»   » ಕಾಮುಕ ನಿರ್ದೇಶಕನ ಕೆನ್ನೆ ಊದಿಸಿದ ನಟಿ

ಕಾಮುಕ ನಿರ್ದೇಶಕನ ಕೆನ್ನೆ ಊದಿಸಿದ ನಟಿ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಹಿಂದಿ ಚಿತ್ರರಂಗದಲ್ಲಿ 'ಜಾಲಿ ಎಲ್ ಎಲ್ ಬಿ' ಎಂಬ ವಿಭಿನ್ನ ಚಿತ್ರ ನೀಡುವ ಮೂಲಕ ಸಿನಿರಸಿಕರ ಮೆಚ್ಚುಗೆ ಗಳಿಸಿದ್ದ ನಿರ್ದೇಶಕ ಸುಭಾಷ್ ಕಪೂರ್ ಅವರಿಗೆ ನಟಿ ಗೀತಿಕಾರಿಂದ ಕಪಾಳಮೋಕ್ಷವಾಗಿದೆ. ಇದರ ಜತೆಗೆ ಸುಭಾಷ್ ಮೇಲೆ ಲೈಂಗಿಕ ಕಿರುಕುಳದ ಆರೋಪ ಕೂಡಾ ಮಾಡಲಾಗಿದೆ. ಸುಭಾಷ್ ಅವರ ಪತ್ನಿ ಎದುರಿನಲ್ಲೇ ಇಷ್ಟೆಲ್ಲ ಘಟನೆ ನಡೆದಿದೆ.

ಔರಂಗಜೇಬ್ ಚಿತ್ರದ ನಿರ್ದೇಶಕ ಅತುಲ್ ಸಭರ್ವಾಲ್ ಹಾಗೂ ಸುಭಾಷ್ ಕಪೂರ್ ಪತ್ನಿ ಜತೆ ಸಮಾರಂಭವೊಂದರಲ್ಲಿ ಕುಳಿತಿದ್ದಾಗ ಗೀತಿಕಾ ಬಂದು ಸುಭಾಷ್ ರನ್ನು ನಿಂದಿಸಿ ಕೂಗಾಡಿ ಸುಭಾಷ್ ಕೆನ್ನೆ ಊದಿಸಿ ಹೋಗಿದ್ದಾರೆ. ಆತ್ಮ, ಒನ್ ಬೈ ಟು, ವಾಟ್ ದಿ ಫಿಶ್ ಚಿತ್ರಗಳಲ್ಲಿ ನಟಿಸಿರುವ ಗೀತಿಕಾ ಅವರು ಈ ಘಟನೆಯ ವಿಡಿಯೋವನ್ನು ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ಮೂಲಕ ಸಾರ್ವಜನಿಕರ ಮುಂದಿಟ್ಟಿದ್ದಾರೆ.

Actress Geetika Accuses Jolly LLB Director Of Sexual Assault


ಗೀತಿಕಾ ಆರೋಪಗಳಿಗೆ ಸುಭಾಷ್ ಅವರು ತಾಳ್ಮೆಯಿಂದಲೇ ಉತ್ತರಿಸುವುದು ವಿಡಿಯೋದಲ್ಲಿ ಕಂಡು ಬಂದಿದೆ. ತನ್ನ ತಪ್ಪುಗಳನ್ನು ಒಪ್ಪಿಕೊಂಡು ಏನಾದರೂ ಪರಿಹಾರ ನೀಡುವ ಬಗ್ಗೆ ಕಪೂರ್ ಹೇಳುವಷ್ಟರಲ್ಲಿ ಗೀತಿಕಾ ಫಿಲ್ಮಿ ಸ್ಟೈಲ್ ನಲ್ಲಿ ಕೆನ್ನೆಗೆ ಬಾರಿಸಿದ್ದಾರೆ. ನಾನು ನನ್ನ ಕೃತ್ಯದಿಂದ ತಲೆತಗ್ಗಿಸುವಂತಾಗಿದೆ. ಗೀತಿಕಾ ತೆಗೆದುಕೊಳ್ಳುವ ಮುಂದಿನ ಯಾವುದೇ ಕ್ರಮಕ್ಕೆ ನಾನು ತಲೆಬಾಗುತ್ತೇನೆ ಎಂದು ಸುಭಾಷ್ ಹೇಳಿದ್ದಾರೆ.

<iframe width="640" height="360" src="//www.youtube.com/embed/ejVVEFoFpoA" frameborder="0" allowfullscreen></iframe>

ನಿದೇಶಕ ಕಪೂರ್ ನನ್ನನ್ನು ತನ್ನ ಮನೆಗೆ ಕರೆಸಿಕೊಂದು ಅನುಚಿತವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡಿರುವ ಎಂದಿರುವ ಗೀತಿಕಾ ನನ್ನ ಮನಸ್ಸಿನಲ್ಲಿ ಮಾಸದ ಗಾಯ ಉಂಟು ಮಾಡಿದೆ. ನಾನೀಗ ಯಾರನ್ನು ನಂಬುವಂತಿಲ್ಲ. "I cannot trust a single man. I cannot face my father, brother-in-law or any man who asks me out for coffee without feeling fu***ng jittery." ಎಂದು ಹೇಳಿದ್ದಾರೆ.

ಗೀತಿಕಾಗೆ ಅನ್ಯಾಯವಾಗಿದೆ ಎಂದು ಒಪ್ಪಿಕೊಂಡಿರುವ ನಿರ್ದೇಶಕ ಸುಭಾಷ್ ಈಗ ಗೀತಿಕಾ ವಿಡಿಯೋ ಹೊರಹಾಕಿರುವುದು ಇರಸು ಮುರಸು ಉಂಟಾಗಿದೆ ಎಂದಿದ್ದಾರೆ. ಈ ಬಗ್ಗೆ ನನ್ನ ವಕೀಲರ ಜತೆ ಮಾತನಾಡುತ್ತೇನೆ. ವೈಯಕ್ತಿಕ ವಿಷಯಗಳನ್ನು ಪರಿಹರಿಸಿಕೊಳ್ಳಲು ಬೇರೆ ಮಾರ್ಗಗಳಿವೆ. ಈ ರೀತಿ ಗೀತಿಕಾ ವರ್ತಿಸಬಾರದಿತ್ತು ಎಂದಿದ್ದಾರೆ. ಗೀತಿಕಾ- ಸುಭಾಷ್ ಕೆನ್ನೆಗೆ ಹೊಡೆದ ವಿಡಿಯೋ ಕೂಡಾ ಫೇಕ್ ಎನ್ನುವವರೂ ಇದ್ದಾರೆ.

English summary
Here is the latest heated controversy in B Town. An actor named Geetika, who was seen in films like Aatma, One by Two and What The Fish, tweeted a link to a shocking video where she accuses Jolly LLB director Subhash Kapoor of sexual assault and is even getting slapped by her. Subhash Kapoor's wife and Aurangzeb director Atul Sabharwal was also present at the scene.
Please Wait while comments are loading...