Don't Miss!
- Automobiles Honda: ಭಾರತದಲ್ಲಿ ಹೋಂಡಾ ಹೊಸ ಮೈಲಿಗಲ್ಲು: ಎಷ್ಟು ಮಂದಿಯ ಬಳಿ ಆಕ್ಟೀವಾ, ಶೈನ್ ಇದೆ ಹೇಳಿ?
- Lifestyle ವಿಶ್ವದಲ್ಲೇ ಅತೀ ಹೆಚ್ಚು ಬಾರಿ ಚುನಾವಣೆ ಸೋತ ವ್ಯಕ್ತಿ..! ಯಾರು ಈ ಸೋಲುವ ಸರದಾರ ಗೊತ್ತಾ?
- News India Unemployment: ದೇಶದಲ್ಲಿ ಯುವ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಳ: ಬೆಚ್ಚಿಬೀಳಿಸುವ ವರದಿ ಬಹಿರಂಗ!
- Finance ನಿಮಗೆ ಗೊತ್ತಲ್ಲದೇ ನಿಮ್ಮ ಹೆಸರಲ್ಲಿ ಖಾತೆ ತೆರೆದಿರ್ತಾರೆ, ಪಿಂಚಣಿ ಯೋಜನೆ ಬಗ್ಗೆ ಹುಷಾರಾಗಿರಿ
- Sports IPL 2024: ಐಪಿಎಲ್ನಲ್ಲಿ ವಿಶಿಷ್ಟ ದಾಖಲೆ ಬರೆದ ಜಯದೇವ್ ಉನಾದ್ಕಟ್; ಈ ಸಾಧನೆ ಮಾಡಿದ ಮೊದಲ ಭಾರತೀಯ
- Technology iPhones: ಬೇಕಿತ್ತಾ ಇದೆಲ್ಲ? ನಕಲಿ ಐಫೋನ್ ಮೂಲಕ ಆಪಲ್ಗೆ ಪಂಗನಾಮ ಹಾಕಿದವನಿಗೆ ಜೈಲೂಟ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಾಯಕಿಯ ಮಾಜಿ ಪತಿ ಜೊತೆ ಅನುಷ್ಕಾ ಶೆಟ್ಟಿ ಸಿನಿಮಾ: ಶೀಘ್ರದಲ್ಲೇ ಸ್ವೀಟ್ ನ್ಯೂಸ್?
ಕರಾವಳಿ ಸುಂದರಿ ಅನುಷ್ಕಾ ಶೆಟ್ಟಿ ಸಿನಿಮಾದಲ್ಲಿ ಕಾಣಿಸಿಕೊಳ್ಳದೆ ಬಹಳ ದಿನಗಳಾಗಿವೆ. ಅನುಷ್ಕಾ ಕೊನೆಯ ಬಾರಿ 'ನಿಶಬ್ದಂ' ಚಿತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ತೆರೆಕಂಡ ಬಳಿಕ ಮತ್ತೊಂದು ಸಿನಿಮಾವನ್ನು ಘೋಷಿಸಿಲ್ಲ. ಆದರೆ, ಯುವಿ ಕ್ರಿಯೇಷನ್ ಸಂಸ್ಥೆಯೊಂದಿಗೆ ಸಿನಿಮಾ ಮಾಡುವುದಾಗಿ ಘೋಷಿಸಿದ್ದರು.
ಯುವಿ ಕ್ರಿಯೇಷನ್ಸ್ ಜೊತೆ ಯಾವಾಗ ಸಿನಿಮಾ ಶುರು ಮಾಡಲಿದ್ದಾರೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ, ಇತ್ತೀಚೆಗಷ್ಟೇ ಅನುಷ್ಕಾ ಶೆಟ್ಟಿ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿ ಹಲ್ಚಲ್ ಎಬ್ಬಿಸಿದೆ.
'ಬಾಹುಬಲಿ' ಬಳಿಕ ಮತ್ತೆ ಒಂದಾಗ್ತಾರೆ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ: ಸಿನಿಮಾ ಯಾವುದು?
'ಸೂಪರ್' ಸಿನಿಮಾದ ಮೂಲಕ ಟಾಲಿವುಡ್ಗೆ ಎಂಟ್ರಿ ಕೊಟ್ಟ ಅನುಷ್ಕಾ ಶೆಟ್ಟಿ ಕೆಲವೇ ಸಮಯದಲ್ಲಿ ಸ್ಟಾರ್ ಹೀರೊಯಿನ್ ಪಟ್ಟಕ್ಕೇರಿದ್ದರು. ಆದರೆ ಹೊಸ ನಾಯಕಿಯರ ಎಂಟ್ರಿ, ತೂಕ ಹೀಗೆ ಹಲವು ಕಾರಣಗಳಿಂದ ಅನುಷ್ಕಾ ಚಿತ್ರರಂಗದಿಂದ ದೂರವೇ ಉಳಿದಿದ್ದರು. ಆದರೆ, ಅನುಷ್ಕಾ ತೂಕವನ್ನು ಲೆಕ್ಕಿಸದೆ ಆಫರ್ ಮಾಡುವವರ ಸಂಖ್ಯೆ ಕಡಿಮೆಯೇನಿಲ್ಲ. ಆದ್ರೀಗ ಹೊಸ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗಿದೆ.
ಅನುಷ್ಕಾ ಸಿನಿಮಾ ಬಗ್ಗೆ ವದಂತಿಯೇನು?
ಈ
ಹಿಂದೆ
ಯುವಿ
ಕ್ರಿಯೇಷನ್ಸ್
ಅನುಷ್ಕಾ
ಶೆಟ್ಟಿಯೊಂದಿಗೆ
ಸಿನಿಮಾ
ಮಾಡಬಹುದೆಂಬ
ವದಂತಿ
ಹಬ್ಬಿತ್ತು.
ನವೀನ್
ಪೋಲಿಶೆಟ್ಟಿ
ಹಾಗೂ
ಅನುಷ್ಕಾ
ಶೆಟ್ಟಿ
ಕಾಂಬಿನೇಷನ್ನಲ್ಲಿ
ಸಿನಿಮಾ
ಶುರುವಾಗುತ್ತೆ.
ಮಹೇಶ್
ಆ
ಸಿನಿಮಾವನ್ನು
ನಿರ್ದೇಶನ
ಮಾಡುತ್ತಾರೆ
ಎಂಬ
ಸುದ್ದಿ
ಇತ್ತು.
ಆದ್ರೀಗ
ಈ
ಸಿನಿಮಾದ
ಬಗ್ಗೆ
ಅಧಿಕೃತವಾಗಿ
ಯಾವುದೇ
ಮಾಹಿತಿ
ಸಿಕ್ಕಿಲ್ಲ.
ಇತ್ತೀಚೆಗೆ
ಟಾಲಿವುಡ್ನಲ್ಲಿ
ಹರಿದಾಡುತ್ತಿರುವ
ಮಾಹಿತಿ
ಪ್ರಕಾರ,
ನಾಯಕಿಯ
ಮಾಜಿ
ಪತಿ
ಅನುಷ್ಕಾ
ಶೆಟ್ಟಿ
ಜೊತೆ
ಸಿನಿಮಾ
ಮಾಡುತ್ತಾರೆ
ಎನ್ನಲಾಗಿದೆ.
ನಟಿ ಅನುಷ್ಕಾಶೆಟ್ಟಿ ಸೋದರನ ಹತ್ಯೆಗೆ ಸ್ಕೆಚ್ ಹಾಕಿದ್ದು ಯಾರು? ಏಕೆ?
ಅನುಷ್ಕಾ ಶೆಟ್ಟಿ ಗ್ರೀನ್ ಸಿಗ್ನಲ್
ಅಂದ್ಹಾಗೆ ಆ ನಾಯಕಿಯ ಮಾಜಿ ಪತಿ ಮತ್ಯಾರೂ ಅಲ್ಲ ಎಎಲ್ ವಿಜಯ್. ಇವರು 'ಹೆಬ್ಬುಲಿ' ಚಿತ್ರದ ನಾಯಕಿ ಅಮಲಾಪಾಲ್. ಇಬ್ಬರೂ ಈಗ ಬೇರೆ ಬೇರೆಯಾಗಿದ್ದು, ತಮ್ಮ ವೃತ್ತಿ ಬದುಕಿನಲ್ಲಿ ಆರಾಮಾಗಿದ್ದಾರೆ. ಇತ್ತೀಚೆಗಿನ ಟಾಲಿವುಡ್ನಲ್ಲಿ ಹರಿದಾಡುತ್ತಿರುವ ಮಾಹಿತಿ ಪ್ರಕಾರ, ಎಎಲ್ ವಿಜಯ್ ಮಹಿಳಾ ಪ್ರಧಾನ ಕಥೆಯೊಂದನ್ನು ಹೆಣೆದಿದ್ದಾರೆಂತೆ. ಆ ಕತೆಯನ್ನು ಅನುಷ್ಕಾ ಶೆಟ್ಟಿಗೆ ಒಪ್ಪಿಸಿದ್ದು ಆ ಕಥೆಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗಿದೆ.
ಪ್ರಭಾಸ್ ಸಂಸ್ಥೆಯೊಂದಿಗೆ ಸಿನಿಮಾ
ಈ ಸಿನಿಮಾವನ್ನು ಯುವಿ ಕ್ರಿಯೇಷನ್ಸ್ ನಿರ್ಮಾಣ ಮಾಡಲು ಹೊರಟಿದೆ ಎನ್ನುವ ಸುದ್ದಿ ಕೂಡ ಇದೆ. ಪ್ರಭಾಸ್ ಸ್ವಂತ ಬ್ಯಾನರ್ ಯುವಿ ಕ್ರಿಯೇಷನ್ಸ್ ಕೂಡ ಈ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದೆ ಎನ್ನಲಾಗಿದೆ. ಪ್ರಭಾಸ್ ಜೊತೆ ಅನುಷ್ಕಾ ಉತ್ತಮ ಬಾಂಧವ್ಯ ಹೊಂದಿರುವುದರಿಂದ ಈ ಸಿನಿಮಾ ಒಪ್ಪಿಕೊಂಡಿದ್ದಾರೆ ಎಂಬ ವದಂತಿ ಹಬ್ಬಿದೆ.
ನವೀನ್ ಸಿನಿಮಾದಲ್ಲಿಲ್ಲ ಸ್ಪಷ್ಟತೆ
ಮಹೇಶ್ ನಿರ್ದೇಶನ ಮಾಡಲು ಹೊರಟಿದ್ದ ಸಿನಿಮಾದ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ನವೀನ್ ಪೋಲಿಶೆಟ್ಟಿ ಹಾಗೂ ಅನುಷ್ಕಾ ಶೆಟ್ಟಿ ಈ ಸಿನಿಮಾದಲ್ಲಿ ಒಟ್ಟಿಗೆ ನಟಿಸಬೇಕಿತ್ತು. ಟಾಲಿವುಡ್ನಲ್ಲಿ ಈ ಸಿನಿಮಾ ನಿಂತು ಹೋಗಿದೆ ಎಂಬ ಪ್ರಚಾರವೂ ಕೇಳಿಬಂದಿತ್ತು. ಆದರೆ ಇನ್ನೂ ಈ ಬಗ್ಗೆ ಅಧಿಕೃತವಾಗಿ ಘೋಷಣೆಯಾಗಿಲ್ಲ. ಹೀಗಾಗಿ ಈ ಸಿನಿಮಾ ನಿಜವಾಗಿಯೂ ನಿಂತು ಹೋಗಿದೆಯೇ? ಇಲ್ಲ ಪೋಸ್ಟ್ಪೋನ್ ಆಗಿದೆಯಾ? ಎಂಬ ಬಗ್ಗೆ ಸ್ಪಷ್ಟತೆಯಂತೂ ಸದ್ಯಕ್ಕಿಲ್ಲ.