»   » ಲೂಸ್ ಮಾದನಿಗೆ ಕೈಕೊಟ್ರಾ ದೀಪಿಕಾ ಕಾಮಯ್ಯ?

ಲೂಸ್ ಮಾದನಿಗೆ ಕೈಕೊಟ್ರಾ ದೀಪಿಕಾ ಕಾಮಯ್ಯ?

By: ಜೀವನರಸಿಕ
Subscribe to Filmibeat Kannada

ಇದೀಗ 'ಬಿಗ್ ಬಾಸ್' ಮನೆಯಲ್ಲಿ ಕ್ಯಾಪ್ಟನ್ ಆಗಿ ಮಿಂಚಿದ ದೀಪಿಕಾ ಕಾಮಯ್ಯ ಈಗ ಯೋಗಿಗೆ ಕೈ ಕೊಟ್ಟಿರೋ ಸುದ್ದಿ ಬಂದಿದೆ. ದೀಪಿಕಾ ಕೈಕೊಟ್ಟ ಮೇಲೆ ಲೂಸ್ ಮಾದ ಯೋಗಿ ಈಗ ಹೊಸ ಹುಡುಗಿಯ ಹುಡುಕಾಟದಲ್ಲಿದ್ದಾರಂತೆ.

ಓಹೋ ಯೋಗಿ ಲವ್ ಕಥೇನಾ ಇದು. ಇದು ಯಾವಾಗ ನಡೆದಿದ್ದು? ಯೋಗಿ ದೀಪಿಕಾ ನಡುವೆ ಕುಚ್ಚು ಕುಚ್ಚು ಇತ್ತು ಅನ್ನೋ ಗಾಸಿಪ್ಪು ಬಂದಿರಲಿಲ್ಲವಲ್ಲ ಅನ್ಕೋಬೇಡಿ. ಇದು 'ಕೋಲಾರ'ದ ಕಥೆ. ಕೋಲಾರ ಸಿನಿಮಾಗೆ ಹೀರೋಯಿನ್ನಾಗಿ ಅಡ್ವಾನ್ಸ್ ಕೂಡ ಪಡ್ಕೊಂಡಿದ್ದ ದೀಪಿಕಾ ಬಿಗ್ ಬಾಸ್ ನಿಂದ ಬೇಗ ಬರ್ತೀನಿ ಅಂತ ಹೇಳಿದ್ರಂತೆ.

Actress Deepika Kamaiah give the slip to Loose Mada

ಈಗ ದೀಪಿಕಾ ಬಿಗ್ ಬಾಸ್ ಮನೆಯಲ್ಲಿ ಗಟ್ಟಿಯಾಗಿದ್ದಾರೆ. ಒಂದು ಕಡೆ ಎಪಿಸೋಡ್ ಗೆ ಇಷ್ಟು ಅಂತ ದುಡ್ಡು ಮತ್ತೊಂದ್ ಕಡೆ ಕರ್ನಾಟಕದ ಜನರ ಮುಂದೆ ದಿನವೂ ಕಾಣಿಸಿಕೊಳ್ಳೋ ಭಾಗ್ಯ. ಇದನ್ನೆಲ್ಲ ಬಿಟ್ಟು ಬರೀ 'ಕೋಲಾರ'ನಾ ಅಂದ್ಕೊಂಡಿರ್ಬೇಕು ದೀಪಿಕಾ.

ಆದರೆ ಸದ್ಯ ಮಹೇಶ್ ಕುಮಾರ್ ನಿರ್ದೇಶನದ ಕೋಲಾರ ಚಿತ್ರತಂಡ ಸದ್ಯದಲ್ಲೇ ಮುಹೂರ್ತ ಮಾಡಿಕೊಳ್ಳಲಿದ್ದು ಹೊಸ ಹೀರೋಯಿನ್ ಹುಡುಕೋ ಯೋಚನೆಯಲ್ಲಿದೆ.

English summary
Actress Deepika Kamaiah is now shining in Bigg Boss Kannada 2 reality show. Sandalwood grapevine is that, before she accepting the show suppose to act in Kannada movie Kolara with Loose Mada Yogesh. Finally she give the slip to Loose Mada. 
Please Wait while comments are loading...