»   » ಫಿಲಂ ಮೇಕರ್ ಜತೆ ಮಲ್ಲು ಬೆಡಗಿ ಭಾವನಾ ಮದುವೆ

ಫಿಲಂ ಮೇಕರ್ ಜತೆ ಮಲ್ಲು ಬೆಡಗಿ ಭಾವನಾ ಮದುವೆ

By: ಉದಯರವಿ
Subscribe to Filmibeat Kannada

ಕನ್ನಡದಲ್ಲಿ ಮಿಂಚಿದ ಕೇರಳ ಬ್ಯೂಟಿ ಭಾವನಾ ಅವರಿಗೆ ಕಂಕಣಭಾಗ್ಯ ಕೂಡಿಬಂದಿದೆ. ಇತ್ತೀಚೆಗೆ ಅವಕಾಶಗಳು ಕಡಿಮೆಯಾಗುತ್ತಿರುವುದು, ಇನ್ನೊಂದು ಕಡೆ ವಯಸ್ಸು ದಾಪುಗಾಲು ಹಾಕುತ್ತಾ ಮುಂದೆ ಸಾಗುತ್ತಿದ್ದು, ಆದಷ್ಟು ಬೇಗ ಮದುವೆಯಾಗಿ ಸೆಟ್ಲ್ ಆಗುವ ಯೋಚನೆಯಲ್ಲಿದ್ದಾರೆ ಭಾವನಾ.

ಈಗವರು ನಿರ್ಮಾಪಕರೊಬ್ಬರ ಹಿಂದೆ ಬಿದ್ದಿದ್ದಾರೆ ಎಂಬ ಸುದ್ದಿ ಇದೆ. ಆ ಲಕ್ಕಿ ಫೆಲೋ ಯಾರು ಎಂದು ಹುಡುಕಿದ ಮಾಧ್ಯಮಗಳ ಕಣ್ಣಿಗೆ ಬಿದ್ದಿರುವುದು ನವೀನ್ ಎಂಬ ನಿರ್ಮಾಪಕರು. ಶೀಘ್ರದಲ್ಲೇ ಇವರಿಬ್ಬರೂ ಹಸೆಮಣೆ ಏರಲಿದ್ದಾರೆ ಎಂಬುದು ಲೇಟೆಸ್ಟ್ ಸಮಾಚಾರ. [ಜಾತಕದ ಪ್ರಕಾರ ಮಲ್ಲು ಬೆಡಗಿ ಭಾವನಾ ಮದುವೆ]


ಇನ್ನೊಂದು ಮೂಲದ ಮಾಹಿತಿ ಪ್ರಕಾರ, ಈ ಮದುವೆಗೆ ಈಗಾಗಲೆ ತೆರೆಮರೆಯ ಕಸರತ್ತುಗಳು ಜೋರಾಗಿದ್ದು ಇಬ್ಬರ ಮನೆಯ ಹಿರಿಯರೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ. ಬಹುಶಃ ಮುಂದಿನ ವರ್ಷ ಜೂನ್ ವೇಳೆಗೆ ಮದುವೆ ಎನ್ನಲಾಗಿದೆ.

ಇತ್ತೀಚೆಗೆ ಅವರ ಸಹೋದರ ದಾಂಪತ್ಯ ಜೀವನಕ್ಕೆ ಅಡಿಯಿಟ್ಟ. ಇದಾದ ಬಳಿಕ ಭಾವನಾ ಸಹ ಮದುವೆಯಾಗಲು ಮನಸ್ಸು ಮಾಡಿದರು. ಈಗ ಅವರಿಗೆ ಸೂಕ್ತ ಜೋಡಿ ಸಿಕ್ಕಿದೆ ಎನ್ನಿಸುತ್ತದೆ. ಕನ್ನಡದ ಜಾಕಿ, ವಿಷ್ಣುವರ್ಧನ, ರೋಮಿಯೋ, ಯಾರೇ ಕೂಗಾಡಲಿ, ಟೋಪಿವಾಲ, ಬಚ್ಚನ್ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

English summary
The buzz is raising in the media that, Mallu actress Bhavana is dating some producer. After thorough research, media spotted that producer as Naveen.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada