Prabhas-Krithi Shetty:ಪ್ರಭಾಸ್ ಜೊತೆಗೆ ಕೃತಿ ಶೆಟ್ಟಿ ಹೊಸ ಸಿನಿಮಾ, ಯಾವುದು ಗೊತ್ತಾ?

ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟು ಅತಿ ವೇಗವಾಗಿ ಯಶಸ್ಸು ಪಡೆದು ಸ್ಟಾರ್ ನಟಿ ಎನಿಸಿಕೊಂಡಿದ್ದಾರೆ ನಟಿ ಕೃತಿ ಶೆಟ್ಟಿ. ಮೊದಲ ಚಿತ್ರದಲ್ಲಿಯೆ ಯುವ ನಾಯಕಿ ಕೃತಿ ಶೆಟ್ಟಿ ಅವರ ಲಕ್ ಕುದುರಿತ್ತು. ಚೊಚ್ಚಲ ಚಿತ್ರ 'ಉಪ್ಪೇನ' ಆಕೆಗೆ ದೊಡ್ಡ ಮಟ್ಟದ ಯಶಸ್ಸು ತಂದುಕೊಟ್ಟಿದೆ. ಬಳಿಕ ಕೃತಿಗೆ ಸಾಲು ಸಾಲು ದೊಡ್ಡ ಚಿತ್ರಗಳ ಆಫರ್‌ಗಳು ಬರ್ತಿವೆ. ಹಾಗೆ ಇಲ್ಲಿ ತನಕ ಕೃತಿ ಮಾಡಿರುವ ಚಿತ್ರಗಳು ಕೂಡ ಯಶಸ್ಸು ಕಂಡಿವೆ.

ಕೃತಿ ಶೆಟ್ಟಿ ಹೆಸರು ಈಗ ಬಿಗ್‌ ಸ್ಟಾರ್‌ಗಳ ಜೊತೆಗೆ ಕೇಳಿ ಬರ್ತಿದೆ. ಹೆಚ್ಚಾಗಿ ಸಿನಿಮಾಗಳನ್ನು ಅಳೆದು ತೂಗಿ ಅಯ್ಕೆ ಮಾಡಿಕೊಳ್ಳುವ ಕೃತಿ, ಇತ್ತೀಚೆಗೆ ಸಿನಿಮಾಗಳನ್ನು ರಿಜೆಕ್ಟ್ ಮಾಡಿಯೇ ಹೆಚ್ಚು ಸುದ್ದಿ ಆಗಿದ್ದರು. ತನ್ನ ಪಾಲಿಗೆ ಬಂದ ಸ್ಟಾರ್ ಸಿನಿಮಾಗಳನ್ನು ಕೂಡ ಕೃತಿ ರಿಜೆಕ್ಟ್ ಮಾಡಿದ್ದರು ಎಂದು ಸುದ್ದಿ ಆಗಿತ್ತು. ಆದರೆ ಈಗ ಸಿನಿಮಾ ಸ್ಟಾರ್ ಸಿನಿಮಾದ ಮೂಲಕವೇ ಸುದ್ದಿ ಆಗಿದ್ದಾರೆ.

ರಶ್ಮಿಕಾ ಮಂದಣ್ಣ ಬಿಟ್ಟರೆ ಟಾಲಿವುಡ್‌ನಲ್ಲಿ ಅತಿ ಹೆಚ್ಚು ವೇಗವಾಗಿ ಬೆಳೆಯುತ್ತಿರುವ ನಟಿ ಎಂದರೆ ಅದು ಕೃತಿ ಶೆಟ್ಟಿ. 'ಉಪ್ಪೆನ' ಚಿತ್ರದ ಮೂಲಕ ಹೆಸರುವಾಸಿ ಆದ ನಟಿ ಕೃತಿ ಈಗ ಪ್ರಭಾಸ್ ಜೊತೆಗೆ ತೆರೆಹಂಚಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.

ಪ್ರಭಾಸ್‌ಗೆ ಕೃತಿ ಶೆಟ್ಟಿ ನಾಯಕಿ!

ಪ್ರಭಾಸ್‌ಗೆ ಕೃತಿ ಶೆಟ್ಟಿ ನಾಯಕಿ!

ಕೃತಿ ಶೆಟ್ಟಿಗೆ ನಟ ಪ್ರಭಾಸ್ ಜೊತೆಗೆ ಅಭಿನಯಿಸುವ ಅವಕಾಶ ಸಿಕ್ಕಿದೆಯಂತೆ. ಪ್ರಭಾಸ್ ಹೊಸ ಚಿತ್ರದಲ್ಲಿ ಕೃತಿ ನಾಯಕಿ ಅಗಿ ಕಾಣಿಸಿಕೊಳ್ಳಲಿದ್ದಾರೆ. ನಿರ್ದೇಶಕ ಮಾರುತಿ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಸಿನಿಮಾದಲ್ಲಿ ಮೂವರು ನಾಯಕಿಯರು ಇರಲಿದ್ದಾರೆ ಎನ್ನಲಾಗಿದೆ. ಈ ಪೈಕಿ ನಟಿ ಕೃತಿ ಶೆಟ್ಟಿ ಪ್ರಭಾಸ್ ಜೊತೆಗೆ ಮುಖ್ಯ ನಾಯಕಿಯಾಗಿ ಅಭಿನಯಿಸಲಿದ್ದಾರಂತೆ. ಈ ಮೂಲಕ ಕೃತಿ ಸಿನಿಮಾದಲ್ಲಿ ಮತ್ತೊಂದು ಹೊಸ ದಾಖಲೆ ಮಾಡಲಿದ್ದಾರೆ.

ಮಾಳವಿಕ ಮೋಹನ್, ಶ್ರೀಲೀಲಾ ಜೊತೆಗೆ ಕೃತಿ ಶೆಟ್ಟಿ!

ಮಾಳವಿಕ ಮೋಹನ್, ಶ್ರೀಲೀಲಾ ಜೊತೆಗೆ ಕೃತಿ ಶೆಟ್ಟಿ!

ಈ ಚಿತ್ರದಲ್ಲಿ ಪ್ರಭಾಸ್‌ಗೆ ಮೂರು ನಾಯಕ ನಟಿಯರು ಇರಲಿದ್ದಾರಂತೆ. ಈಗಾಗಲೇ ನಟಿ ಮಾಳವಿಕಾ ಮೋಹನ್ ಮತ್ತು ಶ್ರೀಲೀಲಾ ಹೆಸರುಗಳು ಕೇಳಿ ಬಂದಿವೆ. ಈಗ ಚಿತ್ರಕ್ಕೆ ಮುಖ್ಯ ನಾಯಕಿಯಾಗಿ ಕೃತಿ ಶೆಟ್ಟಿ ಹೆಸರು ಕೇಳಿ ಬಂದಿದೆ. ಮಾಳವಿಕಾ ಮೊಹನ್ ಮತ್ತು ಶ್ರೀಲೀಲಾ ಇಬ್ಬರು ಸಿನಿಮಾದಲ್ಲಿ ಎರಡು ಮತ್ತು ಮೂರನೇ ನಾಯಕಿಯರಾಗಿ ಇರಲಿದ್ದಾರೆ ಎನ್ನಲಾಗುತ್ತಿದೆ. ಈ ವಿಚಾರ ಟಾಲಿವುಡ್‌ನಲ್ಲಿ ಚರ್ಚೆ ಆಗುತ್ತಿದೆ. ಆದರೆ ಚಿತ್ರತಂಡ ಅಧಿಕೃತ ಪ್ರಕಟಣೆ ಮಾಡಿಲ್ಲ.

ಬಾಲಯ್ಯನ ಚಿತ್ರವನ್ನು ತಿಸ್ಕರಿಸಿದ್ದ ಕೃತಿ!

ಬಾಲಯ್ಯನ ಚಿತ್ರವನ್ನು ತಿಸ್ಕರಿಸಿದ್ದ ಕೃತಿ!

ನಟ ಬಾಲಯ್ಯ 107ನೇಕ್ಕಾಗಿ ನಟಿ ಕೃತಿ ಶೆಟ್ಟಿಯ ಕಾಲ್ ಶೀಟ್ ಕೇಳಲಾಗಿತ್ತು. ಕೃತಿ ಶೆಟ್ಟಿ ಸಿನಿಮಾವನ್ನು ತಿರಸ್ಕರಿಸಿದರು ಎಂದು ವರದಿ ಆಗಿದೆ. ಕಾರಣ ವಯಸ್ಸಿನ ಅಂತರ ಎನ್ನಲಾಗುತ್ತಿದೆ. ಬಾಲಯ್ಯ ಚಿತ್ರರಂಗದಲ್ಲಿ, ಅಭಿನಯದ ಅನುಭವದಲ್ಲಿ ಮಾತ್ರ ಅಲ್ಲ ವಯಸ್ಸಿನಲ್ಲೂ ಕೂಡ ಕೃತಿಗಿಂತಾ ತುಂಬಾನೇ ಸೀನಿಯರ್. ಈ ಇಬ್ಬರು ಜೋಡಿ ಆಗುತ್ತಾರೆ ಎನ್ನುವುದನ್ನು ನೆನೆದರೇ ಆ ಜೋಡಿ ಸರಿ ಹೊಂದುವುದಿಲ್ಲ ಎನಿಸುತ್ತದೆ. ಇದೆ ಕಾರಣಕ್ಕೆ ಕೃತಿ, ಬಾಲಯ್ಯನ ಜೊತೆಗೆ ಅಭಿನಯಿಸುವ ಆಫರ್ ಬೇಡ ಎಂದಿದ್ದಾರಂತೆ. ಸದ್ಯಕ್ಕೆ ಕೃತಿ ಚಿತ್ರರಂಗದಲ್ಲಿ ಹೆಚ್ಚು ವಯಸ್ಸಾಗಿರುವ ಹಿರಿಯ ನಟರ ಜೊತೆಗೆ ಅಭಿನಯ ಮಾಡುವುದಿಲ್ಲ ಅಂತೆ.

ಟಾಲಿವುಡ್ ಲಕ್ಕಿ ಹುಡುಗಿ ಆದ ಕೃತಿ ಶೆಟ್ಟಿ!

ಟಾಲಿವುಡ್ ಲಕ್ಕಿ ಹುಡುಗಿ ಆದ ಕೃತಿ ಶೆಟ್ಟಿ!

ಇನ್ನು ನಟಿ ಕೃತಿ ಸಿನಿಮಾಗಳ ವಿಚಾರಕ್ಕೆ ಬರುವುದಾದರೆ. ಕೃತಿಗೆ ದೊಡ್ಡ ದೊಡ್ಡ ಚಿತ್ರಗಳ ಅವಕಾಶಗಳು ಬರುತ್ತಿವೆ. ಸದ್ಯ ಕೃತಿ ಅಭಿನಯದ 'ಶ್ಯಾಮ್ ಸಿಂಘಾ ರಾಯ್' ಮತ್ತು 'ಬಂಗಾರ ರಾಜು' ಚಿತ್ರಗಳು ಗೆದ್ದು ಬೀಗಿವೆ. ಇನ್ನು ಮೂರು ಚಿತ್ರಗಳು ಕೃತಿ ಶೆಟ್ಟಿ ಕೈಯಲ್ಲಿ ಇವೆ. ಕೃತಿ ಅಭಿನಯದ ಸಾಲು, ಸಾಲು ಸಿನಿಮಾಗಳು ಹಿಟ್ ಲಿಸ್ಟ್ ಸೇರಿವೆ. ಹಾಗಾಗಿ ಈ ಲಕ್ಕಿ ಹುಡುಗಿಯ ಮುಂದಿನ ಚಿತ್ರಗಳು ಹೇಗೆ ಇರಲಿವೆ. ಅವು ಕೂಡ ಹಿಟ್ ಲಿಸ್ಟ್ ಸೇರುತ್ತವೆಯಾ ಎನ್ನುವ ಕುತೂಹಲ ಮೂಡಿದೆ.

More from Filmibeat

English summary
Actress Krithi Shetty Got Chance To Share Screen With Prabhas, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X