For Quick Alerts
ALLOW NOTIFICATIONS  
For Daily Alerts

  ವಯಸ್ಕರಿಗೆ ಮಾತ್ರ: ಸೀರೆಯಲಿ ತಾರೆಗಳ ಸೆಕ್ಸಿ ಲುಕ್

  By ರವಿಕಿಶೋರ್
  |

  ನಾರಿಗೆ ಸೀರೆಯೇ ಭೂಷಣ. ಸಿನೆಮಾ ತಾರೆಗೆ ಬಿಕಿನಿಯೇ ಭೂಷಣ ಎಂಬ ಹೊಸ ಮಾತೊಂದು ಚಿತ್ರೋದ್ಯಮದಲ್ಲಿ ಹುಟ್ಟಿಕೊಂಡಿದೆ. ಆದರೆ ಸಿನೆಮಾ ತಾರೆಗಳೂ ಸೀರೆ ಉಟ್ಟರೆ ರಂಭೆ ಊರ್ವಶಿ ಮೇನಕೆಯರನ್ನೂ ಮೀರಿಸುತ್ತಾರೆ.

  ಉಳಿದ ಯಾವುದೇ ಉಡುಗೆ ತೊಡುಗೆಗೆ ಹೋಲಿಸಿದರೆ ಸೀರೆಯಲ್ಲಿ ಕಾಣುವಷ್ಟು ಸೊಗಸಾಗಿ ಇನ್ಯಾವುದರಲ್ಲೂ ಕಾಣಿಸಲಾರರು. ಸನ್ನಿ ಲಿಯೋನ್ ಗೆ ಸೀರೆ ಉಡಿಸಿದರೂ ಅಷ್ಟೇ ರಾಖಿ ಸಾವಂತ್ ಆದರೂ ಅಷ್ಟೇ. ಸೀರೆ ಸೀರೆಯೇ.

  ಅದಕ್ಕೇ ಇರಬೇಕು ಬಹುಶಃ ಮದುವೆ, ಸಭೆ ಸಮಾರಂಭ ಅಷ್ಟೇ ಏಕೆ ಶೋಭನದಂತಹ ಶುಭಕಾರ್ಯಗಳಿಗೂ ಸೀರೆಯೇ ಆಗಬೇಕು. ಸೀರೆ ಇಲ್ಲದೆ ಯಾವುದೇ ಮಂಗಳಕಾರ್ಯ ಸಾಧ್ಯವೆ? ಇಲ್ಲೇ ತಿಳಿದುಕೊಳ್ಳಿ ಸೀರೆಯ ಮಹತ್ವ. [ಸರಸದ ಸಮಯವನು ರಸಮಯವಾಗಿಸುವ ಸೀರೆ]

  ತಾರೆ ಅನುಷ್ಕಾ ಶೆಟ್ಟಿ ಸೀರೆ ಸೊಬಗು

  ಈ ಫೋಟೋ ನೋಡಿದರೆ ಬೆಂಗಳೂರು ಬೆಡಗಿ ಅನುಷ್ಕಾ ಶೆಟ್ಟಿ ಮೈಮೇಲೆ ಸೀರೆ ನಿಲ್ಲುವುದೇ ಕಷ್ಟ ಅನ್ನಿಸುತ್ತದೆ. ಅದು ಎಲ್ಲಿ ಜಾರಿ ಅಣ್ಣಾವ್ರ 'ಚಲಿಸುವ ಮೋಡಗಳು' ಚಿತ್ರದ ಚಂದಿರ ತಂದ ಹುಣ್ಣಿಮೆ ರಾತ್ರಿ, ಗಾಳಿಯು ತಂದ ತಣ್ಣನೆ ರಾತ್ರಿ ಹಾಡು ನೆನಪಿಸುತ್ತದೋ ಎಂದು ಭಾಸವಾಗುತ್ತದೆ.

  ನಯನತಾರಾ ಬಿಳಿ ಸೀರೆ ನಯನ ಮನೋಹರ

  'ಸೂಪರ್' ಚಿತ್ರದಲ್ಲಿ ಉಪೇಂದ್ರ ಜೊತೆ ತುಂಬಾ ಆಕರ್ಷಕವಾಗಿ ಸೀರೆ ತೊಟ್ಟು ನಯನತಾರಾ ಎಲ್ಲರ ಗಮನಸೆಳೆದಿದ್ದರು. ನಯನತಾರಾ ಉಡುವ ಸೀರೆಗೆ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸುವ ಶಕ್ತಿ ಇದೆ.

  ರೇಶಿಮೆ ಸೀರೆಯಲಿ ತ್ರಿಷಾ ಮನಮೋಹಕ

  ಈಕೆ ಹೇಳಿ ಕೇಳಿ ಬಿಕಿನಿ ಬೆಡಗಿ. ಆದರೂ ಸೀರೆ ಉಟ್ಟರೆ ಈ ಕೃಷ್ಣ ಸುಂದರಿ ಕೃಷ್ಣಮೃಗದಂತೆಯೇ ಅತ್ಯಾಕರ್ಷಕ. ತ್ರಿಷಾ ಕೃಷ್ಣನ್ ಸೀರೆಯಲ್ಲಿ ಮನಮೋಹಕವಾಗಿ ಕಾಣಿಸುತ್ತಾರೆ. ಪಕ್ಕದ ಮನೆ ಹುಡುಗಿಯಷ್ಟೇ ಸಮ್ಮೋಹಕ.

  ಶ್ರಿಯಾ ಸರನ್ ಸೀರೆ ಚಿತ್ತಾಕರ್ಷಕ

  ಮೊದಲೆ ಈಕೆ ದಂತದ ಗೊಂಬೆ. ಇನ್ನು ಸೀರೆ ಉಟ್ಟರಂತೂ ಬೆಳದಿಂಗಳ ಬಾಲೆ. ಸದ್ಯಕ್ಕೆ ಈ ಬೆಳದಿಂಗಳ ಬಾಲೆ ಕನ್ನಡದ 'ಚಂದ್ರ' ಚಿತ್ರದಲ್ಲಿ ಬಿಜಿಯಾಗಿದ್ದಾರೆ. ಸೀರೆಯಲಿ ಚಿತ್ತಾಕರ್ಷಕ.

  ಸೀರೆಯಲಿ ಹಂಸಿಕಾ ಮೋತ್ವಾನಿ ಬಿಂದಾಸ್

  ಹಂಸಿಕಾ ಮೋತ್ವಾನಿ ಈಗಾಗಲೆ ಕನ್ನಡ ಚಿತ್ರರಸಿಕರಿಗೆ ಬಿಂದಾಸ್ ಚಿತ್ರದ ಮೂಲಕ ಪರಿಚಿತರು. ಪವರ್ ಸ್ಟಾರ್ ಪುನೀತ್ ರಾಜ್ ಕುಮರ್ ಜೊತೆ ಗುಬ್ಬಚ್ಚಿ ಗೂಡಿನಲ್ಲಿ ಕದ್ದು ಮುಚ್ಚಿ ಎಂದು ಕುಣಿದು ಥರ ಥರ ಒಂಥರಾ ಪ್ರೇಕ್ಷಕರಿಗೆ ಕಚಗುಳಿ ಇಟ್ಟ ತಾರೆ.

  ಮಿಲ್ಕಿ ಬ್ಯೂಟಿ ತಮನ್ನಾ ರಮಣೀಯ

  ಈಕೆ ಒಮ್ಮೆ ಟೈಟ್ ಜೀನ್ಸ್ ತೊಟ್ಟು ತಿರುಪತಿ ತಿಮ್ಮಪ್ಪನ ದರ್ಶನ ಮಾಡಿ ಶಾಂತಂ ಪಾಪಂ ಕೆಲಸ ಮಾಡಿದ್ದರು. ಬಳಿಕ ಕ್ಷಮೆಯಾಚಿಸಿ ತಪ್ಪಾಯ್ತು ಎಂದಿದ್ದರು. ಈಕೆಯ ಮೈಮೇಲೆ ಸೀರೆ ನಿಲ್ಲುವುದು ಕಷ್ಟ.

  ಸೀರೆಯಲಿ ಕಾಜಲ್ ಬೆಳದಿಂಗಳ ತಾರೆ

  ಕಾಜಲ್ ಅಗರವಾಲ್ ಎಂಬ ತಾರೆ ಸೀರೆಯಲಿ ಸಭ್ಯವಾಗಿ ಕಾಣಿಸುತ್ತಾರೆ. ಆದರೆ ಈಕೆ ಅದ್ಯಾವುದೋ ನಿಯತಕಾಲಿಕೆಗಾಗಿ ಬಟ್ಟೆ ಬಿಚ್ಚಿ ಎಡವಟ್ಟು ಮಾಡಿಕೊಂಡಿದ್ದರು.

  ಸೀರೆಯಲಿ ಅಮಲೇರಿಸುವ ಅಮಲಾ ಪೌಲ್

  ಸೀರೆಯಲಿ ಪ್ರೇಕ್ಷಕರ ಕಣ್ಣನ್ನು ತಂಪು ಮಾಡುವ ಕಲೆ ಅಮಲಾ ಪೌಲ್ ಎಂಬ ತಾರೆಗೆ ಸಿದ್ಧಿಸಿದೆ. ಹಾಗಾಗಿಯೇ ಈಕೆ ಸೀರೆ ಪಾತ್ರಗಳ ಮೂಲಕ ಮನೆಮಾತಾಗಿದ್ದಾರೆ. ತಮಿಳು ಚಿತ್ರಗಳಲ್ಲಿ ತಮ್ಮದೇ ಆದಂತಹ ವಿಶಿಷ್ಟ ಛಾಪನ್ನು ಮೂಡಿಸಿರುವ ತಾರೆ.


  ಸಿನೆಮಾಗಳಲ್ಲಿ ಬಳಕೆಯಾಗಿರುವ ಸೀರೆಗಳಿಗಂತೂ ಲಕ್ಷಾಂತರ ಹಣ ಸುರಿಯಲಾಗುತ್ತದೆ. ಹೊಕ್ಕಳು ಕಾಣುವಂತೆ ಸೀರೆ ತೊಡುವುದೇ ಭಾರತೀಯ ಸಿನೆಮಾಗಳಲ್ಲಿ ಹಾಸುಹೊಕ್ಕಾಗಿದೆ. ಉತ್ತರ ಭಾರತಕ್ಕಿಂತಲೂ ದಕ್ಷಿಣದಲ್ಲಿ ಸೀರೆಗೆ ಹೆಚ್ಚು ಬೇಡಿಕೆ ಇದೆ.

  ಇಲ್ಲಿವೆ ನೋಡಿ ಕೆಲವು ತಾರೆಗಳ ಸೀರೆ ಸೌಂದರ್ಯ. ಅನುಷ್ಕಾ ಶೆಟ್ಟಿ, ತ್ರಿಷಾ ಕೃಷ್ಣನ್, ನಯನತಾರಾ, ಶ್ರಿಯಾ ಸರನ್, ತಮನ್ನಾ ಭಾಟಿಯಾ ಸೇರಿದಂತೆ ಇನ್ನೂ ಹಲವರು. ಕಣ್ಮಣ ತಣಿಸುವ ಫೋಟೋಗಳು. ಸೀರೆಯಲ್ಲಿ ಯಾರು ಅತ್ಯಂತ ಸೆಕ್ಸಿಯಾಗಿ ಕಾಣುತ್ತಾರೆ?

  English summary
  Here, we are bringing you some of the modern-day actresses like Anushka Shetty, Trisha Krishnan, Nayantara, Shriya Saran, Tamanna Bhatia and others, who looked graceful and hot in saree in recent films.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more