10 ಕೋಟಿ ರೂ. ಬಂಗಲೆ 100 ಕೋಟಿ ರೂ.ಗೆ ಮಾರಾಟ ಮಾಡಿದ್ರಾ ನಟಿ ಮೀನಾ; ಭರ್ಜರಿ ಲಾಭ

ತಮಿಳು ನಟಿ ಮೀನಾ ಕನ್ನಡ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಮದುವೆ ಬಳಿಕ ಕೂಡ ಮೀನಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬೆಂಗಳೂರು ಮೂಲದ ಸಾಫ್‌ವೇರ್ ಇಂಜಿಯರ್ ವಿದ್ಯಾಸಾಗರ್ ಎಂಬುವವರ ಜೊತೆ ಮೀನಾ ಮದುವೆ ನಡೆದಿತ್ತು. ಒಬ್ಬ ಮಗಳು ಇದ್ದಾಳೆ. ಆದರೆ ಪತಿ 3 ವರ್ಷಗಳ ಹಿಂದೆ ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದರು.

ನಟಿ ಮೀನಾ ಬಾಲನಟಿಯಾಗಿ ಚಿತ್ರರಂಗಕ್ಕೆ ಬಂದವರು. ಬಳಿಕ ನಾಯಕಿಯಾಗಿ ಮೆರೆದರು. ದಕ್ಷಿಣದ ಖ್ಯಾತ ನಟರ ಜೊತೆ ತೆರೆಹಂಚಿಕೊಂಡಿದ್ದಾರೆ. ಕನ್ನಡದಲ್ಲಿ ವಿಷ್ಣುವರ್ಧನ್, ರವಿಚಂದ್ರನ್ ಜೊತೆ ನಾಯಕಿಯಾಗಿ ನಟಿಸಿದ್ದರು. ಪಂಚಭಾಷೆ ತಾರೆಯಾಗಿ ಮೆರೆದವರು. ಇತ್ತೀಚೆಗೆ ಮೀನಾ ತಮಿಳುನಾಡಿನ ತಮ್ಮ ಬಂಗಲೆಯನ್ನು ಭಾರೀ ದರಕ್ಕೆ ಮಾರಾಟ ಮಾಡಿದ್ದಾರೆ ಎನ್ನಲಾಗ್ತಿದೆ. ಈ ಬಗ್ಗೆ ತಮಿಳು ಮಾಧ್ಯಮಗಳಲ್ಲಿ ವರದಿಯಾಗಿದೆ.

Actress Meena Reportedly Sells Chennai Bungalow for 100 Crore Amid Real Estate Boom

ಚೆನ್ನೈನಲ್ಲಿ ಶ್ರೀಮಂತರು ವಾಸಿಸುವ ಪ್ರತಿಷ್ಠಿತ ಬಡಾವಣೆಯಲ್ಲಿ ಮೀನಾ ನಿವಾಸವಿದೆ. ಕೇರಳ ಪಾರಂಪರಿಕ ಶೈಲಿಯಲ್ಲಿ ಬಂಗಲೆಯಂತೆ ಈ ಮನೆಯನ್ನು ನಿರ್ಮಿಸಲಾಗಿದೆ. ಒಳಾಂಗಣ ವಿನ್ಯಾಸವು ಸಾಂಪ್ರದಾಯಿಕ ಕರಕುಶಲತೆ, ಹಳೆಯ ಪರಂಪರೆ ಮತ್ತು ಆಧುನಿಕ ಜೀವನಶೈಲಿಯ ಸಮ್ಮಿಲನವಿದೆ. ಸುಂದರವಾದ ಮರದ ಕೆತ್ತನೆ, ಸಾಂಪ್ರದಾಯಿಕ ಕಲೆ, ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವಂತೆ ಮೀನಾ ಬಹಳ ಇಷ್ಟಪಟ್ಟು ಮನೆ ನಿರ್ಮಿಸಿಕೊಂಡಿದ್ದರು.

ಚೆನ್ನೈನಲ್ಲಿ ಒಮ್ಮೆ ಮಳೆ ಹೆಚ್ಚಾಗಿ ಪ್ರವಾಸ ಪರಿಸ್ಥಿತಿ ನಿರ್ಮಾಣವಾಗಿತ್ತು. ಆಗ ನಟಿ ಮೀನಾ ಮನೆಗೂ ನೀರು ನುಗ್ಗಿತ್ತು. ಕಾರುಗಳು ನೀರಿನಲ್ಲಿ ಮುಳುಗಿ ಹಾಳಾಗಿತ್ತು. ಬೀದಿ ನಾಯಿಗಳನ್ನು ಸಾಕಿದ್ದರು. ಅವು ಕೂಡ ಎಲ್ಲಿ ಹೋದವೋ ಗೊತ್ತಿಲ್ಲ. ಮನೆಯ ಸುತ್ತಾ ಗಾರ್ಡನ್ ಮಾಡಿದ್ದರು. ಅಂದಾಜು 10 ಕೋಟಿ ರೂಪಾಯಿಯಲ್ಲಿ ಆಗ ಮೀನಾ ಈ ಬಂಗಲೆ ನಿರ್ಮಿಸಿದ್ದರು ಎನ್ನಲಾಗ್ತಿದೆ. ಅಮೆರಿಕದ ದಂಪತಿ ಈ ಮನೆ ಖರೀದಿಸಲು ಬಹಳ ಆಸೆ ಪಟ್ಟಿದ್ದರಂತೆ. ಬೇಡಿಕೆಗೆ ತಕ್ಕಂತೆ ಅಂದಾಜು 100 ಕೋಟಿ ರೂ. ಮೀನಾ ತಮ್ಮ ಬಂಗಲೆ ಮಾರಾಟ ಮಾಡಿದ್ದಾರೆ ಎನ್ನಲಾಗ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿಯಿಲ್ಲ.

ರಿಯಲ್ ಎಸ್ಟೇಟ್ ಬೆಳೆದಂತೆ ಚೆನ್ನೈನಲ್ಲಿ ಭೂಮಿ ಬೆಲೆ ಗಗನಕ್ಕೇರಿದೆ. ಮನೆ, ಕಟ್ಟಡಗಳ ದರ ಹೆಚ್ಚಾಗಿದೆ. ಆಗ ಅಂದಾಜು 10 ಕೋಟಿ ರೂ. ಖರ್ಚಿನಲ್ಲಿ ಕಟ್ಟಿಸಿದ ಮನೆಯನ್ನು ಮೀನಾ ಈಗ 100 ಕೋಟಿ ರೂ.ಗೆ ಮಾರಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಿಲ್ಲ.

ಚೆನ್ನೈನಲ್ಲಿ ಹುಟ್ಟಿ ಬೆಳೆದ ಮೀನಾ 1982ರಲ್ಲಿ ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದ್ದರು. ರಜನಿಕಾಂತ್ ಜೊತೆ ಬಾಲನಟಿಯಾಗಿ ಮಿಂಚಿದ್ದ ಮೀನಾ ಮುತ್ತು ಚಿತ್ರದಲ್ಲಿ ಅವರೊಟ್ಟಿಗೆ ನಾಯಕಿಯಾಗಿ ನಟಿಸಿದ್ದು ವಿಶೇಷ. ಕಮಲ್ ಹಾಸನ್ ಜೊತೆಗೂ ಬಾಲನಟಿಯಾಗಿ ಮಿಂಚಿದ್ದರು. 1990ರಲ್ಲಿ ನಾಯಲಿಯಾಗಿ ಚಿತ್ರರಂಗಕ್ಕೆ ಮರು ಪ್ರವೇಶ ಮಾಡಿದ್ದರು. ಮುಂದೆ ತಮಿಳು, ತೆಲುಗು, ಕನ್ನಡ, ಮಲಯಾಳಂನ ಸ್ಟಾರ್ ನಟರ ಜೊತೆಗೆ ನಾಯಕಿಯಾಗಿ ಕಮಾಲ್ ಮಾಡಿದ್ದರು.

ಹಿಂದಿ ಸಿನಿಮಾಗಳಲ್ಲಿ ಕೂಡ ನಟಿಸುವ ಪ್ರಯತ್ನ ಮಾಡಿದ್ದರು. ಸದ್ಯ 'ದೃಶ್ಯಂ- 3' ಚಿತ್ರದಲ್ಲಿ ಮೋಹನ್ ಲಾಲ್ ಜೊತೆ ನಟಿಸಿದ್ದಾರೆ. ಶೀಘ್ರದಲ್ಲೇ ಸಿನಿಮಾ ಬಿಡುಗಡೆ ಆಗಲಿದೆ. ಅದಕ್ಕೂ ಮುನ್ನ 'ದೃಶ್ಯಂ-2' ತೆರೆಗೆ ಬರಲಿದೆ. ಬಾಲನಟಿಯಾಗಿ 40ಕ್ಕೂ ಅಧಿಕ ಸಿನಿಮಾಗಳಲ್ಲಿ ಮೀನಾ ಬಣ್ಣ ಹಚ್ಚಿದ್ದರು. ಮಗಳು ನೈನಿಕಾ ಕೂಡ ಬಾಲನಟಿಯಾಗಿ 'ತೇರಿ' ಚಿತ್ರದಲ್ಲಿ ವಿಜಯ್ ಜೊತೆ ಕಾಣಿಸಿಕೊಂಡಿದ್ದಳು.

'ಪುಟ್ನಂಜ' ಕನ್ನಡದಲ್ಲಿ ಮೀನಾ ನಟಿಸಿದ ಮೊದಲ ಸಿನಿಮಾ. ಆ ಬಳಿಕ 'ಚೆಲುವ', 'ಮೊಮ್ಮಗ', 'ಶ್ರೀಮಂಜುನಾಥ', 'ಸಿಂಹಾದ್ರಿಯ ಸಿಂಹ', 'ಸ್ವಾತಿಮುತ್ತು', 'ಮೈ ಆಟೋಗ್ರಾಫ್', 'ಗೇಮ್' ಹೀಗೆ ಒಂದಷ್ಟು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿ ಮೋಡಿ ಮಾಡಿದರು.

More from Filmibeat

Read more about: meena kollywood tamil
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X