ರಾಜಕೀಯರಂಗಕ್ಕೆ ನಟಿ ಮೀನಾ? ಬಿಜೆಪಿ ಪ್ಲ್ಯಾನ್ ಏನು?

ಸಿನಿಮಾ ತಾರೆಯರು ರಾಜಕೀಯರಂಗಕ್ಕೆ ಬರೋದು ಹೊಸದೇನು ಅಲ್ಲ. ಕೆಲವರು ತಾವಾಗಿಯೇ ಇಷ್ಟಪಟ್ಟು ರಾಜಕೀಯರಂಗ ಪ್ರವೇಶಿಸುತ್ತಾರೆ. ಮತ್ತೆ ಕೆಲವರನ್ನು ರಾಜಕೀಯ ಪಕ್ಷಗಳು ಸೆಳೆಯುವಲ್ಲಿ ಯಶಸ್ವಿ ಆಗುತ್ತವೆ. ಸದ್ಯ ಬಹುಭಾಷಾ ನಟಿ ಮೀನಾ ಬಿಜೆಪಿ ಸೇರುತ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ.

ತಮಿಳುನಾಡಿನಲ್ಲಿ ಬಿಜೆಪಿ ಭದ್ರವಾಗಿ ನೆಲೆಯೂರಲು ಯತ್ನಿಸುತ್ತಿದೆ. ಅಣ್ಣಾಮಲೈ ಅವರನ್ನು ಅಲ್ಲಿ ಬೆಳೆಸಲು ಮುಂದಾಗಿದೆ. ಇದೀಗ ಗ್ಲಾಮರ್ ಟಚ್ ಕೊಡಲು ನಟಿ ಮೀನಾ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದೆ ಎನ್ನುವ ಚರ್ಚೆ ತಮಿಳುನಾಡು ರಾಜಕೀಯ ವಲಯದಲ್ಲಿ ಶುರುವಾಗಿದೆ. ಇತ್ತೀಚೆಗೆ ನಟಿ ಮೀನಾ, ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರನ್ನು ಭೇಟಿ ಮಾಡಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊ ಹಂಚಿಕೊಂಡಿದ್ದಾರೆ.

Actress Meena s Meeting with Vice President Fuels BJP Entry Rumors

"ಗೌರವಾನ್ವಿತ ಉಪಾಧ್ಯಕ್ಷರಾದ ಶ್ರೀ ಜಗದೀಪ್ ಧಂಖರ್ ಜೀ ಅವರೊಂದಿಗೆ, ನಿಮ್ಮನ್ನು ಭೇಟಿಯಾಗಿದ್ದು ನನ್ನ ಹೆಮ್ಮೆ. ನಿಮ್ಮಿಂದ ಬಹಳ ಕಲಿತಿದ್ದೇನೆ, ಅದು ನನ್ನ ಭವಿಷ್ಯವನ್ನು ಆತ್ಮವಿಶ್ವಾಸದಿಂದ ಮುನ್ನಡೆಸಲು ಸಹಾಯ ಮಾಡುತ್ತದೆ ಎಂದು ನಾನು ನಂಬುತ್ತೇನೆ. ನಿಮ್ಮ ಸಮಯಕ್ಕೆ ತುಂಬಾ ಧನ್ಯವಾದಗಳು" ಎಂದು ಮೀನಾ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದರ ಬೆನ್ನಲ್ಲೇ ನಟಿ ಮೀನಾ ಬಿಜೆಪಿ ಸೇರುವ ಬಗ್ಗೆ ಗುಸುಗುಸು ಶುರುವಾಗಿದೆ.

ಮದುವೆ ಬಳಿಕ ನಟಿ ಮೀನಾ ಸಿನಿಮಾಗಳಲ್ಲಿ ನಟಿಸುವುದು ಕಮ್ಮಿ ಆಗಿತ್ತು. ಆದರೆ ಒಳ್ಳೆ ಪಾತ್ರಗಳು ಸಿಕ್ಕಾಗ ಒಳ್ಳೆ ನಟನೆಯಿಂದ ಮೋಡಿ ಮಾಡುತ್ತಾ ಬರ್ತಿದ್ದಾರೆ. 'ದೃಶ್ಯಂ' ಸರಣಿ ಸಿನಿಮಾಗಳಲ್ಲಿ ನಟಿಸಿ ಗೆದ್ದಿದ್ದಾರೆ. ಮೀನಾ ಬಿಜೆಪಿ ಪಕ್ಷ ಸೇರುವುದು ಮಾತ್ರವಲ್ಲ ರಾಜ್ಯಸಭೆ ಪ್ರವೇಶಿಸಿ ತಮಿಳುನಾಡಿನ ಕೇಂದ್ರ ಮಂತ್ರಿ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಯಾರೇ ನಮ್ಮ ಪಕ್ಷಕ್ಕೆ ಬಂದರೂ ಸ್ವಾಗತ ಎಂದು ತಮಿಳುನಾಡು ಬಿಜೆಪಿ ಮುಖಂಡರು ಹೇಳುತ್ತಿದ್ದಾರೆ. ಹಾಗಾಗಿ ನಟಿ ಮೀನಾ ರಾಜಕೀಯರಂಗ ಪ್ರವೇಶ ಗ್ಯಾರಂಟಿ ಎಂದು ಚರ್ಚೆ ನಡೆಯುತ್ತಿದೆ. ಶೀಘ್ರದಲ್ಲೇ ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು ನಟಿ ಮೀನಾ ಭೇಟಿ ಮಾಡುತ್ತಾರೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ನಟಿ ಮೀನಾ ಮಾತ್ರ ಈ ಬಗ್ಗೆ ಪ್ರತಿಕ್ರಿಯಿಸಿಲ್ಲ.

ರಾಷ್ಟ್ರಮಟ್ಟದಲ್ಲಿ ಕಂಗನಾ ರಾಣಾವತ್ ಅವರನ್ನು ರಾಜಕೀಯಕ್ಕೆ ಕರೆತಂದಂತೆ ತಮಿಳುನಾಡಿನಲ್ಲಿ ಮೀನಾ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಯತ್ನ ನಡೀತಿದೆ ಎಂದು ಹೇಳಲಾಗುತ್ತಿದೆ. ವಿವಾದಗಳಿಂದ ದೂರ ಇರುವ ಮೀನಾ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದು ಪ್ಲಸ್ ಆಗುತ್ತದೆ ಎಂದು ಬಿಜೆಪಿ ಭಾವಿಸಿದೆ ಎನ್ನುವ ಮಾತು ಕೇಳಿಬರ್ತಿದೆ.

4 ದಶಕಗಳಿಂದ ಮೀನಾ ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದಾರೆ. ಬಾಲನಟಿಯಾಗಿ ಬಣ್ಣದಲೋಕ ಪ್ರವೇಶಿಸಿದ ಅವರು ಮುಂದೆ ನಾಯಕಿಯಾಗಿಯೂ ಸಕ್ಸಸ್ ಕಂಡಿದ್ದರು. ರಜನಿಕಾಂತ್, ಕಮಲ್ ಹಾಸನ್, ಚಿರಂಜೀವಿ, ವಿಷ್ಣುವರ್ಧನ್, ಮೋಹನ್ ಲಾಲ್ ಹೀಗೆ ದಕ್ಷಿಣ ಭಾರತ ಚಿತ್ರರಂಗದ ಸ್ಟಾರ್ ನಟರಿಗೆ ನಾಯಕಿಯಾಗಿ ಮೋಡಿ ಮಾಡಿದ್ದರು. ಒಂದ್ಕಾಲದಲ್ಲಿ ಬಹುಬೇಡಿಕೆಯ ನಟಿಯಾಗಿ ಮೆರೆದಿದ್ದರು. ಬಳಿಕ ಪೋಷಕ ಪಾತ್ರಗಳತ್ತ ಮುಖ ಮಾಡಿದ್ದರು.

ಖ್ಯಾತ ನಟ ಶಿವಾಜಿ ಗಣೇಶನ್ ಬರ್ತ್‌ಡೇ ಪಾರ್ಟಿಯೊಂದರಲ್ಲಿ ಬಾಲಕಿ ಮೀನಾ ಅವರನ್ನು ನೋಡಿದ್ದರು. ಬಳಿಕ ತಮ್ಮ ಚಿತ್ರದಲ್ಲಿ ಒಂದು ಪುಟ್ಟ ಪಾತ್ರಕ್ಕೆ ಆಕೆಯನ್ನು ಆಯ್ಕೆ ಮಾಡಿದ್ದರು. ಅಲ್ಲಿಂದ ಮುಂದೆ ಹಲವು ಸಿನಿಮಾಗಳಲ್ಲಿ ಬಾಲನಟಿಯಾಗಿಯೇ ಮೀನಾ ಮಿಂಚಿದ್ದರು. 'ನವಯುಗಂ' ಎಂಬ ತೆಲುಗು ಚಿತ್ರದಲ್ಲಿ ಮೊದಲ ಬಾರಿಗೆ ನಾಯಕಿಯಾಗಿ ನಟಿಸಿದ್ದರು.

'ಪುಟ್ನಂಜ' ಕನ್ನಡದಲ್ಲಿ ಮೀನಾ ನಟಿಸಿದ ಮೊದಲ ಸಿನಿಮಾ. ಮುಂದೆ 'ಚೆಲುವ', 'ಮೊಮ್ಮಗ', 'ಶ್ರೀಮಂಜುನಾಥ', 'ಸಿಂಹಾದ್ರಿಯ ಸಿಂಹ', 'ಸ್ವಾತಿಮುತ್ತು', 'ಮೈ ಆಟೋಗ್ರಾಫ್' ಕೆಲ ಕನ್ನಡ ಸಿನಿಮಾಗಳಲ್ಲಿ ಮಿಂಚಿ ಗಮನ ಸೆಳೆದಿದ್ದರು.

More from Filmibeat

English summary
Speculations Rife Over Actress Meena’s Entry Into Politics via BJP;
Read more about: meena politics kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X