ಕೀರ್ತಿ ಸುರೇಶ್ ಹೊಸ ರೂಲ್ಸ್: ಕೋಟಿ ಕೊಟ್ಟರೂ ತುಂಡು ಬಟ್ಟೆ ಧರಿಸಲ್ಲ!

ಸಿನಿಮಾರಂಗದಲ್ಲಿ ನಟಿಯರ ವಿಚಾರ ಬಂದಾಗ ಗ್ಲಾಮರ್ ಎನ್ನುವುದು ಸದಾ ತಳುಕು ಹಾಕಿಕೊಳ್ಳುತ್ತದೆ. ಯಾಕೆಂದರೆ ಸಿನಿಮಾವನ್ನು ಗ್ಲ್ಯಾಮರಸ್ ಲೋಕ ಅಂತಲೆ ಕರೆಯುತ್ತಾರೆ. ಇಲ್ಲಿ ಹೆಚ್ಚಿನ ನಟಿಯರು ಸುಂದರವಾಗಿ ಕಾಣುವುದಕ್ಕಾಗಿಯೇ ಬಯಸುತ್ತಾರೆ. ಆದರೆ ಕೆಲವು ನಟಿಯರು ಮಾತ್ರ ತಮಗೆ ತಾವೇ ಒಂದಷ್ಟು ನಿಯಮಗಳನ್ನು ಹಾಕಿಕೊಂಡಿರುತ್ತಾರೆ. ಈ ಸಾಲಿಗೆ ಈಗ ನಟಿ ಕೀರ್ತಿ ಸುರೇಶ್ ಕೂಡ ಸೇರಿಕೊಂಡಿದ್ದಾರೆ.

ಕೀರ್ತಿ ಸುರೇಶ್ ಮಲಯಾಳಂ, ತೆಲುಗು, ತಮಿಳು ಭಾಷೆಗಳಲ್ಲಿ ನಟಿಸಿದ್ದಾರೆ. ಸ್ಟಾರ್ ನಟಿಯರ ಸಾಲಿನಲ್ಲಿ ಇರುವ ಈಕೆಗೆ ದೊಡ್ಡ ಅಭಿಮಾನಿ ಬಳಗ ಇದೆ. ಅದರಲ್ಲೂ 'ಮಹಾನಟಿ' ಸಾವಿತ್ರಿ ಪಾತ್ರವನ್ನು ಮಾಡಿ ಎಲ್ಲರ ಮನ ಗೆದ್ದಿದ್ದಾರೆ ಕೀರ್ತಿ ಸುರೇಶ್. ಈ ಚಿತ್ರದ ಬಳಿಕ ಕೀರ್ತಿ ಸುರೇಶ್ ಅಷ್ಟಾಗಿ ಸಾಲು, ಸಾಲು ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿಲ್ಲ. ಸಿನಿಮಾ ಮತ್ತು ಪಾತ್ರಗಳ ಆಯ್ಕೆಯಲ್ಲಿ ಕೀರ್ತಿ ತುಂಬಾನೇ ಸೀಮಿತ ಆಗಿದ್ದಾರೆ.

ಕೀರ್ತಿ ಸುರೇಶ್ ಅವರು ಹೆಚ್ಚೆಚ್ಚು ಸಿನಿಮಾಗಳಲ್ಲಿ ನಟಿಸದೆ ಇರಲು ಅವರ ನಿರ್ಧಾರವೇ ಕಾರಣ ಎನ್ನಲಾಗುತ್ತಿದೆ. ಹೌದು ನಟಿ ಕೀರ್ತಿ ಸುರೇಶ್ ತುಂಡು ಬಟ್ಟೆ ಹಾಕುವುದಿಲ್ಲವಂತೆ. ಸಿನಿಮಾ ಪಾತ್ರಕ್ಕಾಗಿಯೂ ಈ ನಟಿ ಚಿಕ್ಕ ಬಟ್ಟೆಗಳನ್ನು ಧರಿಸುವುದಿಲ್ಲವಂತೆ. ಹಾಗಾಗಿ ಗ್ಲ್ಯಾಮರಸ್ ಪಾತ್ರಗಳನ್ನು ಒಪ್ಪುವುದೇ ಇಲ್ವಂತೆ ಕೀರ್ತಿ ಸುರೇಶ್. ಇದೇ ಕಾರಣಕ್ಕೆ 'ಶ್ಯಾಮಸಿಂಗ ರಾಯ್' ಹಾಗೂ 'ಪೊನ್ನಿಯನ್ ಸೆಲ್ವನ್' ಚಿತ್ರದ ಆಫರ್‌ಗಳನ್ನು ತಿರಸ್ಕರಿದ್ದಾರೆ ಎನ್ನಲಾಗಿದೆ.

Actress Keerthy Suresh Refuse To Wear Short Dress In Movies

ಯಾವ ಸಿನಿಮಾನೇ ಆಗಿರಲಿ, ಎಷ್ಟು ದೊಡ್ಡ ಸಿನಿಮಾನೇ ಆಗಿರಲಿ ಕೀರ್ತಿ ಸುರೇಶ್ ಮಾತ್ರ ತುಂಡು ಬಟ್ಟೆ ಧರಿಸೋದಿಲ್ಲ. ಕೋಟಿ ಕೊಟ್ಟರು ನಾನು ಒಪ್ಪಲ್ಲ ಎಂದು ಅವರೇ ಹೇಳಿಕೊಂಡಿದ್ದಾರೆ. ಇದೇ ಸಾಲಿಗೆ ಕೂಡ ಸಾಯಿ ಪಲ್ಲವಿ ಕೂಡ ಸೇರುತ್ತಾರೆ. ಅವರು ಮೇಕಪ್ ಹಾಕುವುದಿಲ್ಲ. ಇನ್ನು ತಮನ್ನಾ ಲಿಪ್ ಲಾಕ್ ಮಾಡುವುದಿಲ್ಲ.

Actress Keerthy Suresh Refuse To Wear Short Dress In Movies

ಕೀರ್ತಿ ಸುರೇಶ್ ಅವರು ಕಳೆದ ವರ್ಷ ಸೂಪರ್ ಸ್ಟಾರ್ ರಜನಿಕಾಂತ್ ಅವರ ಜೊತೆ 'ಅಣ್ಣಾತೆ' ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ರಜನಿಕಾಂತ್ ಅವರ ಸಹೋದರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಈಕೆ ನಟನೆಯ 'ಗುಡ್ ಲಕ್ ಸಖಿ' ಚಿತ್ರ ರಿಲೀಸ್ ಆಗಿದೆ. ಆದರೆ ಈ ಚಿತ್ರಕ್ಕೆ ಅಂದುಕೊಂಡ ಮಟ್ಟಿಗೆ ರೆಸ್ಪಾನ್ಸ್ ಸಿಕ್ಕಿಲ್ಲ. ಇದಾದ ಬಳಿಕ ಕೀರ್ತಿ ಸುರೇಶ್ ಮಹೇಶ್ ಬಾಬು ಜೊತೆಗೆ 'ಸರ್ಕಾರು ವಾರಿ ಪಾಠ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

More from Filmibeat

English summary
Actress Keerthy Suresh Refuse To Wear Short Dress In Movies,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X