Kangana Ranaut: ಉದ್ಯಮಿಯೊಂದಿಗೆ ಮದುವೆಗೆ ಸಿದ್ಧರಾದ್ರಾ ಬಾಲಿವುಡ್ ಕ್ವೀನ್ ಕಂಗನಾ ರನೌತ್?

ಕಂಗನಾ ರನೌತ್ ಬಾಲಿವುಡ್‌ನ ಕ್ವೀನ್. ಇತ್ತೀಚಿನ ದಿನಗಳಲ್ಲಿ ಹಿಂದಿ ಸಿನಿಮಾಗಳಲ್ಲಿ ಮಹಿಳಾ ಪ್ರಧಾನ ಸಿನಿಮಾಗಳಿಗೆ ಪ್ರಾಮುಖ್ಯತೆ ತಂದುಕೊಟ್ಟವರು. ತಮ್ಮ ಮನೋಜ್ಞ ಅಭಿನಯದಿಂದ ಪ್ರೇಕ್ಷಕರನ್ನು ಮನ ಕದ್ದಿದ್ದಾರೆ. ಬಾಲಿವುಡ್ ಅಲ್ಲದೆ ದಕ್ಷಿಣ ಭಾರತದ ಹಲವು ಸಿನಿಮಾಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಸದ್ಯ ನಟಿ ಕಂಗನಾ ಅವರು ತಮಿಳಿನಲ್ಲಿ ರಾಘವ್ ಲಾರೆನ್ಸ್ ಅವರ ಜೊತೆಗೆ ಚಂದ್ರಮುಖಿ 2 ಸಿನಿಮಾ ಮಾಡಿದ್ದು, ಸೆಪ್ಟಂಬರ್ 28 ರಂದು ಚಿತ್ರಮಂದಿರಕ್ಕೆ ಲಗ್ಗೆಯಿಟ್ಟಿದೆ. ಇನ್ನು, ಕಂಗನಾ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ವಿಷಯಗಳ ಬಗ್ಗೆ ಮುಕ್ತವಾಗಿ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ಇದರಿಂದ ಅವರನ್ನು ಅನೇಕರು ಮೆಚ್ಚಿಕೊಂಡಿದ್ದರೇ ಮತ್ತಷ್ಟು ಜನರ ಕೆಂಗಣ್ಣಿಗೂ ಕಂಗನಾ ಗುರಿಯಾಗಿದ್ದಾರೆ.

Actress Kangana Ranaut Engaged to a Businessman, Getting Married Next Year!?

ಬ್ಯುಸಿನೆಸ್ ಮ್ಯಾನ್ ಜೊತೆ ಕಂಗನಾ ರನೌತ್ ಮದುವೆ?

ತಮ್ಮ ವೈಯಕ್ತಿಕ ಜೀವನದ ಬಗ್ಗೆ ಎಲ್ಲಿಯೂ ಯಾವುದೇ ಪ್ರತಿಕ್ರಿಯೆ ನೀಡದಿರುವ ರಾಷ್ಟ್ರಪ್ರಶಸ್ತಿ ವಿಜೇತ ನಟಿ ಮುಂದಿನ ವರ್ಷ ಮದುವೆಯಾಗಲಿದ್ದಾರೆ ಎನ್ನಲಾಗಿದೆ. ಕಮಲ್ ರಶೀದ್ ಖಾನ್ ಅಂದರೆ ಕೆಆರ್‌ಕೆ ಅವರು ಕಂಗನಾ ಅವರ ಮದುವೆ, ನಿಶ್ಚಿತಾರ್ಥ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಇದು ವೈರಲ್ ಆಗುತ್ತಿದೆ.

ವಿಮರ್ಶಕ ಕಮಲ್ ರಶೀದ್ ಖಾನ್ ಕಂಗನಾ ರನೌತ್ ಅವರು 2023 ರ ಕೊನೆಯ ತಿಂಗಳಲ್ಲಿ ಉದ್ಯಮಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ. ಜೊತೆಗೆ ಕಂಗನಾ ರನೌತ್ ಏಪ್ರಿಲ್ 2024 ರಲ್ಲಿ ತಮ್ಮ ಮನ ಮೆಚ್ಚಿದ ವರನೊಂದಿಗೆ ಮದುವೆಯಾಗಲಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

Actress Kangana Ranaut Engaged to a Businessman, Getting Married Next Year!?

ನಟಿಗೆ ಶಭಾಶಯಗಳನ್ನು ತಿಳಿಸಿದ ಅವರು, ಅಡ್ವಾನ್ಸ್ ಆಗಿ ಮದುವೆಯ ಶುಭಾಶಯಗಳು ಎಂದಿದ್ದಾರೆ. "ಬ್ರೇಕಿಂಗ್ ನ್ಯೂಸ್: ನಟಿ ಕಂಗನಾ ರನೌತ್ ಅವರು ಡಿಸೆಂಬರ್ 2023 ರಲ್ಲಿ ಉದ್ಯಮಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ. ಅವರು ಏಪ್ರಿಲ್ 2024 ರಲ್ಲಿ ಮದುವೆಯಾಗುತ್ತಾರೆ! ಅವರಿಗೆ ಮುಂಚಿತವಾಗಿ ಅಭಿನಂದನೆಗಳು" ಎಂದು ಕೆಆರ್‌ಕೆ ಟ್ವೀಟ್ ಮಾಡಿದ್ದಾರೆ.

ಈ ಟ್ವೀಟ್ ಕೆಲವೇ ನಿಮಿಷಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ನಟಿ ಕಂಗನಾ ಮುಂದಿನ ವರ್ಷ ಮದುವೆಯಾಗುತ್ತಾರಾ..? ಎಂದು ಅಭಿಮಾನಿಗಳು ಆಶ್ಚರ್ಯ ಪಡುತ್ತಿದ್ದಾರೆ. ಜೊತೆಗೆ ಅನೇಕರು ಶುಭಾಶಯ ಹೇಳುತ್ತಿದ್ದು, ಮದುವೆಯಾಗುವ ವರನ ಬಗ್ಗೆ ವಿವರಗಳನ್ನು ಕೇಳುತ್ತಿದ್ದಾರೆ.

ಕಂಗನಾ ತನ್ನ ಮದುವೆಯ ಬಗ್ಗೆ ಈ ಹಿಂದೆ ಹೇಳಿದ್ದೇನು?

ಈ ವರ್ಷದ ಆರಂಭದಲ್ಲಿ, ಟಿಕು ವೆಡ್ಸ್ ಶೇರು ಸಿನಿಮಾ ಪ್ರಚಾರ ಮಾಡುವಾಗ ಅವರು ತಮ್ಮ ಮದುವೆ ಮತ್ತು ಕುಟುಂಬದ ಬಗ್ಗೆ ಮಾತನಾಡಿದ್ದರು. ಎಲ್ಲದಕ್ಕೂ ಒಂದು ಸಮಯ ಬರುತ್ತದೆ. ತಾನು ಮದುವೆಯಾಗಬೇಕು, ಅದು ಆಗಿಯೇ ಆಗುತ್ತದೆ ಎಂದು ಹೇಳಿದ್ದರು. ಜೊತೆಗೆ ಟಿವಿ ಚಾನೆಲ್ ಒಂದರ ಸಂದರ್ಶನದಲ್ಲಿಯೂ ತಾನು ತನ್ನದೇ ಆದ ಕುಟುಂಬವನ್ನು ಹೊಂದುವ ಆಸೆಯಿದೆ ಎಂದು ವ್ಯಕ್ತಪಡಿಸಿದ್ದರು

"ಎಲ್ಲದಕ್ಕೂ ಒಂದು ಸಮಯವಿದೆ ಮತ್ತು ಆ ಸಮಯ ನನ್ನ ಜೀವನದಲ್ಲಿ ಬರಬೇಕಾದಾಗ ಬರುತ್ತದೆ. ನಾನು ಮದುವೆಯಾಗಲು ಮತ್ತು ನನ್ನ ಸ್ವಂತ ಕುಟುಂಬವನ್ನು ಹೊಂದಲು ಬಯಸುತ್ತೇನೆ. ಆದರೆ, ಸರಿಯಾದ ಸಮಯದಲ್ಲಿ ಅದು ನಡೆಯಲಿದೆ" ಎಂದು ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ಉಲ್ಲೇಖಿಸಿತ್ತು.

ಸದ್ಯ ಕಂಗನಾ ರನೌತ್ ಚಂದ್ರಮುಖಿ 2 ಸಿನಿಮಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಇದಾದ ನಂತರ ಅವರದ್ದೇ ನಿರ್ದೇಶನದ ಎಮರ್ಜೆನ್ಸಿ ಬಿಡುಗಡೆಯಾಗಲಿದೆ. ಇದಾದ ನಂತರ ತೇಜಸ್ ಮತ್ತು ಸೀತಾ: ದಿ ಅವತಾರ ಸಿನಿಮಾ ಮಾಡಲಿದ್ದಾರೆ. ತನ್ನ ಮದುವೆ ಮತ್ತು ನಿಶ್ಚಿತಾರ್ಥದ ವದಂತಿಗಳಿಗೆ ಕಂಗನಾ ಇನ್ನೂ ಪ್ರತಿಕ್ರಿಯಿಸಿಲ್ಲ.

More from Filmibeat

English summary
Actress Kangana Ranaut engaged to a businessman, getting married next year!?.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X