ತಾಯಿ ನಟಿಸಿದ್ದ ಸಿನಿಮಾದ ರಿಮೇಕ್ ನಲ್ಲಿ ನಟಿ ಕೀರ್ತಿ ಸುರೇಶ್?
ಕಾಲಿವುಡ್ ಮಹಾನಟಿ ಖ್ಯಾತಿಯ ಕೀರ್ತಿ ಸುರೇಶ್ ಈಗ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬಾಲಿವುಡ್ ಸ್ಟಾರ್ ನಟ ಅಜಯ್ ದೇವಗನ್ ಜೊತೆ ಸಿನಿಮಾ ಮಾಡುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ ಇತ್ತೀಚಿಗೆ ಕೇಳಿ ಬರುತ್ತಿರುವ ಸುದ್ದಿಯ ಪ್ರಕಾರ ಕೀರ್ತಿ ಸುರೇಶ್ ಬಾಲಿವುಡ್ ಸಿನಿಮಾದಿಂದ ಹೊರ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.
ಜೊತೆಗೆ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ತಲೈವರ್ 168 ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರ ಜೊತೆಗೀಗ ಕೀರ್ತಿ ಮತ್ತೊಂದು ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ವಿಶೇಷ ಅಂದರೆ ಕೀರ್ತಿ ಸುರೇಶ್ ತಾಯಿ ಮೇನಕಾ ಅಭಿನಯದ ಸಿನಿಮಾ ರಿಮೇಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಹೌದು, ಕಾಲಿವುಡ್ ಸ್ಟಾರ್ ಧನುಷ್, 1981ರಲ್ಲಿ ತೆರೆಗೆ ಬಂದ ನೆಟ್ರಿಕನ್ ಸಿನಿಮಾವನ್ನು ರಿಮೇಕ್ ಮಾಡುವ ಪ್ಲಾನ್ ಮಾಡಿದ್ದಾರಂತೆ. ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಮೇನಕಾ ಸುರೇಶ್ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. ಈ ಸಿನಿಮಾವನ್ನು ರಿಮೇಕ್ ನಲ್ಲಿ ಧನುಷ್ ಕಾಣಿಸಿಕೊಳ್ಳುತ್ತಿದ್ದಾರೆ. ಧನುಷ್ ಗೆ ನಾಯಕಿಯಾಗಿ ಕೀರ್ತಿ ಸುರೇಶ್ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಬಗ್ಗೆ ಕೀರ್ತಿ ಸುರೇಶ್ ಆಗಲಿ ಅಥವಾ ಧನುಷ್ ಆಗಲಿ ಯಾವುದೆ ಮಾಹಿತಿ ನೀಡಿಲ್ಲ. ಒಂದುವೇಳೆ ಈ ಸಿನಿಮಾ ಸೆಟ್ಟೇರಿದರೆ ಎರಡನೆ ಬಾರಿಗೆ ಧನುಷ್ ಮತ್ತು ಕೀರ್ತಿ ಸುರೇಶ್ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಈಗಾಗಲೆ ಕೀರ್ತಿ ಸುರೇಶ್ ನಟ ಧನುಷ್ ಜೊತೆ ತೊಡಾರಿ ಸಿನಿಮಾದಲ್ಲಿ ಅಭಿನಯಸಿದ್ದಾರೆ.


Click it and Unblock the Notifications











