ತರಕಾರಿ ಹೆಸರನ್ನು ಪ್ರೇಯಸಿ ತಮನ್ನಾಗೆ ಇಟ್ರಾ ವಿಜಯ್ ವರ್ಮಾ? ಪೋಸ್ಟ್ ವೈರಲ್

ನಟಿ ತಮ್ಮನ್ನಾ ವೈಯಕ್ತಿಕ ಜೀವನದ ಬಗ್ಗೆ ಈ ಹಿಂದೆ ಯಾವುದೇ ವದಂತಿ ಕೇಳಿಬಂದಿರಲಿಲ್ಲ. ಆದರೆ ಸದ್ಯ ಆಕೆ ಪ್ರೀತಿಯಲ್ಲಿ ಮುಳುಗಿದ್ದಾರೆ, ಬಾಲಿವುಡ್ ಪೋಷಕ ನಟ ವಿಜಯ್ ವರ್ಮಾ ಜೊತೆ ಡೇಟಿಂಗ್ ಮಾಡ್ತಿದ್ದಾರೆ ಎನ್ನುವ ಗುಸು ಗುಸು ಕೇಳಿಬರ್ತಿದೆ. ಹೊಸ ವರ್ಷವನ್ನು ಜೋಡಿ ಒಟ್ಟಿಗೆ ಸ್ವಾಗತಿಸಿತ್ತು ಎಂದು ಗುಲ್ಲಾಗಿತ್ತು. ಇದೀಗ ವಿಜಯ್ ತನ್ನ ಪ್ರೀತಿಯ ಹುಡುಗಿಗೆ ಮುದ್ದಾದ ಹೆಸರಿಟ್ಟಿದ್ದಾರೆ ಎನ್ನಲಾಗ್ತಿದೆ.

ತಮನ್ನಾ ಅಂದರೆ ಅಭಿಮಾನಿಗಳ ಪಾಲಿಗೆ ಮಿಲ್ಕಿಬ್ಯೂಟಿ. ಹಾಲು ಬಿಳುಪಿನ ಚೆಲುವೆ ಗ್ಲಾಮರಸ್ ರೋಲ್‌ಗಳಿಂದಲೇ ಹೆಚ್ಚು ಸದ್ದು ಮಾಡಿದಾಕೆ. ಅದ್ಭುತ ಪಾತ್ರಗಳಲ್ಲಿ ನಟಿಸದೇ ಇದ್ದರೂ ಗ್ಲಾಮರಸ್ ಡಾಲ್ ಆಗಿ ಸಿಕ್ಕಾಪಟ್ಟೆ ಮೋಡಿ ಮಾಡಿದ್ದಾರೆ. ಐಟಂ ಸಾಂಗ್‌ಗಳಲ್ಲಿ ಕುಣಿದು ರಂಗೇರಿಸಿದ್ದಾರೆ. ತಮನ್ನಾ ಮುಂಬೈ ಮೂಲದ ಉದ್ಯಮಿ ಕೈ ಹಿಡಿಯುತ್ತಾರೆ ಎನ್ನುವ ಗುಸುಗುಸು ಇತ್ತೀಚೆಗೆ ಕೇಳಿ ಬಂದಿತ್ತು. ಆದರೆ ಅದೆಲ್ಲಾ ಸುಳ್ಳು ಎಂದು ಸ್ಪಷ್ಟಪಡಿಸಿದ್ದರು. ಇದೀಗ ನಟ ವಿಜಯ್ ವರ್ಮಾ ಜೊತೆ ಹೆಸರು ತಳುಕು ಹಾಕಿಕೊಂಡಿದೆ.

Actor Vijay Verma Calls His Rumoured Girlfriend Tamannaah Bhatia Tamatar(Tomato)

'ಪಿಂಕ್', 'ಸೂಪರ್ 30', 'ಗಲ್ಲಿ ಬಾಯ್', 'ಭಾಗಿ- 3' ಸೇರಿದಂತೆ ಒಂದಷ್ಟು ಬಾಲಿವುಡ್ ಸಿನಿಮಾಗಳಲ್ಲಿ ವಿಜಯ್ ವರ್ಮಾ ನಟಿಸಿದ್ದಾರೆ. ಈತನೊಟ್ಟಿಗೆ ತಮನ್ನಾ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗ್ತಿದೆ. ಅದಕ್ಕೆ ಪುಷ್ಟಿ ಕೊಡುವಂತಹ ಪೋಸ್ಟ್‌ಗಳು ಇತ್ತೀಚಿಗೆ ವೈರಲ್ ಆಗುತ್ತಿದೆ. ಅದೇ ರೀತಿ ವಿಜಯ್ ಈಗ ತಮನ್ನಾನ 'ಟೊಮೆಟೋ' ಎಂದು ಕರೆದಿದ್ದಾರೆ. ತನ್ನ ಪ್ರೇಯಸಿಗೆ ಮುದ್ದಾದ ಹೆಸರು ಇಟ್ಟುಕೊಂಡಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ.

ವಿಜಯ್ ವರ್ಮಾ, ಸೋನಾಕ್ಷಿ ಸಿನ್ಹಾ ಅಭಿನಯದ 'ದಹಾಡ್' ವೆಬ್ ಸೀರಿಸ್ ಬರ್ಲಿನ್ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರದರ್ಶನಗೊಂಡಿತ್ತು. ಈ ಸಂದರ್ಭದಲ್ಲಿ ಸೋನಾಕ್ಷಿ ಸಿನ್ಹಾ, ವಿಜಯ್ ವರ್ಮಾ ಅಲ್ಲಿ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದರು. ತಮನ್ನಾ ಆ ಫೋಟೊ ಶೇರ್ ಮಾಡಿ ತಂಡಕ್ಕೆ ಶುಭಾಶಯ ತಿಳಿಸಿದ್ದರು. ಇದಕ್ಕೆ ರೊಮ್ಯಾಂಟಿಕ್ ಆಗಿ ಪ್ರತಿಕ್ರಿಯಿಸಿರುವ ನಟ ವಿಜಯ್ ವರ್ಮಾ, ಥ್ಯಾಂಕ್ಸ್ ತಮಾಟರ್(ಟೊಮೆಟೋ) ಎಂದು ಬರೆದು ಟೊಮೆಟೋ ಎಮೋಜಿ ಹಾಕಿದ್ದಾರೆ.

Actor Vijay Verma Calls His Rumoured Girlfriend Tamannaah Bhatia Tamatar(Tomato)

ಇದನ್ನು ನೋಡಿದವರು ಓಹ್ ವಿಜಯ್ ತನ್ನ ಹುಡುಗಿಯನ್ನು ಟೊಮೆಟೋ ಎಂದು ಕರೆಯುತ್ತಾರೆ. ಬಹಳ ಬೆಳ್ಳಗೆ ಇರುವ ತಮನ್ನಾನ ಕೆಂಪನೆಯ ಟೊಮೆಟೋಗೆ ಹೋಲಿಸಿದ್ದಾರೆ ಎನ್ನುತ್ತಿದ್ದಾರೆ. ವ್ಯಾಲೆಂಟೈನ್ಸ್ ಡೇ ದಿನ ಕೂಡ ವಿಜಯ್ ಬರೀ ಕಾಲುಗಳ ಫೋಟೊ ಹಾಕಿ ಕುತೂಹಲ ಮೂಡಿಸಿದ್ದರು. ಹೊಸ ವರ್ಷಕ್ಕೆ ಮುಂಬೈನಲ್ಲಿ ಒಟ್ಟಿಗೆ ಪಾರ್ಟಿ ಮಾಡಿದ್ದರು. ಅದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಖತ್ ವೈರಲ್ ಆಗಿತ್ತು.

ಅಂದಹಾಗೆ ಚಿತ್ರರಂಗದಲ್ಲಿ ಈಗ ತಮನ್ನಾ ಕ್ರೇಜ್ ಕಮ್ಮಿ ಆಗಿದೆ. ಮೊದಲಿನಿಂತೆ ದೊಡ್ಡ ಸಿನಿಮಾಗಳು ಆಕೆ ಕೈಯಲ್ಲಿ ಇಲ್ಲ. ಪೂಜಾ ಹೆಗ್ಡೆ, ರಶ್ಮಿಕಾ ಮಂದಣ್ಣರಂತಹ ಹೊಸ ನಟಿಯರ ದರ್ಬಾರ್ ನಡುವೆ ತಮನ್ನಾ ಸೈಲೆಂಟ್ ಆಗಿದ್ದಾರೆ. ಕನ್ನಡದ 'ಜಾಗ್ವಾರ್' ಹಾಗೂ 'ಕೆಜಿಎಫ್' ಚಿತ್ರದ ಸ್ಪೆಷಲ್ ಸಾಂಗ್‌ಗಳಲ್ಲಿ ಮಿಲ್ಕಿಬ್ಯೂಟಿ ತಮನ್ನಾ ನಟಿಸಿದ್ದರು. ಸದ್ಯ ತೆಲುಗಿನ ಭೋಳಾ ಶಂಕರ್ ಚಿತ್ರದಲ್ಲಿ ಚಿರಂಜೀವಿಗೆ ಜೋಡಿಯಾಗಿ ನಟಿಸುತ್ತಿದ್ದಾರೆ.

ನಟಿ ತಮನ್ನಾ ಇತ್ತೀಚೆಗೆ ಹೆಚ್ಚು ಆಧ್ಯಾತ್ಮದತ್ತ ಹೊರಳಿದಂತೆ ಕಾಣುತ್ತಿದೆ. ಕೆಲ ದಿನಗಳ ಹಿಂದೆ ಇಶಾ ಯೋಗಾಶ್ರಮದಲ್ಲಿ ಲಿಂಗ ಭೈರವಿ ಆರಾಧನೆ ಮಾಡಿರುವ ವಿಡಿಯೋವನ್ನು ಶೇರ್ ಮಾಡಿದ್ದರು. ಇನ್ನು ಶಿವರಾತ್ರಿ ಸಮಯದಲ್ಲಿ ತಮನ್ನಾ ಇಶಾ ಫೌಂಡೇಶನ್‌ನಲ್ಲಿ ಆದಿಯೋಗಿಗೆ ದೀಪದ ಆರತಿ ಬೆಳಗಿ ಖುಷಿಯಾಗಿದ್ದಾರೆ. ವಿಡಿಯೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

More from Filmibeat

English summary
Actor Vijay Verma Calls His Rumoured Girlfriend Tamannaah Bhatia Tamatar(Tomato). Tamannaah Bhatia and Vijay Varma were allegedly seen kissing each other during a New Year party. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X