For Quick Alerts
  ALLOW NOTIFICATIONS  
  For Daily Alerts

  ಸೆಕ್ಸ್ ಸ್ಕ್ಯಾಂಡಲ್ ನಲ್ಲಿ ತಾರೆಗಳು (ಫೋಟೋ ಫೀಚರ್)

  By Rajendra
  |

  ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಕಾಣಿಸುತ್ತದೆ. ಬಣ್ಣದ ಪ್ರಪಂಚವೂ ಅಷ್ಟೇ ದೂರದಿಂದ ನೋಡಿದರೆ ಬಹಳ ಕಲರ್ ಫುಲ್ ಆಗಿರುತ್ತದೆ. ಪ್ರತಿ ಕ್ಷೇತ್ರದಲ್ಲೂ ಇದ್ದಂಗೆ ಬಣ್ಣದ ದುನಿಯಾದಲ್ಲೂ ಸಾಕಷ್ಟು ಕತ್ತಲು ಪ್ರಪಂಚ ಇದೆ. ಕಾರಣಗಳು ನೂರೆಂಟು ಇರಬಹುದು...ಕೆಲವು ತಾರೆಗಳು ವೇಶ್ಯಾಜಾಲದಲ್ಲಿ ಸಿಕ್ಕಿಬೀಳುವ ಮೂಲಕ ಸಿನಿಮಾ ಕ್ಷೇತ್ರದ ಕೀರ್ತಿಗೆ ಮಸಿ ಬಳಿಯುತ್ತಿದ್ದಾರೆ.

  ಅವಕಾಶಗಳು ಕಡಿಮೆಯಾದ ಕೆಲ ಹಿರಿಯ ಹೀರೋಯಿನ್ ಗಳು, ಹೊಸದಾಗಿ ಬಣ್ಣದ ಜಗತ್ತಿಗೆ ಅಡಿಯಿಡುತ್ತಿರುವವರು...ಸುಲಭವಾಗಿ ಹಣ ಸಂಪಾದಿಸಲು ಈ ರೀತಿಯ ಅಡ್ಡದಾರಿಯಲ್ಲಿ ಪ್ರಯಾಣಿಸುತ್ತಿದ್ದಾರೆ. ಇಂತಹವರ ಕಾರಣದಿಂದ ಚಿತ್ರರಂಗವನ್ನು ಗಂಭೀರ ವೃತ್ತಿಯಾಗಿ ಪರಿಗಣಿಸಿರುವವರು ಸಾಕಷ್ಟು ಕಿರಿಕಿರಿ ಅನುಭವಿಸುತಂತಾಗಿದೆ.

  ಇದುವರೆಗೂ ದಕ್ಷಿಣದ ಹಿರಿಯ ನಟಿ ಕಿನ್ನೆರಾ, ಯಮುನಾ ಸೇರಿದಂತೆ ಭುವನೇಶ್ವರಿ, ಸೈರಾ ಭಾನು, ಜ್ಯೋತಿ ಸೇರಿದಂತೆ ಹಲವು ಹತ್ತು ಮಂದಿ ತಾರೆಗಳು ವೇಶ್ಯಾವಾಟಿಕೆ ಜಾಲದಲ್ಲಿ ಸಿಕ್ಕಿಬಿದ್ದಿದ್ದಾರೆ. ತಾಜಾ ಬೆಳವಣಿಗೆಯಲ್ಲಿ ತೆಲುಗು ಕಿರುತೆರೆ ನಟಿ ಶ್ರಾವಣಿ ಸಿಕ್ಕಿಬಿದ್ದಿದ್ದರು.

  ಕೇವಲ ದೊಡ್ಡ ದೊಡ್ಡ ನಗರಗಳಲ್ಲಷ್ಟೇ ಅಲ್ಲ ಗುಂಡ್ಲುಪೇಟೆಯಂತಹ ಸಣ್ಣ ಪಟ್ಟಣಗಳಲ್ಲೂ ಈ ರೀತಿಯ ಘಟನೆಗಳು ಬೆಳಕಿಗೆ ಬರುತ್ತಿದೆ. ಇತ್ತೀಚೆಗೆ ಮುಂಬೈನ ಕಿರುತೆರೆ ನಟಿ ಮುಮ್ತಾಜ್‌ ಸೇರಿದಂತೆ ಒಂಬತ್ತು ಮಂದಿ ಮಹಿಳೆಯರನ್ನು ಪೊಲೀಸರು ವೇಶ್ಯಾವಾಟಿಕೆ ಜಾಲದಿಂದ ರಕ್ಷಿಸಿದ್ದಾರೆ.

  ಬೆಂಗಳೂರನ್ನು ಬೆಚ್ಚಿಬೀಳಿಸಿದ್ದ ಯಮುನಾ

  ಬೆಂಗಳೂರನ್ನು ಬೆಚ್ಚಿಬೀಳಿಸಿದ್ದ ಯಮುನಾ

  ಬಹುಭಾಷಾ ನಟಿ ಯಮುನಾ ವೇಶ್ಯಾವಾಟಿಕೆ ನಡೆಸುತ್ತಿದ್ದರು ಎಂಬ ಆರೋಪದ ಮೇಲೆ ಪೊಲೀಸರು ಆಕೆಯನ್ನು ವಶಕ್ಕೆ ಪಡೆದಿದ್ದರು. ಬೆಂಗಳೂರಿನ ಐಟಿಸಿ ಗಾರ್ಡೆನ್ ಹೋಟೆಲ್ ನಲ್ಲಿ ಯಮುನಾ ಸಿಕ್ಕಿಬಿದ್ದಿದ್ದರು. ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ ಚಿನ್ನ, ಶಶಿ ಕುಮಾರ್ ಜೊತೆ ಹೆಂಡ್ತೀರೇ ಹುಷಾರ್, ಶಿವರಾಜ್ ಕುಮಾರ್ ಸೇರಿದಂತೆ ಇತರೆ ನಟರ ಜೊತೆ ಅಭಿನಯಿಸಿದ್ದಾರೆ.

  ಹೈಟೆಕ್ ವೇಶ್ಯಾಜಾದಲ್ಲಿ ನಟಿ ಭುವನೇಶ್ವರಿ

  ಹೈಟೆಕ್ ವೇಶ್ಯಾಜಾದಲ್ಲಿ ನಟಿ ಭುವನೇಶ್ವರಿ

  ಬೆಳ್ಳಿತೆರೆ ಹಾಗೂ ಕಿರುತೆರೆಯಲ್ಲಿ ಅಭಿನಯಿಸಿದ ತಾರೆ ಭುವನೇಶ್ವರಿ. ಈಕೆಯೂ ವೇಶ್ಯಾಜಾಲದಲ್ಲಿ ಸಿಕ್ಕಿಬಿದ್ದಿದ್ದರು. ಸಿಕ್ಕಿಬಿದ್ದ ಈಕೆ ತಾನೊಬ್ಬಳೇ ಇಲ್ಲ ಸಾಕಷ್ಟು ಮಂದಿ ಸ್ಟಾರ್ಸ್ ಇದೇ ರೀತಿಯ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ ಎಂದು ಹೇಳಿ ಮತ್ತಷ್ಟು ವಿವಾದಕ್ಕೆ ಕಾರಣವಾಗಿದ್ದರು.

  ಟಿವಿ9 ಕುಟುಕು ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದ ತಾರೆ

  ಟಿವಿ9 ಕುಟುಕು ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದ ತಾರೆ

  ಟಿವಿ 9 ತೆಲುಗು ವಾಹಿನಿ ಮಾಡಿದ ಕುಟುಕು ಕಾರ್ಯಾಚರಣೆಯಲ್ಲಿ ಕಿನ್ನೆರಾ ಎಂಬ ತಾರೆ ಸಿಕ್ಕಿಬಿದ್ದಿದ್ದರು. ಸಿನಿಮಾ ಚಾನ್ಸ್ ಗಾಗಿ ಬರುತ್ತಿದ್ದ ಯುವತಿಯರನ್ನು ಬುಟ್ಟಿಗೆ ಹಾಕಿಕೊಂಡು ನಿರ್ಮಾಪಕರು, ಫೈನಾನ್ಸಿಯರ್ಸ್ ಗಳ ಕೈಗೆ ಅವರನ್ನು ಒಪ್ಪಿಸಿ ದುಡ್ಡು ಮಾಡುವುದರಲ್ಲಿ ಪಳಗಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ.

  ಸೈರಾ ಭಾನು ಹಾಗೂ ಜ್ಯೋತಿ ದಂಧೆ

  ಸೈರಾ ಭಾನು ಹಾಗೂ ಜ್ಯೋತಿ ದಂಧೆ

  ಸೈರಾ ಭಾನು, ಜ್ಯೋತಿ ಎಂಬ ತೆಲುಗು ತಾರೆಗಳು ವೇಶ್ಯಾ ವಾಟಿಕೆಯಲ್ಲಿ ಸಿಕ್ಕಿಬಿದ್ದಿದ್ದರು. ಈ ಬಗ್ಗೆ ತೆಲುಗು ಟಿವಿ ಚಾನಲ್ಸ್ ನಲ್ಲಿ ಸಾಕಷ್ಟು ಸುದ್ದಿಯಾಗಿತ್ತು. ತಾವು ವ್ಯಭಿಚಾರ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದರು ಎಂಬು ಪೊಲೀಸರೂ ತಿಳಿಸಿದ್ದರು.

  ಇತ್ತೀಚೆಗೆ ಪೊಲೀಸರ ಬಲೆಗೆ ಬಿದ್ದ ಶ್ರಾವಣಿ

  ಇತ್ತೀಚೆಗೆ ಪೊಲೀಸರ ಬಲೆಗೆ ಬಿದ್ದ ಶ್ರಾವಣಿ

  ತೆಲುಗು ಸೀರಿಯಲ್ ನಟಿ ಶ್ರಾವಣಿ ಇತ್ತೀಚೆಗೆ ಸಿಕ್ಕಿಬಿದ್ದ ನಟಿ. ಐಟಿ ಕಂಪನಿಗಳಿಗೆ ಕೇಂದ್ರವಾಗಿ ಹೈದರಾಬಾದಿನ ಮಾದಾಪೂರ್ ಸೈಬರ್ ಟವರ್ಸ್ ಪ್ರದೇಶದಲ್ಲಿ ಹೈಟೆಕ್ ವೇಶ್ಯಾಜಾಲದಲ್ಲಿ ಈಕೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಈಕೆಯ ಜೊತೆ ಉದ್ಯಮಿಯೊಬ್ಬ ಸಿಕ್ಕಿಬಿದ್ದಿದ್ದ.

  English summary
  Actress Caught In prostitution. Cyberabad police on Tuesday busted a high profile prostitution racket by arresting a famous industrialist in the city and rescuing an upcoming TV serial actress.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X