»   » 'ಅಪೂರ್ವ' ನಂತರ ಕಾಣೆಯಾಗಿದ್ದ ನಟಿಗೆ ಮತ್ತೊಂದು ದೊಡ್ಡ ಅವಕಾಶ.!

'ಅಪೂರ್ವ' ನಂತರ ಕಾಣೆಯಾಗಿದ್ದ ನಟಿಗೆ ಮತ್ತೊಂದು ದೊಡ್ಡ ಅವಕಾಶ.!

Posted By:
Subscribe to Filmibeat Kannada
ರವಿ ಮಾಮನನ್ನು ಒಂದಾಗಲಿದ್ದಾಳೆ ಅಪೂರ್ವ | Ravichandran meets apporva again | Filmibeat Kannada

ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯಿಸಿದ್ದ 'ಅಪೂರ್ವ' ಸಿನಿಮಾ ತೆರೆಕಂಡು ಎರಡು ವರ್ಷ ಆಗಿದೆ. 2016ರಲ್ಲಿ ತೆರೆಕಂಡಿದ್ದ ಈ ಚಿತ್ರ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತಾದರೂ, ಹೊಸ ಸ್ಟೈಲ್ ನಲ್ಲಿ ಎಂಟರ್ ಟೈನ್ಮೆಂಟ್ ನೀಡಿದ್ದ ರವಿಚಂದ್ರನ್ ಸಾಹಸಕ್ಕೆ ಪ್ರೇಕ್ಷಕರು ಶರಣಾಗಿದ್ದರು.

ಈ ಚಿತ್ರದ ನಾಯಕಿ ಸಿನಿಮಾ ಬಿಡುಗಡೆಗೂ ಮುಂಚೆ ಸ್ಯಾಂಡಲ್ ವುಡ್ ನ ಕೇಂದ್ರ ಬಿಂದು ಆಗಿದ್ದರು. ಸಿನಿಮಾ ತೆರೆಕಂಡ ನಂತರ ಅದ್ಯಾಕೋ ಸೈಲೆಂಟ್ ಆಗಿಬಿಟ್ಟರು. ಅವಕಾಶಗಳ ಕೊರತೆ ಉಂಟಾಯಿತೋ ಅಥವಾ ಒಂದು ಬ್ರೇಕ್ ಬೇಕು ಅಂತ ಸುಮ್ಮನಾದರೋ ಗೊತ್ತಿಲ್ಲ. 'ಅಪೂರ್ವ' ನಂತರ ಮತ್ಯಾವ ಚಿತ್ರದಲ್ಲೂ ನಟಿಸುತ್ತಿದ್ದಾರೆ ಎಂಬ ವರದಿ ಎಲ್ಲೂ ಆಗಿಲ್ಲ.

In pics: ನಟಿ 'ಅಪೂರ್ವ' ಅವರ ಹೆಚ್ಚಿನ ಫೋಟೋಗಳು

ಇದೀಗ, ಎರಡು ವರ್ಷದ ನಂತರ ಮತ್ತೆ ಬೆಳ್ಳಿತೆರೆಗೆ ಪುನಃ ಪ್ರವೇಶ ಮಾಡ್ತಿದ್ದಾರೆ ಅಪೂರ್ವ ನಟಿ. ಅಂದ್ಹಾಗೆ, ಈ ನಟಿಯೇ ಹೆಸರು ಕೂಡ 'ಅಪೂರ್ವ'. ಅಷ್ಟಕ್ಕೂ, ಅಪೂರ್ವ ಅಭಿನಯಿಸಲಿರುವ ಎರಡನೇ ಸಿನಿಮಾ ಯಾವುದು.? ಯಾವ ಸ್ಟಾರ್ ನಟನ ಜೊತೆ ಆಕ್ಟ್ ಮಾಡ್ತಿದ್ದಾರೆ.? ಮುಂದೆ ಓದಿ.....

ಕ್ರೇಜಿಸ್ಟಾರ್ ಜೊತೆ ಎರಡನೇ ಅವಕಾಶ

'ಅಪೂರ್ವ' ಚಿತ್ರದಲ್ಲಿ ರವಿಚಂದ್ರನ್ ಗೆ ನಾಯಕಿಯಾಗಿದ್ದ ನಟಿ ಈಗ ಮತ್ತೊಮ್ಮೆ ಕ್ರೇಜಿಸ್ಟಾರ್ ಚಿತ್ರದಲ್ಲಿ ನಟಿಸಲಿದ್ದಾರಂತೆ. ಇಂತಹದೊಂದು ಸುದ್ದಿ ಈಗ ಗಾಂಧಿನಗರದಲ್ಲಿ ಗಿರಿಗಿಟ್ಲೆ ಹೊಡೆತಿದೆ. ರವಿಚಂದ್ರನ್ ಸ್ವತಃ ನಿರ್ದೇಶನ ಮಾಡುತ್ತಿರುವ ಹೊಸ ಚಿತ್ರದಲ್ಲಿ ಪ್ರಮುಖ ಪಾತ್ರಕ್ಕೆ ಅಪೂರ್ವ ಆಯ್ಕೆಯಾಗಿದ್ದಾರಂತೆ.

ಬ್ಯಾಕ್ ಟು ಬ್ಯಾಕ್ ಹಿಟ್ ನೀಡಲು ರವಿಮಾಮ ಸಜ್ಜು

'ರಾಜೇಂದ್ರ ಪೊನ್ನಪ್ಪ'ಗೆ ಬಂದ ಅಪೂರ್ವ.!

ಕ್ರೇಜಿಸ್ಟಾರ್ ನಟಿಸಿ-ನಿರ್ದೇಶನ ಮಾಡುತ್ತಿರುವ 'ರಾಜೇಂದ್ರ ಪೊನ್ನಪ್ಪ' ಚಿತ್ರದಲ್ಲಿ ಅಪೂರ್ವ ಅಭಿನಯಿಸಲಿದ್ದಾರೆ. ಅಂದ್ಹಾಗೆ, ಈಗಾಗಲೇ ರಾಧಿಕಾ ಕುಮಾರಸ್ವಾಮಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಆದ್ರೆ, ಇನ್ನೊಂದು ಮುಖ್ಯ ಪಾತ್ರಕ್ಕೆ ಅಪೂರ್ವ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ.

ಲಾಯರ್ ಪಾತ್ರದಲ್ಲಿ ಅಪೂರ್ವ

'ರಾಜೇಂದ್ರ ಪೊನ್ನಪ್ಪ' ಚಿತ್ರದಲ್ಲಿ ರವಿಚಂದ್ರನ್ ಲಾಯರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ, ಅಪೂರ್ವ ಕೂಡ ಈ ಚಿತ್ರದಲ್ಲಿ ಲಾಯರ್ ಪಾತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ ಎನ್ನಲಾಗಿದೆ.

ಒಮ್ಮೆ ಅಭಿನಯಿಸಿದ್ರೆ ಮತ್ತೊಂದು ಅದೃಷ್ಟ.!

ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆಯಲ್ಲಿ ಒಮ್ಮೆ ಅಭಿನಯಿಸಿದ್ರೆ ಮತ್ತೊಂದು ಅವಕಾಶ ಸಿಗುವುದು ಬಹಳ ಅಪರೂಪ ಮತ್ತು ಅದೃಷ್ಟವೇ ಸರಿ. ಜೂಹಿ ಚಾವ್ಲಾ, ಖುಷ್ಬೂ, ರೋಜಾ, ಅಂತಹ ನಟಿಯರಿಗೆ ರವಿಮಾಮನ ಜೊತೆಯಲ್ಲಿ ಹಿಂದೆಂದೆನೇ ನಟಿಸುವ ಅವಕಾಶ ಸಿಕ್ಕಿತ್ತು. ಈಗ ಅಪೂರ್ವ ಅವರಿಗೂ ಇಂತಹದೊಂದು ಅವಕಾಶ ಸಿಕ್ಕಿರುವುದು ನಿಜಕ್ಕೂ ಅದೃಷ್ಟ.

ರವಿಚಂದ್ರನ್ ಅವರಿಗೆ ಗೌರವ ಡಾಕ್ಟರೇಟ್ ಇನ್ನೂ ಸಿಕ್ಕಿಲ್ಲ. ಇದು ಸರೀನಾ ?

ಶೂಟಿಂಗ್ ನಡೆಯುತ್ತಿದೆ

ಕಥೆ-ಚಿತ್ರಕಥೆ-ನಿರ್ದೇಶನದ ಜೊತೆಗೆ ಸಂಗೀತ ಹಾಗೂ ಈ ಚಿತ್ರವನ್ನ ನಿರ್ಮಾಣ ಮಾಡುತ್ತಿರುವುದು ಕೂಡ ರವಿಚಂದ್ರನ್. ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದೆ. ಕೆಲವೇ ದಿನಗಳಲ್ಲಿ ಅಪೂರ್ವ ಕೂಡ ಶೂಟಿಂಗ್ ನಲ್ಲಿ ಭಾಗವಹಿಸಲಿದ್ದಾರೆ.

English summary
Apoorva Two years, after the film's release, actress Apoorva is back to sharing screen-space with the Crazy Star in his upcoming directorial, Rajendra Ponnappa.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X