ಎಷ್ಟೆಂದರೆ ಇಡೀ ಭಾರತದಲ್ಲಿ ಅವರಷ್ಟು ಸಂಭಾವನೆ ಈವರೆಗೆ ಯಾರೂ ಪಡೆದಿಲ್ಲದಿರುವಷ್ಟು!

  ಹೌದು, ವಿಜಯ್ ಇದೀಗ ಒಪ್ಪಿಕೊಂಡಿರುವ ತಮ್ಮ 66ನೇ ಸಿನಿಮಾಕ್ಕೆ ಯಾರೂ ಊಹಿಸಿರದಷ್ಟು ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಿದ್ದಾರೆ. ಬಾಲಿವುಡ್ ನಟರೂ ವಿಜಯ್‌ರಷ್ಟು ಸಂಭಾವನೆಯನ್ನು ಈವರೆಗೆ ಯಾವ ಸಿನಿಮಾಕ್ಕೂ ಪಡೆದಿಲ್ಲ. ಅಷ್ಟು ದೊಡ್ಡ ಮೊತ್ತದ ಸಂಭಾವನೆ ಪಡೆಯಲಿದ್ದಾರೆ.

  ವಿಜಯ್ ಪಡೆಯುತ್ತಿರುವ ಸಂಭಾವನೆ ಎಷ್ಟು?

  ವಿಜಯ್ ಪಡೆಯುತ್ತಿರುವ ಸಂಭಾವನೆ ಎಷ್ಟು?

  ಮಹೇಶ್ ಬಾಬು ನಟಿಸಿದ್ದ 'ಮಹರ್ಷಿ' ಸಿನಿಮಾ ನಿರ್ದೇಶಿಸಿದ್ದ ವಂಶಿ ಪೈಡಿಪಲ್ಲಿ ನಿರ್ದೇಶಸಲಿರುವ ವಿಜಯ್‌ರ 66ನೇ ಸಿನಿಮಾಕ್ಕೆ ಬರೋಬ್ಬರಿ 120 ಕೋಟಿ ಸಂಭಾವನೆಯನ್ನು ವಿಜಯ್ ಪಡೆಯಲಿದ್ದಾರೆ. ಇಷ್ಟು ದೊಡ್ಡ ಮೊತ್ತದ ಸಂಭಾವನೆಯನ್ನು ಭಾರತದ ಇನ್ಯಾವ ನಟರೂ ಪಡೆದಿಲ್ಲ. ಬಾಲಿವುಡ್‌ನ ಖಾನ್ ತ್ರಯರು ಸಹ ಇಷ್ಟು ದೊಡ್ಡ ಮೊತ್ತ ಸಂಭಾವನೆಯನ್ನು ಈವರೆಗೆ ಪಡೆದಿಲ್ಲ. ವಿಜಯ್‌ ಪಡೆಯುತ್ತಿರುವ ಸಂಭಾವನೆ ಭಾರತದ ಮಟ್ಟಿದೆ ದಾಖಲೆಯಾಗಿದೆ.

  ಬಂಡವಾಳ ಹೂಡುತ್ತಿದ್ದಾರೆ ದಿಲ್ ರಾಜು

  ಬಂಡವಾಳ ಹೂಡುತ್ತಿದ್ದಾರೆ ದಿಲ್ ರಾಜು

  ವಂಶಿ ಪೈಡಿಪಲ್ಲಿ ನಿರ್ದೇಶಿಸಲಿರುವ ಈ ಸಿನಿಮಾಕ್ಕೆ ತೆಲುಗಿನ ಖ್ಯಾತ ನಿರ್ಮಾಪಕ ದಿಲ್ ರಾಜು ಬಂಡವಾಳ ಹೂಡುತ್ತಿದ್ದಾರೆ. ದೊಡ್ಡ ಬಜೆಟ್ ಸಿನಿಮಾಗಳನ್ನು ಮಾಡುವುದರಲ್ಲಿ ಸಿದ್ಧ ಹಸ್ತರಾದ ದಿಲ್ ರಾಜು ಈ ಸಿನಿಮಾವನ್ನು ಭಾರಿ ಬಜೆಟ್‌ನೊಂದಿಗೆ ನಿರ್ಮಾಣ ಮಾಡಲಿದ್ದಾರೆ. ಸಿನಿಮಾವು ಪ್ಯಾನ್ ಇಂಡಿಯಾ ಸಿನಿಮಾ ಆಗಿರಲಿದ್ದು, ಸಿನಿಮಾದ ಕತೆ ಈಗಾಗಲೇ ಅಂತಿಮವಾಗಿದ್ದು, ವಿಜಯ್ ಸಹ ಉತ್ಸುಕರಾಗಿದ್ದಾರೆ. ಪ್ರಸ್ತುತ ನಟಿಸುತ್ತಿರುವ 'ಬೀಸ್ಟ್' ಸಿನಿಮಾ ಮುಗಿದ ಬಳಿಕ ಹೊಸ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ.

  ಭಾರತದ ಶ್ರೀಮಂತ ನಟ ಅಕ್ಷಯ್ ಕುಮಾರ್

  ಭಾರತದ ಶ್ರೀಮಂತ ನಟ ಅಕ್ಷಯ್ ಕುಮಾರ್

  ಈ ಹಿಂದೆ ತಮಿಳಿನ ರಜನೀಕಾಂತ್ 'ರೊಬೊ' ಸಿನಿಮಾಕ್ಕೆ ದೊಡ್ಡ ಮೊತ್ತದ ಸಂಭಾವನೆ ಪಡೆದಿದ್ದರು. ಅವರ ಹೊರತಾಗಿ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆವ ನಟರೆಂಬ ಖ್ಯಾತಿ ಅಕ್ಷಯ್ ಕುಮಾರ್ ಅವರಿಗಿದೆ. ಒಂದು ಸಿನಿಮಾಕ್ಕೆ ಹೆಚ್ಚು ಸಂಭಾವನೆ ಪಡೆವ ಜೊತೆಗೆ ವರ್ಷದಲ್ಲಿ ಅತಿ ಹೆಚ್ಚು ಸಿನಿಮಾ ಸಹ ಮಾಡುವುದರಿಂದ ಅಕ್ಷಯ್ ಕುಮಾರ್ ಭಾರತದ ಅತ್ಯಂತ ಶ್ರೀಮಂತ ನಟ. ವಿಶ್ವಮಟ್ಟದಲ್ಲಿಯೂ ಅವರಿಗೆ ಟಾಪ್ 50 ರ ಒಳಗೆ ಸ್ಥಾನವಿದೆ.

  'ಬೀಸ್ಟ್' ಹೆಸರಿನ ಸಿನಿಮಾದಲ್ಲಿ ವಿಜಯ್ ನಟನೆ

  'ಬೀಸ್ಟ್' ಹೆಸರಿನ ಸಿನಿಮಾದಲ್ಲಿ ವಿಜಯ್ ನಟನೆ

  ನಟ ವಿಜಯ್ ಪ್ರಸ್ತುತ 'ಬೀಸ್ಟ್' ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾವನ್ನು ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶಿಸಿದ್ದು, ನಿರ್ಮಾಣವನ್ನು ಸನ್ ನೆಟ್‌ವರ್ಕ್ಸ್‌ನ ಕಲಾನಿಧಿ ಮಾರನ್ ಮಾಡುತ್ತಿದ್ದಾರೆ. ಸಿನಿಮಾಕ್ಕೆ ಕರ್ನಾಟಕ ಮೂಲದ ಪೂಜಾ ಹೆಗ್ಡೆ ನಾಯಕಿ. ಸಂಗೀತವನ್ನು ಅನಿರುದ್ಧ್ ರವಿಚಂದ್ರನ್ ನೀಡುತ್ತಿದ್ದಾರೆ. ಸಿನಿಮಾವು ಮುಂದಿನ ವರ್ಷಾರಂಭದಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ. ಸಿನಿಮಾದಲ್ಲಿ ಸೆಲ್ವರಾಘವನ್, ಯೋಗಿ ಬಾಬು, ಶೈನ್ ಟಾಮ್ ಚಾಕೊ ಇನ್ನೂ ಹಲವರು ನಟಿಸುತ್ತಿದ್ದಾರೆ.

  English summary
  Tamil actor Vijay taking record amount of money as remuneration for his 66th movie. Dil Raju producing the movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X