ಕೀರ್ತಿ ಸುರೇಶ್ ಎಡವಟ್ಟು: 'ಕಲಾವತಿ' ಬಿಟ್ಟು 'ಬೀಸ್ಟ್' ಹಾಡಿಗೆ ಡ್ಯಾನ್ಸ್!

ನಟ ಮಹೇಶ್ ಬಾಬು, ಕೀರ್ತಿ ಸುರೇಶ್ ಅಭಿನಯದ 'ಸರ್ಕಾರು ವಾರಿ ಪಾಟ' ಮತ್ತು ತಮಿಳು ನಟ ವಿಜಯ್, ಪೂಜಾ ಹೆಗ್ಡೆ ಅಭಿನಯದ 'ಬೀಸ್ಟ್' ಸಿನಿಮಾದ ಹಾಡುಗಳು ಹಲವು ಕಾರಣಕ್ಕೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ಈ ಹಾಡುಗಳು ರಿಲೀಸ್ ಆಗುವ ಮುನ್ನವೇ ಸಾಕಷ್ಟು ಗಮನ ಸೆಳೆದಿದ್ದವು. ಈ ಎರಡೂ ಹಾಡುಗಳು ಕಾಂಪಿಟೇಷನ್‌ನೊಂದಿಗೆ ಬಿಡುಗಡೆ ಆಗಿವೆ.

ಪ್ರೇಮಿಗಳ ದಿನಾಚರಣೆಗೆ 'ಸರ್ಕಾರು ವಾರಿ ಪಾಟ' ಚಿತ್ರದ 'ಕಲಾವತಿ' ಮತ್ತು 'ಬೀಸ್ಟ್' ಚಿತ್ರದ 'ಅರೇಬಿಕ್ ಕುತು' ಹಾಡುಗಳು ರಿಲೀಸ್ ಆಗಿವೆ. ಈ ಹಾಡುಗಳು ಒಟ್ಟಿಗೆ ರಿಲೀಸ್ ಆದ ಕಾರಣ ಯಾವ ಹಾಡು ಹೆಚ್ಚಿನ ಮಟ್ಟದಲ್ಲಿ ಟ್ರೆಂಡ್ ಹುಟ್ಟು ಹಾಕುತ್ತದೆ, ಯಾವ ಹಾಡು ಹೆಚ್ಚಿನ ವೀವ್ಸ್ ಪಡೆದುಕೊಳ್ಳುತ್ತದೆ ಎನ್ನುವ ಸ್ಪರ್ಧೆ ಏರ್ಪಟ್ಟಿತ್ತು. ಆದರೆ ಈಗ ಅಚ್ಚರಿಯ ಸಂಗತಿಯೊಂದು ಎದುರಾಗಿದೆ. 'ಸರ್ಕಾರು ವಾರಿ ಪಾಟ' ಚಿತ್ರದ ನಾಯಕಿ ಕೀರ್ತಿ ಸುರೇಶ್ 'ಬೀಸ್ಟ್' ಚಿತ್ರದ ಹಾಡನ್ನು ಪ್ರಚಾರ ಮಾಡುತ್ತಿದ್ದಾರೆ.

ಎರಡೂ ಚಿತ್ರದ ಹಾಡುಗಳ ನಡುವೆ ಸಿಕ್ಕಾಪಟ್ಟೆ ಪೈಪೋಟಿ ಇತ್ತು. ಅಲ್ಲದೇ ಹಾಡುಗಳನ್ನು ಟ್ರೆಂಡಿಂಗ್‌ನಲ್ಲಿ ಇಡಲು ಚಿತ್ರತಂಡಗಳು ಹರಸಾಹಸ ಮಾಡುತ್ತಿವೆ. ಹಾಗಾಗಿ ರೀಲ್ಸ್‌ಗಳ ಮೂಲಕ ಹಾಡುಗಳನ್ನು ಹೆಚ್ಚು ಟ್ರೆಂಡ್ ಮಾಡುವ ಸಾಹಸಕ್ಕೂ ಕೂಡ ಚಿತ್ರತಂಡ ಕೈ ಹಾಕಿದೆ. ಆದರೆ ಈಗ ಇದೆ ಕಾರಣಕ್ಕೆ ಚಿತ್ರ ತಂಡ ನಟಿ ಕೀರ್ತಿ ಮೇಲೆ ಮುನಿಸಿಕೊಂಡಿದೆಯಂತೆ.

'ಬೀಸ್ಟ್' ಹಾಡಿಗೆ ರೀಲ್ ಮಾಡಿದ ಕೀರ್ತಿ ಸುರೇಶ್!

'ಬೀಸ್ಟ್' ಹಾಡಿಗೆ ರೀಲ್ ಮಾಡಿದ ಕೀರ್ತಿ ಸುರೇಶ್!

ನಟಿ ಕೀರ್ತಿ ಸುರೇಶ್ 'ಸರ್ಕಾರು ವಾರಿ ಪಾಟ' ಚಿತ್ರದಲ್ಲಿ ಮಹೇಶ್ ಬಾಬು ಜೊತೆಗೆ ನಾಯಕಿ ಆಗಿ ಅಭಿನಯಿಸಿದ್ದಾರೆ. ಚಿತ್ರದ ಕಲಾವತಿ ಹಾಡಿನಲ್ಲಿ ಕೀರ್ತಿ ಸಿಕ್ಕಾಪಟ್ಟೆ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಈ ಹಾಡಿನೊಂದಿಗೆ ಸ್ಪರ್ಧೆ ಒಡ್ಡಿದ್ದ, 'ಬೀಸ್ಟ್' ಚಿತ್ರದ 'ಅರೇಬಿಕ್' ಹಾಡಿಗೆ ಕೀರ್ತಿ ಹೆಜ್ಜೆ ಹಾಕಿದ್ದಾರೆ. ರೀಲ್ಸ್ ಮಾಡಿ ಕೀರ್ತಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ನೋಡಿದವರಿಗೆ ಅಚ್ಚರಿ ಆಗದೆ ಇರದು. ಯಾಕೆಂದರೆ ತನ್ನ ಚಿತ್ರದ ಹಾಡಿನ ಜೊತೆಗೆ ಪೈಪೋಟಿ ಒಡ್ಡಿರುವ ಹಾಡಿನ ಪ್ರಚಾರಕ್ಕೆ ಮುಂದಾಗಿರುವು ಅಚ್ಚರಿಗೆ ಕಾರಣ ಆಗಿದೆ.

ಕೀರ್ತಿ ವಿರುದ್ಧ 'ಸರ್ಕಾರು ವಾರಿ ಪಾಟ' ಚಿತ್ರತಂಡ ಮುನಿಸು!

ಕೀರ್ತಿ ವಿರುದ್ಧ 'ಸರ್ಕಾರು ವಾರಿ ಪಾಟ' ಚಿತ್ರತಂಡ ಮುನಿಸು!

ಕೀರ್ತಿ ಸುರೇಶ್ ಈ ರೀತಿ ಮಾಡಿದ್ದರಿಂದ 'ಸರ್ಕಾರು ವಾರಿ ಪಾಟ' ಚಿತ್ರ ತಂಡ ಕೀರ್ತಿ ಸುರೇಶ್ ವಿರುದ್ಧ ಮುನಿಸಿಕೊಂಡಿದೆಯಂತೆ. ಈ ಹಿಂದೆ ಕೀರ್ತಿ ಸುರೇಶ್ ತಮ್ಮ 'ಗಾಂಧಾರಿ' ಆಲ್ಬಮ್ ಹಾಡನ್ನು ರಿಲೀಸ್ ಮಾಡಿದಾಗಲೂ ಚಿತ್ರ ತಂಡ ಆಕೆಯ ವಿರುದ್ಧ ಗುಡುಗಿದೆ ಎಂದು ವರದಿ ಆಗಿತ್ತು. ಈಗ ಕೀರ್ತಿ ಬೀಸ್ಟ್ ಚಿತ್ರದ ಹಾಡಿಗೆ ಕುಣಿದಿರೋದು ಕೂಡ ಚಿತ್ರ ತಂಡದ ಕಣ್ಣು ಕೆಂಪಾಗುವಂತೆ ಮಾಡಿದೆಯಂತೆ. ತಮ್ಮ ಚಿತ್ರದ ಹಾಡಿಗೆ ಪೈ ಪೋಟಿ ನೀಡಿದ್ದ ಹಾಡಿನ ಪ್ರಚಾರಕ್ಕೆ ಇಳಿದಿರುವುದರ ವಿರುದ್ಧ ಮುನಿಸಿಕೊಂಡಿದೆಯಂತೆ.

ಸಂಭಾವನೆ ಪಡೆದು ರೀಲ್ ಮಾಡಿದ್ದಾರ ಕೀರ್ತಿ!

ಸಂಭಾವನೆ ಪಡೆದು ರೀಲ್ ಮಾಡಿದ್ದಾರ ಕೀರ್ತಿ!

ಇನ್ನು ನಟಿ ಕೀರ್ತಿ ಸುರೇಶ್ 'ಬೀಸ್ಟ್' ಚಿತ್ರ ತಂಡದಿಂದ ಸಂಭಾವನೆ ಪಡೆದು ಹಾಡಿಗೆ ಹೆಜ್ಜೆ ಹಾಕಿದ್ದಾರೆ ಎನ್ನಲಾಗುತ್ತಿದೆ. ಆದರೆ ಕೀರ್ತಿ ತಮ್ಮ ವಿಡಿಯೋದಲ್ಲಿ ಅದು ಪೈಡ್ ಪ್ರಮೋಷನ್ ಎಂದು ಎಲ್ಲೂ ಕೂಡ ನಮೂದಿಸಿಲ್ಲ. ಆದ್ದರಿಂದ ವಿಜಯ್ ಸಿನಿಮಾದ ಮೇಲಿನ ಪ್ರೀತಿಯಿಂದ ಅಥವಾ ಹಾಡು ಇಷ್ಟ ಆದ ಕಾರಣ ಸ್ಟೆಪ್ ಹಾಕಿದ್ದಾರೆ ಎನ್ನುವ ಊಹೆಗಳು ಕೂಡ ಹಬ್ಬಿವೆ. ನಟಿ ಕೀರ್ತಿ ಸುರೇಶ್ ಮತ್ತು ವಿಜಯ್ ಭೈರವ ಮತ್ತು ಸರ್ಕಾರ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

'ಬೀಸ್ಟ್' ಹಾಡಿಗೆ ಸಮಂತಾ ಕೂಡ ಸ್ಟೆಪ್!

'ಬೀಸ್ಟ್' ಹಾಡಿಗೆ ಸಮಂತಾ ಕೂಡ ಸ್ಟೆಪ್!

ಕಲಾವತಿ ಹಾಡಿಗೂ ಕೂಡ ಕೀರ್ತಿ ರೀಲ್ಸ್ ಮಾಡಿದ್ದಾರೆ. ಆದರೆ ಈಗ ಬೀಸ್ಟ್ ಚಿತ್ರದ ಹಾಡಿಗೆ ಹೆಜ್ಜೆ ಹಾಕಿರುವ ಬಗ್ಗೆ ಅಪಸ್ವರ ಕೇಳಿ ಬರ್ತಿದೆ. ಎರಡೂ ಹಾಡುಗಳಲ್ಲಿ ಹೆಚ್ಚಾಗಿ ಸದ್ದು ಮಾಡುತ್ತಾ ಇರುವುದು 'ಬೀಸ್ಟ್' ಚಿತ್ರದ ಅರೇಬಿಕ್ ಕುತು ಹಾಡು. ಈ ಹಾಡಿಗೆ ಬಹುತೇಕ ಸಿನಿಮಾ ತಾರೆಯರು ಹೆಜ್ಜೆ ಹಾಕಿದ್ದಾರೆ. ರೀಲ್ಸ್ ಮಾಡಿದ್ದಾರೆ. ಇತ್ತೀಚೆಗೆ ನಟಿ ಸಮಂತಾ ಇದೆ ಹಾಡಿಗೆ ಹೆಜ್ಜೆ ಹಾಕಿ ಸುದ್ದಿ ಆಗಿದ್ದರು. ಜೊತೆಗೆ ಪೂಜಾ ಹೆಗ್ಡೆ ಮಾಡಿದ್ದ ರೀಲ್ಸ್ ಕೂಡ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

More from Filmibeat

English summary
Actress Keerthy Suresh Promoting Beast Song Rather Than kalavathi Song, So Sarkaru Vaari Paata Team Upset with Her
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X