»   » ಬಾಯ್ ಫ್ರೆಂಡ್ ಇಲ್ಲದ ಏಕಾಂಗಿ ಬೆಡಗಿ ಅಮೂಲ್ಯಾ

ಬಾಯ್ ಫ್ರೆಂಡ್ ಇಲ್ಲದ ಏಕಾಂಗಿ ಬೆಡಗಿ ಅಮೂಲ್ಯಾ

Posted By: ಉದಯರವಿ
Subscribe to Filmibeat Kannada

ಈ ಸಿನಿಮಾ ತಾರೆಗಳಿಗೆ ಬಾಯ್ ಫ್ರೆಂಡ್ ಇದ್ದಾನೆ ಅಂದ್ರೂ ಕಷ್ಟ, ಇಲ್ಲ ಅಂದ್ರೂ ಕಷ್ಟ. ಇದಾನೆ ಅಂದ್ರೆ ಅವನು ಯಾರು, ಏನು, ಎತ್ತ ಎಂಬ ಗಾಸಿಪ್ ಸುದ್ದಿಗಳು ಕ್ಷಣಕ್ಕೊಂದರಂತೆ ಬಿತ್ತರವಾಗುತ್ತವೆ. ಗೆಳೆಯ ಇಲ್ಲ ಅಂದರೆ ಯಾಕೆ, ಏನು ಕಥೆ ಎಂಬ ಸುದ್ದಿಗಳು ಹುಟ್ಟಿಕೊಳ್ಳುತ್ತವೆ.

ಬಾಯ್ ಫ್ರೆಂಡ್ ಇಲ್ಲದ ಎರಡನೇ ಕೆಟಗರಿಗೆ ಸೇರಿದವರು ನಟಿ ಅಮೂಲ್ಯಾ. "ನನಗ್ಯಾರು ಬಾಯ್ ಫ್ರೆಂಡ್ ಇಲ್ಲ, ಸದ್ಯಕ್ಕೆ ನನಗೆ ಅದರ ಅಗತ್ಯವೂ ಇಲ್ಲ. ಬೇಕು ಅನ್ನಿಸಿದಾಗ ಉತ್ತಮ ಕೌಟುಂಬಿಕ ಹಿನ್ನೆಲೆಯ ಗೆಳೆಯನನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. ಅವನಿಂದ ಪರಿಶುದ್ಧ ಪ್ರೇಮವನ್ನಷ್ಟೇ ನಿರೀಕ್ಷಿಸುತ್ತೇನೆ. ಅಂತಹವನಿಗಾಗಿ ನನ್ನ ಬದುಕು ಮುಡಿಪು" ಎಂದಿದ್ದಾರೆ. [ಸ್ಯಾಂಡಲ್ ವುಡ್ ಐಸೂ-ಮಾದೇಶ ಜೋಡಿಗೊಂದು ಸವಾಲ್]

Actress Amoolya

ಈ ಮಾತು ಕೇಳಿದವರು ಇದ್ಯಾವುದಾದರೂ ಸಿನಿಮಾ ಡೈಲಾಗ್ ಇರಬಹುದೇ ಎಂಬ ಸಂದೇಹಕ್ಕೆ ಒಳಗಾದರೂ ಅಚ್ಚರಿಯಿಲ್ಲ. ಆದರೆ ಅಮೂಲ್ಯಾ ಮಾತ್ರ ಸತ್ಯವನ್ನೇ ಹೇಳುತ್ತಿದ್ದಾರಂತೆ ಸದ್ಯಕ್ಕೆ ಅವರ ಗಮನವೆಲ್ಲಾ ಓದಿನ ಕಡೆಗೆ, ಬಿಡುವಿನ ವೇಳೆಯಲ್ಲಿ ಸಿನಿಮಾ ಕಡೆಗೆ ಅಷ್ಟೇ ಮೀಸಲು.

ಪ್ರಸ್ತುತ 'ಮಳೆ' ಚಿತ್ರದ ನಿರೀಕ್ಷೆಯಲ್ಲಿದ್ದಾರೆ ಅಮೂಲ್ಯಾ. ಸ್ಟೈಲಿಶ್ ಸ್ಟಾರ್ ಪ್ರೇಮ್ ಜೊತೆಗಿನ ಈ ಚಿತ್ರವನ್ನು 'ತಾಜ್ ಮಹಲ್' ಚಂದ್ರು ನಿರ್ಮಿಸಿದ್ದಾರೆ. ಪ್ರೇಮ್ ಮತ್ತು ಅಮೂಲ್ಯಾ ಜೋಡಿಯ ಚಿತ್ರ ಎಂದರೆ ಮತ್ತೊಂದು ಭರ್ಜರಿ ಪ್ರೇಮದ ಮಳೆಯನ್ನು ಪ್ರೇಕ್ಷಕರು ನಿರೀಕ್ಷಿಸುವಂತಾಗಿದೆ.

English summary
Sandalwood cute actress Amoolya says, right now she doesn't have any boyfriend. Reports says, the actress is expecting pure love from his dream boy.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada