ವಿದೇಶಿಯೊಬ್ಬರ ಕೈ ಕೈ ಹಿಡಿದು ಓಡಾಡುತ್ತಿದ್ದಾರೆ 'ಕ್ವೀನ್' ಕಂಗನಾ ರನೌತ್: ನೆಟ್ಟಿಗರು ಹೇಳ್ತಿರೋದೇನು?

ತನ್ನ ಹುಟ್ಟೂರು ಹಿಮಾಚಲ ಪ್ರದೇಶದಲ್ಲಿ ಹಲವು ತಿಂಗಳು ಕಳೆದ ಬಳಿಕ ಬಾಲಿವುಡ್ ಕ್ವೀನ್ ಕಂಗನಾ ರನೌತ್ ಮತ್ತೆ ಮುಂಬೈಗೆ ಮರಳಿದ್ದಾರೆ. ಮಹಿಳಾ ಪ್ರಧಾನ ಸಿನಿಮಾಗಳಿಂದ ಹೆಚ್ಚು ಖ್ಯಾತಿ ಗಳಿಸಿರುವ ನಟಿ ಕಂಗನಾ ರನೌತ್, ಅವರ ಇತ್ತೀಚಿನ ಯಾವುದೇ ಸಿನಿಮಾ ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಿಲ್ಲ.

ಸದ್ಯ ನಟಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದರೂ ಕೂಡ ವೃತ್ತಿಜೀವನದ ಗ್ರಾಫ್ ಬದಲಾಗುತ್ತಿಲ್ಲ. ಇದೇ ಕಾರಣಕ್ಕೆ ಇರಬೇಕು ಇತ್ತೀಚೆಗೆ ತನ್ನ ವೃತ್ತಿಜೀವನದಲ್ಲಿ ಬದಲಾವಣೆಯನ್ನು ಪರಿಗಣಿಸುತ್ತಿದ್ದೇನೆ ಎಂದು ಹೇಳಿ ಚರ್ಚೆ ಹುಟ್ಟುಹಾಕಿದ್ದರು. ಹಲವು ವಿವಾದಗಳಿಗೆ ಪ್ರತಿಕ್ರಿಯಿಸುವ ಅವರು, ಸದ್ಯ ತಮ್ಮ ವೈಯಕ್ತಿಕ ವಿಚಾರದಿಂದ ಹೆಚ್ಚು ಚರ್ಚೆಯಲ್ಲಿದ್ದಾರೆ. ಅದು ತನ್ನ ಪ್ರೇಮ ವಿಚಾರದಿಂದ.

Actress Kangana Ranaut smiles as she holds hands with a foreigner

ಪ್ರೀತಿಯಲ್ಲಿ ಬಿದ್ದರಾ ನಟಿ ಕಂಗನಾ ರನೌತ್?

ನಟಿ ಕಂಗನಾ ರನೌತ್ ಈ ಬಾರಿ ತನ್ನ ಪ್ರೇಮ ವಿಚಾರಕ್ಕೆ ಮತ್ತೆ ಸುದ್ದಿಯಲ್ಲಿದ್ದಾರೆ. ವಿದೇಶಿ ಪ್ರಜೆಯೊಬ್ಬರ ಕೈ ಕೈ ಹಿಡಿದು ಮುಂಬೈನಲ್ಲಿ ಓಡಾಡುತ್ತಿದ್ದಾರೆ ಬಾಲಿವುಡ್ ಕ್ವಿನ್. ಇದು ನೆಟ್ಟಿಗರಲ್ಲಿ ಪ್ರೆಶ್ನೆ ಹುಟ್ಟುಹಾಕಿದ್ದು, ಕಂಗನಾ ಪ್ರೀತಿಯಲ್ಲಿ ಬಿದ್ದರಾ ಎಂದು ಕೇಳುತ್ತಿದ್ದಾರೆ. ಮುಂಬೈನ ಸಲೂನ್‌ನ ಹೊರಗೆ ವಿದೇಶಿ ವ್ಯಕ್ತಿಯೊಬ್ಬರ ಕೈ ಹಿಡಿದಿರುವಾವರ ಫೋಟೋ ವೈರಲ್ ಆಗಿದೆ.

ಕಂಗನಾ ರನೌತ್ ಸಲೂನ್‌ನ ಹೊರಗೆ ಮಿಸ್ಟರಿ ಮ್ಯಾನ್ ಜೊತೆಗೆ ಕಾಣಿಸಿಕೊಂಡಿದ್ದಾರೆ. ನೀಲಿ ಬಣ್ಣ್ ಸ್ಲಿವ್ ಲೆಸ್ ಡ್ರೆಸ್‌ನಲ್ಲಿ ನಟಿ ಸುಮದರವಾಗಿ ಕಾಣಿಸುತ್ತಿದ್ದರು. ಮಿನಿಮಮ್ ಮೇಲಪ್ ಜೊತೆಗೆ ಫ್ರೀ ಹೇರ್ ಆಕೆಯ ಅಂದಕ್ಕೆಮೆರುಗು ನೀಡುತ್ತಿತ್ತು. ಇದೇ ವೇಳೆ ಅವರ ಜೊತೆಗಿದ್ದ ವಿದೇಶಿ ವ್ಯಕ್ತಿ ಕಪ್ಪು ಜಾಕೆಟ್, ಕಪ್ಪು ಟಿ ಶರ್ಟ್ ಪ್ಯಾಂಟ್ ಮತ್ತು ಸ್ನೀಕರ್ಸ್ ಧರಿಸಿದ್ದರು. ಪಾಪರಾಜಿಗಳು ಫೋಟೋ ತೆಗೆಯುತ್ತಿದ್ದಾಗ ಇಬ್ಬರು ಖುಷಿಯಿಂದ ನಗುತ್ತಿದ್ದರು. ಇದು ಇಬ್ಬರು ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬುದಕ್ಕೆ ಸಾಕ್ಷಿ ಎನ್ನುತ್ತಿವೆ ವರದಿಗಳು.

ಮದುವೆಯಾಗುತ್ತೇನೆ ಎಂದಿದ್ದ ನಟಿ ಕಂಗನಾ

ಇತ್ತೀಚೆಗೆ ನಟಿ ಕಂಗನಾ ರನೌತ್ ಹಾಸ್ಪಿಟಾಲಿಟಿ ಕ್ಷೇತ್ರದಲ್ಲಿ ಬುಸಿನೇಸ್ ಮಾಡಲು ಹೊರಟಿದ್ದಾರೆ. ಇದಕ್ಕೆ ಅವರ ಸಿನಿಮಾಗಳ ಪ್ಲಾಪ್ ಕೂಡ ಕಾರಣವಾಗಿರಬಹುದು. ತೀರ ಇತ್ತಿಚೇಗೆ ಬಿಡುಗಡೆಯಾಗಿದ್ದ 'ತೇಜಸ್' ಅತ್ಯಂತ ಕಳಪೆ ಓಪನಿಂಗ್ ಪಡೆಯಿತು. ಇನ್ನು, ಅವರ ಕೈಯಲ್ಲಿ ಇರುವುದು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಜೀವನ ಚರಿತ್ರೆ ಆಧರಿಸಿದ 'ಎಮರ್ಜೆನ್ಸಿ' ಮಾತ್ರ. ಈ ಸಿನಿಮಾ ಕೂಡ ಪ್ಲಾಪ್ ಆದರೆ, ಅವರ ಕೆರಿಯರ್ ಹಾಳದಂತೆಯೇ.

Actress Kangana Ranaut smiles as she holds hands with a foreigner

ಇನ್ನು, ನಟಿ ಮುಂದಿನ ಐದು ವರ್ಷಗಳಲ್ಲಿ ತನ್ನದೇ ಆದ ಕುಟುಂಬವನ್ನು ಹೊಂದಬೇಕು ಎಂದು ಇತ್ತೀಚೆಗೆ ಹೇಳಿಕೊಂಡಿದ್ದರು. ಇದು ಅವರ ಮದುವೆಯ ಬಗ್ಗೆ ವದಂತಿ ಹುಟ್ಟುಹಾಕಿತ್ತು. ಟೈಮ್ಸ್ ನೌಗೆ ನೀಡಿದ್ದ ಸಂದರ್ಶನದಲ್ಲಿ, "ಪ್ರತಿಯೊಬ್ಬ ಹುಡುಗಿ ತನ್ನ ಮದುವೆ ಮತ್ತು ಕುಟುಂಬವನ್ನು ಹೊಂದುವ ಕನಸು ಕಾಣುತ್ತಾಳೆ. ನಾನು ಸಂಪೂರ್ಣವಾಗಿ ಅಂತಹ ಹುಡುಗಿಯೆ. ಅದು ನನಗೆ ತುಂಬಾ ಮುಖ್ಯ. ನಾನು ಮದುವೆಯಾಗಲು ಮತ್ತು ಕುಟುಂಬದ ಜೊತೆಗಿರಲು ಬಯಸುತ್ತೇನೆ. ಮುಂದಿನ ಐದು ವರ್ಷಗಳಲ್ಲಿ ಅದು ಆಗಲಿದೆ. ಅರೇಂಜ್ಡ್ ಮತ್ತು ಲವ್ ಮ್ಯಾರೇಜ್ ಮಿಕ್ಸ್ ಆದರೆ ಚೆನ್ನಾಗಿರುತ್ತದೆ" ಎಂದು ಹೇಳಿದ್ದರು. ಈ ಹಿಂದೆ ಕಂಗನಾ ರನೌತ್ ಅವರು ಬ್ರಿಟಿಷ್ ವೈದ್ಯ ನಿಕೋಲಸ್ ಲಾಫರ್ಟಿ ಅವರೊಂದಿಗೆ ಡೇಟಿಂಗ್ ಮಾಡಿದ್ದರು.

More from Filmibeat

English summary
Actress Kangana Ranaut has been spotted with a foreigner.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X