»   » ಅನುಷ್ಕಾ ಕೈಹಿಡಿಯಲಿರುವ ಹೈದರಾಬಾದ್ ಗಂಡು

ಅನುಷ್ಕಾ ಕೈಹಿಡಿಯಲಿರುವ ಹೈದರಾಬಾದ್ ಗಂಡು

By: ಅನಂತರಾಮು, ಹೈದರಾಬಾದ್
Subscribe to Filmibeat Kannada

ಬೆಂಗಳೂರು ಮೂಲದ ಈ ತಾರೆ ಹೈದರಾಬಾದಿನಲ್ಲಿದ್ದುಕೊಂಡೇ ಹೆಸರು, ಹಣ, ಆಸ್ತಿಪಾಸ್ತಿ ಸಂಪಾದಿಸಿದರು. ತೆಲುಗು, ತಮಿಳು ಚಿತ್ರಗಳಲ್ಲಿ ಅಭಿನಯಿಸಿದರಾದರೂ ಕನ್ನಡದಲ್ಲಿ ಅಭಿನಯಿಸಲಿಲ್ಲ. ಮನಸ್ಸು ಮಾಡಿದ್ದರೆ ಅಭಿನಯಿಸಬಹುದಿತ್ತು. ಆದರೆ ಅದ್ಯಾಕೋ ಏನೋ ಅದು ಸಾಧ್ಯವಾಗಲಿಲ್ಲ.

ನೇರವಾಗಿ ವಿಷಯಕ್ಕೆ ಬರುವುದಾದರೆ ಈಕೆ ಒಂದಿಲ್ಲೊಂದು ಗಾಸಿಪ್ ಗೆ ಆಗಾಗ ಬಲಿಯಾಗುತ್ತಲೇ ಇದ್ದಾರೆ. ಆ ಹೀರೋ ಜೊತೆ ಹಂಗಂತೆ, ಈ ಹೀರೋ ಜೊತೆ ಹಿಂಗಂತೆ ಎಂಬ ಮಾತುಗಳಿಗೂ ಬರವಿಲ್ಲ. ಜನಪ್ರಿಯತೆಗೆ ತಕ್ಕಂತೆ ಗಾಸಿಪ್ ಗಳೂ ಹರಿದಾಡುತ್ತಿವೆ.

ಈಗ ಅನುಷ್ಕಾ ಮದುವೆಗೆ ಶೀಘ್ರದಲ್ಲೇ ಗಟ್ಟಿಮೇಳ ಎಂಬ ಸುದ್ದಿ ಇದೆ. ಮದುವೆ ಬಳಿಕ ಚಿತ್ರರಂಗಕ್ಕೂ ಗುಡ್ ಬೈ ಹೇಳುವುದರಲ್ಲಿದ್ದಾರೆ ಈ ಯೋಗಿಣಿ. ಹೈದರಾಬಾದ್ ಮೂಲಕ ಬಿಜಿನೆಸ್ ಮೆನ್ ಕೈಹಿಡಿಯಲಿದ್ದಾರಂತೆ ಅನುಷ್ಕಾ.


ಇವರಿಬ್ಬರೂ ಕಳೆದ ಕೆಲವು ತಿಂಗಳಿಂದ ಡೇಟಿಂಗ್ ಮಾಡುತ್ತಿದ್ದಾರಂತೆ. ಇಬ್ಬರು ಮದುವೆಯಾಗಲು ಮುಂದಾಗಿದ್ದು ಕುಟುಂಬಿಕರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ. ಹೈದಾರಾಬಾದಿನ ಈತ ಅನುಷ್ಕಾಗೆ ಹೇಳಿ ಮಾಡಿಸಿದ ಜೋಡಿ ಎನ್ನಲಾಗಿದೆ.

ಈ ಹಿಂದೊಮ್ಮೆ ಅನುಷ್ಕಾ ಮದುವೆ ನಾಗಾರ್ಜುನ ಪುತ್ರ ನಾಗಚೈತ್ಯನ್ಯ ಜೊತೆ ಎಂಬ ಸುದ್ದಿ ಹಬ್ಬಿತ್ತು. ಬಳಿಕ ಸ್ವತಃ ಅನುಷ್ಕಾ ಅವರೇ ಈ ಸುದ್ದಿಯನ್ನು ಅಲ್ಲಗಳೆದಿದ್ದರು. ಈಗ ಬಂದಿರುವ ಸುದ್ದಿಯೂ ಅದೇ ರೀತಿಯದ್ದಾ ಅಥವಾ ನಿಜವಾಗಿಯೂ ಮದುವೆಯಾಗುತ್ತಿದ್ದಾರೆಯೇ? ಅನುಷ್ಕಾ ಅವರೇ ಉತ್ತರಿಸಬೇಕು.

English summary
If the buzz has to be believed, the hot girl Anushka Shetty is planning to settle down to marriage bliss soon. There are reports of Anushka Shetty dating a Hyderabad-based businessman.
Please Wait while comments are loading...